ಗ್ಯಾಂಗ್

ಗ್ಯಾಂಗ್ ಎನ್ನುವುದು ಲೋಹಮಿಶ್ರಿತ ಅದುರು ನಿಕ್ಷೇಪಗಳಿಗೆ ಸಂಬಂಧಿಸಿದಂಥ ಬೆಲೆಯಿಲ್ಲದ ಖನಿಜಗಳ ಹೆಸರು. ನಿಕ್ಷೇಪಗಳು ಯಾವ ರೀತಿ ಉತ್ಪತ್ತಿಯಾಗಿದ್ದರೂ ಕೆಲವು ಅನುಪಯುಕ್ತ ಖನಿಜಗಳು ಅವುಗಳೊಡನೆ ವಿವಿಧ ಪ್ರಮಾಣಗಳಲ್ಲಿ ಮಿಶ್ರಿತವಾಗಿರುತ್ತವೆ. ಉಪಯುಕ್ತ ಲೋಹದೊಡನೆ ಲೋಹೇತರ ಖನಿಜಗಳೂ, ಶಿಲಾಚೂರುಗಳೂ ಕೂಡಿರುವುದಲ್ಲದೆ ಕೆಲವು ಸಂದರ್ಭದಲ್ಲಿ ಅನುಪಯುಕ್ತ ಖನಿಜಗಳೂ ಇರುವುದುಂಟು. ಇವೇ ಗ್ಯಾಂಗ್. ಅಲೋಹ ನಿಕ್ಷೇಪಗಳಲ್ಲಿ ಉಪಯುಕ್ತ ಖನಿಜಗಳೊಡನೆ ಕೂಡಿರುವ ಉಪಯೋಗವಿಲ್ಲದ ಪದಾರ್ಥಗಳನ್ನು ಅನುಪಯುಕ್ತ ವಸ್ತುಗಳು ಎಂದು ಕರೆಯುವರು. ಹಲವು ವೇಳೆ ಆರ್ಥಿಕ ದೃಷ್ಟಿಯಿಂದ ಕೆಳದರ್ಜೆಯ ಅದುರಿನೊಡನೆ ಬೆಲೆಬಾಳುವ ಖನಿಜಗಳು ಗ್ಯಾಂಗ್ ರೂಪದಲ್ಲಿ ದೊರೆತು ಅದುರಿನ ಬೆಲೆಯನ್ನು ಹೆಚ್ಚಿಸುವುದೂ ಉಂಟು. ಗ್ಯಾಂಗಿನಲ್ಲಿರುವ ಪದಾರ್ಥಗಳನ್ನು ಉಪಪದಾರ್ಥಗಳನ್ನಾಗಿ ಬೇರ್ಪಡಿಸಬಹುದು. ಆಗ ಈ ಗ್ಯಾಂಗಿನಲ್ಲಿರುವ ಬೆಲೆಬಾಳುವ ಪದಾರ್ಥಗಳ ದೆಸೆಯಿಂದ ಕೆಳದರ್ಜೆಯ ಅದುರನ್ನು ಕೂಡ ಗಣಿಗಾರಿಕೆಯಿಂದ ತೆಗೆಯಬಹುದು. ಸಾಮಾನ್ಯವಾಗಿ ಖನಿಜ ಸಂಸ್ಕರಣ ನಡೆಯುವಾಗ ಈ ಅನುಪಯುಕ್ತ ವಸ್ತುಗಳನ್ನು ಬೇರ್ಪಡಿಸುತ್ತಾರೆ. ಒಳಗೊಂಡಿರುವ ಖನಿಜಗಳ ಸ್ವಭಾವವನ್ನು ಅವಲಂಬಿಸಿ, ಇದು ಒಂದು ಸಂಕೀರ್ಣ ಪ್ರಕ್ರಿಯೆಯಾಗಿರುತ್ತದೆ.[೧] ಉದಾಹರಣೆಗೆ ಕೋಲಾರದ ಚಿನ್ನದ ಗಣಿಯಲ್ಲಿ ಚಿನ್ನದ ಜೊತೆಯಲ್ಲಿ ಬೆಳ್ಳಿಯನ್ನೂ ಉಪಪದಾರ್ಥವಾಗಿ ಶೇಖರಿಸುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ A number of historical examples are detailed in: Hardesty, Donald L. (2010). Mining Archaeology in the American West: A View from the Silver State. University of Nebraska Press. pp. 70–91. Archived from the original on 2016-03-07. Retrieved 2017-08-28.
