ಗುರುದ್ವಾರ
ಗೋಚರ

ಗುರುದ್ವಾರ ಎನ್ನುವುದು ಸಿಕ್ಖರ ಉಪಾಸನ ಮಂದಿರಗಳನ್ನು ಈ ಹೆಸರಿನಿಂದ ಕರೆಯುತ್ತಾರೆ. ಗುರುದ್ವಾರಗಳಲ್ಲಿ ಮುಖ್ಯವಾದುವು ಅಮೃತಸರ, ಕಪೂರ್ಥಲಾ, ಆನಂದಪುರ, ನಾಂದೇಡಗಳಲ್ಲಿವೆ. ಇವುಗಳಲ್ಲಿ ಸಿಕ್ಖರ ಪವಿತ್ರ ಗ್ರಂಥವಾದ ಗ್ರಂಥ್ ಸಾಹೇಬ್ ಪ್ರತಿಯನ್ನು ಇಟ್ಟಿರುತ್ತಾರೆ. ದೇವಸ್ಥಾನಗಳಲ್ಲಿ ಉತ್ಸವ ವಿಗ್ರಹದ ಮೆರವಣಿಗೆಯನ್ನು ನಡೆಸುವಂತೆ ಗುರುದ್ವಾರಗಳಲ್ಲಿ ಈ ಗ್ರಂಥವನ್ನು ತುಂಬ ವಿಜೃಂಭಣೆಯಿಂದ ಪ್ರತಿನಿತ್ಯವೂ ಮೆರವಣಿಗೆ ನಡೆಸುತ್ತಾರೆ. ಸಿಕ್ಖರಿಗೆ ಅವರ ಪವಿತ್ರ ಗ್ರಂಥವೇ ದೇವಸಾಕ್ಷಾತ್ಕಾರದ ಪ್ರಮುಖ ಮಾರ್ಗ. ಅಮೃತಸರದಲ್ಲಿರುವ ಅತ್ಯಂತ ಪ್ರಖ್ಯಾತವಾದ ಸುವರ್ಣ ಮಂದಿರದಲ್ಲಿ ಸಿಖ್ ಪೂಜಾರಿಯೊಬ್ಬ ಈ ಗ್ರಂಥದ ಬಳಿ ಕುಳಿತು ಅದರ ಮೇಲೆ ಧೂಳು ಅಥವಾ ಕ್ರಿಮಿಕೀಟಗಳು ಎರಗದಂತೆ ಚಾಮರ ಹಾಕುತ್ತಿರುತ್ತಾನೆ.
ಎಲ್ಲ ಗುರುದ್ವಾರಗಳಲ್ಲಿ ಒಂದು ಲಂಗರ್ ಹಜಾರವಿರುತ್ತದೆ. ಇಲ್ಲಿ ಜನರು ಉಚಿತವಾಗಿ ಸಸ್ಯಾಹಾರಿ ಊಟವನ್ನು ಮಾಡಬಹುದು. ಗುರುದ್ವಾರದಲ್ಲಿನ ಸ್ವಯಂಸೇವಕರು ಊಟವನ್ನು ಬಡಿಸುತ್ತಾರೆ.[೧]
ಉಲ್ಲೇಖಗಳು
[ಬದಲಾಯಿಸಿ]- ↑ "The Gurdwara". BBC.co.uk. BBC. Archived from the original on 11 November 2017. Retrieved 18 March 2013.
ಹೊರಗಿನ ಕೊಂಡಿಗಳು
[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: