ವಿಷಯಕ್ಕೆ ಹೋಗು

ಗ್ರಾಮ್ಧನ ಬ್ಯಾಕ್ಟೀರಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಗ್ರಾಮ್‍ಧನ ಬ್ಯಾಕ್ಟೀರಿಯ ಇಂದ ಪುನರ್ನಿರ್ದೇಶಿತ)
ಮಿದುಳುಬಳ್ಳಿ ದ್ರವದ ಮಾದರಿಯಲ್ಲಿ ಕಡ್ಡಿ ಆಕಾರದ ಗ್ರಾಮ್‍ಧನ ಬ್ಯಾಸಿಲಸ್ ಆಂಥ್ರಾಸಿಸ್ ಬ್ಯಾಕ್ಟೀರಿಯ ಎದ್ದುಕಾಣುತ್ತವೆ. ಸ್ಫಟಿಕ ಕೆನ್ನೀಲಿ ವರ್ಣವನ್ನು ಸ್ವೀಕರಿಸುವ ದುಂಡನೆಯ ಬಿಳಿ ರಕ್ತ ಕಣಗಳನ್ನೂ ಕಾಣಬಹುದು.

ಬ್ಯಾಕ್ಟೀರಿಯ ವಿಜ್ಞಾನದಲ್ಲಿ, ಗ್ರಾಮ್‍ಧನ ಬ್ಯಾಕ್ಟೀರಿಯ ಎಂದರೆ ಗ್ರಾಮ್ ವರ್ಣ ಪರೀಕ್ಷೆಯಲ್ಲಿ ಧನಾತ್ಮಕ ಫಲಿತಾಂಶವನ್ನು ನೀಡುವ ಬ್ಯಾಕ್ಟೀರಿಯ. ಸಾಂಪ್ರದಾಯಿಕವಾಗಿ, ಗ್ರಾಮ್ ವರ್ಣ ಪರೀಕ್ಷೆಯನ್ನು ಬ್ಯಾಕ್ಟೀರಿಯವನ್ನು ಅವುಗಳ ಜೀವಕೋಶೀಯ ಭಿತ್ತಿಯ ಪ್ರಕಾರವಾಗಿ ಎರಡು ವಿಶಾಲ ವರ್ಗಗಳೊಳಗೆ ಕ್ಷಿಪ್ರವಾಗಿ ವರ್ಗೀಕರಿಸಲು ಬಳಸಲಾಗುತ್ತದೆ.

ಗ್ರಾಮ್‌ಧನಕಾಕೈಗಳು

[ಬದಲಾಯಿಸಿ]

ಇವು ಮಾನವರಲ್ಲಿ ಬಹುವಿಧವಾದ ರೋಗಗಳನ್ನು ಉಂಟುಮಾಡುತ್ತವೆ. ಬ್ಯಾಕ್ಟೀರಿಯಗಳು ಗುಂಡಗಿರುವುದರಿಂದ ಕಾಕೈಗಳೆಂದು ಕರೆಯಲಾಗಿದೆ.[][][] ಇವು ಒಂದಕ್ಕೊಂದು ಅಂಟಿಕೊಂಡು ಸರಮಣಿ ಪೋಣಿಸಿದಂತಿದ್ದರೆ ಸ್ಟ್ರೆಪ್ಟೊಕಾಕೈಗಳೆಂದೂ, ದ್ರಾಕ್ಷಿಗೊಂಚಲಿನಂತೆ ಗುಂಪಾಗಿದ್ದರೆ ಸ್ಟಫಿಲೊಕಾಕೈಗಳೆಂದೂ ಹೆಸರು.

ಸಾಮಾನ್ಯ ಗಂಟಲು ನೋವಿನಿಂದ[] ಹಿಡಿದು ತೀವ್ರ ಮಾರಕ ರೋಗಗಳವರೆಗೂ ಸ್ಟ್ರೆಪ್ಟೊಕಾಕೈಗಳು ಉಂಟುಮಾಡುವ ರೋಗಗಳ ಪ್ರಾಬಲ್ಯ ಹರಡಿರುತ್ತದೆ. ಪ್ರಸವಾನಂತರ ಜ್ವರ ಮತ್ತು ಬಾಲ್ಯಾವಸ್ಥೆಯ ಸಂಧಿವಾತ ರೋಗಗಳನ್ನು ಸ್ಟ್ರೆಪ್ಟೊಕಾಕೈಗಳಿಂದ ಉಂಟಾದ ರೋಗಗಳೆಂದು ಉದಾಹರಿಸಬಹುದು. ಸುಮಾರು 1930ರ ತನಕ ಇಂಥ ರೋಗಗಳಿಗೆ ಮದ್ದೇ ಇರುತ್ತಿರಲಿಲ್ಲ. ಅಂದಿಗೆ ಇವು ಸಾಮಾನ್ಯವಾಗಿ ಮಾರಕಗಳು ಆಗಿದ್ದುವು. ಸಲ್ಫೊನಮೈಡುಗಳು ಇಂಥ ರೋಗಗಳಿಗೆ ಮದ್ದಾಗಬಲ್ಲವು ಎಂಬುದನ್ನು ತಿಳಿದ ಬಳಿಕ ಸ್ಟ್ರೆಪ್ಟೊಕಾಕೈಜನಿತ ರೋಗಗಳ ಚಿಕಿತ್ಸೆ ತಕ್ಕಮಟ್ಟಿಗೆ ಹಿಡಿತಕ್ಕೆ ಬಂದಿತು. ಜೀವಿಪ್ರತಿರೋಧಕಗಳ ಉಪಯೋಗ ಪ್ರಾರಂಭವಾದ ತರುವಾಯ ಸ್ಥಿತಿ ಇನ್ನೂ ಅನುಕೂಲವಾಯಿತು.

ಸ್ಟಫಿಲೊಕಾಕೈಗಳು ಬೆನ್ನುಫಣಿ ಮುಂತಾದ ರೋಗಗಳನ್ನು ಉಂಟುಮಾಡುತ್ತವೆ. ಇವು ಸಾಮಾನ್ಯವಾಗಿ ಸಲ್ಫೊನಮೈಡುಗಳ ಚಿಕಿತ್ಸೆಗೆ ಮಣಿಯದಿದ್ದುದರಿಂದ ಸ್ಟಫಿಲೊಕಾಕೈಗಳ ಸೋಂಕಿನ ಭಯ ಜೀವಿಪ್ರತಿರೋಧಕಗಳು ಬರುವವರೆಗೂ ಇದ್ದೇ ಇತ್ತು. ಸ್ಟಫಿಲೊಕಾಕೈಗಳು ಎಲ್ಲವೂ ರೋಗಕಾರಕಗಳಲ್ಲದೆ ನಿರುಪದ್ರವಿಗಳಾಗಿಯೂ ಇರುವ ವಿಧಗಳು ಅನೇಕವಿದೆ.

ನ್ಯೂಮೊಕಾಕೈಗಳು ಒಂದು ರೀತಿ ಡಿಪ್ಲೊಕಾಕೈಗಳಂತೆ ಇರುತ್ತವೆ. ಆದರೆ ಗ್ರಾಮ್‌ಧನ ಗುಣವುಳ್ಳವು. ಇವುಗಳಲ್ಲಿ ಮುಖ್ಯವಾಗಿ ಮೂರು ವಿಧಗಳನ್ನು ಗುರುತಿಸಬಹುದಾಗಿದೆ. ನ್ಯೂಮೊಕಾಕೈಗಳಿಂದ ನ್ಯುಮೋನಿಯ ರೋಗ ಉಂಟಾಗುತ್ತದೆ.[]

ಗ್ರಾಮ್‍ಧನ ಬ್ಯಾಸಿಲ್ಲೈಗಳು

[ಬದಲಾಯಿಸಿ]

ಗ್ರಾಮ್‌ಧನ ಬ್ಯಾಸಿಲ್ಲೈಗಳು ಡಿಫ್ತೀರಿಯ, ಟೆಟೆನಸ್, ಗ್ಯಾಸ್ ಗ್ಯಾಂಗ್ರೀನ್ (ದೇಹಭಾಗಗಳು ಕೊಳೆತುಕೊಂಡು ಬರುವ ರೋಗ), ಬಾಟ್ಯುಲಿಸಮ್ ರೋಗ ಇವೇ ಮುಂತಾದ ತೀವ್ರ ರೋಗಗಳನ್ನು ಉಂಟುಮಾಡುತ್ತವೆ. ಕೆಲವಕ್ಕೆ ಆಮ್ಲಜನಕ ಅಭಾವ ಅವಶ್ಯಕವಾಗಿದ್ದು ಅವು ದೇಹದ ಒಳಗಡೆ ಅವ್ಯಕ್ತವಾಗಿ ಸೋಂಕುಂಟು ಮಾಡಿ ಪ್ರವರ್ಧಿಸುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
  1. Zapun A, Vernet T, Pinho MG (March 2008). "The different shapes of cocci". FEMS Microbiology Reviews. 32 (2): 345–360. doi:10.1111/j.1574-6976.2007.00098.x. PMID 18266741.
  2. Pommerville, J.C. (2013). Fundamentals of Microbiology (10th ed.). Sudbury, MA: Jones & Bartlett. p. 106. ISBN 9781449647964.
  3. Ryan, Kenneth James (4 January 2018). Sherris medical microbiology (7th ed.). New York: McGraw-Hill Education. ISBN 9781259859809. OCLC 983825627.
  4. Cohen-Poradosu R, Kasper DL (October 2007). "Group A streptococcus epidemiology and vaccine implications". Clinical Infectious Diseases. 45 (7): 863–865. doi:10.1086/521263. PMID 17806050.
  5. van de Beek, Diederik; de Gans, Jan; Tunkel, Allan R.; Wijdicks, Eelco F.M. (5 January 2006). "Community-Acquired Bacterial Meningitis in Adults". New England Journal of Medicine. 354 (1): 44–53. doi:10.1056/NEJMra052116. ISSN 0028-4793. PMID 16394301.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: