ಘಾಜ಼ೀಪುರ
ಘಾಜ಼ೀಪುರ್ ಜಿಲ್ಲೆ (ಗಾಧೀಪುರ್) | |
---|---|
ಉತ್ತರ ಪ್ರದೇಶದ ಜಿಲ್ಲೆ | |
![]() ಘಾಜ಼ೀಪುರದಲ್ಲಿ ಲಾರ್ಡ್ ಕಾರ್ನ್‌ವಾಲಿಸ್‌ನ ಸಮಾಧಿ | |
![]() ಉತ್ತರ ಪ್ರದೇಶದಲ್ಲಿ ಘಾಜ಼ೀಪುರ್ (ಗಾಧೀಪುರ್) ಜಿಲ್ಲೆಯ ನೆಲೆ | |
Coordinates (Ghazipur): 25°37′N 83°34′E / 25.61°N 83.57°E | |
ದೇಶ | ![]() |
ರಾಜ್ಯ | ಉತ್ತರ ಪ್ರದೇಶ |
ವಿಭಾಗ | ವಾರಾಣಸಿ |
ಏಕೀಕರಿಸಿದ್ದು | 1 January 1879 |
ಪ್ರಧಾನ ಕಾರ್ಯಸ್ಥಳ | ಘಾಜ಼ೀಪುರ್ |
ತೆಹಸೀಲುಗಳು |
|
Government | |
• ಜಿಲ್ಲಾ ಮ್ಯಾಜಿಸ್ಟ್ರೇಟ್ | ಅರೈಕಾ ಅಖೌರಿ, ಐಎಎಸ್ |
• ಲೋಕಸಭಾ ಕ್ಷೇತ್ರಗಳು | ಗಾಧೀಪುರ್ (ಲೋಕಸಭಾ ಕ್ಷೇತ್ರ) |
• ಸಂಸದ, ಲೋಕಸಭೆ | ಅಫ಼್ಜ಼ಲ್ ಅನ್ಸಾರಿ |
Area | |
• ಒಟ್ಟು | ೩,೩೭೭ km೨ (೧,೩೦೪ sq mi) |
Population (2011) | |
• ಒಟ್ಟು | ೩೬,೨೦,೨೬೮ |
• Estimate (2021) | ೪೨,೧೦,೦೦೦ |
• Density | ೧,೧೦೦/km೨ (೨,೮೦೦/sq mi) |
• Urban | ೪,೩೪,೬೯೭ |
ಜನಸಂಖ್ಯಾ ಅಂಕಿಅಂಶಗಳು | |
• ಸಾಕ್ಷರತೆ | 74.46%. |
• ಲಿಂಗ ಅನುಪಾತ | 951 |
• ಭಾಷೆ | ಹಿಂದಿ • ಉರ್ದು |
Time zone | UTC+05:30 (IST) |
Vehicle registration | UP-61 |
ಪ್ರಮುಖ ಹೆದ್ದಾರಿಗಳು |
|
ಸರಾಸರಿ ವಾರ್ಷಿಕ ಮಳೆ ಪ್ರಮಾಣ | 1109 ಮಿ.ಮಿ. |
Website | ಅಧಿಕೃತ ಜಾಲತಾಣ |
ಘಾಜ಼ೀಪುರ ಭಾರತದ ಉತ್ತರ ಪ್ರದೇಶ ರಾಜ್ಯದ ಒಂದು ಜಿಲ್ಲೆ; ಆ ಜಿಲ್ಲೆಯ ಮುಖ್ಯ ಪಟ್ಟಣ. ಪಟ್ಟಣ ಉ. ಅ. 250 35’ ಮತ್ತು ಪೂ. ರೇ. 830 36’ ನಡುವೆ ಇದೆ. ಜಿಲ್ಲೆಯ ವಿಸ್ತೀರ್ಣ 1,308 ಚ.ಮೈ. ಜನಸಂಖ್ಯೆ 3,620,268 (2011). ವಾರ್ಷಿಕ ಸರಾಸರಿ ಮಳೆ 40". ಈ ಜಿಲ್ಲೆಯ ನಡುವೆ ಗಂಗಾ ನದಿ ಹರಿಯುತ್ತದೆ. ಗಂಗಾ ನದಿಯ ಎರಡೂ ಭಾಗದಲ್ಲಿ ಹರಡಿರುವ ಸಮತಲ ಮೆಕ್ಕಲು ಮಣ್ಣಿನ ಭೂಮಿ ತುಂಬ ಫಲವತ್ತಾಗಿದೆ. ಜನಸಾಂದ್ರತೆ ಅಧಿಕ. ಕಬ್ಬು, ಬತ್ತ, ಗೋಧಿ, ಬಾರ್ಲಿ, ಅಫೀಮು ಮತ್ತು ದ್ವಿದಳ ಧಾನ್ಯಗಳು ಈ ಜಿಲ್ಲೆಯ ಪ್ರಮುಖ ಬೆಳೆಗಳು.
ಘಾಜ಼ೀಪುರ ನಗರ
[ಬದಲಾಯಿಸಿ]ಜಿಲ್ಲೆಯ ಕೇಂದ್ರವಾದ ಘಾಜೀ಼ಪುರ ಗಂಗಾ ನದಿಯ ದಡದ ಮೇಲೆ ವಾರಾಣಸಿಯಿಂದ 50 ಮೈ. ಪೂರ್ವದಲ್ಲಿದೆ.[೧] ಜನಸಂಖ್ಯೆ 110,587 (2011).[೨] ಭಾರತದ ಪ್ರಾಚೀನ ನಗರಗಳಲ್ಲಿ ಒಂದಾದ ಈ ನಗರಕ್ಕೆ ಮೊದಲು ಗಾಧೀಪುರ ಎಂಬ ಹೆಸರಿತ್ತು.[೩] 1330ರಲ್ಲಿ ಮುಸ್ಲಿಂ ದೊರೆಯೊಬ್ಬನ ವಂಶನಾಮಕ್ಕನುಗುಣವಾಗಿ ನಗರದ ಹೆಸರನ್ನು ಘಾಜೀಪುರ ಎಂದು ಬದಲಾಯಿಸಲಾಯಿತ್ತು. ಬ್ರಿಟಿಷ್ ಆಳ್ವಿಕೆಯ ಆರಂಭ ಕಾಲದಲ್ಲಿ ಇದೊಂದು ಪ್ರಮುಖ ಸೇನಾನೆಲೆಯೂ, ಮುಖ್ಯ ನದೀರೇವು ಪಟ್ಟಣವೂ ಆಗಿತ್ತು.
1805ರಲ್ಲಿ ತೀರಿಕೊಂಡ ಭಾರತದ ವೈಸ್‌ರಾಯ್ ಲಾರ್ಡ್ ಕಾರ್ನ್‌ವಾಲೀಸನ ಸಮಾಧಿಭವನ ಘಾಜ಼ೀಪುರದಲ್ಲಿದೆ.[೪] ಚರ್ಚ್, ಗೋರಾಬಜಾ಼ರ್, 40 ಸ್ತಂಭಗಳ ಅರಮನೆ ಎಂಬ ಹೆಸರು ಪಡೆದ ರಾಜಭವನ - ಇವು ಇಲ್ಲಿಯ ಪ್ರಮುಖ ಭವನಗಳು. ಘಾಜ಼ೀಪುರಕ್ಕೆ ರೈಲ್ವೆ ಸೌಲಭ್ಯವುಂಟು. ಗಂಗಾನದಿಯ ಒಂದು ದಡದಲ್ಲಿ ಈಶಾನ್ಯ ರೈಲ್ವೆಗೆ ಸೇರಿದ ಎರಡು ನಿಲ್ದಾಣಗಳೂ, ಇನ್ನೊಂದು ದಡದಲ್ಲಿ ಪೂರ್ವ ರೈಲ್ವೆಯ ಒಂದು ನಿಲ್ದಾಣವು ಇವೆ. ವಾರಾಣಸಿ ಮತ್ತು ಘಾಜ಼ೀಪುರಗಳ ನಡುವೆ ಬಸ್ಸುಗಳು ಓಡಾಡುತ್ತವೆ. ವಿವಿಧ ಬಗೆಯ ಹೂಗಳಿಂದ ತಯಾರಿಸದ ತೈಲ ಮತ್ತು ಪರಿಮಳ ದ್ರವ್ಯಗಳಿಗೆ ಘಾಜ಼ೀಪುರ ಪ್ರಖ್ಯಾತವಾದ್ದು. ಉತ್ತರ ಭಾರತದ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಒಂದಾದ ಈ ನಗರದ ವ್ಯಾಪಾರ, ರೈಲು ಸಂಪರ್ಕಕ್ಕೆ ಮುಂಚೆ, ಗಂಗಾನದಿಯ ಮೂಲಕ ಸಾಗುತ್ತಿತ್ತು. ಸಕ್ಕರೆ, ತಂಬಾಕು, ಹತ್ತಿ, ಪನ್ನೀರು ಇವು ಪ್ರಮುಖ ವ್ಯಾಪಾರ ಸರಕುಗಳು.
ಇಲ್ಲಿ ಅನೇಕ ಜಿಲ್ಲಾ ಕಚೇರಿಗಳೂ, ಕಾರ್ಖಾನೆಗಳೂ, ಒಂದು ಸ್ನಾತಕಪೂರ್ವ ಕಾಲೇಜೂ ಇವೆ.
ಉಲ್ಲೇಖಗಳು
[ಬದಲಾಯಿಸಿ]- ↑ "Sir Sayed Ahmad Khan|Books".
- ↑ "2011 census of India".
- ↑ "Ghazipur | India | Britannica".
- ↑ Führer, Alois Anton (1891). Archaeological Survey of India: The Monumental Antiquities and Inscriptions in the North-Western Province and Oudh. Vol. XII. Allahabad: Superintendent, Government Press. p. 231.
ಹೊರಗಿನ ಕೊಂಡಿಗಳು
[ಬದಲಾಯಿಸಿ]

- Pages using gadget WikiMiniAtlas
- Pages with non-numeric formatnum arguments
- Pages using the JsonConfig extension
- Articles with short description
- Short description is different from Wikidata
- Pages using infobox settlement with bad settlement type
- Coordinates on Wikidata
- Pages using infobox settlement with unknown parameters
- ಉತ್ತರ ಪ್ರದೇಶದ ಜಿಲ್ಲೆಗಳು
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ