ಗೋಕರ್ಣನಾಥೇಶ್ವರ ದೇವಾಲಯ
![]() | ಈ ಲೇಖನ ಯಾವುದೇ ವಿಕಿಪೀಡಿಯ ಲೇಖನಕ್ಕೆ ಕೊಂಡಿಗಳನ್ನು (Interwiki links) ಹೊಂದಿಲ್ಲ. (ಡಿಸೆಂಬರ್ ೨೦೧೫) |
ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯ ಮಂಗಳೂರಿನಲ್ಲಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಂತೆಯೇ ವಿಜೃಂಭಣೆಯಿಂದ ದಸರಾ ನಡೆಯುವ ಮತ್ತೊಂದು ಕ್ಷೇತ್ರ ಕುದ್ರೋಳಿ. ಕಾರಣಿಕ ಕ್ಷೇತ್ರವೆಂದೇ ಖ್ಯಾತವಾದ ಇಲ್ಲಿ ಗೋಕರ್ಣನಾಥೇಶ್ವರನ ಭವ್ಯ ಹಾಗೂ ಸುಂದರ ದೇವಾಲಯವಿದೆ. ಕ್ರಾಂತಿಪುರುಷ ನಾರಾಯಣ ಗುರುಗಳ ಸಮ್ಮುಖದಲ್ಲಿ ಅವರ ಕಲ್ಪನೆಯಂತೆಯೇ ಸ್ಥಾಪನೆಗೊಂಡ ದೇವಾಲಯಗಳ ಪೈಕಿ ಈ ದೇವಾಲಯ ಬಹಳ ಮಹತ್ವವಾದದ್ದು.
ಶತಮಾನಗಳಷ್ಟು ಹಳೆಯದಾದ ಈ ದೇವಾಲಯ ನಿರ್ಮಾಣಕ್ಕೆ ಹತ್ತೂ ಸಮಸ್ತರ ಪೈಕಿ ಕುದ್ರೋಳಿಯ ನಿವಾಸಿ ಜಾರಪ್ಪನವರೂ ಕಾರಣೀಭೂತರು. ಈಗ ದೇವಾಲಯ ಪಡೆದಿರುವ ಭವ್ಯತೆಗೆ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಪರಿಶ್ರಮವೇ ಕಾರಣ. ಇವರೊಂದಿಗೆ ದೇಗುಲದ ಅಭಿವೃದ್ಧಿಗೆ ದುಡಿದವರು ಸೋಮಸುಂದರಂ, ವಿಶ್ವನಾಥ್, ದಾಮೋದರ ಸುವರ್ಣ ಹಾಗೂ 1908ರಲ್ಲಿ ದೇವಾಲಯ ನಿರ್ಮಾಣಕ್ಕೆ ಟೊಂಕಕಟ್ಟಿ ಶ್ರಮಿಸಿದವರಲ್ಲಿ ಒಬ್ಬರಾದ ಕೊರಗಪ್ಪನವರ ಮೊಮ್ಮಗ ಎಚ್.ಎಸ್. ಸಾಯಿರಾಂ. ಸದಾಭಕ್ತರಿಂದ ತುಂಬಿತುಳುಕುವ ಈ ದೇವಾಲಯ ಇತ್ತೀಚೆಗೆ ನಿರ್ಮಾಣವಾದ ಭವ್ಯ ಕಟ್ಟಡ.
ದ್ರಾವಿಡ ಶೈಲಿಯ ಈ ದೇವಾಲಯದ ಮುಭಾಗದಲ್ಲಿ ಭವ್ಯವಾದ ರಾಜಗೋಪುರವಿದೆ. ಎತ್ತರವಾದ ಆನೆಯ ಪ್ರತಿಮೆಗಳು ಭಕ್ತರನ್ನು ಸ್ವಾಗತಿಸುತ್ತವೆ. ವಿಶಾಲವಾದ ಪ್ರಾಕಾರವಿರುವ ದೇವಾಲಯದ ಗೋಪುರಗಳಲ್ಲಿ ಈಶ್ವರ, ಶಿವಗಣಗಳು ಸೇರಿದಂತೆ ದೇವಾನು ದೇವತೆಗಳ ಗಾರೆ ಶಿಲ್ಪಗಳಿವೆ. ಗರ್ಭಗೃಹದಲ್ಲಿ ಗೋಕರ್ಣನಾಥೇಶ್ವರನನ್ನು ಪ್ರತಿಷ್ಠಾಪಿಸಲಾಗಿದೆ. ಶಿರದ ಮೇಲೆ ಗಂಗೆಯ ಧರಿಸಿದ ಶಿವಮುಖವಾಡದಲ್ಲಿ ಗೋಕರ್ಣನಾಥೇಶ್ವರನನ್ನು ನೋಡಲು ಎರಡು ಕಣ್ಣು ಸಾಲದು ಎನಿಸುತ್ತದೆ. ದೇವಾಲಯದ ಪ್ರಾಕಾರದಲ್ಲಿ ಗಣಪತಿ, ಕೃಷ್ಣ ಹಾಗೂ ನಾರಾಯಣ ಗುರುಗಳ ಪ್ರತ್ಯೇಕ ಮಂದಿರಗಳಿವೆ.
ಹೊರ ಆವರಣದಲ್ಲಿ ಶುದ್ಧ ನೀರಿನ ಕೊಳ, ಹಚ್ಚ ಹಸುರಿನ ಉದ್ಯಾನವನ, ಕೈಲಾಸಗಿರಿ, ಮುಗಿಲಿನತ್ತ ಎತ್ತರ ಎತ್ತರ ಚಿಮ್ಮುವ ಕಾರಂಜಿ, ವಾಚನಾಲಯ ಎಲ್ಲವೂ ಇದೆ. ಇಲ್ಲಿ ನವರಾತ್ರಿಯ ವೇಳೆ ನವದುರ್ಗೆಯರನ್ನು ಕೂರಿಸಿ ಮಾಡುವ ಭವ್ಯ ಮೆರವಣಿಗೆ ವಿಶೇಷ ಪೂಜೆಗಳು ಜನಾಕರ್ಷಣೆಯ ಕೇಂದ್ರವಾಗಿವೆ. ಈಗ ಇದು ಮಂಗಳೂರು ದಸರಾ ಎಂದೇ ಖ್ಯಾತಿ ಪಡೆದಿದೆ. ಶಿವರಾತ್ರಿಯ ಸಮಯದಲ್ಲಿ ಕೂಡ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ.

- Dead-end pages from ಡಿಸೆಂಬರ್ ೨೦೧೫
- Articles with invalid date parameter in template
- All dead-end pages
- Articles covered by WikiProject Wikify from ಡಿಸೆಂಬರ್ ೨೦೧೫
- All articles covered by WikiProject Wikify
- ವಿಕಿಪೀಡಿಯ ನಿರ್ವಹಣೆ
- Orphaned articles from ಡಿಸೆಂಬರ್ ೨೦೧೫
- All orphaned articles
- Commons link is locally defined
- ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳು
- ಮಂಗಳೂರು ಪ್ರವಾಸೋದ್ಯಮ ಆಕರ್ಷಣೆಗಳು