ಗೋಪಾಲಸ್ವಾಮಿ ಬೆಟ್ಟ

ವಿಕಿಪೀಡಿಯ ಇಂದ
Jump to navigation Jump to search

ಗೋಪಾಲಸ್ವಾಮಿ ಬೆಟ್ಟ (ಸಮುದ್ರ ಮಟ್ಟದಿಂದ ಸುಮಾರು ೪೮೦೦ ಅಡಿ ಎತ್ತರ ಇದೆ) ಇದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಬರುತ್ತದೆ. ಇದು ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿ ಇದೆ. ಬೆಟ್ಟದ ಮೇಲಿರುವ ಗೋಪಾಲಸ್ವಾಮಿ ದೇವಸ್ಥಾನ ಮತ್ತು ನಯನ ಮನೋಹರವಾದ ಪೃಕೃತಿ ಚೆಲುವಿನಿಂದ ಇದು ಪ್ರಸಿದ್ದವಾಗಿದೆ. ಇಲ್ಲಿ ವರ್ಷದ ಎಲ್ಲಾ ಕಾಲಗಳಲ್ಲಿ ಹಿಮ ಕವಿದಿರುವುದರಿಂದ "ಹಿಮವದ್ ಗೋಪಾಲಸ್ವಾಮಿ ಬೆಟ್ಟ" ಎಂಬ ಹೆಸರೂ ಇದೆ.

ಈ ಬೆಟ್ಟವನ್ನು ತಲುಪಲು ಅರಮನೆಗಳ ನಗರ ಮೈಸೂರಿನಿಂದ ಗುಂಡ್ಲುಪೇಟೆ (೬೭ ಕಿ.ಮೀ) - ಊಟಿ ಮಾರ್ಗದಲ್ಲಿ ಬರುವ ಹಂಗಳ ಎಂಬ ಹಳ್ಳಿಯಿಂದ ಬಲಕ್ಕೆ ಸುಮಾರು ೧೦ ಕಿ.ಮೀ ಕ್ರಮಿಸಬೇಕು. ಬೆಟ್ಟದ ಮೇಲೆ ತಲುಪಲು ರಸ್ತೆ ಅನುಕೂಲ ಇದೆ. ಈ ದೇವಾಲಯವನ್ನು ಕ್ರಿ.ಶ. ೧೩೧೫ ರಲ್ಲಿ ರಾಜ ದಂಡ ನಾಯಕ ಎನ್ನುವವನು ಕಟ್ಟಿಸಿದನು. ನಂತರ ಮೈಸೂರು ಮಹಾರಾಜರು ಈ ದೇವಾಲಯದ ಅಬಿವೃದ್ದಿ ಮಾಡಿದರು.

ಗೋಪಾಲಸ್ವಾಮಿ ವಿಗ್ರಹದ ಕಲ್ಲಿನ ಮೇಲೆ ವರ್ಷದ ೩೬೫ ದಿನಗಳೂ ನೀರು ಜಿನುಗುತ್ತಿರುತ್ತದೆ. ಈ ಬೆಟ್ಟದಲ್ಲಿ ಸುಮಾರು ೭೭ ತೀರ್ಥ ಸ್ಥಳಗಳಿವೆ. ಇವುಗಳಲ್ಲಿ ಕೆಲವನ್ನು ದೇವಸ್ಥಾನದ ಸುತ್ತ ಮುತ್ತ ನೋಡಬಹುದು. ಮತ್ತೊಂದು ಅಚ್ಚರಿ ಎಂದರೆ ಇಲ್ಲಿ ಕಾಗೆಗಳು ಕಾಣ ಸಿಗುವುದಿಲ್ಲ. ಒಂದು ಐತಿಹ್ಯದ ಪ್ರಕಾರ ಕಾಗೆಗಳು ಇಲ್ಲಿರುವ ತೀರ್ಥ ಸ್ಥಳಗಳಲ್ಲಿ ಮಿಂದು ಹಂಸಗಳಾಗಿ ಹಾರಿ ಹೋದವು ಎನ್ನುತ್ತಾರೆ.

ಬೆಟ್ಟದ ಮೇಲೆ ಜಿಂಕೆ, ಆನೆ ಮುಂತಾದ ಪ್ರಾಣಿಗಳನ್ನು ಕಾಡಿನ ಸಹಜ ಪರಿಸರದಲ್ಲಿ ಕಾಣಬಹುದು. ಬೆಟ್ಟದ ಮೇಲೆ ಊಟ ಮತ್ತು ವಸತಿಗೆ ವ್ಯವಸ್ಥೆ ಇಲ್ಲ.ಜೊತೆಗೆ ಹಿತವಾದ ವಾತಾವರಣ ಸಿಗುತ್ತದೆ ಒಮ್ಮೆ ಬೇಟಿ ಕೊಡಿ

ಉಲೇಖಗಳು[ಬದಲಾಯಿಸಿ]

https://www.tripadvisor.in/ShowUserReviews-g4093414-d6501210-r481932130-Himavad_Gopalaswamy_Betta-Chamarajanagar_Chamarajanagar_District_Karnataka.html

http://rcmysore-portal.kar.nic.in/temples/sreehimavadgopalaswamytemple/about.html

http://www.himavadgopalaswamy.org.in/