ವಿಷಯಕ್ಕೆ ಹೋಗು

ಗ್ಯಾಮೆಕ್ಸೇನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗ್ಯಾಮೆಕ್ಸೇನ್ ಎನ್ನುವುದು ಗ್ಯಾಮ-ಬೆಂಜ಼ೀನ್ ಹೆಕ್ಸಕ್ಲೋರೈಡ್, C6H6CI6. ಇದು 1,2,3,4,5,6-ಹೆಕ್ಸಕ್ಲೋರೋಸೈಕ್ಲೋಹೆಕ್ಸೇನಿನ ಗ್ಯಾಮ ಐಸೋಮರ್. ಇದರ ಇತರ ಹೆಸರುಗಳು: ಲಿಂಡೇನ್, ಬಿಎಚ್‌ಸಿ, 666.[]

ಗುಣಗಳು

[ಬದಲಾಯಿಸಿ]

ಇದು ಬಿಳಿಯ ಸ್ಫಟಿಕಾಕೃತಿಯ ಪುಡಿ. ಸ್ವಲ್ಪ ಹಳತುವಾಸನೆಯುಳ್ಳದ್ದು. ಕರಗುವ ಉಷ್ಣತೆ 112.50. ಸೆಂ. ಅಸಿಟೋನ್, ಬೆಂಜ಼ೀನ್ ಮತ್ತು ಕ್ಲೋರೋಫಾರಮುಗಳಲ್ಲಿ ಯಥೇಚ್ಛವಾಗಿ ಲೀನವಾಗುವುದು. ಆಲ್ಕೊಹಾಲಿನಲ್ಲಿ ಪೂರ್ತಿ ದ್ರಾವ್ಯ, ಈಥೈಲ್ ಗ್ಲೈಕಾಲಿನಲ್ಲಿ ಸ್ವಲ್ಪ ಮಾತ್ರ ದ್ರಾವ್ಯ. ನೀರಿನಲ್ಲಿ ಅದ್ರಾವ್ಯ. ಚರ್ಮದ ಮುಖಾಂತರ ಹೀರುವುದು. ನುಂಗಿದರೆ ಸಾವು ಸಂಭವಿಸುವುದು. ಅಪಾಯಕಾರಿ. ಪ್ರಬಲ ಕೀಟನಾಶಕ.[]

ಇದರ ಅಣು ಇತರ ಸ್ಟೀರಿಯೊ ಐಸೊಮರುಗಳಿಗಿಂತ ಚಿಕ್ಕದು. ಆದ್ದರಿಂದ ಇದು ಸುಲಭವಾಗಿ ತೂರಿಹೋಗಿ ಪರಿಣಾಮಕಾರಿಯಾಗಬಲ್ಲದು ಎಂದು ಮುಲ್ಲಿನ್ಸ್ ಅಭಿಪ್ರಾಯ.  ಬೀಟ ಐಸೊಮರಿನಂತಲ್ಲದೆ ಸೋಡಿಯಂ ಇಥಾಕ್ಸೈಡಿನ ಆಲ್ಕೊಹಾಲ್ ದ್ರಾವಣದೊಂದಿಗೆ ವರ್ತಿಸಿ ಹೈಡ್ರೊಜನ್ ಕ್ಲೋರೈಡನ್ನು ಸುಲಭವಾಗಿ ಬಿಟ್ಟುಕೊಡುವುದು. ಗ್ಯಾಮಕ್ಸೇನಿನ ಅಕ್ಕಪಕ್ಕದ ಮೂರು ಕ್ಲೋರಿನ್ ಪರಮಾಣುಗಳು ಅಕ್ಷದ ಸುತ್ತಲಿನ ಸ್ಥಾನಗಳಲ್ಲೂ, ಉಳಿದ ಮೂರು ಪರಮಾಣುಗಳು ವೃತ್ತ ಸಮೀಪದ ಸ್ಥಾನಗಳಲ್ಲೂ ಇರುವುದಾಗಿ ಎಕ್ಸ್-ಕಿರಣಗಳ ಅಧ್ಯಯನದಿಂದ ಗೊತ್ತಾಗಿದೆ.

ಇತಿಹಾಸ

[ಬದಲಾಯಿಸಿ]

1945ರಲ್ಲಿ ಇಂಪೀರಿಯಲ್ ಕೆಮಿಕಲ್ ಇಂಡಸ್ ಟ್ರೀಸಿನವರು ಪ್ರಥಮವಾಗಿ ಇದನ್ನು ಪ್ರಕಟಿಸಿದರು. ಡಿಡಿಟಿಗಿಂತಲೂ ಸ್ಥಿರವಾದ ಮತ್ತು ಅದಕ್ಕಿಂತಲೂ ಶೀಘ್ರವಾಗಿ ಪರಿಣಾಮಕಾರಿಯಾದ ಕೀಟನಾಶಕವಿದು.

ತಯಾರಿಕೆ

[ಬದಲಾಯಿಸಿ]

ಬೆಂಜ಼ೀನನ್ನು ಅತಿನೇರಿಳೆ ಬೆಳಕಿನ ಸಮ್ಮುಖದಲ್ಲಿ ಕ್ಲೋರಿನೀಕರಿಸುವುದರಿಂದ 12% ಗ್ಯಾಮಕ್ಸೇನ್ ಇರುವ ಸ್ಟಿರಿಯೊ ಐಸೊಮರುಗಳ ಮಿಶ್ರಣ ಉತ್ಪತ್ತಿಯಾಗುವುದು. ಈ ಮಿಶ್ರಣವನ್ನು ಆಂಶಿಕ ಸ್ಫಟಿಕೀಕರಿಸಿ ಗ್ಯಾಮೆಕ್ಸೇನ್‌ನನ್ನು ಬೇರ್ಪಡಿಸಬಹುದು. ಇದನ್ನು ಚೀಲಗಳಲ್ಲಿಯೂ ಪೀಪಾಯಿಗಳಲ್ಲಿಯೂ ಶೇಖರಿಸಿಡಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. Brandenberger H, Maes RA (1997). Analytical toxicology: for clinical, forensic, and pharmaceutical chemists. Berlin: Walter de Gruyter. p. 243. ISBN 978-3-11-010731-9. Retrieved 2009-05-10.
  2. "The North American Regional Action Plan (NARAP) on Lindane and Other Hexachlorocyclohexane (HCH) Isomers" (PDF). Commission for Environmental Cooperation. 2013. Retrieved 2020-02-28.


ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: