ಗ್ರಾನೈಟ್ ನಗರ
ಗೋಚರ
ಗ್ರಾನೈಟ್ ನಗರ ಎನ್ನುವುದು ಅಮೆರಿಕ ಸಂಯುಕ್ತ ಸಂಸ್ಥಾನಗಳ ಇಲಿನಾಯ್ ರಾಜ್ಯದ ಮ್ಯಾಡಿಸನ್ ಕೌಂಟಿಯಲ್ಲಿ ಮಿಸಿಸಿಪಿ ನದಿಯ ದಂಡೆಯ ಮೇಲಿರುವ ಒಂದು ಕೈಗಾರಿಕಾ ನಗರ. ಸೇಂಟ್ ಲೂಯಿಗೆ ಈಶಾನ್ಯದಲ್ಲಿ 10 ಮೈ. ದೂರದಲ್ಲಿದೆ. ಜನಸಂಖ್ಯೆ 27,549 (2020).[೧] ಹಿಂದೆ ಇದು ಗ್ರಾಮ ಪ್ರದೇಶವಾಗಿತ್ತು. 1891 ರಲ್ಲಿ ಸೇಂಟ್ ಲೂಯಿಯ ಫ್ರೆಡರಿಕ್ ಜಿ ಮತ್ತು ವಿಲಿಯಂ ಎಫ್. ನೀಡ್ರಿಂಗ್‍ಹೌಸ್ ಎಂಬಿಬ್ಬರು ತಮ್ಮ ಗ್ರಾನೈಟ್ ಉಪಕರಣ ಕೈಗಾರಿಕೆಯನ್ನು ವಿಸ್ತರಿಸಲು ಈ ಸ್ಥಳವನ್ನು ಪಡೆದುಕೊಂಡರು. ಕ್ರಮೇಣ ಇದು ಬೆಳೆಯಿತು. ಉಕ್ಕಿನ ಕೈಗಾರಿಕೆ ಪ್ರಾಮುಖ್ಯ ಗಳಿಸಿತು. ಈಗ ಗ್ರಾನೈಟ್ ಉಪಕರಣ ಕೈಗಾರಿಕೆ ಅಲ್ಲಿ ಇಲ್ಲ. ನಗರಕ್ಕೆ ಅದರ ಹೆಸರು ಬಂದದ್ದು ಈ ಕೈಗಾರಿಕೆಯಿಂದಾಗಿ. ಲೋಹದ ಧಾರಕಗಳು, ರೈಲ್ವೆ ಸಲಕರಣೆ, ರಸಾಯನ ವಸ್ತು, ಸ್ಟೊವ್ ಮುಂತಾದ ಪದಾರ್ಥಗಳೂ ತಯಾರಾಗುತ್ತದೆ. ಹಲವು ರೈಲು ಮಾರ್ಗಗಳೂ, ರಸ್ತೆಗಳೂ ಇಲ್ಲಿ ಸಂಧಿಸುತ್ತವೆ.
ಉಲ್ಲೇಖಗಳು
[ಬದಲಾಯಿಸಿ]- ↑ "Explore Census Data". data.census.gov. Retrieved 2021-12-13.
ಗ್ರಂಥಸೂಚಿ
[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: