ವಿಷಯಕ್ಕೆ ಹೋಗು

ಚಂಗಲ ಕೋಷ್ಠ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಂಗಲ ಕೋಷ್ಠ
ಟಾರ್ಟುಗ್ವೆರೊ, ಕೋಸ್ಟಾ ರೀಕಾದಲ್ಲಿ
ಬುಕಿಡ್ನಾನ್, ಫಿಲಿಪೀನ್ಸ್‌ನಲ್ಲಿ
Conservation status
Scientific classification e
ಸಾಮ್ರಾಜ್ಯ: ಪ್ಲಾಂಟೇ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಏಕದಳ ಸಸ್ಯ
ಏಕಮೂಲ ವರ್ಗ: ಕಾಮೆಲಿನಿಡ್ಸ್
ಗಣ: ಜ಼ಿಂಜಿಬರಾಲೀಸ್
ಕುಟುಂಬ: ಕಾಸ್ಟೇಸೀ
ಕುಲ: ಚೀಲೊಕಾಸ್ಟಸ್
ಪ್ರಜಾತಿ:
ಚ. ಸ್ಪೀಷಿಯೋಸಸ್
Binomial name
ಚೀಲೊಕಾಸ್ಟಸ್ ಸ್ಪೀಷಿಯೋಸಸ್
Synonyms
  • ಕಾಸ್ಟಸ್ ಸ್ಪೀಷಿಯೋಸಸ್ (J.Koenig) Sm.
  • ಬ್ಯಾಂಕ್‍ಸೀ ಸ್ಪೀಷಿಯೋಸಾ J.Koenig in A.J.Retzius
  • ಹೆಲೇನಿಯಾ ಸ್ಪೀಷಿಯೋಸಾ (J.Koenig) S.R.Dutta

ಇನ್ನೂ ಅನೇಕ

ಚಂಗಲ ಕೋಷ್ಠ ಎನ್ನುವುದು ಕಾಸ್ಟೇಸೀ ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಹಾಗೂ ಔಷಧಿಸಸ್ಯಪುಷ್ಕರ ಮೂಲ, ಪದ್ಮಪತ್ರ ಪರ್ಯಾಯ ನಾಮಗಳು. ಕಾಸ್ಟಸ್ ಸ್ಪೀಷಿಯೋಸಸ್ ಶಾಸ್ತ್ರೀಯ ಹೆಸರು. ಸಾಮಾನ್ಯ ಇಂಗ್ಲಿಷಿನಲ್ಲಿ ಎಲಿಫೆಂಟ್ ಆರೋರೂಟ್ಸ್ವೀಟ್ ಕಾಸ್ಟಸ್ ಎಂಬ ಹೆಸರುಗಳಿವೆ. ಇದು ಭಾರತ ಮತ್ತು ಮಲಯಗಳ ಮೂಲ ನಿವಾಸಿ.  ಭಾರತಾದ್ಯಂತ ಮೈದಾನ ಪ್ರದೇಶಗಳಿಂದ ಹಿಡಿದು 4000' ಎತ್ತರದ ಬೆಟ್ಟ ಸೀಮೆಗಳವರೆಗೆ ಇದರ ವ್ಯಾಪ್ತಿ ಉಂಟು. ಇದು ಸುಮಾರು 4'-10' ಎತ್ತರಕ್ಕೆ ಬೆಳೆಯುವ ಪೊದೆಸಸ್ಯಕಾಂಡ ಪ್ರಕಂದ ಮಾದರಿಯದು. ಎಲೆಗಳು ದೊಡ್ಡವು; ಆಕಾರ ಈಟಿಮೊನೆಯಂತೆ. ಹೂಗಳು ದೊಡ್ಡ ಗಾತ್ರದವು; ಬಿಳಿಯ ದಳಗಳು ಮತ್ತು ಕೆಂಪು ವೃಂತಪತ್ರಕಗಳು ಇರುವುದರಿಂದ ಆಕರ್ಷಕವಾಗಿ ಕಾಣುತ್ತವೆ. ಗಿಡವನ್ನು ಪ್ರಕಂದದ ತುಂಡುಗಳಿಂದ ಬೆಳೆಸಲಾಗುತ್ತದೆ. ಹೆಚ್ಚು ತೇವವಿರುವ ಫಲವತ್ತಾದ ಮಣ್ಣಿನಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಇದನ್ನು ಬೆಳೆಸುವ ಸ್ಥಳದಲ್ಲಿ ನೆರಳಿರಬೇಕು. ಇದರ ಪ್ರಕಂದದಲ್ಲಿ ಅಧಿಕ ಮೊತ್ತದ ಪಿಷ್ಟವಿದೆ. ಆದ್ದರಿಂದ ಇದು ತಿನ್ನಲು ಯೋಗ್ಯವೆನಿಸಿದೆ. ಅಲ್ಲದೆ ಇದನ್ನು ಸಕ್ಕರೆಯ ಪಾಕದಲ್ಲಿ ಕುದಿಸಿ ಮುರಬ್ಬ ಮಾಡಿ ತಿನ್ನುವುದುಂಟು. ಬೇರು ಮತ್ತು ಪ್ರಕಂದಗಳಿಗೆ ಔಷಧೀಯ ಗುಣಗಳು ಇವೆ. ಪ್ರಕಂದ ಒಳ್ಳೆಯ ಶಕ್ತಿವರ್ಧಕ ಹಾಗೂ ವಿರೇಚಕ. ಕೆಮ್ಮು, ಚರ್ಮರೋಗ, ಅಗ್ನಿಮಾಂದ್ಯ, ಶೀತದಿಂದುಂಟಾಗುವ ಜ್ವರ ನಿವಾರಣೆಗೆ ಹಾಗೂ ಜಂತುನಾಶಕ್ಕೆ ಇದನ್ನು ಬಳಸುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. Poulsen, A.D.; van Caspel, P. (2020). "Cheilocostus speciosus". IUCN Red List of Threatened Species. 2020: e.T158548274A158548791. doi:10.2305/IUCN.UK.2020-2.RLTS.T158548274A158548791.en. Retrieved 20 November 2021.
  2. "Cheilocostus speciosus (J.König) C.Specht". The Plant List. Retrieved 14 July 2013.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: