ಘಾನ್ಸಿಂಗ್
ಗೋಚರ
| ರ್‍ಯಾಡರ್‌ಮಾಚೆರಾ ಕ್ಸೈಲೊಕಾರ್ಪಾ | |
|---|---|
| Scientific classification | |
| ಸಾಮ್ರಾಜ್ಯ: | ಪ್ಲಾಂಟೇ |
| ಏಕಮೂಲ ವರ್ಗ: | ಹೂಬಿಡುವ ಸಸ್ಯ |
| ಏಕಮೂಲ ವರ್ಗ: | ಯೂಡಿಕಾಟ್‌ಗಳು |
| ಏಕಮೂಲ ವರ್ಗ: | ಆಸ್ಟರಿಡ್ಸ್ |
| ಗಣ: | ಲ್ಯಾಮಿಯೇಲ್ಸ್ |
| ಕುಟುಂಬ: | ಬಿಗ್ನೋನಿಯೇಸೀ |
| ಕುಲ: | ರ್‍ಯಾಡರ್‌ಮಾಚೆರಾ |
| ಪ್ರಜಾತಿ: | ರ. ಕ್ಸೈಲೊಕಾರ್ಪಾ |
| Binomial name | |
| ರ್‍ಯಾಡರ್‌ಮಾಚೆರಾ ಕ್ಸೈಲೊಕಾರ್ಪಾ | |
| Synonyms[೧] | |
| |

ಘಾನ್ಸಿಂಗ್ ಬಿಗ್ನೋನಿಯೇಸೀ ಕುಟುಂಬಕ್ಕೆ ಸೇರಿದ ಒಂದು ಪರ್ಣಪಾತಿ ಮರ. ಸ್ಟೀರಿಯೋಸ್ಪರ್ಮಮ್ ಕ್ಸೈಲೋಕಾರ್ಪಮ್ ಇದರ ಶಾಸ್ತ್ರೀಯ ಹೆಸರು;[೨][೩] ಕೋಣನ ಕೊಂಬುಮರ ಎಂದೂ ಪರ್ಯಾಯವಾಗಿ ಕರೆವುದಿದೆ. ಇದರ ತವರು ಭಾರತ.
ರಚನೆ
[ಬದಲಾಯಿಸಿ]ಬೆಟ್ಟಗುಡ್ಡಗಳಲ್ಲಿ ಕಾಣದೊರೆಯುತ್ತದೆ. ಸುಮಾರು 30'-60' ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳು ದೊಡ್ಡವು; 3'-4' ಉದ್ದ ಇವೆ. ಫೆಬ್ರುವರಿ-ಮಾರ್ಚ್ ತಿಂಗಳಿನಲ್ಲಿ ಎಲೆಗಳೆಲ್ಲ ಉದುರಿಹೋಗುತ್ತವೆ. ಹೂಗಳು ಅರಳುವುದು ಮಾರ್ಚ್ ತಿಂಗಳಲ್ಲಿ. ಹೂಗಳ ಬಣ್ಣ ಬಿಳಿ. ಮಧುರವಾದ ವಾಸನೆಯೂ ಉಂಟು. ಕಾಯಿಗಳು ಕೋಣನ ಕೊಂಬಿನಂತಿವೆ.
ಉಪಯೋಗಗಳು
[ಬದಲಾಯಿಸಿ]ಚೌಬೀನೆ ಗಟ್ಟಿಬಗೆಯದಾಗಿರುವುದರಿಂದ ಬೀರು ಮುಂತಾದ ವಸ್ತುಗಳ ತಯಾರಿಕೆಗೆ ಬಳಸುತ್ತಾರೆ. ಮರದಿಂದ ತೆಗೆಯಬಹುದಾದ ರಾಳವನ್ನು ಚರ್ಮ ರೋಗಗಳಿಗೆ ಉಪಯೋಗಿಸುವುದುಂಟು. ಅಲ್ಲದೆ ಈ ರಾಳ ಉತ್ತೇಜಕ, ಕಫಹಾರಕ ಹಾಗೂ ಪರೋಪಜೀವಿನಾಶಕವೂ ಹೌದು.
ಉಲ್ಲೇಖಗಳು
[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: