ವಿಷಯಕ್ಕೆ ಹೋಗು

ಗ್ರನಾಡ ಪ್ರಾಂತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗ್ರನಾಡ ಪ್ರಾಂತ್ಯವು ದಕ್ಷಿಣ ಸ್ಪೇನ್‍ನ ಒಂದು ಪ್ರಾಂತ. ಆಂಡಾಲೂಸಿಯಕ್ಕೆ ಸೇರಿದ ಜಿಲ್ಲೆಗಳನ್ನು ಒಟ್ಟುಗೂಡಿಸಿ 1833ರಲ್ಲಿ ಗ್ರನಾಡ ಪ್ರಾಂತ್ಯವನ್ನು ರಚಿಸಲಾಯಿತು. ವಿಸ್ತೀರ್ಣ 4,838 ಚ. ಮೈ. ಜನಸಂಖ್ಯೆ 9,21,987 (2021). ಈ ಪ್ರಾಂತ್ಯದಲ್ಲಿ ೧೭೦ ಪುರಸಭೆಗಳಿವೆ.[] ಈ ಪ್ರಾಂತ್ಯದ ಉತ್ತರಕ್ಕೆ ಕಾರ್ಡೊಬ, ಹಾಯೇನ್ ಮತ್ತು ಆಲ್ಬಾಥೇಟಗಳೂ, ಪೂರ್ವಕ್ಕೆ ಮರ್ಸಿಯ ಮತ್ತು ಅಲ್ಮೇರಿಯಗಳೂ, ದಕ್ಷಿಣಕ್ಕೆ ಮೆಡಿಟರೇನಿಯನ್ ಸಮುದ್ರವೂ, ಪಶ್ಚಿಮಕ್ಕೆ ಮ್ಯಾಲಗವೂ ಇವೆ. ಪಶ್ಚಿಮ ಹಾಗೂ ವಾಯುವ್ಯ ಭಾಗಗಳಲ್ಲಿ ಸ್ಯೆರಾ ನೆವೇಡ ಪರ್ವತಶ್ರೇಣಿ ಇದೆ. ಇಲ್ಲಿಯ ನೆಲ ಫಲವತ್ತಾದ್ದು. ಹಲವೆಡೆ ಕಬ್ಬಿನ ಗದ್ದೆಗಳಿವೆ. ಕುರಿಸಾಕಣೆಯೂ ಉಂಟು.

ಗ್ರನಾಡಾ ಪ್ರಾಂತ್ಯವು ಅಲ್ಮೇರಿಯಾ ಪ್ರಾಂತದೊಂದಿಗೆ ಸ್ಯೆರಾ ನೆವೇಡ ರಾಷ್ಟ್ರೀಯ ಉದ್ಯಾನವನ್ನು ಹಂಚಿಕೊಳ್ಳುತ್ತದೆ. ಈ ಪ್ರಾಂತ್ಯದ ಉತ್ತರ ಭಾಗವು (ಬಾಜ಼ಾ ಮತ್ತು ಹ್ಯುಯೆಸ್ಕಾರ್ ಜಿಲ್ಲೆಗಳನ್ನು ಹೊಂದಿದೆ) ಗ್ರನಾಡಾ ಆಲ್ಟಿಪ್ಲಾನೊ ಎಂದು ಕರೆಯಲ್ಪಡುತ್ತದೆ. ಅಲ್‍ಹಾಂಬ್ರಾ ಗ್ರನಾಡಾದ ಅತಿ ದೊಡ್ಡ ಪ್ರವಾಸಿ ಆಕರ್ಷಣೆಯಾಗಿದೆ. ಇದು ಮೋರ್ ವಾಸ್ತುಶೈಲಿಯನ್ನು ಪ್ರದರ್ಶಿಸುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "Granada (Province, Spain) - Population Statistics, Charts, Map and Location". www.citypopulation.de. Retrieved 2022-04-21.


ಹೊರಗಿನ ಕೊಂಡಿಗಳು

[ಬದಲಾಯಿಸಿ]



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: