ಗೂಗಲ್ ಜೆಮಿನಿ
ಗೂಗಲ್ ಜೆಮಿನಿ ಎನ್ನುವುದು ಗೂಗಲ್ ಸಂಸ್ಥೆ ಅಭಿವೃದ್ಧಿಪಡಿಸಿದ ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಬಾಟ್ ಆಗಿದೆ. ಇದು ಸಹ ಚಾಟ್ ಜಿಪಿಟಿಯಂತೆ, ಮನುಷ್ಯರ ಪ್ರಶ್ನೆಗಳನ್ನು ಅರ್ಥಮಾಡಿಕೊಂಡು ಉತ್ತರ ನೀಡುವ ಸಾಮರ್ಥ್ಯ ಹೊಂದಿದೆ. ಹಿಂದೆ ಈ ಸೇವೆಯನ್ನು ಗೂಗಲ್ ಬಾರ್ಡ್ ಎಂದು ಕರೆಯಲಾಗುತ್ತಿತ್ತು. ನಂತರ ೨೦೨೪ರಲ್ಲಿ ಅದನ್ನು ಗೂಗಲ್ ಜೆಮಿನಿ ಎಂದು ಹೆಸರು ಬದಲಾಯಿಸಲಾಯಿತು.
ಜೂನ್ ೨೦೨೫ ರಿಂದ ಲೋಗೋ | |
| ಅಭಿವೃದ್ಧಿಪಡಿಸಿದವರು | ಗೂಗಲ್ ಗೂಗಲ್ ದೀಪ್ ಮೈಂಡ್ |
|---|---|
| ಮೊದಲು ಬಿಡುಗಡೆ | ಮಾರ್ಚ್ 21, 2023 (ಬಾರ್ಡ್) ಫೆಬ್ರವರಿ 8, 2024 (ಜೆಮಿನಿ) |
| ಅಧೀಕೃತ ಜಾಲತಾಣ | gemini |
ಜೆಮಿನಿಯನ್ನು ಮೊದಲು ಡಿಸೆಂಬರ್ ೬, ೨೦೨೩ ರಂದು ಘೋಷಿಸಲಾಯಿತು. ಫೆಬ್ರವರಿ ೨೦೨೪ ರಲ್ಲಿ, ಬಾರ್ಡ್ ಚಾಟ್‌ಬಾಟ್ ಅನ್ನು ಜೆಮಿನಿ ಎಂದು ಮರುನಾಮಕರಣ ಮಾಡಲಾಯಿತು. ಜೆಮಿನಿ ಬಿಡುಗಡೆಯು ತಾಂತ್ರಿಕ ಪ್ರಶಂಸೆ ಮತ್ತು ಸಾರ್ವಜನಿಕ ವಿವಾದವನ್ನು ಸೃಷ್ಟಿಸಿತು.
೨೦೨೪ ರ ಆರಂಭದಲ್ಲಿ, ಬಳಕೆದಾರರು ಮಾನವನ ಚಿತ್ರಣಗಳಲ್ಲಿ ಐತಿಹಾಸಿಕ ತಪ್ಪುಗಳು ಮತ್ತು ಪಕ್ಷಪಾತವನ್ನು ವರದಿ ಮಾಡಿದ ನಂತರ, ಜನರ ಚಿತ್ರಗಳನ್ನು ರಚಿಸುವ ಮಾದರಿಯ ಸಾಮರ್ಥ್ಯವನ್ನು ಗೂಗಲ್ ಸ್ಥಗಿತಗೊಳಿಸಿತು. ೨೦೨೫ ರಲ್ಲಿ ಜೆಮಿನಿ ೧.೫ ಮತ್ತು ೧.೫ ಪ್ಲೇಶ್ ಮೊಡೆಲ್ ಗಳು ಬಿಡುಗಡೆಯಾದವು.[೧]
ಇತಿಹಾಸ
[ಬದಲಾಯಿಸಿ]ಬಾರ್ಡ್ ಬಿಡುಗಡೆ (ಮಾರ್ಚ್ ೨೦೨೩)
[ಬದಲಾಯಿಸಿ]ಚಾಟ್‌ಜಿಪಿಟಿಯ ಯಶಸ್ಸಿನ ನಂತರ ಗೂಗಲ್ ತನ್ನ ಬಾರ್ಡ್ ಎನ್ನುವ ಚಾಟ್‌ಬಾಟ್ ಅನ್ನು ಪರಿಚಯಿಸಿತು.
ಜೆಮಿನಿಗೆ ಬದಲಾವಣೆ (ಡಿಸೆಂಬರ್ ೨೦೨೩)
[ಬದಲಾಯಿಸಿ]ಗೂಗಲ್ ತನ್ನ ದೀಪ್ ಮೈಂಡ್ ಮತ್ತು ಗೂಗಲ್ ಬ್ರೈಂನ್ ಸಂಶೋಧನಾ ತಂಡಗಳನ್ನು ಒಗ್ಗೂಡಿಸಿ ಜೆಮಿನಿ ೧.೦ ಮಾದರಿಯನ್ನು ಬಿಡುಗಡೆ ಮಾಡಿತು.[೨]
ಹೆಸರು ಬದಲಾವಣೆ (ಫೆಬ್ರವರಿ ೨೦೨೪)
[ಬದಲಾಯಿಸಿ]ಗೂಗಲ್ ಅಧಿಕೃತವಾಗಿ 'ಬಾರ್ಡ್' ಹೆಸರನ್ನು ಕೈಬಿಟ್ಟು ಚಾಠ್ ಬೋಟ್ ಅನ್ನು ಜೆಮಿನಿ ಎಂದು ಮರುನಾಮಕರಣ ಮಾಡಿತು.
ನಿರಂತರ ಅಭಿವೃದ್ಧಿ (೨೦೨೪ – ಪ್ರಸ್ತುತ)
[ಬದಲಾಯಿಸಿ]ಗೂಗಲ್ ತನ್ನ ಮಾಡೆಲ್ ಗಳನ್ನು ಮತ್ತಷ್ಟು ಸುಧಾರಿಸಿ, ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಗೂಗಲ್ ವರ್ಕ್‌ಸ್ಪೇಸ್‌ನಲ್ಲಿ ಹೆಚ್ಚು ಉಪಯುಕ್ತವಾಗುವಂತೆ ಮಾಡಿದೆ. ಜೆಮಿನಿಯು ಪೋಸ್ಟರ್, ವೀಡಿಯೊ, ಕೊಡಿಂಗ್, ಪಠ್ಯ ವಿಶ್ಲೇಷಣೆ ಮಾಡುವ ಸಾಮರ್ಥ್ಯ ಹೊಂದಿದೆ. .[೩]
ಉಲ್ಲೇಖಗಳು
[ಬದಲಾಯಿಸಿ]- ↑ "Gemini 1.5 Pro updates, 1.5 Flash debut and 2 new Gemma models". Google. May 14, 2024. Archived from the original on May 14, 2024. Retrieved May 15, 2024.
- ↑ "Introducing Gemini 1.5, Google's next-generation AI model". Google. February 15, 2024. Archived from the original on February 18, 2024. Retrieved February 15, 2024.
- ↑ "Gemini 2.5: Our newest Gemini model with thinking". Google. March 25, 2025. Archived from the original on July 26, 2025. Retrieved March 25, 2025.