ಗ್ಯಾಂಗ್ಟ್‌ಸೆ
ಗೋಚರ

ಗ್ಯಾಂಗ್ಟ್‌ಸೆ ಮಧ್ಯ ಟಿಬೆಟಿನ ಒಂದು ಪಟ್ಟಣ. ನ್ಯಾಂಗ್ ಚು ನದಿಯ ದಂಡೆಯ ಮೇಲೆ ಇದೆ. ಜನಸಂಖ್ಯೆ ಸು. 11,039. ಗಿರಿಯೇಣೊಂದರ ಮೇಲೆ ನಿರ್ಮಿತವಾದ ಈ ನಗರದ ಎರಡು ಮುಖ್ಯ ಕಟ್ಟಡಗಳಲ್ಲಿ ಒಂದು ಇಲ್ಲಿಯ ಕೋಟೆ.[೧] ಅದು ಈಗ ಸ್ಥಳೀಯ ನ್ಯಾಯಾಲಯ. ಇನ್ನೊಂದು, ಲಾಮಗಳ ಮಠವಾಗಿದ್ದ ಕಟ್ಟಡ. 1954 ರ ಪ್ರವಾಹದಲ್ಲಿ ಈ ನಗರ ಬಹುತೇಕ ನಾಶವಾಗಿತ್ತು. ಈಗ ಇದನ್ನು ಮತ್ತೆ ನಿರ್ಮಿಸಲಾಗಿದೆ.
ಗ್ಯಾಂಗ್ಟ್‌ಸೆ ಒಂದು ವ್ಯಾಪಾರ ಕೇಂದ್ರ. ಲಾಸ, ಷಿಗಾಟ್ಸೆ, ಯಾಟುಂಗ್‌ಗಳಿಗೆ ಇಲ್ಲಿಂದ ಹೆದ್ದಾರಿಯುಂಟು. ಉಣ್ಣೆ, ತುಪ್ಪುಳು, ಕಸ್ತೂರಿ, ಬೆಣ್ಣೆ, ಬಾರ್ಲಿ, ಚಹಾ, ಹೊಗೆಸೊಪ್ಪು, ಸಕ್ಕರೆ, ಹತ್ತಿ, ಜವಳಿ, ಒಣಗಿದ ಹಣ್ಣು, ಕಬ್ಬಿಣ ಸಾಮಾನು, ಮರದ ಬೋಗುಣಿ, ಅಕ್ಕಿ, ಮುಂತಾದ ಸರಕುಗಳು ಇಲ್ಲಿಗೆ ಬರುತ್ತವೆ.
ಉಲ್ಲೇಖಗಳು
[ಬದಲಾಯಿಸಿ]- ↑ Allen (2004), p. 30.
ಗ್ರಂಥಸೂಚಿ
[ಬದಲಾಯಿಸಿ]- Allen, Charles. (2004). Duel in the Snows: The True Story of the Younghusband Mission to Lhasa. John Murray (publishers), London. ISBN 0-7195-5427-6.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |