ವಿಷಯಕ್ಕೆ ಹೋಗು

ಗೋಂಡಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೋಂಡಾ ಜಿಲ್ಲೆ
ಉತ್ತರ ಪ್ರದೇಶದ ಜಿಲ್ಲೆ
ಗೋಂಡಾ ಜಿಲ್ಲಾ ಜೈಲಿನಲ್ಲಿ ರಾಜೇಂದ್ರನಾಥ್ ಲಹಿರಿಯ ಪ್ರತಿಮೆ
ಗೋಂಡಾ ಜಿಲ್ಲಾ ಜೈಲಿನಲ್ಲಿ ರಾಜೇಂದ್ರನಾಥ್ ಲಹಿರಿಯ ಪ್ರತಿಮೆ
ಉತ್ತರ ಪ್ರದೇಶದಲ್ಲಿ ಗೋಂಡಾ ಜಿಲ್ಲೆಯ ನೆಲೆ
ಉತ್ತರ ಪ್ರದೇಶದಲ್ಲಿ ಗೋಂಡಾ ಜಿಲ್ಲೆಯ ನೆಲೆ
ದೇಶ India
ರಾಜ್ಯಉತ್ತರ ಪ್ರದೇಶ
ವಿಭಾಗದೇವಿಪಾಟನ್
ಪಟ್ಟಣ1620; ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೦". ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೦". (1620)
ಜಿಲ್ಲೆ1856; ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೦". ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೦". (1856)
Founded byರಾಜಾ ಮಾನ್ ಸಿಂಗ್
Named afterಗೋನಾರ್ಡ್
ಪ್ರಧಾನ ಕಾರ್ಯಸ್ಥಳಗೋಂಡಾ
ತಾಲ್ಲೂಕುಗಳು4
ಕರ್ನಲ್‍ಗಂಜ್
ಗೋಂಡಾ
ಮನ್‍ಕಾಪುರ್
ತರಬ್‍ಗಂಜ್
Government
 • ಜಿಲ್ಲಾ ಮ್ಯಾಜಿಸ್ಟ್ರೇಟ್ನೇಹಾ ಶರ್ಮಾ[]
 • ಲೋಕ ಸಭಾ ಕ್ಷೇತ್ರಗಳುಗೋಂಡಾ
 • ವಿಧಾನ ಸಭಾ ಕ್ಷೇತ್ರಗಳು7
ಕರ್ನಲ್‍ಗಂಜ್
ಮನ್‍ಕಾಪುರ್
ಗೋಂಡಾ ಸದರ್
ಗೌರಾ
ಮೆಹ್‍ನೌನ್
ತರಬ್‍ಗಂಜ್
ಕಾಟ್ರಾ ಬಜ಼ಾರ್
Area
 • ಒಟ್ಟು
೪,೦೦೩ km2 (೧೫೪೬ sq mi)
Population
 (2011)
 • ಒಟ್ಟು
೩೪,೩೩,೯೧೯
 • Density೮೬೦/km2 (೨೨೦೦/sq mi)
 • Urban
೨,೨೫,೦೨೯
Demonym(s)ಗೋಂಡ್ವಿ, ಗೋಂಡ್ವಿಯನ್
ಜನಸಂಖ್ಯಾ ಅಂಕಿಅಂಶಗಳು
 • ವಾಸ್ತವಿಕ ಸಾಕ್ಷರತೆ58.71%
 • ಲಿಂಗಾನುಪಾತ921
Time zoneUTC+05:30 (ಐಎಸ್‍ಟಿ)
Area code0-5262
Vehicle registrationUP-43
ಪ್ರಮುಖ ಹೆದ್ದಾರಿಗಳು4 NH27, UPSH 30, UPSH 9, UPSH 1A
ಸರಾಸರಿ ವಾರ್ಷಿಕ ಮಳೆ22.4 ಮಿ.ಮಿ.
Websitegonda.nic.in

ಗೋಂಡಾ ಉತ್ತರಪ್ರದೇಶದ ದೇವಿಪಾಟನ್ ವಿಭಾಗದ ಒಂದು ಜಿಲ್ಲೆ; ಅದರ ಕೇಂದ್ರ. ಹಿಂದೆ ಇದು ಫೈಜ಼ಾಬಾದ್ ವಿಭಾಗಕ್ಕೆ ಸೇರಿತ್ತು. ವಿಸ್ತೀರ್ಣ 1,546 ಚ. ಮೈ.[] ಜನಸಂಖ್ಯೆ 34,33,919 (2011). ಗೋಧ್ರ ಮತ್ತು ರಾಪ್ತಿ ನದಿಗಳು ಈ ಜಿಲ್ಲೆಯ ಮೂಲಕ ಹಾದುಹೋಗುತ್ತವೆ. ಇಲ್ಲಿಯ ಹವೆ ಅನಾರೋಗ್ಯಕರ. ವಾರ್ಷಿಕ ಮಳೆ 44". ವ್ಯವಸಾಯ ಇಲ್ಲಿಯ ಜನರ ಮುಖ್ಯ ಕಸಬು. ಕೆಲವಡೆ ಉರುಟು ಹತ್ತಿ ಬಟ್ಟೆಗಳನ್ನು ನೇಯುತ್ತಾರೆ. ಉತ್ರೌಲಾ ಕುಂಭಗಾರಿಕೆಗೆ ಪ್ರಸಿದ್ಧ. ನೇಪಾಳದೊಂದಿಗೆ ಈ ಜಿಲ್ಲೆ ಸ್ವಲ್ಪ ಮಟ್ಟಿಗೆ ವ್ಯಾಪಾರ ನಡೆಸುತ್ತದೆ. ಹಿಂದೆ ಈ ಜಿಲ್ಲೆ ಕೋಸಲ ರಾಜ್ಯದ ಒಂದು ಭಾಗವಾಗಿತ್ತೆಂದು ಹೇಳಲಾಗಿದೆ. ಅನಂತರ ಇದು ರಜಪೂತರ ಆಳ್ವಿಕೆಗೆ ಒಳಪಟ್ಟಿತ್ತು. 15ನೆಯ ಶತಮಾನದಲ್ಲಿ ಕಲ್ಹಣ ವಂಶದವರು ಪ್ರಬಲರಾದರು. ಬರಬರುತ್ತ ಇವರ ಬಲ ಕುಗ್ಗಿತು. ಮುಸ್ಲಿಮರ ಆಡಳಿತ ಪ್ರಾರಂಭವಾಯಿತು. 1856ರಲ್ಲಿ ಈ ಜಿಲ್ಲೆ ಬ್ರಿಟಿಷರ ಅಧೀನಕ್ಕೆ ಬಂತು.[] 1857ರ ಬಂಡಾಯದಲ್ಲಿ ಗೋಂಡಾ ರಾಜನೂ, ತುಳಸೀಪುರದ ರಾಣಿಯೂ ಬ್ರಿಟಿಷರ ವಿರುದ್ಧ ನಡೆಸಿದ ಪಿತೂರಿ ನಿಷ್ಫಲವಾಯಿತು.

ಗೋಂಡಾ ಪಟ್ಟಣ ಒಂದು ರೈಲ್ವೆ ಜಂಕ್ಷನ್. ಘಾಘ್ರಾ ನದಿಯ ದಂಡೆಯ ಮೇಲಿದೆ. ಅಕ್ಬರನ ಆಳ್ವಿಕೆಯಲ್ಲಿ ಮಾನ್‌ಸಿಂಗ್ ಈ ನಗರವನ್ನು ಕಟ್ಟಿಸಿದನೆಂದು ಪ್ರತೀತಿ. ಇಲ್ಲಿ ಎರಡು ಕೆರೆಗಳಿವೆ. ಪಟ್ಟಣದ ಜನಸಂಖ್ಯೆ 114,046 (2011).[]

ಉಲ್ಲೇಖಗಳು

[ಬದಲಾಯಿಸಿ]
  1. "About Gonda". Government of Uttar Pradesh. Retrieved 19 September 2024.
  2. "District Gonda, Government of Uttar Pradesh | GREEN GONDA CLEAN GONDA | India" (in ಅಮೆರಿಕನ್ ಇಂಗ್ಲಿಷ್). Retrieved 8 March 2021.
  3. Nevill, H.R. (1905). Gonda: A Gazetteer, Being Volume XLIV Of The District Gazetteers Of The United Provinces Of Agra And Oudh. Allahabad: Government Press. pp. 115–6, 149–50, 156–7. Retrieved 19 April 2021.
  4. "Urban Agglomerations/Cities having population 1 lakh and above" (PDF). Provisional Population Totals, Census of India 2011. Retrieved 19 October 2019.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗೋಂಡಾ&oldid=1303102" ಇಂದ ಪಡೆಯಲ್ಪಟ್ಟಿದೆ