ವಿಷಯಕ್ಕೆ ಹೋಗು

ಘೇವರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಲಾಯಿಯ ಅಲಂಕಾರಿಕ ಹರಹಿರುವ ಘೇವರ್

ಘೇವರ್ ರಾಜಸ್ಥಾನಿ ಪಾಕಶೈಲಿಯ ಒಂದು ಸಿಹಿ ತಿನಿಸಾಗಿದೆ.[೧] ಇದನ್ನು ಸಾಂಪ್ರದಾಯಿಕವಾಗಿ ತೀಜ್ ಹಬ್ಬದೊಂದಿಗೆ ಸಂಬಂಧಿಸಲಾಗುತ್ತದೆ. ರಾಜಸ್ಥಾನ್ ಅಲ್ಲದೆ, ಇದು ಪಕ್ಕದ ರಾಜ್ಯಗಳಾದ ಹರ್ಯಾಣಾ, ದೆಹಲಿ, ಗುಜರಾತ್, ಪಶ್ಚಿಮ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಇತ್ಯಾದಿಗಳಲ್ಲಿ ಕೂಡ ಪ್ರಸಿದ್ಧವಾಗಿದೆ.

ಇದು ಮೈದಾದಿಂದ (ಸಂಸ್ಕರಿಸಿದ ಗೋಧಿ ಹಿಟ್ಟು) ತಯಾರಿಸಲ್ಪಡುವ ಬಿಲ್ಲೆ ಆಕಾರದ ಸಿಹಿ ತಿನಿಸಾಗಿದೆ. ಇದನ್ನು ಸಕ್ಕರೆ ಪಾಕದಲ್ಲಿ ನೆನೆಸಲಾಗುತ್ತದೆ. ಅನೇಕ ಬಗೆಗಳ ಘೇವರ್‌ಗಳಿವೆ. ಇವುಗಳಲ್ಲಿ ಸಾದಾ, ಮಾವಾ ಮತ್ತು ಮಲಾಯಿ ಘೇವರ್ ಸೇರಿವೆ. ಸಾಮಾನ್ಯವಾಗಿ ಇದನ್ನು ಜುಲೈ-ಆಗಸ್ಟ್‌ನಲ್ಲಿ ತೀಜ್ ಅಥವಾ ರಕ್ಷಾ ಬಂಧನ ಹಬ್ಬಕ್ಕಾಗಿ ತಯಾರಿಸಲಾಗುತ್ತದೆ.

ಹೆಚ್ಚು ಸಿಹಿ ಮತ್ತು ತುಪ್ಪವನ್ನು ಹೊಂದಿರುವ ಘೇವರ್ ಮತ್ತು ಫ಼ಿರನಿ ಆಮ್ಲೀಯ ಮತ್ತು ತೇವವಾದ ಪರಿಸರದಿಂದ ಪರಿಹಾರ ನೀಡುತ್ತವೆ. ತುಪ್ಪ ಮತ್ತು ಸಿಹಿ ರಸದ ಕಾರಣ ಇವು ವಾತ ಮತ್ತು ಪಿತ್ತವನ್ನು ಸಂತೈಸುವ ಗುಣಗಳನ್ನು ಹೊಂದಿರುತ್ತವೆ. ಹಾಗಾಗಿ ಇವು ಮನಸ್ಸು ಜೊತೆಗೆ ದೇಹದ ಮೇಲೂ ಶಾಂತಗೊಳಿಸುವ ಪ್ರಭಾವವನ್ನು ಹೊಂದಿರುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. "Ghevar: A Delight of Indian Cuisine". Indiacanteen.tastyfix.com. Archived from the original on 18 ಜುಲೈ 2018. Retrieved 17 August 2018.
"https://kn.wikipedia.org/w/index.php?title=ಘೇವರ್&oldid=1125033" ಇಂದ ಪಡೆಯಲ್ಪಟ್ಟಿದೆ