ಗೊಲ್ಗೊಥಾ

ವಿಕಿಪೀಡಿಯ ಇಂದ
(ಗೊಲ್ಗೋಥಾ ಇಂದ ಪುನರ್ನಿರ್ದೇಶಿತ)
Jump to navigation Jump to search

"ಗೊಲ್ಗೊಥಾ ಅಥವಾ ಯೇಸುವಿನ ಕಡೆಯ ದಿನಎಂಬುದು ಕನ್ನಡದ ಪ್ರಪ್ರಥಮ "ರಾಷ್ಟ್ರಕವಿ"ಗಳಾದ ಶ್ರೀಯುತ ಮಂಜೇಶ್ವರ ಗೋವಿಂದ ಪೈ ಅವರು ರಚಿಸಿರುವ ಖಂಡಕಾವ್ಯವಾಗಿದೆ. ("ವೈಶಾಖಿ"ಯು ಅವರ ಇನ್ನೊಂದು ಖಂಡಕಾವ್ಯ . ) ಇದನ್ನು ಅವರು ೧೯೩೧ರಲ್ಲಿ ರಚಿಸಿದರು. ಅವರು ಅದರ ಮುನ್ನುಡಿಯಲ್ಲೆಲ್ಲೂ ಅದನ್ನು ಖಂಡಕಾವ್ಯ ಎಂದು ಹೆಸರಿಸಿಲ್ಲ , ಬದಲಾಗಿ ಕವಿತೆ ಎಂದು ಕರೆದಿದ್ದಾರೆ. ನಂತರ ಅವೆರಡನ್ನೂ ಖಂಡಕಾವ್ಯ ಎಂದೇ ಗುರುತಿಸಲಾಗಿದೆ. ಅದನ್ನು ಎಲ್ಲರೂ ಒಪ್ಪಿದ್ದಾರೆ.

ಈ ಕಾವ್ಯದ ವಿಶೇಷತೆಗಳು[ಬದಲಾಯಿಸಿ]

  • ಗೊಲ್ಗೊಥಾವು ಖಂಡಕಾವ್ಯವಾಗಿಯೂ ಕನ್ನಡದ ಮಟ್ಟಿಗೆ ಸಾಂಸ್ಕೃತಿಕವಾಗಿಯೂ ಉಲ್ಲೇಖನೀಯವಾಗಿದೆ. ಇದು ಯೇಸುವಿನ ಪ್ರಸ್ಥಾನದ ಕುರಿತಾದದ್ದು. ಯೇಸುವಿನ ಕೊನೆಯ ದಿನದ ವಿವರಗಳನ್ನು ಈ ಕಾವ್ಯ ಆಧಾರವಾಗಿಟ್ಟುಕೊಂಡಿದೆ. ಯೇಸುವು ದೇವರಮಗನಾಗಿದ್ದರೂ ಮನುಷ್ಯ ಸಹಜ ಬವಣೆಗಳಿಗೊಳಗಾಗಿ ಇಲ್ಲಿ ಜನನಾಯಕನಾಗಿ ಧೀರೋದಾತ್ತತೆ ಮೆರೆಯುತ್ತಾನೆ. ಯೇಸುವಿನ ಕೊನೆಯ ದಿನವು ಅನೇಕ ದಾರುಣ ನಾಟಕೀಯ ಘಟನೆಗಳಿಂದ ಕೂಡಿದೆ.
  • ಕಯ್ಯಾರ ಕಿಞ್ಞಣ್ಣ ರೈ ಅವರು ಹೇಳುವಂತೆ ರುದ್ರರಮಣೀಯತೆಯೊಂದು ಇಡೀ ರಚನೆಯಲ್ಲಿ ಪಸರಿಸಿದೆ.
  • ಕನ್ನಡ ಕಾವ್ಯ ಪರಂಪರೆಗೆ ವಿಧರ್ಮೀಯ ಎಂದು ಹೇಳಬಹುದಾದ ಮೊತ್ತಮೊದಲ ಕಾವ್ಯ ಎಂದು ಹೇಳಬಹುದಾಗಿದೆ.
  • ಗೊಲ್ಗೊಥಾವು ಯೇಸುವನ್ನು ಶಿಲುಬೆಗೇರಿಸಿದ ಸ್ಥಳದ ಹೆಸರಾಗಿದೆ.
  • ಗೊಲ್ಗೊಥಾವು ಬೈಬಲ್ನ ಕಥೆಯನ್ನು ಆಧರಿಸಿದ್ದರೂ ಧಾರ್ಮಿಕ ಕಾವ್ಯವಲ್ಲ ; ಆದರೆ ಲೌಕಿಕ ಕಾವ್ಯವೇ ಆಗಿದೆ. ಇದರಲ್ಲಿ ನಾವು ಕಾಣುವುದು ಮರ್ತ್ಯದ ತುಮುಲಗಳನ್ನು.. ದೈವಿಕತೆಯು ಈ ಕಾವ್ಯದ ಉದ್ದೇಶವಲ್ಲ; ಉತ್ತಮ ಮಾನವರಾಗಿ ಬಾಳುವುದು ಹೇಗೆ ಎಂಬುದನ್ನು ಪರೋಕ್ಷವಾಗಿ ಸೂಚಿಸುತ್ತದೆ ಅಲ್ಲದೆ . ಕ್ರಿಸ್ತಮತದ ಉಪದೇಶ ಮಾಡುವುದಿಲ್ಲ.
  • ಬೈಬಲ್ ನ ಪ್ರಕಾರ ಶಿಲುಬೆಗೇರಿಸಿದ ನಂತರ ಅವನ ಕಳೇಬರವನ್ನು ಕೆಳಗಿಳಿಸಿ ಗೋರಿಯಲ್ಲಿ ಇರಿಸಲಾಗುತ್ತದೆ. ಪೈಯವರ ಗೊಲ್ಗೊಥಾ ಕಾವ್ಯದಲ್ಲಿ ಕಳೇಬರವು ಶಿಲುಬೆಯಲ್ಲೇ ಇರುತ್ತದೆ. ಇದು ತಾವು ಬಳಸಿಕೊಂಡ ಕವಿಸಮಯ ಎಂದು ಅವರೇ ಹೇಳಿದ್ದಾರೆ.
  • ಇಲ್ಲಿ ಹಳೆಗನ್ನಡ , ನಡುಗನ್ನಡ ,ಹೊಸಗನ್ನಡಗಳು ಸಹಸಜವಾಗಿ ಬೆರೆತಿವೆ.
  • ಇಲ್ಲಿ ಕನ್ನಡಪರಂಪರೆಯ ವಿವಿಧ ಕಾವ್ಯಧ್ವನಿಗಳು ಅನುರಣಿಸುತ್ತವೆ.
  • ಈ ಕಾವ್ಯವನ್ನು ಅರ್ಥ ಮಾಡಿಕೊಳ್ಳಲು ಅಗತ್ಯವಾದ ಟಿಪ್ಪಣಿಗಳನ್ನು ಕವಿಯೇ ಕೊಟ್ಟಿದ್ದಾರೆ.

ಪೈಯವರು ಕನ್ನಡವನ್ನು ನೋಡುವ ದೃಷ್ಟಿ ಸಂಕುಚಿತವಾಗಿರಲಿಲ್ಲ , ವಿಶಾಲವಾಗಿತ್ತು. ಕನ್ನಡಕ್ಕೆ ಎಲ್ಲವೂ ಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು.