ವಿಷಯಕ್ಕೆ ಹೋಗು

ಗ್ರೀನಿಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Royal Borough of Greenwich
Motto: 
We Govern by Serving
Greenwich shown within Greater London
Greenwich shown within Greater London
Sovereign stateUnited Kingdom
Constituent countryEngland
RegionLondon
Ceremonial countyGreater London
Created1 April 1965
Admin HQWoolwich
Government
  TypeLondon borough council
  BodyGreenwich London Borough Council
  London AssemblyLen Duvall (Labour) AM for Greenwich and Lewisham
  MPsAbena Oppong-Asare (Labour)
Clive Efford (Labour)
Matthew Pennycook (Labour)
Area
  Total
೧೮.೨೮ sq mi (೪೭.೩೫ km2)
  Rankಟೆಂಪ್ಲೇಟು:English district area rank (of 326)
Population
  Total
ಟೆಂಪ್ಲೇಟು:English district population
  Rankಟೆಂಪ್ಲೇಟು:English district rank (of 326)
Time zoneUTC (GMT)
  Summer (DST)UTC+1 (BST)
Postcodes
Area code020
ISO 3166 codeGB-GRE
ONS code00AL
GSS codeE09000011
PoliceMetropolitan Police
Websitewww.royalgreenwich.gov.uk


ಗ್ರೀನಿಜ್ ಬೃಹದ್ ಲಂಡನಿಗೆ ಸೇರಿದ ಪುರಗಳಲ್ಲಿ (ಬರೊ) ಒಂದು.

ಭೌಗೋಳಿಕ ವಿವರಗಳು

[ಬದಲಾಯಿಸಿ]

ಥೇಮ್ಸ್ ನದಿಯ ದಕ್ಷಿಣ ದಂಡೆಯ ಮೇಲಿದೆ. ಇದಕ್ಕೆ ಪೂರ್ವದಲ್ಲಿ ಬೆಕ್‍ಸ್ಲಿ, ದಕ್ಷಿಣದಲ್ಲಿ ಬ್ರಾಮ್ಲಿ, ಪಶ್ಚಿಮದಲ್ಲಿ ಲ್ಯೂಯಿಷೆಮ್ ಇವೆ. ಇದರ ವಿಸ್ತೀರ್ಣ 19 ಚ.ಮೈ. ಜನಸಂಖ್ಯೆ ಸು. 2,99,528 (2024). ಮೂರು ಪಾರ್ಲಿಮೆಂಟರಿ ಕ್ಷೇತ್ರಗಳಿಂದ ಕೂಡಿರುವ ಗ್ರಿನಿಜಿನಲ್ಲಿ ಚಾರ್ಲ್‌ಟನ್, ಎಲ್‌ಥಾಮ್, ಪ್ಲಮ್‍ಸ್ಟೆಡ್, ಕಿಡ್‌ಬ್ರೂಕ್ ಮತ್ತು ಬ್ಲಾಕ್‌ಹೀತ್ ಜಿಲ್ಲೆಗಳಿವೆ.

ಗ್ರೀನಿಜ್ 1.750 ಎಕರೆಗಳ ತೆರೆದ ನೆಲದಿಂದ ಕೂಡಿದೆ. ಇದರ ದಕ್ಷಿಣ ತುದಿಯಲ್ಲಿ ಅನೇಕ ಆಧುನಿಕ ವಸತಿಗಳು ಬೆಳೆದಿವೆ. ಉತ್ತರದಲ್ಲಿ ಹಳೆಯ ಕಟ್ಟಡಗಳಿಂದಾಚೆ ಕೈಗಾರಿಕಾ ಪ್ರದೇಶವುಂಟು. ಥೇಮ್ಸಿನ ಉತ್ತರ ದಂಡೆಯ ಪ್ರದೇಶಕ್ಕೆ ಗ್ರೀನಿಜಿನಿಂದ ಸುರಂಗ ಮಾರ್ಗಗಳೂ, ದೋಣಿ ಸಂಪರ್ಕವೂ ಉಂಟು. ಗ್ರೀನಿಜ್ ಬ್ರಿಟಿಷ್ ರೈಲ್ವೆಯ ವ್ಯವಸ್ಥೆಗೆ ಒಳಪಟ್ಟಿದೆ.

ಪ್ರವಾಸಿ ಆಕರ್ಷಣೆಗಳು

[ಬದಲಾಯಿಸಿ]

ಗ್ರೀನಿಜಿನ ಪ್ಯಾರಿಷ್ ಚರ್ಚ್ 1718ರಷ್ಟು ಹಿಂದಿನದು.[] ಎರಡನೆಯ ಮಹಾಯುದ್ಧದಲ್ಲಿ ಈ ಕಟ್ಟಡಕ್ಕೆ ಹಾನಿ ಉಂಟಾಗಿತ್ತು. ಇದನ್ನು ಪೂರ್ವಸ್ಥಿತಿಗೆ ತರಲಾಗಿದೆ. ಗ್ರೀನಿಜಿನ ಮುಖ್ಯ ಕಟ್ಟಡಗಳು ಗ್ರೀನಿಜ್ ಉದ್ಯಾನದಲ್ಲೂ, ಅದರ ಸುತ್ತಲೂ ನಿರ್ಮಿತವಾಗಿವೆ. ಉದ್ಯಾನದ ವಿಸ್ತೀರ್ಣ 196.5 ಎಕರೆಗಳು. ಗ್ಲಾಸೆಸ್ಟರಿನ ಡ್ಯೂಕ್ ಉದ್ಯಾನಕ್ಕೆ ಆವರಣ ನಿರ್ಮಿಸಿ, ಒಂದು ಗುಡ್ಡದ ಮೇಲೆ ವೀಕ್ಷಣಾ ಗೋಪುರವೊಂದನ್ನು ನಿರ್ಮಿಸಿದ. ಇದು ಮುಂದೆ ರಾಯಲ್ ಖಗೋಳ ವೀಕ್ಷಣಾಲಯವಾಯಿತು. ಅನಂತರ ನದೀದಡದಲ್ಲಿ ಪ್ಲಾಸೆನ್ಷಿಯ ಎಂಬ ಕಟ್ಟಡದ ನಿರ್ಮಾಣವಾಯಿತು.[][] ಟ್ಯೂಡರ್ ದೊರೆಗಳು ಇದನ್ನು ವಿಸ್ತರಿಸಿ ತಮ್ಮ ಅರಮನೆಯಾಗಿ ಮಾಡಿಕೊಂಡರು. ಎಂಟನೆಯ ಹೆನ್ರಿ ಹುಟ್ಟಿದ್ದೂ, ಮೂರು ಪತ್ನಿಯರನ್ನು ಮದುವೆಯಾದದ್ದೂ ಅಲ್ಲಿ.[] 1694ರಲ್ಲಿ ಇದನ್ನು ನೌಕಾ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಯಿತು.[] 1873ರಲ್ಲಿ ಅಲ್ಲಿಗೆ ನೌಕಾ ಕಾಲೇಜು ಬಂತು.[] ಕ್ವೀನ್ಸ್ ಹೌಸ್ 1635ರಲ್ಲಿ ನಿರ್ಮಿತವಾಯಿತು.[][] 1806ರಲ್ಲಿ ಇದನ್ನು ನೌಕಾಶಾಲೆಯನ್ನಾಗಿ ಪರಿವರ್ತಿಸಲಾಯಿತು. 1937ರಲ್ಲಿ ಇದು ರಾಷ್ಟ್ರೀಯ ಸಮುದ್ರ ವಸ್ತುಸಂಗ್ರಹಾಲಯವಾಯಿತು.

ಗ್ರೀನಿಜ್‍ನ ಪ್ರಾಮುಖ್ಯ

[ಬದಲಾಯಿಸಿ]

ಪ್ರಪಂಚದ ಎಲ್ಲ ದೇಶಗಳೂ ರೇಖಾಂಶವನ್ನು ಗ್ರೀನಿಜಿನಿಂದಲೇ ಎಣಿಸುತ್ತವೆ. ಈ ಪದ್ಧತಿ ಆರಂಭವಾದ್ದು 1884ರಲ್ಲಿ.[] ರಾಯಲ್ ಖಗೋಳ ವೀಕ್ಷಣಾಲಯವನ್ನು 1958ರಲ್ಲಿ ಇಲ್ಲಿಂದ ಹರ್ಟ್ಸ್‌ಮನ್‌ಸ್ಯೂಗೆ ವರ್ಗಾಯಿಸಲಾಯಿತಾದರೂ,[೧೦] ರೇಖಾಂಶ ಎಣಿಕೆ ಮಾತ್ರ ಈಗಲೂ ಇಲ್ಲಿಂದಲೇ ಆರಂಭವಾಗುತ್ತದೆ (ಗ್ರೀನಿಜ್ ಮಾಧ್ಯ ಕಾಲ). ಈಗ ಗ್ರೀನಿಜ್‌ನ ಭಾಗವಾಗಿರುವ ವುಲ್ವಿಜ್ ಕೂಡ ಹಳೆಯ ಗ್ರೀನಿಜಿನಂತೆ ಟ್ಯೂಡರ್ ದೊರೆಗಳ ಕಾಲದಲ್ಲಿ ಅಭಿವೃದ್ಧಿ ಹೊಂದಿತು. ಇಲ್ಲಿ ನೌಕಾಕೇಂದ್ರಗಳೂ, ಹಡಗು ತಯಾರಿಕಾ ಕೇಂದ್ರಗಳೂ ಸ್ಥಾಪಿತವಾದುವು. 1741ರಲ್ಲಿ ವಾರನ್‌ನಲ್ಲಿ ಸ್ಥಾಪಿತವಾದ ರಾಯಲ್ ಮಿಲಿಟರಿ ಅಕಾಡಮಿ 1806ರಲ್ಲಿ ವುಲ್‌ವಿಜ್‌ಗೆ ವರ್ಗವಾಯಿತು. ಇಲ್ಲಿಯ ರೊಟಂಡ ವಸ್ತುಸಂಗ್ರಹಾಲಯದಲ್ಲಿ ಅಸ್ತ್ರಗಳೂ, ಹಡಗುಗಳ ನಮೂನೆಗಳೂ ಇದೆ. ಗ್ರೀನಿಜ್ ಹಡಗುಕಟ್ಟೆಯಲ್ಲಿ ಒಣನೆಲದ ಮೇಲೆ ಕಟಿ ಸಾರ್ಕ್ ಎಂಬ ಹಳೆಯ ಹಾಯಿ ಹಡಗೊಂದನ್ನು ಆ ಕಾಲದ ಹಡಗುಗಳ ಸ್ಮಾರಕವಾಗಿ ಇಡಲಾಗಿದೆ. ಗ್ರೀನಿಜಿನಲ್ಲಿ ಪುರಾತನ ಭವನಗಳೂ ಸ್ಮಾರಕಗಳೂ ಹಲವಾರು ಉಂಟು.

ಉಲ್ಲೇಖಗಳು

[ಬದಲಾಯಿಸಿ]
  1. Cherry, Bridget; Pevsner, Nikolaus (1990) [1983]. London 2: South. The Buildings of England. London: Penguin Books.
  2. John Bold (2000). Greenwich: An Architectural History of the Royal Hospital for Seamen and the Queen's House. Paul Mellon Centre for Studies in British Art in association with English Heritage. p. 7. ISBN 978-0-300-08397-2.
  3. John Richardson (2000). The Annals of London: A Year-by-year Record of a Thousand Years of History. University of California Press. p. 64. ISBN 978-0-520-22795-8.
  4. James Panton (24 February 2011). Historical Dictionary of the British Monarchy. Scarecrow Press. p. 247. ISBN 978-0-8108-7497-8.
  5. Trudy Ring; Noelle Watson; Paul Schellinger (28 October 2013). Northern Europe: International Dictionary of Historic Places. Routledge. pp. 432–434. ISBN 978-1-136-63944-9.
  6. Mike Osborne (30 November 2011). Defending London: A Military History from Conquest to Cold War. History Press Limited. p. 158. ISBN 978-0-7524-7931-6.
  7. "History of the Queen's House". Royal Museums Greenwich.
  8. Detailed accounts of the building project are given in London County Council, Survey of London, Howard Colvin, ed. The History of The King's Works, Volume IV, 1485–1660, (Part II 9) and in John Bold, Greenwich: An Architectural History of the Royal Hospital for Seamen and the Queen's House (Yale University Press) 2000.
  9. International Conference Held at Washington for the Purpose of Fixing a Prime Meridian and a Universal Day. October, 1884. Protocols of the proceedings. Project Gutenberg. 1884. Archived from the original on 18 December 2021. Retrieved 30 November 2012.
  10. "The 36-inch Yapp Reflector". Archived from the original on 2025-12-14. Retrieved 2025-11-25.





ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: