ವಿಷಯಕ್ಕೆ ಹೋಗು

ಗ್ರೀನ್‍ಯಾರ್ಡ್ ಕ್ರಿಯೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗ್ರೀನ್‍ಯಾರ್ಡ್ ಕ್ರಿಯೆ ಎಂದರೆ ಸೂಕ್ತ ದ್ರಾವಕದಲ್ಲಿ (ಸಾಲ್ವೆಂಟ್) ಆಲ್ಕೈಲ್ ಅಥವಾ ಅರೈಲ್ ಹ್ಯಾಲೈಡ್ ಮತ್ತು ಮೆಗ್ನೀಷಿಯಮ್ ಲೋಹಗಳ ಮಧ್ಯೆ ನಡೆಯುವ ಕ್ರಿಯೆ (ಗ್ರೀನ್‌ಯಾರ್ಡ್ ರಿಯಾಕ್ಷನ್). ಸಾಮಾನ್ಯವಾಗಿ ಉಪಯೋಗಿಸುವ ದ್ರಾವಕ ನಿರಪೇಕ್ಷ (ಆಬ್ಸೊಲ್ಯೂಟ್) ಈಥರ್.

(R = ಆಲ್ಕೈಲ್ ಅಥವಾ ಅರೈಲ್ ಪುಂಜ, X = ಕ್ಲೋರಿನ್, ಬ್ರೋಮಿನ್ ಇಲ್ಲವೆ ಅಯೊಡೀನ್)

ಕ್ರಿಯೆಯಲ್ಲಿ ದೊರೆಯುವ ಆರ್ಗ್ಯಾನಿಕ್ ಮೆಗ್ನೀಷಿಯಮ್ ಹ್ಯಾಲೈಡಿಗೆ ಗ್ರೀನ್‌ಯಾರ್ಡ್ ಕ್ರಿಯಾಕಾರಿ ಎಂದು ಹೆಸರು. ತಮ್ಮ ಅತಿ ಹೆಚ್ಚಿನ ರಸಾಯನ ಕ್ರಿಯಾಶಕ್ತಿಯಿಂದಾಗಿ ಇವು ಅಮೂಲ್ಯವಾದ ಸಂಶ್ಲೇಷಣ ಕ್ರಿಯಾಕಾರಿಗಳಾಗಿವೆ. ಗ್ರೀನ್‌ಯಾರ್ಡ್ ಕ್ರಿಯಾಕಾರಿಗಳನ್ನು ಅನೇಕ ಬಗೆಯ ಆಲ್ಕೈಲ್ ಮತ್ತು ಆರೈಲ್ ಹ್ಯಾಲೈಡುಗಳನ್ನು ಉಪೆಯೋಗಿಸಿ ತಯಾರಿಸಿದೆ. ಸಾಮಾನ್ಯವಾಗಿ ಆಲ್ಕೈಲ್ ಕ್ಲೋರೈಡ್, ಬ್ರೋಮೈಡ್ ಮತ್ತು ಆಯೊಡೈಡುಗಳು ಮತ್ತು ಅರೈಲ್ ಬ್ರೋಮೈಡ್ ಮತ್ತು ಅಯೊಡೈಡುಗಳು ಕೂಡಲೇ ವರ್ತಿಸುತ್ತವೆ. ಅರೈಲ್ ಕ್ಲೋರೈಡುಗಳು ಜಡ ಪ್ರವೃತ್ತಿ ತೋರುವುದರಿಂದ ವಿಶಿಷ್ಟವಾಗಿ ಪಟುತ್ವಗೊಳಿಸಿದ (activated) ಮೆಗ್ನೀಷಿಯಮ್, ಸುಧಾರಿಸಿದ ಕ್ರಿಯಾತಂತ್ರ, ಹೆಚ್ಚಿನ ಕುದಿಬಿಂದುವಿರುವ ದ್ರಾವಕ ಮತ್ತು ಹೆಚ್ಚಿನ ಕ್ರಿಯಾಕಾಲ ಬೇಕಾಗುತ್ತದೆ. ಇತ್ತೀಚೆಗೆ ಟೆಟ್ರಹೈಡ್ರೊಫ್ಯೂರಾನನ್ನು ದ್ರಾವಕವಾಗಿ ಉಪಯೋಗಿಸಿ[] ವೀನೈಲ್ ಮೆಗ್ನೀಷಿಯಮ್ ಹ್ಯಾಲೈಡುಗಳನ್ನು ತಯಾರಿಸಬಹುದೆಂದು ಗೊತ್ತಾಗಿದೆ. ಎರಡು ಅಥವಾ ಎರಡಕ್ಕಿಂತ ಹೆಚ್ಚು ಹ್ಯಾಲೊಜನ್ ಪರಮಾಣುಗಳು ಇರುವ ಹೈಡ್ರೊಕಾರ್ಬನ್ನುಗಳು ಕೆಲವು ಬಾರಿ ಸಾಮಾನ್ಯ ಕ್ರಿಯೆಯನ್ನೇ ತೋರ್ಪಡಿಸುತ್ತವೆ. ಉದಾಹರಣೆಗೆ ಟೆಟ್ರ ಮೆಥಿಲೀನ್ ಡೈ ಬ್ರೋಮೈಡ್ ಮೆಗ್ನೀಷಿಯಮಿನೊಡನೆ ವರ್ತಿಸಿ ಸಾಕಷ್ಟು ಗಾತ್ರದಲ್ಲಿ ಟೆಟ್ರ ಮೆಥಿಲೀನ್ ಡೈ ಮೆಗ್ನೀಷಿಯಮ್ ಬ್ರೋಮೈಡನ್ನು ಕೊಡುತ್ತದೆ.

ಕ್ರಿಯೆ

[ಬದಲಾಯಿಸಿ]

ಸಾಮಾನ್ಯವಾಗಿ ಗ್ರೀನ್‌ಯಾರ್ಡ್ ಕ್ರಿಯಾಕಾರಿಗಳನ್ನು ಈಥರ್ ದ್ರಾವಕದಲ್ಲಿ ಕದಡಿರುವ ಮೆಗ್ನೀಷಿಯಮ್ ಲೋಹದ ಮೇಲೆ ಆರ್ಗ್ಯಾನಿಕ್ ಹ್ಯಾಲೈಡ್-ಈಥರ್ ದ್ರಾವಣವನ್ನು ನಿಧಾನವಾಗಿ ಕಲಕುತ್ತ ಹಾಕಿ ತಯಾರಿಸಲಾಗುವುದು. ಗ್ರೀನ್‌ಯಾರ್ಡ್ ಕ್ರಿಯಾಕಾರಿಗಳು ವಾಯು ಮತ್ತು ನೀರಿನೊಡನೆ ಕೂಡಲೆ ರಾಸಾಯನಿಕ ಕ್ರಿಯೆಗೆ ಒಳಗಾಗುವುದರಿಂದ ಕ್ರಿಯಾಕಾರಿಗಳು ಮತ್ತು ಉಪಕರಣಗಳು ಶುಷ್ಕವಾಗಿರಬೇಕು;[] ಮತ್ತು ಅವುಗಳಿಗೆ ವಾಯು ಸಂಪರ್ಕ ಇರಬಾರದು. ಆರಂಭದಲ್ಲಿ ಗ್ರೀನ್‌ಯಾರ್ಡ್ ಕ್ರಿಯೆ ಮಂದಗತಿಯಲ್ಲಿ ಸಾಗುತ್ತದೆ. ಆದರೆ ಒಂದು ಬಾರಿ ಗಣನಾರ್ಹ ಗಾತ್ರದಲ್ಲಿ ಗ್ರೀನ್‌ಯಾರ್ಡ್ ಕ್ರಿಯಾಕಾರಿ ಉತ್ಪತ್ತಿಯಾದ ಬಳಿಕ ಕ್ರಿಯಾವೇಗ ಹೆಚ್ಚುತ್ತದೆ. ಕ್ರಿಯೆಯನ್ನು ಆರಂಭಿಸುವ ಒಂದು ವಿಧಾನವೆಂದರೆ ಕೊಂಚ ಹ್ಯಾಲೈಡ್ ಸೇರಿಸಿದ ತರುವಾಯ ಕೆಲವು ಲೋಹದ ಚೂರುಗಳನ್ನು ಗಾಜಿನ ಕಡ್ಡಿಯ ಸಹಾಯದಿಂದ ಪುಡಿಮಾಡುವುದು ಮತ್ತು ಒಂದು ಹರಳು ಅಯೋಡೀನನ್ನು ಸೇರಿಸುವುದು. ಪೂರ್ವಭಾವಿಯಾಗಿ ಸ್ವಲ್ಪ ಅಯೊಡೀನ್ ಜೊತೆ ಸುಮಾರು 2000 ಸೆಂ.ಗೆ ಕಾಯಿಸಿದ ಮೆಗ್ನೀಷಿಯಮ್ ಲೋಹವನ್ನು ಬಳಸುವುದೂ ಕ್ರಿಯೆಯನ್ನು ಪ್ರಾರಂಭಿಸಲು ಹೆಚ್ಚು ಸೌಕರ್ಯವುಳ್ಳ ವಿಧಾನ. ಈ ವಿಧಾನಗಳಲ್ಲಿ ಮೆಗ್ನೀಷಿಯಮಿನೊಡನೆ ಅಯೊಡೀನ್ ವರ್ತಿಸಿ ಈಥರ್ ದ್ರಾವ್ಯ ಮೆಗ್ನೀಷಿಯಮ್ ಅಯೊಡೈಡನ್ನು ಕೊಡುತ್ತದೆ ಮತ್ತು ಪಟುವಾದ ಲೋಹದ ಮೇಲ್ಮೈಯನ್ನೂ ಬಯಲು ಮಾಡುತ್ತದೆ. ಮೆಗ್ನೀಷಿಯಮ್ ಬ್ರೋಮೈಡ್ ಮತ್ತು ಅಯೊಡೈಡುಗಳು ಈಥರಿನಲ್ಲಿ ಲೀನವಾಗದ ಜಲಸಂಯುಕ್ತಗಳನ್ನು ಕೊಡುತ್ತವೆ. ಇದು ಈಥರನ್ನು ಮತ್ತಷ್ಟು ಶುಷ್ಕಗೊಳಿಸಲು ಸಹಾಯವಾಗುತ್ತದೆ. ಇದೇ ಪರಿಣಾಮವನ್ನು ಎಥಿಲೀನ್ ಡೈಬ್ರೋಮೈಡನ್ನು ಉಪಯೋಗಿಸುವುದರಿಂದಲೂ ಸಾಧಿಸಬಹುದು.[] ಎಥಿಲೀನ್ ಡೈಬ್ರೋಮೈಡ್ ಮೆಗ್ನೀಷಿಯಮಿನೊಡನೆ ಶೀಘ್ರವಾಗಿ ವರ್ತಿಸಿ ಎಥಿಲೀನ್ ಮತ್ತು ಮೆಗ್ನೀಷಿಯಮ್ ಬ್ರೋಮೈಡನ್ನು ಕೊಡುತ್ತದೆ.

ಗ್ರೀನ್‌ಯಾರ್ಡ್ ಕ್ರಿಯೆಯಲ್ಲಿ ಉಷ್ಣ ಉತ್ಪತ್ತಿಯಾಗುತ್ತದೆ. ಆದ್ದರಿಂದ ಕ್ರಿಯೆ ಸಾಕಷ್ಟು ವೇಗವಾಗಿ ನಡೆಯುವ ಮುನ್ನವೇ ಹೆಚ್ಚಿನ ಗಾತ್ರದಲ್ಲಿ ಹ್ಯಾಲೈಡನ್ನು ಸೇರಿಸದಂತೆ ಎಚ್ಚರಿಸುವುದು ಅಗತ್ಯ. ಅನಂತರ ಈಥರ್ ಸದಾ ಕುದಿಯಲು ಬೇಕಾಗುವ ವೇಗದಲ್ಲಿ ಹ್ಯಾಲೈಡನ್ನು ಸೇರಿಸಬೇಕು. ಕ್ರಿಯಾಕಾರಿಗಳಿಂದ ವಾಯುವನ್ನು ಸದಾ ದೂರವಿಡಲು ಈಥರ್ ಆವಿ ಸಹಾಯವಾಗುತ್ತದೆ.

ಗ್ರೀನ್‌ಯಾರ್ಡ್ ಕ್ರಿಯಾಕಾರಿಗಳ ರಚನೆ

[ಬದಲಾಯಿಸಿ]

ಸಾಮಾನ್ಯವಾಗಿ RMgX ಅಣು ಸೂತ್ರದಿಂದ ನಿರೂಪಿಸಿದಾಗ್ಯೂ ಗ್ರೀನ್‌ಯಾರ್ಡ್ ಕ್ರಿಯಾಕಾರಿಗಳಿಗೆ ಜಟಿಲವಾದ ಅಣುರಚನೆ ಉಂಟು. ಕ್ರಿಯಾಕಾರಿಗಳು ಒಂದು ಸಮಸ್ಥಿತಿಯ ಮಿಶ್ರಣವೆಂದು ಯೋಚಿಸಲಾಗಿದೆ.

ಸಮಸ್ಥಿತಿಯ ಎಲ್ಲ ಘಟಕಗಳೂ ಅಯಾನೀಕೃತಗೊಳ್ಳಬಲ್ಲವು.

ಗ್ರೀನ್‌ಯಾರ್ಡ್ ಕ್ರಿಯಾಕಾರಿಗಳ ಕ್ರಿಯೆಗಳು

[ಬದಲಾಯಿಸಿ]

ಈಥರ್ ಮತ್ತು ತೃತೀಯಕ-ಅಮೈನುಗಳನ್ನು ಬಿಟ್ಟರೆ ಗ್ರೀನ್‌ಯಾರ್ಡ್ ಕ್ರಿಯಾಕಾರಿಗಳೊಡನೆ ಸಂಯೋಗಹೊಂದದ ಆರ್ಗ್ಯಾನಿಕ್ ಕ್ರಿಯಾಪುಂಜಗಳು ಅತಿವಿರಳ.

ಇಂಗಾಲದ ಡೈಆಕ್ಸೈಡ್

ಕಡಿಮೆ ಉಷ್ಣತೆಯಲ್ಲಿ ಇಂಗಾಲದ ಡೈಆಕ್ಸೈಡ್ ಗ್ರೀನ್‌ಯಾರ್ಡ್ ಕ್ರಿಯಕಾರಿಯೊಂದಿಗೆ ಆರ್ಗ್ಯಾನಿಕ್ ಆಮ್ಲವನ್ನು ಕೊಡುತ್ತದೆ.[][]

ಆಲ್ಡಿಹೈಡ್ ಮತ್ತು ಕೀಟೋನ್

ಆಲ್ಡಿಹೈಡ್ ಮತ್ತು ಕೀಟೋನುಗಳು ಗ್ರೀನ್‌ಯಾರ್ಡ್ ಕ್ರಿಯಾಕಾರಿಯೊಡನೆ ಸಂಯೋಗಹೊಂದಿ ಪ್ರಾಥಮಿಕ, ದ್ವಿತೀಯಕ ಅಥವಾ ತೃತೀಯಕ ಆಲ್ಕೊಹಾಲುಗಳನ್ನು ಕೊಡುತ್ತದೆ.[]


ಈ ಕ್ರಿಯೆಗಳಿಂದ ಇಂಗಾಲದ ಸರಪಳಿಯನ್ನು ವೃದ್ಧಿಗೊಳಿಸಬಹುದು. ಗ್ರೀನ್‌ಯಾರ್ಡ್ ಕ್ರಿಯಾಕಾರಿ ಮತ್ತು ಎಥಿಲೀನ್ ಆಕ್ಸೈಡುಗಳ ಸಂಯೋಗದಿಂದ ಹೈಡ್ರೊಕಾರ್ಬನ್ ಸರಪಳಿಯನ್ನು ಎರಡು ಇಂಗಾಲದ ಪರಮಾಣುಗಳ ಮಟ್ಟಿಗೆ ಹೆಚ್ಚಿಸಬಹುದು.

ಬಂದಂಥ ಆಲ್ಕೊಹಾಲನ್ನು ಹ್ಯಾಲೈಡ್ ಆಗಿ ಪರಿವರ್ತಿಸಿ ಮೇಲಿನ ವಿಧಾನವನ್ನು ಪುನರಾವೃತ್ತಿಗೊಳಿಸಬಹುದು.

ಎಸ್ಟರುಗಳು

ಎಸ್ಟರುಗಳು ಗ್ರೀನ್‌ಯಾರ್ಡ್ ಕ್ರಿಯಾಕಾರಿಗಳೊಡನೆ ವರ್ತಿಸಿ ತೃತೀಯಕ ಆಲ್ಕೊಹಾಲುಗಳನ್ನು ಕೊಡುತ್ತವೆ.[]

ಕಾರ್ಬೊನೈಲ್ ಹ್ಯಾಲೈಡುಗಳು

ಕಾರ್ಬೊನೈಲ್ ಹ್ಯಾಲೈಡುಗಳು ಪ್ರಥಮದಲ್ಲಿ ಕೀಟೋನುಗಳನ್ನು ಉತ್ಪತ್ತಿಮಾಡುತ್ತವೆ. ಕೀಟೋನುಗಳು ಕೊನೆಗೆ ತೃತೀಯಕ ಆಲ್ಕೊಹಾಲುಗಳನ್ನು ಕೊಡುತ್ತವೆ. ಈ ಕ್ರಿಯೆಯ ಬಹು ಅಮೂಲ್ಯ ಮಾರ್ಪಾಡೆಂದರೆ ಗ್ರೀನ್‌ಯಾರ್ಡ್ ಕ್ರಿಯಾಕಾರಿಯನ್ನು ಪೂರ್ವಭಾವಿಯಾಗಿ ಕ್ಯಾಡ್ಮಿಯಮ್ ಕ್ಲೋರೈಡಿನೊಡನೆ ವರ್ತಿಸುವುದು. ಆರ್ಗ್ಯಾನಿಕ್ ಕ್ಯಾಡ್ಮಿಯಮ್ ಸಂಯುಕ್ತಗಳು ಮೆಗ್ನೀಷಿಯಮ್ ಸಂಯುಕ್ತಗಳಷ್ಟು ತೀಕ್ಷ್ಣ ಕ್ರಿಯಾಕಾರಿಗಳಲ್ಲ. ಅವುಗಳ ಕ್ರಿಯೆ ನಿಧಾನ. ಆದ್ದರಿಂದ ಉತ್ಪತ್ತಿಯಾದ ಕೀಟೋನ್ ತೃತೀಯಕ ಆಲ್ಕೊಹಾಲ್ ಆಗುವುದನ್ನು ತಪ್ಪಿಸಬಹುದು.

ಗ್ರೀನ್‌ಯಾರ್ಡ್ ಕ್ರಿಯಾಕಾರಿಗಳು ಬೆರಿಲಿಯಮ್ ಹ್ಯಾಲೈಡುಗಳೊಡನೆ ಆರ್ಗ್ಯಾನಿಕ್ ಬೆರಿಲಿಯಮ್ ಸಂಯುಕ್ತಗಳನ್ನು ಕೊಡುತ್ತವೆ.

ಆರ್ಗ್ಯಾನಿಕ್ ಲೋಹ ಸಂಯುಕ್ತಗಳ ತಯಾರಿಕೆಯ ಬಹು ಉಪಯುಕ್ತ ವಿಧಾನಗಳಲ್ಲಿ ಇದೂ ಒಂದು ಕ್ರಿಯೆ. ಕೆಲವು ಬಾರಿ ಹಂತಗಳಲ್ಲಿ ಮುಂದುವರಿಯುತ್ತವೆ.

ಪಟು ಹೈಡ್ರೊಜನ್

ಪಟು ಹೈಡ್ರೊಜನನ್ನು ಒಳಗೊಂಡಿರುವ ಸಂಯುಕ್ತಗಳು ಗ್ರೀನ್‌ಯಾರ್ಡ್ ಕ್ರಿಯಾಕಾರಿಗಳೊಡನೆ ಶೀಘ್ರವೇ ವರ್ತಿಸುತ್ತವೆ. ಈ ಕ್ರಿಯಾಕಾರಿಗಳು ನೀರಿನೊಡನೆ ವರ್ತಿಸಿ ಕೂಡಲೇ ವಿಭಜನೆ ಹೊಂದಿ ತಕ್ಕ ಹೈಡ್ರೊಕಾರ್ಬನನ್ನು ಉತ್ಪತ್ತಿ ಮಾಡುತ್ತದೆ.

ಅಸಿಟಿಲೀನ್ ಮತ್ತು ಚಕ್ರೀಯ ಪೆಂಟಡೈಯೀನಿನಂಥ ಸಾರರಿಕ್ತ ಆಮ್ಲೀಯ ಸಂಯುಕ್ತಗಳೂ ಗ್ರೀನ್‌ಯಾರ್ಡ್ ಕ್ರಿಯಾಕಾರಿಗಳೊಡನೆ ವರ್ತಿಸುತ್ತವೆ.

ಗ್ರೀನ್‌ಯಾರ್ಡ್ ಕ್ರಿಯಾಕಾರಿಗಳು ಇಮೈನ್, ನೈಟ್ರೈಲ್, ಸಲ್ಫಾಕ್ಸೈಡ್ ಮುಂತಾದ ಬಗೆಬಗೆಯ ನೈಟ್ರೋಜನ್ ಮತ್ತು ಸಲ್ಫರನ್ನು ಒಳಗೊಂಡ ಸಂಯುಕ್ತಗಳೊಡನೆ ವರ್ತಿಸುತ್ತವೆ. ಬೋರಾನ್, ರಂಜಕ, ಸಿಲಿಕಾನ್ ಮತ್ತು ತವರದ ಹ್ಯಾಲೈಡುಗಳೊಡನೆ ಅವುಗಳ ಕ್ರಿಯೆ ಆ ಧಾತುಗಳ ಆರ್ಗ್ಯಾನಿಕ್ ಲೋಹಸಂಯುಕ್ತಗಳ ತಯಾರಿಕೆಗೆ ಅನುಕೂಲಮಾರ್ಗವಾಗಿದೆ. ಟೆಟ್ರಫೀನೈಲ್ ಸಿಲೇನ್ ತಯಾರಿಕೆ ಇದಕ್ಕೊಂದು ನಿದರ್ಶನ.[]

ಉಲ್ಲೇಖಗಳು

[ಬದಲಾಯಿಸಿ]
  1. Elschenbroich, C.; Salzer, A. (1992). Organometallics: A Concise Introduction (2nd ed.). Weinheim: Wiley-VCH. ISBN 3-527-28165-7.
  2. Goebel, M. T.; Marvel, C. S. (1933). "The Oxidation of Grignard Reagents". Journal of the American Chemical Society. 55 (4): 1693–1696. Bibcode:1933JAChS..55.1693G. doi:10.1021/ja01331a065.
  3. Goebel, M. T.; Marvel, C. S. (1933). "The Oxidation of Grignard Reagents". Journal of the American Chemical Society. 55 (4): 1693–1696. Bibcode:1933JAChS..55.1693G. doi:10.1021/ja01331a065.
  4. Goebel, M. T.; Marvel, C. S. (1933). "The Oxidation of Grignard Reagents". Journal of the American Chemical Society. 55 (4): 1693–1696. Bibcode:1933JAChS..55.1693G. doi:10.1021/ja01331a065.
  5. Goebel, M. T.; Marvel, C. S. (1933). "The Oxidation of Grignard Reagents". Journal of the American Chemical Society. 55 (4): 1693–1696. Bibcode:1933JAChS..55.1693G. doi:10.1021/ja01331a065.
  6. Haugan, Jarle André; Songe, Pål; Rømming, Christian; Rise, Frode; Hartshorn, Michael P.; Merchán, Manuela; Robinson, Ward T.; Roos, Björn O.; Vallance, Claire; Wood, Bryan R. (1997). "Total Synthesis of C31-Methyl Ketone Apocarotenoids 2: The First Total Synthesis of (3R)-Triophaxanthin" (PDF). Acta Chemica Scandinavica. 51: 1096–1103. doi:10.3891/acta.chem.scand.51-1096. Archived from the original (PDF) on 2011-08-11. Retrieved 2009-11-26.
  7. https://chem.libretexts.org/Bookshelves/Organic_Chemistry/Supplemental_Modules_(Organic_Chemistry)/Esters/Reactivity_of_Esters/Grignard_Reagents_Convert_Esters_into_Tertiary_Alcohols
  8. https://www.chemicalbook.com/ChemicalProductProperty_EN_CB8325716.htm