ಗ್ರಸ್
ಗೋಚರ

ಗ್ರಸ್ ಎನ್ನುವುದು ಆಕಾಶದಲ್ಲಿರುವ 88 ನಕ್ಷತ್ರಪುಂಜಗಳಲ್ಲಿ (ಕಾನ್‍ಸ್ಟೆಲ್ಲೇಷನ್ಸ್) ಒಂದು. ಇದು ಲ್ಯಾಟಿನ್ ಹೆಸರು. ಇದರರ್ಥ ಒಂದು ಬಗೆಯ ಪಕ್ಷಿಯಾದ ಕೊಕ್ಕರೆ. ಇದು ದಕ್ಷಿಣಾರ್ಧಗೋಳದಲ್ಲಿ ಉಂಟು. ವಿಷುವದಂಶ (ರೈಟ್ ಅಸೆನ್ಷನ್) 21 ಗಂ. 25 ಮೀ., 23 ಗಂ. 25 ಮೀ. ವರೆಗೂ, ಘಂಟಾವೃತ್ತಾಂಶ (ಡೆಕ್ಲಿನೇಷನ್) 370 - 560 ವರೆಗೂ ಇವೆ.[೧] ಇದನ್ನು ಬಕ ಎಂದು ಹೆಸರಿಸಲಾಗಿದೆ.
ಇದು ಪೀಟರ್ ಕೆಯ್ಸರ್ ಮತ್ತು ಫ಼್ರೆಡರಿಕ್ ಡ ಹೌಟ್‍ಮನ್‍ರ ವೀಕ್ಷಣೆಗಳಿಂದ ಪೆಟ್ರಸ್ ಪ್ಲಾಂಕಿಯಸ್ ಕಲ್ಪಿಸಿದ ಹನ್ನೆರಡು ನಕ್ಷತ್ರಪುಂಜಗಳಲ್ಲಿ ಒಂದು. ಆಮ್‍ಸ್ಟರ್‌ಡ್ಯಾಮ್‍ನಲ್ಲಿ ೧೫೯೮ರಲ್ಲಿ ಪ್ಲಾಂಕಿಯಸ್ ಮತ್ತು ಜೋಡೋಕಸ್ ಹೋಂಡಿಕಸ್ ಪ್ರಕಟಿಸಿದ ೩೫ ಸೆಂಟಿಮೀಟರ್ ವ್ಯಾಸದ ಗೋಳಾಕಾರದ ಭೂಪಟದಲ್ಲಿ ಮೊತ್ತಮೊದಲು ಗ್ರಸ್ ಕಾಣಿಸಿಕೊಂಡಿತು.
ಉಲ್ಲೇಖಗಳು
[ಬದಲಾಯಿಸಿ]- ↑ "Grus, Constellation Boundary". The Constellations. International Astronomical Union. Archived from the original on 5 ಜೂನ್ 2013. Retrieved 19 November 2013.
ಹೊರಗಿನ ಕೊಂಡಿಗಳು
[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: