ಗ್ವಾಲಿಯರ್ ಘರಾನಾ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
(ಗ್ವಾಲಿಯರ ಘರಾಣಾ ಇಂದ ಪುನರ್ನಿರ್ದೇಶಿತ)
Jump to navigation Jump to search

ಗ್ವಾಲಿಯರ್ ಘರಾನಾ ಅತ್ಯಂತ ಹಳೆಯ ಖಯಾಲ್ ಘರಾನಾಗಳ ಪೈಕಿ ಒಂದು ಮತ್ತು ಭಾರತದ ಬಹುತೇಕ ಶಾಸ್ತ್ರೀಯ ಸಂಗೀತಗಾರರು ತಮ್ಮ ಶೈಲಿಯ ಉಗಮವನ್ನು ಈ ಘರಾನಾಕ್ಕೆ ಗುರುತಿಸಬಲ್ಲರು. ಗ್ವಾಲಿಯರ್ ಘರಾನಾದ ಉಚ್ಛ್ರಾಯ ಸರ್ವಶ್ರೇಷ್ಠ ಮುಘಲ್ ಚಕ್ರವರ್ತಿ ಅಕ್ಬರ್‌ನ ರಾಜ್ಯಭಾರದೊಂದಿಗೆ ಆರಂಭವಾಯಿತು (೧೫೪೨–೧೬೦೫). ಕಲೆಗಳ ಪೋಷಕನೆನಿಸಿದ ಈತನ ಅಚ್ಚುಮೆಚ್ಚಿನ ಗಾಯಕರು, ಆಸ್ಥಾನದ ಹಾಡುಗಾರರ ಪೈಕಿ ಮೊದಲಿಗನೆನಿಸಿದ್ದ ತಾನ್‌ಸೇನ್‌ನಂತಹವರು, ಗ್ವಾಲಿಯರ್ ಪಟ್ಟಣದಿಂದ ಬಂದವರಾಗಿದ್ದರು.

ಕಾನ್ಪುರದಲ್ಲಿ 1948, ಸೆಪ್ಟೆಂಬರ್ 14ರಂದು ಜನಿಸಿದ ವೀಣಾ ಸಹಸ್ರೆಬುದ್ಧೆ ಅವರು ಬಾಲ್ಯದಲ್ಲಿಯೇ ಸಂಗೀತ ಅಭ್ಯಾಸ ಆರಂಭಿಸಿದ್ದರು. ತಂದೆ ಪಂಡಿತ್ ಶಂಕರ್ ಶ್ರೀಪಾದ್ ಬೋಡಸ್ ಹಾಗೂ ಸೋದರ ಪಂಡಿತ್ ಕಾಶೀನಾಥ್ ಶಂಕರ್ ಬೋಡಸ್ ಅವರಿಂದ ಶಾಸ್ತ್ರೀಯ ಸಂಗೀತ ಅಧ್ಯಯನ ನಡೆಸಿದ್ದ ವೀಣಾ ಅವರು ಸಂಸ್ಕೃತ ಲೇಖಕರಾಗಿಯೂ ಗುರುತಿಸಿಕೊಂಡಿದ್ದರು.

ವೀಣಾ ಸಹಸ್ರಬುದ್ಧೆ ಅವರಿಗೆ 2013ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ. 1984ರಿಂದ ಪುಣೆಯಲ್ಲಿಯಲ್ಲಿಯೇ ವಾಸವಿದ್ದರು.

ಗ್ವಾಲಿಯರ್ ಘರಾನಾದ ಪ್ರಸಿದ್ಧ ಹಾಡುಗಾರರು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]