ವಿಷಯಕ್ಕೆ ಹೋಗು

ಗೋಬಿ ಮೀನು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೋಬಿ ಮೀನುಗಳು
ಕಪ್ಪು ಗೋಬಿ (ಗೋಬಿಯಸ್ ನೈಜರ್)
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯಾ
ವಿಭಾಗ: ಕಾರ್ಡೇಟಾ
ವರ್ಗ: ಆ್ಯಕ್ಟಿನೋಟೆರಿಜೀ
ಗಣ: ಗೋಬಿಯಿಫ಼ಾರ್ಮೀಸ್
ಕುಟುಂಬ: ಗೋಬಿಯಿಡೇ
G. Cuvier, 1816
Type species
ಗೋಬಿಯಸ್ ನೈಜರ್

ಗೋಬಿ ಮೀನು ಎನ್ನುವುದು ಗೋಬಿಯಿಫಾರ್ಮಿಸ್ ಗಣದ ಗೋಬಿಯಿಡೆ ಕುಟುಂಬಕ್ಕೆ ಸೇರಿದ ಹಲವಾರು ಮೀನುಗಳಿಗೆ ಇರುವ ಸಾಮಾನ್ಯ ಹೆಸರು. ಈ ಕುಟುಂಬದಲ್ಲಿ 200 ಕ್ಕಿಂತ ಹೆಚ್ಚು ಜಾತಿಗಳಲ್ಲಿ 2,000 ಕ್ಕಿಂತ ಹೆಚ್ಚು ಪ್ರಬೇಧಗಳಿವೆ.[]

ಇರುವ ಸ್ಥಳಗಳು, ಉದಾಹರಣೆಗಳು

[ಬದಲಾಯಿಸಿ]

ಇವುಗಳ ವ್ಯಾಪ್ತಿ ಪೂರ್ವಾರ್ಧಗೋಳದ ಹವಳದಿಬ್ಬಗಳಿಂದ ಪಶ್ಚಿಮಾರ್ಧಗೋಳದ ಸಮುದ್ರಗಳವರೆಗೆ ವಿಸ್ತರಿಸುತ್ತದೆ ಮತ್ತು ಯೂರೋಪ್ ಹಾಗೂ ಏಷ್ಯಾದ ನದಿಗಳು ಹಾಗೂ ಕರಾವಳಿ ಹತ್ತಿರದ ವಾಸಸ್ಥಾನಗಳನ್ನು ಒಳಗೊಂಡಿದೆ.[]

ಇವು ಉಷ್ಣವಲಯದ ಕಡಲುಗಳು ಇಲ್ಲವೇ ಸರೋವರದ ತಳದಲ್ಲಿ ವಾಸಿಸುತ್ತವೆ. ಸಾಮಾನ್ಯವಾಗಿ ಇವು ಚಿಕ್ಕ ಗಾತ್ರದವು. ಫಿಲಿಪ್ಪೀನ್ಸ್‌ನಲ್ಲಿನ ಲುಜಾ಼ನ್ ಎಂಬಲ್ಲಿರುವ ಒಂದು ಸರೋವರದಲ್ಲಿ ಕಂಡುಬರುವ ಪಂಡಾಕ ಪಿಗ್ಮಿಯಾ ಎಂಬ ಗೋಬಿ ಮೀನು ಕೇವಲ 12 ಮಿಲಿಮೀಟರ್ ಉದ್ದ ಇದ್ದು ಅತ್ಯಂತ ಚಿಕ್ಕ ಕಶೇರುಕ ಎನಿಸಿಕೊಂಡಿದೆ. ಉಳಿದವು ಸುಮಾರು 8 ರಿಂದ 30 ಸೆಂ.ಮೀ ವರೆಗೆ ಬೆಳೆಯಬಲ್ಲವು. ಭಾರತದಲ್ಲಿ ಸಾಮಾನ್ಯವಾಗಿ ಸಿಹಿನೀರು ಪ್ರದೇಶಗಳಲ್ಲಿ ಕಾಣಸಿಗುವ ಗೋಬಿ ಮೀನು ಎಂದರೆ ಗ್ಲಾಸೋಗೋಬಿಯಸ್ ಗೈಯುರಿಸ್ (ಟ್ಯಾಂಕ್ ಗೋಬಿ). ಬಹುತೇಕ ಕೆರೆ, ಕೊಳಗಳು, ಅಳಿವೆಗಳು, ಹಿನ್ನೀರು ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಮೀನು. ಮರಳು, ಜಲ್ಲಿ, ಬಂಡೆಗಳಿಂದ ಕೂಡಿದ ಝರಿಗಳಲ್ಲೂ ಕಾಣಸಿಗುತ್ತವೆ. ಕೆಲವೊಮ್ಮೆ ಸಮುದ್ರಕ್ಕೂ ಪ್ರವೇಶಿಸುತ್ತವೆ.

ದೇಹರಚನೆ, ಆಹಾರ

[ಬದಲಾಯಿಸಿ]

ಈ ಪ್ರಭೇಧದ ಗಂಡು ಮೀನು ಕಂದು ಬಣ್ಣವಿರುತ್ತದೆ, ಹೆಣ್ಣು ಹಳದಿ. ಹೆಣ್ಣಿನಲ್ಲಿ ಬೂದು ಮತ್ತು ಕಪ್ಪು ಚುಕ್ಕೆಗಳು ಇರುತ್ತವೆ. ಸುಮಾರು 30 ಸೆಂ.ಮೀ. ವರೆಗೆ ಬೆಳೆಯುತ್ತದೆ. ಗೋಬಿ ಮೀನುಗಳಿಗೆ ಚಪ್ಪಟೆಯಾದ ತಲೆ, ದುಂಡಾದ ಮೂತಿ, ತಲೆಯ ಮೇಲ್ಭಾಗಕ್ಕಿರುವ ದೊಡ್ಡ ಕಣ್ಣುಗಳು, ದಪ್ಪ ತುಟಿಗಳು, ಹಲವಾರು ಸಾಲುಗಳಲ್ಲಿರುವ ಸಣ್ಣ ಹಲ್ಲುಗಳು, ದುಂಡಾದ ಬಾಲದ ಈಜುರೆಕ್ಕೆ, ಗುದದ ಈಜುರೆಕ್ಕೆಗಳು ದೇಹದ ಅಧೋಭಾಗದಲ್ಲಿ ಒಂದುಗೂಡಿ ಒಂದು ರೀತಿಯ ಹೀರು ಬಟ್ಟಲಾಗಿ ಪರಿವರ್ತನೆಯಾಗಿವೆ. ಇದರ ಸಹಾಯದಿಂದ ಝರಿಗಳಲ್ಲಿ ಗೋಬಿ ಮೀನುಗಳು ಬಂಡೆಗಳಿಗೆ, ಮರಳಿಗೆ ಅಂಟಿಕೊಂಡಿರುತ್ತವೆ. ಇವು ಸಣ್ಣ ಕೀಟಗಳು, ಇತರೆ ಸಣ್ಣ ಜಲಚರಗಳು, ಮೀನುಗಳನ್ನು ತಿನ್ನುತ್ತವೆ.

ಸಂತಾನವೃದ್ಧಿ

[ಬದಲಾಯಿಸಿ]

ವಸಂತ ಋತುವಿನ ಪ್ರಾರಂಭದಲ್ಲಿ ಗೋಬಿಗಳು ಪ್ರಜನನ ಕ್ರಿಯೆಯಲ್ಲಿ ತೊಡಗಿರುತ್ತವೆ. ಮೊಟ್ಟೆಗಳನ್ನು ಇಟ್ಟ ಮೇಲೆ ಗಂಡು ಮೀನು ಕಾವಲಿರುತ್ತದೆ. ಇದು ಮೊಟ್ಟೆಗಳನ್ನು ತಿನ್ನಲು ಬರುವ ಇತರೆ ಮೀನುಗಳೊಡನೆ ಕಾದಾಡಿ ರಕ್ಷಣೆ ನೀಡುವುದಲ್ಲದೆ, ತನ್ನ ಭುಜದ ಈಜು ರೆಕ್ಕೆಗಳಿಂದ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ ಬೆಳೆಯುವ ಮರಿಗಳಿಗೆ ಅನುಕೂಲ ವಾತಾವರಣವನ್ನು ಕಲ್ಪಿಸುತ್ತದೆ.

ಗೋಬಿ ಮೀನುಗಳ ಒಟ್ಟು ಜೀವಿತಾವಧಿ ಒಂದರಿಂದ ಹತ್ತು ವರ್ಷಗಳವರೆಗೆ ಬದಲಾಗುತ್ತದೆ. ಹೆಚ್ಚು ಬೆಚ್ಚಗಿನ ನೀರುಗಳಲ್ಲಿರುವ ಪ್ರಭೇದಗಳು ಸಾಮಾನ್ಯವಾಗಿ ದೀರ್ಘ ಕಾಲ ಬದುಕುತ್ತವೆ.[]

ಉಪಯೋಗಗಳು

[ಬದಲಾಯಿಸಿ]

ವಾಣಿಜ್ಯವಾಗಿ ಅಷ್ಟು ಪ್ರಾಮುಖ್ಯವಿಲ್ಲದಿದ್ದರೂ ಈ ಮೀನುಗಳು ತಿನ್ನಲು ಯೋಗ್ಯವಾಗಿವೆ. ಗೋಬಿ ಮೀನಿನ ಹಲವಾರು ಪ್ರಭೇದಗಳನ್ನು ಅಕ್ವೇರಿಯಮ್‍ನಲ್ಲಿ ಇಡಲಾಗುತ್ತದೆ.[]

ಉಲ್ಲೇಖಗಳು

[ಬದಲಾಯಿಸಿ]
  1. Patzner, R.A.; Van Tassell, J.L.; Kovačić, M.; Kapoor, B.G., eds. (2011). The Biology of Gobies. Enfield, NH: Science Publishers. p. 685. ISBN 978-1-57808-436-4.
  2. Thacker, Christine E.; Dawn M. Roje (2011). "Phylogeny of Gobiidae and identification of gobiid lineages". Systematics and Biodiversity. 9 (4): 329–347. Bibcode:2011SyBio...9..329T. doi:10.1080/14772000.2011.629011.
  3. Hoese, Douglas F. (1998). Paxton, J.R.; Eschmeyer, W.N. (eds.). Encyclopedia of Fishes. San Diego: Academic Press. pp. 218–222. ISBN 978-0-12-547665-2.
  4. Schäfer, Frank (2005). Brackish-Water Fishes. Aqualog. ISBN 978-3936027822.


ಹೊರಗಿನ ಕೊಂಡಿಗಳು

[ಬದಲಾಯಿಸಿ]




ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: