ವಿಷಯಕ್ಕೆ ಹೋಗು

ಘಾನ್ಸಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಘಾನ್‍ಸಿಂಗ್ ಇಂದ ಪುನರ್ನಿರ್ದೇಶಿತ)
ರ್‍ಯಾಡರ್‌ಮಾಚೆರಾ ಕ್ಸೈಲೊಕಾರ್ಪಾ
Scientific classification e
ಸಾಮ್ರಾಜ್ಯ: ಪ್ಲಾಂಟೇ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಯೂಡಿಕಾಟ್‌ಗಳು
ಏಕಮೂಲ ವರ್ಗ: ಆಸ್ಟರಿಡ್ಸ್
ಗಣ: ಲ್ಯಾಮಿಯೇಲ್ಸ್
ಕುಟುಂಬ: ಬಿಗ್ನೋನಿಯೇಸೀ
ಕುಲ: ರ್‍ಯಾಡರ್‌ಮಾಚೆರಾ
ಪ್ರಜಾತಿ:
ರ. ಕ್ಸೈಲೊಕಾರ್ಪಾ
Binomial name
ರ್‍ಯಾಡರ್‌ಮಾಚೆರಾ ಕ್ಸೈಲೊಕಾರ್ಪಾ
Synonyms[]
  • ಬಿಗ್ನೋನಿಯಾ ಕ್ಸೈಲೊಕಾರ್ಪಾ Roxb.
  • ಸ್ಪ್ಯಾತೋಡಿಯಾ ಕ್ಸೈಲೊಕಾರ್ಪಾ (Roxb.) T.Anderson ex Brand.
  • ಸ್ಟೀರಿಯೊಸ್ಪರ್ಮಮ್ ಕ್ಸೈಲೊಕಾರ್ಪಮ್ (Roxb.) Benth. & Hook.f.
  • ಟೆಕೋಮಾ ಕ್ಸೈಲೋಕಾರ್ಪಾ (Roxb.) G.Don
ಘಾನ್‍ಸಿಂಗ್

ಘಾನ್‍ಸಿಂಗ್ ಬಿಗ್ನೋನಿಯೇಸೀ ಕುಟುಂಬಕ್ಕೆ ಸೇರಿದ ಒಂದು ಪರ್ಣಪಾತಿ ಮರ. ಸ್ಟೀರಿಯೋಸ್ಪರ್ಮಮ್ ಕ್ಸೈಲೋಕಾರ್ಪಮ್ ಇದರ ಶಾಸ್ತ್ರೀಯ ಹೆಸರು;[][] ಕೋಣನ ಕೊಂಬುಮರ ಎಂದೂ ಪರ್ಯಾಯವಾಗಿ ಕರೆವುದಿದೆ. ಇದರ ತವರು ಭಾರತ.

ಬೆಟ್ಟಗುಡ್ಡಗಳಲ್ಲಿ ಕಾಣದೊರೆಯುತ್ತದೆ. ಸುಮಾರು 30'-60' ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳು ದೊಡ್ಡವು; 3'-4' ಉದ್ದ ಇವೆ. ಫೆಬ್ರುವರಿ-ಮಾರ್ಚ್ ತಿಂಗಳಿನಲ್ಲಿ ಎಲೆಗಳೆಲ್ಲ ಉದುರಿಹೋಗುತ್ತವೆ. ಹೂಗಳು ಅರಳುವುದು ಮಾರ್ಚ್ ತಿಂಗಳಲ್ಲಿ. ಹೂಗಳ ಬಣ್ಣ ಬಿಳಿ. ಮಧುರವಾದ ವಾಸನೆಯೂ ಉಂಟು. ಕಾಯಿಗಳು ಕೋಣನ ಕೊಂಬಿನಂತಿವೆ.

ಉಪಯೋಗಗಳು

[ಬದಲಾಯಿಸಿ]

ಚೌಬೀನೆ ಗಟ್ಟಿಬಗೆಯದಾಗಿರುವುದರಿಂದ ಬೀರು ಮುಂತಾದ ವಸ್ತುಗಳ ತಯಾರಿಕೆಗೆ ಬಳಸುತ್ತಾರೆ. ಮರದಿಂದ ತೆಗೆಯಬಹುದಾದ ರಾಳವನ್ನು ಚರ್ಮ ರೋಗಗಳಿಗೆ ಉಪಯೋಗಿಸುವುದುಂಟು. ಅಲ್ಲದೆ ಈ ರಾಳ ಉತ್ತೇಜಕ, ಕಫಹಾರಕ ಹಾಗೂ ಪರೋಪಜೀವಿನಾಶಕವೂ ಹೌದು.

ಉಲ್ಲೇಖಗಳು

[ಬದಲಾಯಿಸಿ]
  1. The Plant List: A Working List of All Plant Species, retrieved 11 September 2016
  2. https://www.flowersofindia.net/catalog/slides/Padri%20Tree.html
  3. https://indiaflora-ces.iisc.ac.in/FloraPeninsular/herbsheet.php?id=2037&cat=7
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: