ಗುರುಪುರ (ಮಂಗಳೂರು), ದಕ್ಷಿಣ ಕನ್ನಡ
Lua error in package.lua at line 80: module 'Module:Yesno' not found.Expression error: Unexpected < operator.Lua error in package.lua at line 80: module 'Module:Yesno' not found.
ಗುರುಪುರವು ಫಾಲ್ಗುಣಿ ಅಥವಾ ಗುರುಪುರ ನದಿಯಲ್ಲಿರುವ ಒಂದು ಸಣ್ಣ ಪಟ್ಟಣ.[೧] ಇದು ಕರ್ನಾಟಕ ರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ ಪಶ್ಚಿಮಕ್ಕೆ ಸುಮಾರು ೩೪೫ ಕಿಲೋಮೀಟರ್ (೨೧೪ ಮೈಲು) ಮತ್ತು ಕರ್ನಾಟಕದ ಮುಖ್ಯ ಬಂದರು ನಗರವಾದ ಮಂಗಳೂರಿನಿಂದ ಪೂರ್ವ ದಿಕ್ಕಿಗೆ ಸುಮಾರು ೧೩ ಕಿಲೋಮೀಟರ್ (೮ ಮೈಲು) ದೂರದಲ್ಲಿದೆ.[೨]
ಅಲ್ಲಿನ ನಿವಾಸಿಗಳು ವಿವಿಧ ಸಾಂಸ್ಕೃತಿಕ ಹಿನ್ನೆಲೆಯುಳ್ಳವರು. ಅದರಲ್ಲಿ ಬಿಲ್ಲವ, ಬಂಟ್ಸ್, ಗೌಡ, ಮತ್ತು ಸರಸತ್ವ ಬ್ರಾಹ್ಮಣರು ಸೇರಿದ್ದಾರೆ. ಸಾಮಾನ್ಯ ಸಂವಹನಕ್ಕಾಗಿ ತುಳು ಪ್ರಾಥಮಿಕ ಭಾಷೆಯಾಗಿದೆ. ಆದರೆ ಕೊಂಕಣಿ, ಬ್ಯಾರಿ ಮತ್ತು ಕನ್ನಡ ಭಾಷೆ ಗಳಲ್ಲೂ ಜನರು ಮಾತನಾಡುತ್ತಾರೆ.[೩]
ಇತಿಹಾಸ
[ಬದಲಾಯಿಸಿ]ಸ್ಥಳೀಯ ದೇವಾಲಯಗಳ ದಾಖಲೆಗಳ ಪ್ರಕಾರ, ಗುರುಪುರ ಪಟ್ಟಣವನ್ನು ಹಿಂದೆ ಗುಲಿಪುರ ಎಂದು ಕರೆಯುತ್ತಿದ್ದರು. ಫಾಲ್ಗುಣಿ ನದಿಯ ದಡದಲ್ಲಿ ನೆಲೆಗೊಂಡಿರುವ ಗುಲಿಪುರ ವಾಣಿಜ್ಯ ಪಟ್ಟಣವಾಗಿದ್ದು, ನದಿಯ ಇತರ ಭಾಗಗಳಿಗೆ ಅದರ ಸಂಪರ್ಕ ಹೊಂದಿದೆ.[೪] ಬಂಡಸಾಲೆ ಎಂಬುದು ಅಲ್ಲಿನ ಒಂದು ಸ್ಥಳ [೫], ಅಲ್ಲಿನ ಸಿಗುವ ಸರುಕುಗಳನ್ನು ಸಂಗ್ರಹಿಸಿ ಅನೇಕ ಸ್ಥಳಗಳಿಗೆ ವಿತರಿಸಲಾಗುತ್ತದೆ. ಕುಡಿಯುವ ನೀರಿನ ಸರಬರಾಜು ಗಾಗಿ ನಿರ್ಮಿಸಲಾದ ಅಣೆಕಟ್ಟಿನಂತಹ ರಚನೆಯುಳ್ಳ 'ಬಾಂಗ್ಲಾ ಗುಡ್ಡೆ' ಯನ್ನು ಗುರುಪುರದಲ್ಲಿ ಟಿಪ್ಪು ಸುಲ್ತಾನ್ ರವರು ನಿರ್ಮಿಸಿದ್ದಾರೆ.[೬] [೭]
ಹತ್ತಿರದ ಸ್ಥಳಗಳು
[ಬದಲಾಯಿಸಿ]ಗುರುಪುರವು ಮಂಗಳೂರು ನಗರದಿಂದ - ೧೨ ಕಿ.ಮಿ(೭.೫ ಮೈಲು).[೮][೯] ; ಕೈಕಂಬದಿಂದ - ೦೫ ಕಿ.ಮೀ. (೩.೧ ಮೈಲು).[೧೦]; ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕರ್ನಾಟಕದಿಂದ - ೨೮ ಕಿ.ಮೀ(೧೭ ಮೈಲು).[೧೧]; ಸುರತ್ಕಲ್ ನಿಂದ - ೨೯ ಕಿ.ಮೀ(೧೮ ಮೈಲು).[೧೨]; ಫಾಲ್ಗುಣಿ ನದಿತಿಂದ - ೦೦ ಕಿ.ಮೀ(೦ ಮೈಲು); ಉಡುಪಿಯಿಂದ - ೬೬ ಕಿ.ಮೀ(೪೧ ಮೈಲು).[೧೩] ದೂರದಲ್ಲಿದೆ.
ಧಾರ್ಮಿಕ ತಾಣಗಳು
[ಬದಲಾಯಿಸಿ]ಗುರುಪುರವು ಧಾರ್ಮಿಕ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ ಮತ್ತು ಈ ಪಟ್ಟಣದ ನಂತರ ಫಾಲ್ಗುಣಿ ನದಿಯನ್ನು ಗುರುಪುರ ಎಂದು ಹೆಸರಿಸಲಾಗಿದೆ. ಇದು ವಾಮಂಜೂರು ಮತ್ತು ಕಾಳಿಕಾಂಬ ಸ್ಥಳಕ್ಕೂ ಹತ್ತಿರದಲ್ಲಿದೆ.[೧೪] ದಕ್ಷಿಣ ಕನ್ನಡ ಜಿಲ್ಲೆಯ ತ್ವರಿತ ನಗರೀಕರಣದೊಂದಿಗೆ ಈ ಗ್ರಾಮವು ಒಂದು ಸಣ್ಣ ಪಟ್ಟಣವಾಗಿ ಮಾರ್ಪಟ್ಟಿದೆ. ಹಿಂದೂ ದೇವತೆಗಳಾದ ವರದ್ರಾಜ, ವೆಂಕಟರಮಣ ಮತ್ತು ಶ್ರೀ ಸತ್ಯದೇವತೆ ಧರ್ಮದೇವತೆ[೧೫] ಯ ದೇವಾಲಯಗಳು ಇಲ್ಲಿ ಕಂಡುಬರುತ್ತವೆ.[೧೬] ಹಬ್ಬಗಳು ವರ್ಷದ ಬಹುಪಾಲು ಇಲ್ಲಿ ನಡೆಯುತ್ತವೆ, ಆದರೆ ಮುಖ್ಯ ಹಬ್ಬವು ಸಾಮಾನ್ಯವಾಗಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯುತ್ತದೆ. ಭಾರತೀಯ ಕ್ಯಾಲೆಂಡರ್ ತಿಂಗಳಲ್ಲಿ ಗುರುಪುರ ತೆರು[೧೭], ಓಕುಲ್, ಒಡು ತೆರು ಎಂದು ಹೆಸರಿಸಲಾಗುತ್ತದೆ. ಶ್ರೀ ಸತ್ಯದೇವತಾ ಧರ್ಮದೇವತಾ ದೇವಸ್ಥಾನದ ಸ್ವಲ್ಪ ದೂರದಲ್ಲಿ ದೊಡ್ಡ ಮಸೀದಿ ಇದೆ.
ಉಲ್ಲೇಖಗಳು
[ಬದಲಾಯಿಸಿ]- ↑ "₹ 37.84 crore for newbridge at Gurupura". The Hindu.
- ↑ "Indian express". Archived from the original on 2022-07-17. Retrieved 2019-06-20.
- ↑ http://www.onefivenine.com/india/villages/Dakshin-Kannad/Mangalore/Gurupura Explore India
- ↑
- ↑ ಬಂಡಸಲೆ
- ↑ Megamedia news
- ↑ ಟಿಪ್ಪು ಸುಲ್ತಾನ್ ರವರು ನಿರ್ಮಿಸಿದ ಬಾಂಗ್ಲಾ ಗುಡ್ಡೆ
- ↑ ಗುರುಪುರ
- ↑ ಮಂಗಳೂರಿನಿಂದ ಗುರುಪುರಕ್ಕೆ
- ↑ ಗುರುಪುರದಿಂದ ಕೈಕಂಬಕ್ಕಿರುವ ಅಂತರ
- ↑ ಎನ್ಐಟಿಕೆ ಯಿಂದ ಗುರುಪುರಕ್ಕಿರುವ ಅಂತರ
- ↑ ಗುರುಪುರದಿಂದ ಸುರತ್ಕಲ್ ಗೆ ಇರುವ ಅಂತರ
- ↑ ಉಡುಪಿಯಿಂದ ಗುರುಪುರಕ್ಕಿರುವ ಅಂತರ
- ↑ ಗುರುಪುರ ಮತ್ತು ವಾಮಂಜೂರಿಗೆ ಇರುವ ಅಂತರ
- ↑ ಶ್ರೀ ಸತ್ಯದೇವತೆ ಮಂದಿರ
- ↑ "ಗುರುಪುರದಲ್ಲಿನ ದೇವಾಲಯ". Archived from the original on 2021-12-24. Retrieved 2019-06-20.
- ↑ ಗುರುಪುರ ತೆರು