ಗೇರಾ
ಗೇರಾ ಜರ್ಮನಿಯ ರಾಜ್ಯವಾದ ಥುರಿಂಗಿಯಾದ ಒಂದು ನಗರ. ಹಿಂದೆ, ಇದು ಜರ್ಮನ್ ಪ್ರಜಾಸತ್ತಾತ್ಮಕ ಗಣರಾಜ್ಯದ (ಪೂರ್ವ ಜರ್ಮನಿ) ಒಂದು ನಗರವಾಗಿತ್ತು. ಅರ್ಬನ್ ಡಿಸ್ಟ್ರಿಕ್ಟ್ಸ್‌ನ ಆಡಳಿತ ಕೇಂದ್ರ. ಜನಸಂಖ್ಯೆ 93,634 (2022). ಇದು ಕಾರ್ಲ್- ಮಾರ್ಕ್ಸ್- ಸ್ಟಾಟ್‌ನಿಂದ 43 ಮೈ. ಪಶ್ಚಿಮಕ್ಕೆ, ವೈಸೆ ಎಲ್‍ಸ್ಟರ್ ನದಿಯ ದಡದ ಮೇಲಿದೆ. ಇದೊಂದು ರೈಲ್ವೆ ಜಂಕ್ಷನ್. ಬಟ್ಟೆ, ಲೋಹ ಪದಾರ್ಥ, ಯಂತ್ರ, ಕೊಬ್ಬು, ಎಣ್ಣೆ, ಅಣಿಕಟ್ಟು ಇಲ್ಲಿಯ ಉತ್ಪನ್ನಗಳು. ನಗರದ ಬಳಿಯಲ್ಲಿ ಯುರೇನಿಯಂ ಗಣಿಗಳಿವೆ.
ಇತಿಹಾಸ
[ಬದಲಾಯಿಸಿ]ಗೇರಾದ ಹೆಸರು ಪ್ರಪ್ರಥಮವಾಗಿ ಚರಿತ್ರೆಯಲ್ಲಿ ಉಲ್ಲೇಖವಾಗಿರುವುದು 995ರಲ್ಲಿ. 13ನೆಯ ಶತಮಾನದಲ್ಲಿ ಇದು ಪೌರಸಭಾ ನಗರವಾಯಿತು. 1550ರಲ್ಲಿ ಮೈಸ್ಸೆನ್ ಪಾಳೆಯಪಟ್ಟಿನ ಅಧೀನಕ್ಕೆ ಬಂತು. ಮೂವತ್ತು ವರ್ಷಗಳ ಯುದ್ಧದ ಒಂದು ಫಲವೆಂದರೆ 1639ರಲ್ಲಿ ಸ್ವೀಡರಿಂದ ಗೇರಾ ನಗರಕ್ಕೆ ಆದ ಅಗ್ನಿಪ್ರಯೋಗ. 1686ರಲ್ಲೂ, 1780ರಲ್ಲೂ ಈ ನಗರದ ಬಹುಭಾಗ ಬೆಂಕಿಯಿಂದ ನಷ್ಟವಾಯಿತು. ಆದರೂ ಮತ್ತೆಮತ್ತೆ ಅದು ನಿರ್ಮಾಣಗೊಂಡಿತು. ಗೇರಾ ನಗರದಲ್ಲಿ 16ನೆಯ ಶತಮಾನದ ಪುರಭವನವೂ, 17ನೆಯ ಶತಮಾನದ ಟ್ರಿನಿಟಿ ಚರ್ಚೂ ಇವೆ. ಎರಡನೇ ವಿಶ್ವಯುದ್ಧದ ವೇಳೆ, ಗೇರಾದ ಮೇಲೆ ಅಮೇರಿಕದಿಂದ ಬಾಂಬ್ ದಾಳಿಯಾಗಿ ಅನೇಕ ಕಟ್ಟಡಗಳು ನಾಶವಾದವು. ಇವುಗಳನ್ನು ಯುದ್ಧದ ನಂತರ ಮರುನಿರ್ಮಿಸಲಾಗಲಿಲ್ಲ. ಹಾಗಾಗಿ ಗೇರಾದಲ್ಲಿರುವ ಹೆಚ್ಚುಕಡಿಮೆ ಅರ್ಧದಷ್ಟು ಕಟ್ಟಡಗಳು ಎರಡನೇ ವಿಶ್ವಯುದ್ಧಕ್ಕಿಂತ ಹಿಂದಿನವು.[೧]
ಉಲ್ಲೇಖಗಳು
[ಬದಲಾಯಿಸಿ]
ಹೊರಗಿನ ಕೊಂಡಿಗಳು
[ಬದಲಾಯಿಸಿ]- Official website of Gera
- . Encyclopædia Britannica. Vol. X (9th ed.). 1879. p. 438.

- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- All articles with bare URLs for citations
- Articles with bare URLs for citations from August 2024
- Articles with invalid date parameter in template
- Wikipedia articles incorporating a citation from EB9
- ಜರ್ಮನಿಯ ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳು
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ