ಗುಣಗ ಜಾತಿ
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |
ಗುನಗಾ /ಗುಣಗಾ ಜಾತಿ (ಸಮಾಜ)
ಗುಣಗಾ ಅಥವಾ ಗುನಗಾ ಜಾತಿಯನ್ನು ಜಗತ್ತಿನಲ್ಲಿಯೇ, ವಿಶಿಷ್ಟ ಜಾತಿಯೆಂದು ಹೇಳಬಹುದು. ಯಾಕೆಂದರೆ ಜಾತಿ ಎಂಬುದು ಆಯಾ ಜಾತಿಯ ಜನರು ಮಾಡುವ ಆಯಾ ಕಸುಬಿನಿಂದ ನಿರ್ಧಾರವಾಗುವಂತದ್ದು . ಸಾಮಾನ್ಯವಾಗಿ ಪ್ರತಿಯೊಂದು ಜಾತಿಗೂ, ಒಂದೊಂದೇ ಕಸುಬು ಇರುತ್ತದೆಯೇ ಹೊರತು, ಎರಡಲ್ಲ. ಆದರೆ, ಗುಣಗಾ /ಗುನಗಾ ಜಾತಿಯ ವಿಷಯಕ್ಕೆ ಬಂದರೆ, ಜಾತಿ ಒಂದು, ಕಸುಬು (ವೃತ್ತಿ) ಎರಡು. ಒಂದು ಪುರೋಹಿತರು ಮಾಡುವಂತಹ, ದೇವಸ್ಥಾನಗಳಲ್ಲಿ ದೇವರ ಪೂಜೆ ಮಾಡುವ ಕಸುಬು ಅಂದರೆ ಅರ್ಚಕ ಕೆಲಸ. ಮತ್ತೊಂದು ಕುಂಬಾರಿಕೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಇರುವ ಈ ಗುಣಗಾ ಅಥವಾ ಗುನಗಾ ಅಡ್ಡ ಹೆಸರಿನ ಜನರಲ್ಲಿ, ಮೂರು ಗುಂಪು . ಒಂದುಅತ್ಯಂತ ಸಣ್ಣಗುಂಪು. ಜೈನ ಗುಣಗರು ಈ ಗುಂಪು ಕುಮಟಾ ತಾಲೂಕಿನ ಹೆಗಡೆ ಗ್ರಾಮದಲ್ಲಿ ಮಾತ್ರ ಸೀವಿತವಾಗಿದ್ದು, ಕೆಲವೇ ಕುಟುಂಬಗಳಿದ್ದು ಬೆರಳೆಣಿಕೆಯಷ್ಟಿದ್ದಾರೆ. ಇವರು ಗುಣಗಾ ಅಡ್ಡ ಹೆಸರನ್ನು ಹೊಂದಿ, ದೇವಸ್ಥಾನಗಳಲ್ಲಿ ಅರ್ಚಕ ಕೆಲಸಮಾಡಿಕೊಂಡಿದ್ದು ಇದ್ದು ಸಂಪೂರ್ಣ ಸಸ್ಯಹಾರಿಗಳಾಗಿದ್ದು, ಜೈನ ಮತದೊಟ್ಟಿಗೆ ಗುರುತಿಸಿಕೊಂಡಿದ್ದಾರೆ.
ಇನ್ನೊಂದು ಗುಣಗಾ ಗುಂಪು ಗುನಗಾ ಜಾತಿಯವರಿಗೆ ಸೇರಿದ್ದು. ಜೈನ ಮೂಲದ ಇವರು ಉಳಿದೆರಡು ಗುಂಪುಗಳಿಗೆ ಹೋಲಿಸಿದರೆ ಜನಸಂಖ್ಯೆಯಲ್ಲಿ ಈ ಗುಂಪಿನವರು ಹೆಚ್ಚಿದ್ದು, ಉತ್ತರ ಕನ್ನಡದ ಕರಾವಳಿ ತಾಲ್ಲೂಕುಗಳಾದ ಕುಮಟಾ, ಹೊನ್ನಾವರ, ಅಂಕೋಲಾ ಮತ್ತು ಕಾರವಾರ ತಾಲೂಕುಗಳವರೆಗೆ ವ್ಯಾಪಿಸಿದ್ದು, ದೇವಸ್ಥಾನಗಳಲ್ಲಿ ಅರ್ಚಕ ವೃತ್ತಿಯ ಜೊತೆಗೆ ಕುಂಬಾರಿಕೆ ವೃತ್ತಿಯನ್ನೂ ಮಾಡುತ್ತಾರೆ. ಇವರು ಮಿಶ್ರಾಹಾರಿಗಳಾಗಿದ್ದು ಹಿಂದು (ಜೀವನ ವಿಧಾನ) ಧರ್ಮದೊಂದಿಗೆ ಗುರುತಿಸಿಕೊಂಡಿದ್ದು ಇದ್ದು ಗುಣಗಾ /ಗುನಗಾ ಜಾತಿಗೆ ಸೇರಿದವರಾಗಿದ್ದಾರೆ. ಜೈನ ಮೂಲದ ಇವರು ಇತಿಹಾಸದ ಒತ್ತಡಕ್ಕೆ ಸಿಲುಕಿ ತಮ್ಮ ಆಚಾರ, ವಿಚಾರ ಮತ್ತು ಆಹಾರದಲ್ಲಿ ಬಹಳ ಮಟ್ಟಿಗೆ ಸ್ಥಳೀಯ ಸಂಸ್ಕೃತಿಗೆ ಒಗ್ಗಿ ಹೋಗಿದ್ದಾರೆ. ಸಾಮಾನ್ಯವಾಗಿ ಗುಣಗ ಜಾತಿಯವರ ಎಲ್ಲರ ಅಡ್ಡ ಹೆಸರು ಗುಣಗಾ ಇದ್ದು, ಎಲ್ಲರೂ ಮೂಲದಲ್ಲಿ ಗುಣಗರಾಗಿದ್ದವರೇ (ಅರ್ಚಕತನ) ಆಗಿರುತ್ತಾರೆ. ಇವರು ಉತ್ತರ ಕನ್ನಡದ ಕರಾವಳಿಯ ತಾಲೂಕುಗಳ ಸುಮಾರು ಐವತ್ತಕ್ಕೂ ಹೆಚ್ಚು ಹಳ್ಳಿಗಳಲ್ಲಿ ಗ್ರಾಮ ದೇವರುಗಳ ಅಫೀಷಿಯಲ್ ಅರ್ಚಕರು. ಇವರು ಪೂಜಿಸುವ ದೇವ ದೇವತೆಗಳು ರೂಪಾಂತರಿತ ಜೈನ ದೇವರುಗಳು. ಇವರು ಅರ್ಚಕತನದ ಜೊತೆಗೆ, ದೇವರುಗಳಿಗೆ ಬೇಕಾಗುವ ಮಣ್ಣಿನ ವಿಗ್ರಹ, ಪಣತೆ, ಕುಂಭ, ಕಲಶ ಇತ್ಯಾದಿ ಮಾಡುವ ಉಪಕಸುಬನ್ನು ಹೊಂದಿ ಕಲಾಕಾರರಾಗಿ ಹೊರಹೊಮ್ಮಿದ್ದಾರೆ .
ದೇವರೊಂದಿಗೆ ಭಕ್ತರನ್ನು ನೇರವಾಗಿ ಸಂಪರ್ಕಿಸುವ ಈ ಗುನಗರ ಪೂಜಾ ಶೈಲಿಯು ವಿಭಿನ್ನವಾಗಿದೆ. ಇವರು ಪೂಜಿಸುವ ದೇವಾಲಯಗಳು ಜಾತಿ ಮತ್ತು ಮತಗಳ ಭೇದವಿಲ್ಲದೆ ಎಲ್ಲಾ ಜನರಿಂದ ಆರಾಧಿಸಲ್ಪಡುತ್ತವೆ. ಪುರೋಹಿತಶಾಹಿ ವೃತ್ತಿಯು ಈ ಗುನಗರಿಗೆ ವ್ಯವಸ್ಥಿತವಾಗಿ ಪರಂಪರೆಯಿಂದ ಬಂದಿದ್ದು, ಇದಕ್ಕಾಗಿಯೇ ಅವರಿಗೆ ಜಮೀನು, ಜಾಗ ನೀಡಲಾಗಿದೆ. ಗುನಗ ಹಿರಿಯರು ತಮ್ಮದೇ ಆದ ಪರಂಪರಾಗತ ಪೂಜಾ ವಿಧಾನಗಳಿಂದ ಜನಮಾನಸವನ್ನು ಗೆದ್ದು ಅರ್ಚಕ ವೃತ್ತಿಗೆ ತಮ್ಮದೇ ಛಾಪು ಒತ್ತಿ ಹೋಗಿದ್ದಾರೆ. ಅರ್ಚಕರುಗಳು ಮಡಿ ಬಟ್ಟೆಯುಟ್ಟು, ಹಣೆಗೆ ತಿಲಕವಿಟ್ಟು , ಗುನಗರದ್ದೇ ಸ್ಟೈಲಿನಲ್ಲಿ ದೇವಸ್ಥಾನಕ್ಕೆ ಬಂದು ತಮ್ಮ ಪರಂಪರಾಗತ ಪೂರ್ವಜರಿಂದ ಬಳುವಳಿಯಾಗಿ ಬಂದ ಅವೈದಿಕ ಪದ್ದತಿಯಲ್ಲಿ ದೇವರ ಪೂಜೆಗೆ ಕೂತಾಗ ನೋಡಬೇಕಿತ್ತು ಅವರ ಕಳೆ. ಲೋಕ ಸಂಚಾರದಲ್ಲಿದ್ದ ದೇವರೇ ವಾಪಸ್ಸು ಬಂದು ತನ್ನ ಸ್ವಸ್ಠಾನದಲ್ಲಿ ರರಾಜಿಸುತ್ತಿದ್ದನೆಂದು ಪ್ರತೀತಿಯಿದೆ.ಉತ್ತರ ಕನ್ನಡದ ಸಾಂಸ್ಕೃತಿಕ ಹಬ್ಬ ’ಬಂಡಿಹಬ್ಬ”ದಲ್ಲಿ ಗುಣಗ ರದ್ದೇ ಪ್ರಧಾನ ಪಾತ್ರ. ಸರ್ವಾಲಂಕೃತ ದೇವಿ ಕಳಶ ಹೊರುವದೇನು! ಬಾರ ಬರುವದೇನು!ಭಕ್ತರಿಗೆ ಅಪ್ಪಣೆ ಕೊಡುವದೇನು! ,ಕಟ್ಟಿಗೆದಾರ-ಚೋಮದಾರರ ನಡುವೆ ಜನಜಂಗುಳಿಯಲ್ಲಿ ದಾಪುಕಾಲು ಹಾಕುತ್ತಾ ಸಾಗುವದೇನು! ಆ ಸಮಯದಲ್ಲಿ ಈ ಗುಣಗರನ್ನು ನೋಡಿದರೆ, ಯಾರಿಗಾದರೂ , ಇವರು ಧರೆಗಿಳಿದ ಸಾಕ್ಷಾತ್ ಅವಧೂತರೇ ಇವರಿರಬೇಕು ಅನ್ನಿಸದಿರದು ಇತಿಹಾಸದಲ್ಲಿ ದಾಖಲಾದ ಈ ಗುನಗರುಗಳು ಹಾಕಿದ ಶಾಪಗಳು ತೊಂಬಾ ರೋಚಕವಾಗಿದ್ದು , “ ಹೀಗೂ ಉಂಟೇ” ಎಂದು ಯೋಚಿಸಬೇಕಾಗುತ್ತದೆ.
ಸ್ಪಷ್ಟೀಕರಣ: ಉತ್ತರ ಕನ್ನಡದ ಕರಾವಳಿಯಲ್ಲಿ ಸುಮಾರು ಕ್ರಿ.ಶ. 1200 ರಿಂದ 1600 ರ ನಡುವೆ ಅಂದರೆ ಸುಮಾರು 400 ಕ್ಕೂ ಹೆಚ್ಚು ವರ್ಷ ಜೈನ ಸಂಸ್ಕೃತಿ ನೆಲೆಯೂರಿತ್ತು. ಗೇರುಸೊಪ್ಪೆಯ ಮಹಾಮಂಡಲೇಶ್ವರಿ ಜೈನ ರಾಣಿ ಚೆನ್ನಭೈರಾದೇವಿಯ (ಕ್ರಿ.ಶ. 1554-1603) ಪತನದ ನಂತರ ಉತ್ತರ ಕನ್ನಡದ ಕರಾವಳಿಯಲ್ಲಿ ಜೈನ ಧರ್ಮದ ಮೇಲೆ ಅಪಾರ ಒತ್ತಡ ಉಂಟಾಯಿತು. ಜೈನ ಧರ್ಮದ ಮೇಲಿನ ಈ ಒತ್ತಡದಿಂದಾಗಿ, ಪುರೋಹಿತ ಸ್ಥಾನದಲ್ಲಿದ್ದ ಗುಣಧಾರಿ ಗುಣ(ನ)ಗರ ಸಂಸ್ಕೃತಿ ಮತ್ತು ಸಂಪ್ರದಾಯಗಳು ವೈದಿಕತೆಯ ಮೇಲಾಟದಿಂದ ಬಹಳಷ್ಟು ಬದಲಾದುದ್ದು ಇತಿಹಾಸ ಸತ್ಯ
ಇನ್ನು ಮೂರನೇ ಗುಣಗರ ಗುಂಪು. ಇವರ ಅಡ್ಡ ಹೆಸರು (ಉಪನಾಮ) ಮಾತ್ರ ಗುಣಗಾ. ಆದರೆ ಜಾತಿಯಲ್ಲಿ ಬೇರೆ, ಬೇರೆ ಜಾತಿಗೆ ಸೇರಿದ್ದಾರೆ. ಇವರಿಗೆ ಪೂಜೆ ವ್ಯವಸ್ಥಿತವಾಗಿ ಬಂದಿಲ್ಲ . ಅರ್ಚಕತನ ಮಾಡುವ ಮನೆತನ ಮಾತ್ರ ಸಾಮಾನ್ಯವಾಗಿ ಗುಣಗಾ ಅಡ್ಡ ಹೆಸರನ್ನು ಇಟ್ಟುಕೊಂಡಿರುತ್ತಾರೆ. ಅದೂ ಇತ್ತಿತ್ತಲಾಗಿ ಮತ್ತು ಸಾಮಾನ್ಯವಾಗಿ ಇವರ ದೇವರುಗಳು, ದೇವಸ್ಥಾನ ಅವರ ಸಮಾಜಕ್ಕೆ ಇಲ್ಲಾ ಅವರ ಕುಟುಂಬಕ್ಕೆ ಸೇರಿದೆ ಇಲ್ಲಾ ಗುಣಗಾ ಜಾತಿಯವರಿಂದ ಕಾರಣಾಂತರಗಳಿಂದ ಕೈ ತಪ್ಪಿದ ದೇವಸ್ಥಾನಗಳು ಇವರಿಗೆ ಹೋಗಿವೆ. ಇವರು ಪೂಜಿಸುವ ದೇವರುಗಳು ಸಾಮಾನ್ಯವಾಗಿ ಜನಪದರ ದೇವರುಗಳೇ ಜಾಸ್ತಿ.
ಸರ್ಕಾರ ಗುಣಗಾ ಜಾತಿಯ ಸಾಮಾಜಿಕ ವಸ್ತು ಸ್ಥಿತಿ ಇತ್ಯಾದಿ ಪರಿಶೀಲಿಸಿ ಅಂತಿಮವಾಗಿ ಕುಂಬಾರ ಜಾತಿಯಲ್ಲಿ ಸೇರಿ ಹೋಗಿದ್ದ ಈ ಗುನಗರಿಗೆ ಅವರ ಜೈನ್ ಮೂಲ ಮತ್ತು ಅವರ ಮುಖ್ಯ ವೃತ್ತಿ ಅರ್ಚಕತನ, ಉಪ ಕಸಬು ಕುಂಬಾರಿಕೆಯನ್ನು ಗಮನದಲ್ಲಿ ಇಟ್ಟು ಕೊಂಡು, ಅದಕ್ಕೆ ಸಮಾನಾರ್ಥಕವಾದ ಪ್ರತೇಕ ಗುಣಗಾ ಜಾತಿ ಸೃಷ್ಟಿಸಿ ಅಧಿಸೂಚನೆಯನ್ನು ಹೊರಡಿಸಿತು ( ಸಪ್ಟೆಂಬರ್ ೧೭, ೧೯೯೪). ಅಂದಿನಿಂದ ಈ ಗುಣಗರಿಗೆ ಜಾತಿ ಕಾಲಂ ಅಡಿಯಲ್ಲಿ ಗುಣಗಾ ಎಂದು ನಮೂದಿಸಲು ಕಾನೂನಾತ್ಮಕವಾಗಿ ಅನುವಾಯಿತು. ಮೇಲಾಗಿ ಮೀಸಲಾತಿಗೆ ಏನೂ ತೊಂದರೆ ಅಗದಂತೆ ನೋಢಿಕೊಂಡಿತು.
ಇಷ್ಟೆಲ್ಲಾ ಬೆಳವಣಿಗೆಯ ನಂತರವೂ ಮೂಲತಹ ಉತ್ತರ ಕನ್ನಡದ ಕರಾವಳಿಯ ತಾಲೂಕುಗಳಲ್ಲಿ ಕಂಡುಬರುವ ಅರ್ಚಕತನ ಮತ್ತು ಕುಂಬಾರಿಕೆಯ ಹಿನ್ನಲೆ ಇರುವ ಈ ಗುಣಗರು ಜಾತಿ ಕಾಲಂನಲ್ಲಿ ಕುಂಬಾರ ಎಂದು ಬರೆದುಕೊಂಡರೆ ತಾಂತ್ರಿಕ ತಪ್ಪಾಗುತ್ತದೆ. ಸರ್ಕಾರದ ಈ ಅಧಿಸೂಚನೆಯ ನಂತರ ಬಹುಸಂಖ್ಯಾತ ಗುಣಗರು ತಮ್ಮನ್ನು ಗುಣಗಾ ಜಾತಿಯಲ್ಲಿ ಗುರುತಿಸಿಕೊಂಡಿದ್ದು ಇದ್ದು, ಇವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗತ್ತಿದೆ. ಅದುದರಿಂದ ಯಾವುದೇ ತಲೆಬುಡ ತಿಳಿಯದೇ ಹೊನ್ನಾವರದ ಹಳದಿಪುರದಿಂದ ಕಾರವಾರದವರೆಗೆ ಮಾತ್ರ ಕಂಡು ಬರುವ ಈ ವಿಶಿಷ್ಟ ಜಾತಿಗೆ ಸೇರಿದ ಗುಣಗರನ್ನು ಸರಿಯಾಗಿ ಅರ್ಥೈಸದೇ ಅನವಶ್ಯಕವಾಗಿ ಅಥವಾ ಅಸೂಯೆಯಿಂದ ಕುಂಬಾರ ಎಂದು ಟ್ಯಾಗ್ ಮಾಡುವುದು ಕಾನೂನಾತ್ಮಕವಾಗಿ, ತಾಂತ್ರಿಕವಾಗಿ ಮತ್ತು ನೈತಿಕವಾಗಿ ತಪ್ಪಾಗುತ್ತದೆ.
ಸಂಕ್ಷಿಪ್ತದಲ್ಲಿ ಎಲ್ಲರಿಗೂ ಅರ್ಥವಾಗವಂತೆ ಹೇಳಬೇಕೆಂದರೆ ಕುಂಬಾರ ಮತ್ತು ಗುಣಗಾ ಜಾತಿಗಳು ಬಯೋಲಜಿ ಮತ್ತು ಬಯೋಕೆಮಿಸ್ಟ್ರಿ ಸಬ್ಜಕ್ಟ್ಸಗಳಿದ್ದಂತೆ. ಬಯೋಲಜಿ ಎರಡರಲ್ಲೂ ಇದ್ದರೂ ಬಯೋಲಜಿ ಮತ್ತು ಬಯೋಕೆಮಿಸ್ಟ್ರಿ ಬೇರೆ ಬೇರೆ ಸಬ್ಜಕ್ಟ್ಸಗಳು. ಎರಡಕ್ಕೂ ಅವುಗಳದೇ ಅದ ಬೇರೆ ಬೇರೆ ದಾರಿಗಳಿವೆ, ಉಧ್ಯೊಗಾವಕಾಶಗಳಿವೆ. ಅವುಗಳಿಗೆ ಅವುಗಳದ್ದೇ ಆದ ಐಡೆಂಟಿಟಿ ಇದೆ. ಸಾಮ್ಯತೆ ಇದೆ.ಒಂದು ಕಾಲದಲ್ಲಿ ಜೈನರಾಗಿದ್ದು, ಗುಣಧಾರಿ (ಪುರೋಹಿತ ಅಥವಾ ಇಂದ್ರು) ಸ್ಥಾನದಲ್ಲಿದ್ದು, ಕಾಲಚಕ್ರಕ್ಕೆ, ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಜೀವನ ವಿಧಾನದ(ಹಿಂದು) ಭಾಗವಾಗಿ, ಗುಣಧಾರಿ ಉಪನಾಮವೇ ಗುಣಗಾ ಆಗಿ ಅಪಬ್ರಂಶವಾಗಿ ಮತ್ತೆ ಗುನಗಾ ಆಗಿ, ಉಪಕಸಬಿನ ಕಾರಣ ಕುಂಬಾರರಾಗಿ ಗುರುತಿಸಿಕೊಂಡು ನಂತರ ಈಗ ಗುಣಗಾ ಜಾತಿಗೆ ಸೇರಿರುವ ಇವರ ಇತಿಹಾಸ ನಿಜಕ್ಕೂ ಇತಿಹಾಸದ ಪುಟಗಳಲ್ಲಿ ಕಾಪಿಡುವಂತದ್ದು.