ಗೊಮ್ಮಟ ಸ್ತುತಿ

ವಿಕಿಪೀಡಿಯ ಇಂದ
Jump to navigation Jump to search

ಗೊಮ್ಮಟ ಸ್ತುತಿ ಎಂದು ಕರೆಯಲಾಗುವ ಒಂದು ಶಾಸನ ಶ್ರವಣಬೆಳಗೊಳದಲ್ಲಿದೆ. ಬೊಪ್ಪಣ ಪಂಡಿತ ಎಂಬಾತ ಈ ಶಾಸನದ ಕರ್ತೃ. ಇದರ ಕಾಲ ಕ್ರಿ.ಶ. ಸುಮಾರು ೭೦೦. ಇದನ್ನು ಮೊದಲಿಗೆ ಓದಿದವರು ಬಿ.ಎಲ್.ರೈಸ್. ನಂದಿಸೇನ ಮುನಿಯು ಇಹಲೋಕದ ಸುಖ ವೈಭವಗಳು ಚಂಚಲ ಎಂಬುದನ್ನು ಮನಗಂಡು ವೈರಾಗ್ಯದಿಂದ ಸಂನ್ಯಾಸ ಹಿಡಿದು ದೇವಲೋಕವನ್ನು ಸೇರಿದನು ಎಂದು ಶಾಸನ ತಿಳಿಸುತ್ತದೆ. ಶಾಸನದ ಸಾಲುಗಳು ಹೀಗಿವೆ: "ಸುರಚಾಪಂಬೋಲೆ ವಿದ್ಯುಲ್ಲತೆಗಳ ತೆರವೋಲ್ ಮಂಜುವೋಲ್ ತೋರಿ ಬೇಗಂ ಪಿರಿಗುಂ ಶ್ರೀರೂಪ ಲೀಲಾಧನವಿಭವಮಹಾರಾಶಿಗಳ್ ನಿಲ್ಲಮಾರ್ಗಂ ಪರಮಾರ್ಥಂ ಮೆಚ್ಚೆನಾನೀ ಧರನಿಯುಳಿರವಾನೆಂದು ಸಂನ್ಯಾಸನಂಗೆ ಯ್ದುರುಸತ್ವನ್ ನಂದಿಸೇನ ಪ್ರವರಮುನಿವರನ್ ದೇವಲೋಕಕ್ಕೆ ಸಂದಾನ್ ||." ಕನ್ನಡ ಶಬ್ದಗಳಿಗಿಂತ ಸಂಸ್ಕೃತ ಶಬ್ದಗಳೇ ಹೆಚ್ಚಾಗಿವೆ. ಉದ್ದವಾದ ಸಮಾಸ ಪದಗಳೂ ಕಾಣುತ್ತವೆ. ಪೂರ್ವದ ಹಳಗನ್ನಡದ ಕೆಲವು ರೂಪಗಳನ್ನು ಕಾಣಬಹುದು. ಉದಾ: ಸಂದಾನ್, ಧರಣಿಯುಳ್. ಇವು ತಮಿಳು ಭಾಷೆಯ ಪದಗಳ ರೂಪವನ್ನು ಹೋಲುತ್ತಿರುವುದನ್ನು ಗಮನಿಸಬಹುದು.