ಗ್ಯಾಸ್ಪರ್ಡ್ ಡ ಕೋರಿಯೋಲಿಸ್
| ಗ್ಯಾಸ್ಪರ್ಡ್ ಡ ಕೋರಿಯೋಲಿಸ್ | |
|---|---|
Gaspard-Gustave de Coriolis | |
| ಜನನ | Did not recognize date. Try slightly modifying the date in the first parameter. Paris, France |
| ಮರಣ | Did not recognize date. Try slightly modifying the date in the first parameter. (aged Error: Need valid year, month, day) ಪ್ಯಾರಿಸ್, ಫ್ರಾನ್ಸ್ |
| ಪೌರತ್ವ | ಫ್ರಾನ್ಸ್ |
| ಕಾರ್ಯಕ್ಷೇತ್ರ | Mathematics, Physics |
| ಸಂಸ್ಥೆಗಳು | École Centrale Paris École Nationale des Ponts et Chaussées École Polytechnique |
| ಅಭ್ಯಸಿಸಿದ ವಿದ್ಯಾಪೀಠ | École Polytechnique |
| ಪ್ರಸಿದ್ಧಿಗೆ ಕಾರಣ | Coriolis effect Differential analyser Integraph Kinetic energy |
ಗ್ಯಾಸ್ಪರ್ಡ್ ಡ ಕೋರಿಯೋಲಿಸ್ 1792-1843. ಫ್ರೆಂಚ್ ಭೌತ ವಿಜ್ಞಾನಿ.ಕೋರಿಯೋಲಿಸ್ ಪರಿಣಾಮಗಳ ಆವಿಷ್ಕರ್ತೃ. ಚಲನಶಕ್ತಿ (ಕೈನೆಟಿಕ್ ಎನರ್ಜಿ) ಮತ್ತು ಕಾರ್ಯ ಎಂಬ ಭೌತ ಪರಿಕಲ್ಪನಗಳಿಗೆ ಆಧುನಿಕ ವ್ಯಾಖ್ಯೆಗಳನ್ನು ಪ್ರಥಮವಾಗಿ ನೀಡಿದಾತ[೧]. ಚಲನಶಕ್ತಿ=1/2mv2 (m ವಸ್ತುವಿನ ದ್ರವ್ಯರಾಶಿ, v ಅದರ ವೇಗ) ಕಾರ್ಯ=ಈಟ (ಈ ಬಲ, ಟ ಬಲದ ದಿಶೆಯಲ್ಲಿ ವಸ್ತು ಚಲಿಸಿದ ದೂರ)-ಇವೇ ಆ ವ್ಯಾಖ್ಯೆಗಳು. ಆವರ್ತಿಸುತ್ತಿರುವ ಒಂದು ಮೈಯ ಮೇಲಿನ ಚಲನೆಯ ಗತಿವಿಜ್ಞಾನ ಕೋರಿಯೋಲಿಸ್‍ನ ವಿಶೇಷಾಸಕ್ತಿ (1835). ಇದನ್ನು ಪ್ರಾಯೋಗಿಕವಾಗಿಯೂ ಗಣಿತೀಯವಾಗಿಯೂ ವಿಶ್ಲೇಷಿಸಿ ಇಂಥ ಒಂದು ಕಣದ (ಉದಾಹರಣೆಗೆ ಭೂಮಿಯ ಮೈಮೇಲೆ ಅಥವಾ ಭೂಮಿಯ ಗುರುತ್ವಾಕರ್ಷಣ ಕ್ಷೇತ್ರದೊಳಗೆ ಚಲಿಸುತ್ತಿರುವ ವಸ್ತುಗಳು) ಚಲನೆಯ ಗಣಿತಾಭ್ಯಾಸವನ್ನು ನ್ಯೂಟೋನಿಯನ್ನು ಚೌಕಟ್ಟಿನ ವ್ಯಾಪ್ತಿಯೊಳಗೆ ಅಡಕವಾಗಿಸಲು ಎರಡು ಕಾಲ್ಪನಿಕ ಬಲಗಳ ಅನಿವಾರ್ಯತೆಯನ್ನು ಕಂಡುಕೊಂಡ. ಇವೇ ಕೋರಿಯೋಲಿಸ್ ಬಲ ಮತ್ತು ಕೇಂದ್ರಾಪಗಮನ ಬಲ.
ಜನನ ಮತ್ತು ಮರಣ
[ಬದಲಾಯಿಸಿ]ಕೋರಿಯೋಲಿಸ್ ಹುಟ್ಟಿದ್ದು ಪ್ಯಾರಿಸಿನಲ್ಲಿ 1792, ಫೆಬ್ರುವರಿ 21 ರಂದು ಮತ್ತು ಕಾಲವಾದದ್ದು ಪ್ಯಾರಿಸಿನಲ್ಲಿ 1843, ಸೆಪ್ಟೆಂಬರ್ 17 ರಂದು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- "Sur les équations du mouvement relatif des systèmes de corps" (Coriolis, 1831 & 1835), online and analyzed on BibNum [click 'à télécharger' for English version]
- "Sur le bruit du tonnerre" (Coriolis, 1833), online and analyzed on BibNum Archived 2022-09-01 ವೇಬ್ಯಾಕ್ ಮೆಷಿನ್ ನಲ್ಲಿ. [click 'à télécharger' for English version]
ಉಲ್ಲೇಖಗಳು
[ಬದಲಾಯಿಸಿ]
- ↑ Jammer, Max (1957). Concepts of Force. Dover Publications. p. 167; footnotes 12, 14. OCLC 656163640.