ಗೋಣಿಸೊಪ್ಪು
ಪೋರ್ಟುಲಕ ಕ್ವಾಡ್ರಿಫಿಡಾ | |
---|---|
Scientific classification ![]() | |
ಸಾಮ್ರಾಜ್ಯ: | ಪ್ಲಾಂಟೇ |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | ಯೂಡಿಕಾಟ್ಗಳು |
ಗಣ: | ಕ್ಯಾರ್ಯೋಫಿಲಾಲೀಸ್ |
ಕುಟುಂಬ: | ಪೋರ್ಟುಲಕೇಸೀ |
ಕುಲ: | ಪೋರ್ಟುಲಕ |
ಪ್ರಜಾತಿ: | ಪ. ಕ್ವಾಡ್ರಿಫಿಡಾ
|
Binomial name | |
ಪೋರ್ಟುಲಕ ಕ್ವಾಡ್ರಿಫಿಡಾ | |
Synonyms[೨] | |
List
|
ಗೋಣಿಸೊಪ್ಪು ಪೋರ್ಟುಲಕೇಸೀ ಕುಟುಂಬಕ್ಕೆ ಸೇರಿದ ಒಂದು ಕಳೆ ಸಸ್ಯ. ಪೋರ್ಟುಲಕ ಕ್ವಾಡ್ರಿಫಿಡ ಇದರ ವೈಜ್ಞಾನಿಕ ಹೆಸರು. ಭಾರತದಲ್ಲೆಲ್ಲ ಇದರ ವ್ಯಾಪ್ತಿಯಿದೆ.
ಗುಣಲಕ್ಷಣಗಳು
[ಬದಲಾಯಿಸಿ]ಇದು ನೆಲದ ಮೇಲೆ ಹರಡಿಕೊಂಡು ಬೆಳೆಯುವ ಏಕವಾರ್ಷಿಕ ಮೂಲಿಕೆ ಗಿಡ. ಕಾಂಡ ಮತ್ತು ಎಲೆಗಳು ದಪ್ಪವಾಗಿ ರಸಭರಿತವಾಗಿ ಇವೆ. ಎಲೆಗಳ ಆಕಾರ ದೀರ್ಘ ಅಂಡದಂತೆ. ಉದ್ದ 3 - 6 ಮಿ.ಮೀ. ಎಲೆಗಳಲ್ಲಿ ಒಂದು ಬಗೆಯ ಲೋಳೆಯೂ, ಪೊಟ್ಯಾಸಿಯಮ್ ಆಕ್ಸಲೇಟೂ ಇವೆ. ಇದರಿಂದಾಗಿ ಅವಕ್ಕೆ ಹುಳಿ ರುಚಿಯಿದೆ. ಹೂಗಳು ಹಳದಿ. ಒಂಟೊಂಟಿಯಾಗಿ ಕವಲುಗಳ ತುದಿಯಲ್ಲಿ ಹುಟ್ಟುತ್ತವೆ. ಕಾಯಿ ಸಂಪುಟ ಮಾದರಿಯದು.
ಗೋಣಿಸೊಪ್ಪು ಬಲು ಉಪದ್ರವಕಾರಿ ಕಳೆಗಿಡ. ಎಲ್ಲ ಕಳೆಸಸ್ಯಗಳಂತೆ ಇದರ ಪುನರುತ್ಪಾದನ ಸಾಮರ್ಥ್ಯವೂ ಬಹಳ ಹೆಚ್ಚು. ಗಿಡವನ್ನು ಕತ್ತರಿಸಿ ಹಾಕಿದರೂ ಅದರ ಸಣ್ಣ ತುಂಡುಗಳು ಬಲು ಬೇಗ ಬೇರೊಡೆದು ಹೊಸ ಗಿಡಗಳಾಗುತ್ತವೆ. ಬೀಜಗಳೂ ಬಹಳ ಬೇಗ ಮೊಳೆಯುತ್ತವೆ. ಇದರಿಂದಾಗಿ ಈ ಸಸ್ಯ ಯಾವ ಪ್ರದೇಶವನ್ನೇ ಆಗಲಿ ಬಹಳ ಬೇಗ ಆಕ್ರಮಿಸಿಕೊಂಡುಬಿಡುತ್ತದೆ. ಗಿಡವನ್ನು ಬೇರು ಸಮೇತ ಕಿತ್ತು ಸುಟ್ಟು ಬಿಡುವುದೇ ಇದರ ನಿಯಂತ್ರಣದ ಉತ್ತಮ ಮಾರ್ಗ.
ಉಪಯೋಗಗಳು
[ಬದಲಾಯಿಸಿ]ಗೋಣಿಸೊಪ್ಪನ್ನು ಕೆಲವೆಡೆ ಸೊಪ್ಪು ತರಕಾರಿಯಾಗಿ ಬಳಸುವುದಿದೆ. ಆದರೆ ಇವು ದೊಡ್ಡಗೋಣಿಸೊಪ್ಪಿನಷ್ಟು ಒಳ್ಳೆಯದಲ್ಲ. ಹೆಚ್ಚು ತಿಂದರೆ ಜಡತೆ ಉಂಟಾಗುತ್ತದೆ. ಆದರಿದಕ್ಕೆ ಔಷಧೀಯ ಗುಣಗಳುಂಟು. ಅಸ್ತಮ, ಕೆಮ್ಮು, ಮೂತ್ರಸಂಬಂಧಿ ರೋಗ, ಬಾವು, ವ್ರಣಗಳು ಮುಂತಾದವುಗಳಿಗೆ ಇದನ್ನು ಬಳಸುವುದಿದೆ. ಮೊಳೆರೋಗ, ವಿಸರ್ಪಿ (ಎರಿಸಿಪೆಲಾಸ್) ಮತ್ತು ಉದರದ ಹಲವು ಬೇನೆಗಳಿಗೆ ಸೊಪ್ಪಿನ ಬೆಚ್ಚಾರ ಹಾಕುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ Mant. Pl.: 73 (1767)
- ↑ "Portulaca quadrifida L." Plants of the World Online. Board of Trustees of the Royal Botanic Gardens, Kew. 2017. Retrieved 9 November 2020.
