ವಿಷಯಕ್ಕೆ ಹೋಗು

ಗ್ಯಾಸ್ಟೀರಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗ್ಯಾಸ್ಟೀರಿಯ
ಗ್ಯಾಸ್ಟೀರಿಯ ಪಿಲಾನ್ಸಿಯಿ
Scientific classification e
ಸಾಮ್ರಾಜ್ಯ: ಪ್ಲಾಂಟೇ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಏಕದಳ ಸಸ್ಯ
ಗಣ: ಆಸ್ಪರಾಗೇಲ್ಸ್
ಕುಟುಂಬ: ಆಸ್ಫೊಡೆಲೇಸಿಯೇ
ಪಂಗಡ: ಅಲೋಯೇ
ಕುಲ: ಗ್ಯಾಸ್ಟೀರಿಯ
Duval
Synonyms[]

ಪಿಟ್ಯಾಸ್ Salisb.

ಗ್ಯಾಸ್ಟೀರಿಯ ಎನ್ನುವುದು ಆಸ್ಫೋಡೆಲೇಸಿಯೇ ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಸಸ್ಯ ಜಾತಿ; ದಕ್ಷಿಣ ಆಫ್ರಿಕದ ಮೂಲವಾಸಿ.[] ಇದರಲ್ಲಿ ಸುಮಾರು 50 ಪ್ರಭೇದಗಳಿವೆ.

ಶಬ್ದ ವ್ಯುತ್ಪತ್ತಿ

[ಬದಲಾಯಿಸಿ]

ಹೂವಿನ ಬುಡ ಭಾಗ ಉಬ್ಬಿಕೊಂಡಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಗ್ರೀಕಿನಲ್ಲಿ ಗ್ಯಾಸ್ಟರ್ ಎಂದರೆ ಹೊಟ್ಟೆ ಎಂದು ಅರ್ಥ. ಈ ಗಿಡಗಳನ್ನು ಕುಂಡಸಸ್ಯ ಮತ್ತು ಕಲ್ಲೇರಿಸಸ್ಯಗಳಾಗಿ ಬೆಳೆಸುತ್ತಾರೆ.

ಸಸ್ಯ ಲಕ್ಷಣಗಳು

[ಬದಲಾಯಿಸಿ]

ಗ್ಯಾಸ್ಟೀರಿಯ ಕಾಂಡವಿಲ್ಲದ ರಸಭರಿತ ಸಸ್ಯ; ತನ್ನ ಹತ್ತಿರ ಸಂಬಂಧಿಯಾದ ಆಲವೀಯನ್ನು ಬಹುವಾಗಿ ಹೋಲುತ್ತದೆ. ಅದರಲ್ಲಿರುವಂತೆಯೇ ಇದರಲ್ಲೂ ಎಲೆಗಳು ಗಿಡದ ಬುಡದಲ್ಲಿ ಗುಲಾಬಿ ದಳಗಳ ಮಾದರಿಯಲ್ಲಿ ಜೋಡಣೆಗೊಂಡಿವೆ. ಕೆಲವು ಪ್ರಭೇದಗಳಲ್ಲಿ ಮಾತ್ರ ಪುಟ್ಟ ಕಾಂಡವೊಂದಿದ್ದು ಅದರ ಮೇಲೆ ಎರಡು ಸಾಲುಗಳಲ್ಲಿ ಎಲೆಗಳು ಜೋಡಣೆಗೊಂಡಿರುತ್ತವೆ. ಎಲೆಗಳ ಮೇಲೆ ಬಿಳಿಯ ಇಲ್ಲವೆ ಊದಾಬಣ್ಣದ ಸಣ್ಣಸಣ್ಣ ಚುಕ್ಕೆಗಳಿದ್ದು ಗಿಡದ ಅಂದವನ್ನು ಹೆಚ್ಚಿಸಿವೆ. ಎಲೆಗಳು ಎರಡು ವಿರುದ್ಧ ಪಂಕ್ತಿಗಳಲ್ಲಿ ಇರುತ್ತವೆ (ದ್ವಿಪಂಕ್ತೀಯ) ಅಥವಾ ವಿವಿಧ ಭಿನ್ನ ಸುರುಳಿಯಾಕಾರದ ಜೋಡಣೆಯಲ್ಲಿರುತ್ತವೆ.[] ಹೂಗಳ ಬುಡಭಾಗ ಕೆಂಪು ಅಥವಾ ಗುಲಾಬಿ ಬಣ್ಣದ ಕೊಳವೆಯಂತೆ ಇದ್ದು, ಮೇಲ್ಭಾಗ ನಸು ಹಸಿರು ಬಣ್ಣದಿಂದ ಕೂಡಿದೆ. ಇದರಿಂದ ಹೂಗಳು ಬಲು ಸುಂದರವಾಗಿ ಕಾಣುತ್ತವೆ.

ಸಸ್ಯವೃದ್ಧಿ

[ಬದಲಾಯಿಸಿ]

ಪ್ರಕಂದದ ತುಂಡುಗಳಿಂದ ಇಲ್ಲವೆ ಎಲೆಗಳಿಂದ ಗಿಡಗಳನ್ನು ವೃದ್ಧಿಸಬಹುದು. ಬಹಳ ನೀರು ಹಾಕಿದರೆ ಗ್ಯಾಸ್ಟೀರಿಯ ಪ್ರಭೇದಗಳಿಗೆ ಫ಼್ಯೂಸೇರಿಯಂ ಬೇರು ಕೊಳೆತವಾಗುವ ಸಂಭವವಿರುತ್ತದೆ.[][]

ಮುಖ್ಯ ಪ್ರಭೇದಗಳು

[ಬದಲಾಯಿಸಿ]

ಉದ್ಯಾನಗಾರಿಕೆಯಲ್ಲಿ ಅತಿ ಮುಖ್ಯವಾದ ಪ್ರಭೇದಗಳಿವು: ಗ್ಯಾ.ಅಸಿನಾಸಿಫೋಲಿಯ, ಗ್ಯಾ.ಅಂಗ್ಯುಲೇಟ, ಗ್ಯಾ.ಆರ್ಮ್‌ಸ್ಟ್ರಾಂಗಿಯೈ, ಗ್ಯಾ.ಕ್ಯಾಡಿಕನ್ಸ್, ಗ್ಯಾ.ಕ್ಯಾರಿನೇಟ, ಗ್ಯಾ.ಮ್ಯಾಕ್ಯುಲೇಟ, ಗ್ಯಾ.ನೈಟಿಡ ಮತ್ತು ಗ್ಯಾ.ವೆರುಕೋಸ.

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Kew World Checklist of Selected Plant Families
  2. Molteno, S. (2022). Phyllotaxis in Asphodelaceae subfam. Alooideae: a tool in taxon delimitation. Haseltonia, 28(1), https://doi.org/10.2985/026.028.0107
  3. Propagation of Gasterias
  4. "Gasteria". Archived from the original on 2015-07-06. Retrieved 2006-05-10.


ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: