ಗೋಫರ್
| ಗೋಫರ್‌ಗಳು Temporal range:
| |
|---|---|
| ಬೋಟಾನ ಗೋಫರ್ (ಥೋಮೊಮಿಸ್ ಬೋಟೇ) | |
| Scientific classification | |
| ಕ್ಷೇತ್ರ: | ಯೂಕ್ಯಾರ್ಯೋಟಾ |
| ಸಾಮ್ರಾಜ್ಯ: | ಅನಿಮೇಲಿಯಾ |
| ವಿಭಾಗ: | ಕಾರ್ಡೇಟಾ |
| ವರ್ಗ: | ಮ್ಯಾಮೇಲಿಯಾ |
| ಗಣ: | ರೊಡೆಂಷಿಯಾ |
| ಮೇಲ್ಕುಟುಂಬ: | ಜಿಯೋಮಯಾಯ್ಡೀ |
| ಕುಟುಂಬ: | ಜಿಯೋಮೈಯಿಡೀ Bonaparte, 1845 |
| Type genus | |
| ಜಿಯೋಮಿಸ್ Rafinesque, 1817
| |
| ಜಾತಿಗಳು | |
|
ಕ್ರೇಟೊಜಿಯೋಮಿಸ್ | |
| Diversity | |
| 7 ಜಾತಿಗಳಲ್ಲಿ ಸುಮಾರು 41 ಪ್ರಜಾತಿಗಳು | |
ಗೋಫರ್ ಎನ್ನುವುದು ರಾಡೆನ್ಷಿಯ ಗಣದ ಜಿಯೋಮೈಯಿಡೀ ಕುಟುಂಬಕ್ಕೆ ಸೇರಿದ ಜಿಯೋಮಿಸ್, ಥೋಮೋಮಿಸ್ ಮತ್ತು ಪ್ಯಾಪೊಜಿಯೋಮಿಸ್ ಎಂಬ ಮೂರು ಬೇರೆ ಬೇರೆ ಜಾತಿಯ ಸಸ್ತನಿಗಳಿರುವ ಸಾಮಾನ್ಯ ಹೆಸರು.[೨] ಪಾಕೆಟ್ ಗೋಫರ್ ಪರ್ಯಾಯ ನಾಮ. ಮೇಲೆ ಹೇಳಿದ ಎಲ್ಲ ಜಾತಿಗಳೂ ಉತ್ತರ ಅಮೆರಿಕದ ಮೂಲನಿವಾಸಿಗಳು. ದಕ್ಷಿಣದಲ್ಲಿ ಗ್ವಾಟಿಮಾಲದಿಂದ ಹಿಡಿದು ಉತ್ತರದಲ್ಲಿ ಕೆನಡದವರೆಗೂ ಇವುಗಳ ವ್ಯಾಪ್ತಿ ಇದೆ.[೩]
ದೇಹಲಕ್ಷಣಗಳು, ಆಹಾರ
[ಬದಲಾಯಿಸಿ]ಎಲ್ಲ ಬಗೆಯವೂ ನೆಲದಲ್ಲಿ ಬಿಲಗಳನ್ನು ಕೊರೆದುಕೊಂಡು ವಾಸಿಸುತ್ತವೆ. ಗೋಫರ್‌ಗಳು ಪುಟ್ಟ ಗಾತ್ರದ ಪ್ರಾಣಿಗಳು. ದೇಹದ ಉದ್ದ 9-30 ಸೆಂಮೀ. ಹೃಷ್ಟ ಪುಷ್ಟವಾದ ದೇಹ, ಚಿಕ್ಕ ಕಾಲುಗಳು, ಮೋಟು ಬಾಲ, ಬಾಚಿಯಂತೆ ಬಾಯಿಯಿಂದ ಹೊರಚಾಚಿರುವ ಮುಂದಿನ ಹಲ್ಲುಗಳು, ಬಲುಸಣ್ಣ ಕಣ್ಣು ಹಾಗೂ ಕಿವಿಗಳು, ಸಡಿಲವಾದ ಚರ್ಮ ಮತ್ತು ಬಲಯುತವಾದ ನಖಗಳು-ಇವು ಗೋಫರುಗಳ ಪ್ರಮುಖ ಲಕ್ಷಣಗಳು.
ಗೋಫರ್‌ಗಳು ಗಿಡದ ಬೇರುಗಳು, ಪೊದೆಸಸ್ಯಗಳು, ಮತ್ತು ಗಜ್ಜರಿ, ಲೆಟಿಸ್, ಮೂಲಂಗಿಯಂತಹ ಇತರ ತರಕಾರಿಗಳು, ಮತ್ತು ರಸವಿರುವ ಯಾವುದೇ ಇತರ ತರಕಾರಿಗಳನ್ನು ತಿನ್ನುತ್ತವೆ.[೪]
ಇನ್ನೊಂದು ಸೋಜಿಗದ ಸಂಗತಿ ಎಂದರೆ ಇವಕ್ಕಿರುವ ದವಡೆ ಚೀಲಗಳು. ಬಾಯಿಯ ಆಚೀಚೆಗೆ ಇರುವ ಈ ಚೀಲಗಳು ಭುಜದವರೆಗೂ ವಿಸ್ತರಿಸಿವೆ. ಒಂದೊಂದಕ್ಕೂ ಒಂದು ದ್ವಾರ ಮತ್ತು ತುಪ್ಪುಳಿನ ಒಳಪದರವಿದೆ. ಈ ಚೀಲಗಳಲ್ಲಿ ಗೋಫರ್‌ಗಳು ಆಹಾರವನ್ನು ತುಂಬಿಕೊಳ್ಳುತ್ತವೆ. ವಿಚಿತ್ರವೆಂದರೆ ಬೇಕೆಂದಾಗ ಈ ಪ್ರಾಣಿಗಳು ತಮ್ಮ ಈ ಚೀಲಗಳನ್ನು ಒಳಹೊರಗು ಮಾಡಿ ಶುಚಿ ಮಾಡಿಕೊಳ್ಳುವುದು. ಗೋಫರ್‌ಗಳ ಬಾಲ ಬಹಳ ಸುಟಿ. ಗೋಫರ್‌ಗಳು ತಮ್ಮ ಜೀವನದ ಬಹುಕಾಲವನ್ನು ನೆಲದೊಳಗಿನ ಬಿಲಗಳಲ್ಲಿ ಕಳೆಯುತ್ತವೆ. ಆಹಾರಾನ್ವೇಷಣೆಗಾಗಿ ಅಪೂರ್ವವಾಗಿ ಬಿಲದಿಂದ ಹೊರಬರುವುದುಂಟು. ನೆಲವನ್ನು ತೋಡುವಾಗ ಸಿಕ್ಕುವ ಗೆಡ್ಡೆಗೆಣಸುಗಳೇ ಇವುಗಳ ಪ್ರಧಾನ ಆಹಾರ. ಇವು ತೋಡುವ ಬಿಲಗಳಲ್ಲಿ ಎರಡು ಬಗೆಗಳಿವೆ. ಒಂದು-ಆಳವಿಲ್ಲದ, ಆದರೆ ವಿಸ್ತಾರವಾಗಿ ಹರಡಿರುವ ಬಿಲಗಳು. ಗೆಡ್ಡೆಗೆಣಸುಗಳಿಗಾಗಿ ಓಡಾಡುವಾಗ ನಿರ್ಮಿತವಾಗುವ ಬಿಲಗಳಿವು. ಎರಡು-ಇವುಗಳಲ್ಲಿ ಆಹಾರ ಸಂಗ್ರಹಣೆಗೆ, ಮರಿಗಳನ್ನು ಸುರಕ್ಷಿತವಾಗಿ ಇಡುವುದಕ್ಕೆ, ಮಲಮೂತ್ರ ವಿಸರ್ಜನೆಗೆ ಪ್ರತ್ಯೇಕವಾದ ಕೋಣೆಗಳಿರುತ್ತವೆ. ಬಿಲ ತೋಡಲು ಗೋಫರ್‌ಗಳು ತಮ್ಮ ನಖಗಳನ್ನು ಮತ್ತು ಬಾಚಿ ಹಲ್ಲುಗಳನ್ನು ಬಳಸುತ್ತವೆ. ಕೊಂಚ ಹೊತ್ತು ನೆಲವನ್ನು ಕೊರೆದ ಮೇಲೆ ಸಂಗ್ರಹವಾಗುವ ಮಣ್ಣನ್ನು ಎದೆ ಮತ್ತು ಮುಂಗಾಲುಗಳ ನಡುವೆ ಇರಿಸಿಕೊಂಡು ಹಿಮ್ಮುಖವಾಗಿ ಚಲಿಸಿ ಬಿಲದಿಂದ ಮೇಲಕ್ಕೆ ತಂದು ಹೊರ ಸುರಿಯುತ್ತವೆ. ಇಂಥ ಹಿಮ್ಮುಖ ಚಲನೆಗೆ ಸಂವೇದನಾಶೀಲವಾದ ಬಾಲ ಸಹಾಯಕವಾಗಿದೆ. ಗೋಫರ್‌ಗಳು ಮುಖ ಮುಂದಾಗಿ ಎಷ್ಟು ಬೇಗ ಓಡಬಲ್ಲವೋ ಅಷ್ಟೇ ವೇಗವಾಗಿ ಹಿಮ್ಮುಖವಾಗಿಯೂ ಓಡಬಲ್ಲವು. ಸಾಮಾನ್ಯವಾಗಿ ಇವು ಒಂಟೊಂಟಿಯಾಗಿ ವಾಸಿಸುತ್ತವೆ. ಇವುಗಳಲ್ಲಿ ಶಿಶಿರಸ್ವಾಪತೆ ಇಲ್ಲವಾದರೂ ಚಳಿಗಾಲದಲ್ಲಿ ಇವುಗಳ ಚಟುವಟಿಕೆ ಮಂದವಾಗುತ್ತದೆ.
ಸಂತಾನವೃದ್ಧಿ
[ಬದಲಾಯಿಸಿ]ವಸಂತಋತು ಇವುಗಳಿಗೆ ಸಂತಾನ ಕಾಲ. ಗರ್ಭಾವಸ್ಥೆಯ ಅವಧಿ 18-19 ದಿವಸಗಳು. ಒಂದು ಸೂಲಿಗೆ 3-10 ಮರಿಗಳು. ಹೊಸದಾಗಿ ಹುಟ್ಟಿದ ಮರಿಗಳ ಕಣ್ಣು ತೆರೆದೇ ಇರುವುದಿಲ್ಲ.[೫] ಕೂದಲು ಇರುವುದಿಲ್ಲ. ಸುಮಾರು 2 ತಿಂಗಳವರೆಗೆ ತಾಯಿಯ ಪಾಲನೆಯಲ್ಲಿದ್ದು 3 ತಿಂಗಳ ಅನಂತರ ಲೈಂಗಿಕ ಪ್ರಬುದ್ಧತೆ ಪಡೆದು ಸ್ವತಂತ್ರ ಜೀವನವನ್ನು ಆರಂಭಿಸುತ್ತವೆ.
ಉಲ್ಲೇಖಗಳು
[ಬದಲಾಯಿಸಿ]- ↑ Eduardo Jiménez-Hidalgo; Rosalía Guerrero-Arenas; Krister T. Smith (2018). "Gregorymys veloxikua, The Oldest Pocket Gopher (Rodentia: Geomyidae), and The Early Diversification of Geomyoidea". Journal of Mammalian Evolution. 25 (3): 427–439. doi:10.1007/s10914-017-9383-z. S2CID 207195992.
- ↑ "ODFW, Oregon Wildlife Species: Gophers". Dfw.state.or.us. 2014-08-25. Archived from the original on 2016-02-08. Retrieved 2017-05-27.
- ↑ "Outwit Critters". Retrieved 16 January 2014.
There are 35 species of gophers living in both North and Central America.
- ↑ "Pocket Gopher FAQs". Archived from the original on 3 February 2018. Retrieved 2 February 2018.
- ↑ Patton, James (1984). Macdonald, D. (ed.). The Encyclopedia of Mammals. New York: Facts on File. pp. 628–631. ISBN 0-87196-871-1.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Article on the Animal Diversity Web site
. Encyclopædia Britannica (11th ed.). 1911. {{cite encyclopedia}}: Cite has empty unknown parameters:|separator=and|HIDE_PARAMETER=(help)- . The American Cyclopædia. 1879.
- Pages using duplicate arguments in template calls
- Articles using diversity taxobox
- Articles with 'species' microformats
- Taxobox articles missing a taxonbar
- CS1 errors: empty unknown parameters
- 1911 ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ
- Wikipedia articles incorporating a citation from The American Cyclopaedia
- Wikipedia articles incorporating a citation from The American Cyclopaedia with a Wikisource reference
- ಸಸ್ತನಿಗಳು
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ