ಗ್ರೀಸ್ನ ಇತಿಹಾಸ
ಗ್ರೀಸ್ನ ಇತಿಹಾಸವು ಆಧುನಿಕ ಗ್ರೀಸ್ ರಾಷ್ಟ್ರರಾಜ್ಯ ಪ್ರದೇಶದ, ಜೊತೆಗೆ ಗ್ರೀಕರ ಮತ್ತು ಅವರು ಐತಿಹಾಸಿಕವಾಗಿ ನೆಲೆಸಿದ ಮತ್ತು ಆಳಿದ ಪ್ರದೇಶದ ಇತಿಹಾಸವನ್ನು ಒಳಗೊಳ್ಳುತ್ತದೆ.
ಗ್ರೀಕ್ ಎಂಬುದು ಹಲವಾರು ಜನಾಂಗಗಳ ಸಮುದಾಯಕ್ಕೆ ಅನ್ವಯಿಸಬಹುದಾದ ಪದ. ಗ್ರೀಸಿನ ದ್ವೀಪಗಳಲ್ಲಿ ವಾಸಿಸುತ್ತಿದ್ದ ಮೂಲನಿವಾಸಿಗಳು ಮೂರು ಸಲ ಹೊರಗಿನಿಂದ ವಲಸೆ ಬಂದ ಜನರೊಂದಿಗೆ ಬೆರೆತುಕೊಂಡರು. ಹೀಗೆ ವಲಸೆ ಬಂದ ಒಂದೊಂದು ಜನಾಂಗಕ್ಕೂ ನಡುವೆ ಕೆಲವು ಶತಮಾನಗಳ ಅಂತರವೇ ಇತ್ತು.
ಪ್ರಾಚೀನ ಗ್ರೀಸ್‍ನ ಇತಿಹಾಸ
[ಬದಲಾಯಿಸಿ]ಗ್ರೀಕ್ ಮೂಲನಿವಾಸಿಗಳು ಇದ್ದುದ್ದು ಸಿಕ್ಲಡೀಸ್ ದ್ವೀಪಗಳಲ್ಲಿ. ಅಥೆನ್ಸ್ ಸಮೀಪದ ಸಮುದ್ರತೀರದಿಂದ ಆಗ್ನೇಯಕ್ಕೆ ಸರಪಳಿಯಂತೆ ಈ ದ್ವೀಪಗಳು ಹಬ್ಬಿವೆ. ಇವರ ವಿಷಯ ತಿಳಿದಿರುವುದೆಲ್ಲ ಹೆಚ್ಚಿನ ಮಟ್ಟಿಗೆ ಇವರು ಬಿಟ್ಟುಹೋದ ಅವಶೇಷಗಳಿಂದ. ಕ್ರಿ.ಪೂ. 2000 ದ ಸುಮಾರಿಗೆ ಕ್ರೀಟ್ ದ್ವೀಪದಲ್ಲಿ ನಾಸಸ್ ನಗರದ ಪರಿಸರದಲ್ಲಿ ಅಪೂರ್ವವಾದ ನಾಗರಿಕತೆಯೊಂದು ಅಸ್ತಿತ್ವದಲ್ಲಿತ್ತು. ಇದನ್ನು ಸಾಮಾನ್ಯವಾಗಿ ಮಿನೋವನ್ ನಾಗರಿಕತೆ ಎಂದು ಕರೆಯಲಾಗಿದೆ. ಮೈನಾಸ್ ಎಂಬ ಒಬ್ಬ ಪೌರಾಣಿಕ ಅರಸ ಈ ದ್ವೀಪದಲ್ಲಿ ವಾಸಿಸುತ್ತಿದ್ದನೆಂದೂ, ಇವನ ಬಳಿ ಅತ್ಯಂತ ಬಲಿಷ್ಠವಾದ ಮಿನಟಾರ್ ಎಂಬ ಗೂಳಿಯಿತ್ತೆಂದೂ ಕಥೆಗಳಲ್ಲಿ ಹೇಳಿದೆ. ಆ ಕಾಲದಲ್ಲಿ ಗೂಳಿಗಳ ಕದನ ಬಹಳ ಮೆಚ್ಚಿನ ಆಟವಾಗಿತ್ತು ಎಂಬುದು ಇದರಿಂದ ವ್ಯಕ್ತವಾಗುತ್ತದೆ.[೧] ಇದು ಅಂದಿನ ವರ್ಣಚಿತ್ರಗಳಲ್ಲೂ, ಭಿತ್ತಿಚಿತ್ರಗಳಲ್ಲೂ ಕಂಡುಬಂದಿದೆ. ಈ ನಾಗರಿಕತೆಗೆ ಸೇರಿದ ಜನರಿಗೆ ಜೀವನದಲ್ಲಿ ಹೆಚ್ಚಿನ ಅಭಿರುಚಿಯೂ, ತಮ್ಮ ಸಂಸ್ಕೃತಿಯನ್ನು ಕುರಿತ ಜ್ಞಾನವೂ ತೀವ್ರವಾಗಿತ್ತು. ರಾಜಧಾನಿಗೆ ಕೋಟೆ ಇಲ್ಲದಿರುವುದನ್ನು ಗಮನಿಸಿದರೆ ಇವರು ತಮ್ಮ ರಕ್ಷಣೆಗೆ ಬಹಳ ಮಟ್ಟಿಗೆ ನೌಕಾಬಲವನ್ನೇ ಅವಲಂಬಿಸಿದ್ದರೆಂಬುದು ಸ್ಪಷ್ಟವಾಗುತ್ತದೆ.
ಕ್ರಿ.ಪೂ. 1400 ರ ವೇಳೆಗೆ ಕ್ರೀಟ್ ದ್ವೀಪ ಶತ್ರುವಿನ ದಾಳಿಗೆ ತುತ್ತಾಯಿತು. ನಾಸಸ್ ನಗರ ಭಸ್ಮವಾಯಿತು. ಇದಕ್ಕೆ ಕಾರಣರು ಅಕೀಯನರು. ಇವರು ಆರ್ಗಲಿಸ್ ಖಾರಿಯ ಸಮೀಪದ ಮೈಸೀನೀ ಮತ್ತು ಟಿರಿನ್ಸ್ ನಗರದಲ್ಲಿದ್ದ ಜನ. ಸಾಂಸ್ಕೃತಿಕವಾಗಿ ಮಿನೋವನರಿಗಿಂತ ಹೆಚ್ಚು ಒರಟರಾದ ಈ ಜನ ಆ ಸಂಸ್ಕೃತಿಯ ಅನೇಕ ಅಂಶಗಳನ್ನು ಆತ್ಮೀಕರಿಸುವುದರಲ್ಲಿ ಯಶಸ್ವಿಯಾದರು.
ಕ್ರಿ.ಪೂ. 1100 ರ ವೇಳೆಗೆ ಇವರ ಸ್ಥಾನವನ್ನು ಡೋರಿಯನರು ಆಕ್ರಮಿಸಿದರು. ಇವರಿಗೆ ಕಬ್ಬಿಣದ ಉಪಯೋಗ ತಿಳಿದಿತ್ತು. ಉಳಿದ ಹಾಗೂ ಸ್ವಾಮಿತ್ವಗಳಿಗೆ ಬೇಕಾದ ಲಕ್ಷಣಗಳು ಈ ಜನರಲ್ಲಿದ್ದುವು. ಆದರೂ ಇವರದು ಇವರ ಪೂರ್ವಜರಿಗಿಂತ ಕೀಳ್ಮಟ್ಟದ ಅಭಿರುಚಿಯಾಗಿತ್ತು. ಅಲ್ಲಿಂದ ನಾಲ್ಕು ಶತಮಾನಗಳ ಕಾಲದ ಗ್ರೀಕ್ ಇತಿಹಾಸವನ್ನು ಕಪ್ಪುಯುಗವೆನ್ನಲಾಗಿದೆ.[೨][೩] ಆ ಶತಮಾನಗಳಿಗೆ ಸಂಬಂಧಿಸಿದ ವಿಷಯಗಳು ಯಾವುವೂ ತಿಳಿದಿಲ್ಲ. ಆದರೆ ಅದರಲ್ಲಿ ಕೆಲವಾದರೂ ಒಳ್ಳೆಯ ಗುಣಗಳಿದ್ದಿರಬೇಕು. ಏಕೆಂದರೆ ಅನಂತರದ ಗ್ರೀಕ್ ಇತಿಹಾಸ ತೇಜಸ್ವಿಯಾದದ್ದೂ, ಉತ್ಕೃಷ್ಟವಾದುದೂ ಆಗಿದೆ. ಗ್ರೀಕರ ಕಪ್ಪುಯುಗಕ್ಕೆ ಸೇರಿದವನು ಹೋಮರ್ ಕವಿ. ಈತನ ಹಿಂದಿನ ಕಾಲದ ವೈಭವದ ವರ್ಣನೆಯೇ ಈತನದೆನ್ನಲಾದ ಕೃತಿಗಳಲ್ಲಿ ಕಂಡುಬರುತ್ತದೆ.
ಗ್ರೀಕರ ಕಲೆ, ವಾಸ್ತುಶಿಲ್ಪಗಳನ್ನು ಈ ಚಾರಿತ್ರಿಕ ಹಿನ್ನೆಲೆಯಲ್ಲಿ ಕಾಣಬೇಕು.
ಉಲ್ಲೇಖಗಳು
[ಬದಲಾಯಿಸಿ]- ↑ "???". solo.bodleian.ox.ac.uk (in ಇಂಗ್ಲಿಷ್). Retrieved 2024-06-03.
- ↑ "The History of Greece". Hellenicfoundation.com. Archived from the original on 2016-12-07. Retrieved 2024-04-21.: "The period from 1100 to 800 B.C. is known as the Dark Age of Greece. As described in the Ancient Greek Thesaursus: Throughout the area there are signs of a sharp cultural decline. Some sites, formerly inhabited, were now abandoned."
- ↑ Martin, Thomas R., (October 3, 2019). "The Dark Ages of Ancient Greece" Archived 2020-10-26 ವೇಬ್ಯಾಕ್ ಮೆಷಿನ್ ನಲ್ಲಿ.: "... The Near East recovered its strength much sooner than did Greece, ending its Dark Age by around 900 B.C. ... The end of the Greek Dark Age is traditionally placed some 150 years after that, at about 750 B.C. ..." Retrieved October 24, 2020
