ವಿಷಯಕ್ಕೆ ಹೋಗು

ಗೋಯಿಯಾಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚ್ಯಾಪಡಾ ಡಾಸ್ ವೀಡೈರೋಸ್ ರಾಷ್ಟ್ರೀಯ ಉದ್ಯಾನ

ಗೋಯಿಯಾಸ್ ಎನ್ನುವುದು ಬ್ರಜ಼ಿಲಿನ ಒಂದು ರಾಜ್ಯ. ಇದರ ಉತ್ತರಕ್ಕೆ ಮ್ಯಾರನ್ಯೌನ್, ದಕ್ಷಿಣಕ್ಕೆ ಮೀನ ಷೆ಼ರೈಸ್ ಮತ್ತು ಮ್ಯಾಟೂ ಗ್ರೋಸೂ, ಪಶ್ಚಿಮಕ್ಕೆ ಪರಾ ಮತ್ತು ಮ್ಯಾಟೂ ಗ್ರೋಸೂ, ಪೂರ್ವಕ್ಕೆ ಮೀನ ಷೆ಼ರೈಸ್ ಮತ್ತು ಬಾಯೀಯಾ ರಾಜ್ಯಗಳಿವೆ. ರಾಜ್ಯದ ವಿಸ್ತೀರ್ಣ 1,31,308 ಚ,ಮೈ. ಜನಸಂಖ್ಯೆ 73,50,480 (2024ರ ಅಂದಾಜು).[] ಇಡೀ ರಾಜ್ಯ ಬ್ರಜ಼ಿಲಿನ ಪರ್ವತ ಪ್ರದೇಶದಲ್ಲಿದೆ. ಈಶಾನ್ಯ ಹಾಗೂ ನೈಋತ್ಯಭಾಗಗಳಲ್ಲಿ ಕಿರಿದಾದ ಬೆಟ್ಟಗಳ ಸಾಲುಗಳು ಹಬ್ಬಿವೆ. ಅತ್ಯಂತ ಎತ್ತರದ ಪ್ರದೇಶ ಸಮುದ್ರ ಮಟ್ಟದಿಂದ 5,505' ಇದೆ. ರಾಜ್ಯದ ಬಹುಭಾಗ ಉತ್ತರಕ್ಕೆ ಇಳಿಜಾರಾಗಿದೆ. ಆ ಭಾಗದ ಮುಖ್ಯ ನದಿಗಳು ಆರಗ್ವೀಯ ಮತ್ತು ಟೋಕ್ಯಾಂಟೇನ್ಸ್. ದಕ್ಷಿಣದ ಮುಖ್ಯ ನದಿ ಪ್ಯಾರನಯೀವ. ಇದು ಪಾರಾನಾದ ಉಪನದಿ. ಪೂರ್ವದಲ್ಲಿ ಸೌನ್ ಫ್ರಾನ್ಸಿಷ್ಕೂನದ ಉಪನದಿಗಳಿವೆ. ರಾಜ್ಯದ ಯಾವ ನದಿಗಳೂ ನೌಕಾಯಾನಕ್ಕೆ ಅನುಕೂಲವಾಗಿಲ್ಲ. ದಕ್ಷಿಣದ ಭಾಗ ಹುಲ್ಲುಗಾವಲು. ಉತ್ತರಕ್ಕೆ ಹೋದಂತೆ ಕಾಡು ಹೆಚ್ಚು ಒತ್ತಾಗಿದೆ. ಇಲ್ಲಿಯ ಸಸ್ಯ ಆಮೆಜ಼ಾನ್ ನದೀ ಪ್ರದೇಶದ ಸಸ್ಯವನ್ನು ಹೋಲುತ್ತವೆ. ಈ ರಾಜ್ಯದ್ದು ಉಪೋಷ್ಣ ವಲಯದ ವಾಯುಗುಣ. ನದೀಪ್ರದೇಶದಲ್ಲಿ ಮಲೇರಿಯಾ ರೋಗ ಸಾಮಾನ್ಯ.

ಆರ್ಥಿಕತೆ

[ಬದಲಾಯಿಸಿ]

ಸ್ಥಳೀಯ ಬೇಡಿಕೆಗಳನ್ನು ಮಾತ್ರ ಪೂರೈಸುವ ಮಟ್ಟಿಗೆ ಕೃಷಿ ಕಾರ್ಯ ಬೆಳೆದಿದೆ. ತಂಬಾಕು ಒಂದು ರಫ್ತು ಬೆಳೆ. ವಿಶಾಲವಾದ ಹುಲ್ಲುಗಾವಲು ಪ್ರದೇಶದಲ್ಲಿ ದನಗಳನ್ನು ಸಾಕುತ್ತಾರೆ (೨೦೧೬ರಲ್ಲಿ ೨೨.೬ ದಶಲಕ್ಷ ದನಗಳಿದ್ದವು).[] ಹೈನು ಹಾಗೂ ಮಾಂಸ ಉದ್ಯಮಗಳು ಅಭಿವೃದ್ಧಿ ಹೊಂದಿವೆ. ಕೆಲವು ಕಡೆಗಳಲ್ಲಿ ನದಿಗಳ ಹರಿವಿನ ಕಂಕರೆಯಲ್ಲಿ ಚಿನ್ನ ಸಿಗುತ್ತದೆ. ಟೈಟೇನಿಯಮ್, ಕ್ವಾರ್ಟ್ಸ್, ವಜ್ರ, ನಿಕಲ್ ಮತ್ತು ಕ್ರೋಮಿಯಮ್ ಮುಖ್ಯ ಖನಿಜಗಳು. ರಾಜ್ಯದ ಬಹುಭಾಗದಲ್ಲಿ ಜನಸಾಂದ್ರತೆ ಬಲು ಕಡಿಮೆ. ಆಗ್ನೇಯ ಭಾಗದಲ್ಲಿ ಜನವಸತಿ ಹೆಚ್ಚು. ರಾಜ್ಯದ ರಾಜಧಾನಿ ಗೋಯಿಯಾನಿಯಾ. ಇತರ ಮುಖ್ಯ ನಗರಗಳೆಂದರೆ ಅನಾಪೊಲಿಸ್, ಇಪಾಮೆರಿ ಮತ್ತು ಕ್ಯಾಟಲೋ.

ಉಲ್ಲೇಖಗಳು

[ಬದಲಾಯಿಸಿ]
  1. "IBGE | Portal do IBGE | IBGE". Archived from the original on 31 August 2017. Retrieved 15 February 2018.
  2. "Rebanho bovino goiano atinge recorde histórico". Archived from the original on 21 July 2020. Retrieved 21 July 2020.


ಹೊರಗಿನ ಕೊಂಡಿಗಳು

[ಬದಲಾಯಿಸಿ]