ವಿಷಯಕ್ಕೆ ಹೋಗು

ಗಿರಿ ಕಂಚುಬೆನ್ನಿನ ಹಾವು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡೆಂಡ್ರೆಲಾಫಿಸ್ ಗಿರಿ
ವೈಜ್ಞಾನಿಕ ವರ್ಗೀಕರಣ Edit this classification
Unrecognized taxon (fix): ಡೆಂಡ್ರೆಲಾಫಿಸ್
Species:
ಡ. ಗಿರಿ
ದ್ವಿನಾಮ ಪದ್ಧತಿ
ಡೆಂಡ್ರೆಲಾಫಿಸ್ ಗಿರಿ

ಡೆಂಡ್ರೆಲಾಫಿಸ್ ಗಿರಿ, ಗಿರಿಯವರ ಬ್ರಾಂಜ್‌ಬ್ಯಾಕ್ ಮರಹಾವು ಹಗಲಿನಲ್ಲಿ ಸಕ್ರಿಯವಾಗಿರುವ ಹಾವು. ಇದು ಮರಗಳ ಮೇಲೆ ವಾಸಿಸುತ್ತದೆ ಮತ್ತು ಕೊಲುಬ್ರಿಡೆ ಕುಟುಂಬಕ್ಕೆ ಸೇರಿದೆ. ಈ ಹಾವು ಭಾರತದ ನೈಋತ್ಯ ಭಾಗದಲ್ಲಿರುವ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡುಬರುತ್ತದೆ.


ವಿವರಣೆ

[ಬದಲಾಯಿಸಿ]

ಈ ಡೆಂಡ್ರೆಲಾಫಿಸ್ಹಾ ವನ್ನು ಗುರುತಿಸಲು ಕೆಲವು ವಿಶೇಷ ದೇಹದ ಲಕ್ಷಣಗಳಿವೆ:

ತಲೆಯ ಎರಡೂ ಬದಿಗಳಲ್ಲಿ 2 ಲೋರಿಯಲ್ ಚಿಪ್ಪುಗಳು ಇರುತ್ತವೆ. ದೇಹದ ಮಧ್ಯಭಾಗದಲ್ಲಿ 15 ಸಾಲುಗಳ ಬೆನ್ನಿನ ಚಿಪ್ಪುಗಳು ಇರುತ್ತವೆ. ಬೆನ್ನಿನ ಮಧ್ಯದ ಚಿಪ್ಪುಗಳು ಸ್ವಲ್ಪ ದೊಡ್ಡದಾಗಿರುತ್ತವೆ. ಹೊಟ್ಟೆಯ ಚಿಪ್ಪುಗಳು 166–173 ಇರುತ್ತವೆ. ಬಾಲದ ಕೆಳಭಾಗದ ಚಿಪ್ಪುಗಳು 140–147 ಇರುತ್ತವೆ. ಮೇಲಿನ ತುಟಿಯ ಚಿಪ್ಪುಗಳು 8–9 ಇರುತ್ತವೆ; ಅವುಗಳಲ್ಲಿ 2 ಚಿಪ್ಪುಗಳು ಕಣ್ಣನ್ನು ತಾಗುತ್ತವೆ. ಕಣ್ಣಿನ ಹಿಂದಿನ ಭಾಗದಲ್ಲಿ 6–8 ಚಿಕ್ಕ ಚಿಪ್ಪುಗಳು ಇರುತ್ತವೆ. ಕೆಳಗಿನ ತುಟಿಯ ಬಳಿ ಇರುವ ಒಂದು ಉದ್ದವಾದ ಚಿಪ್ಪು 2–5 ಕೆಳತುಟಿ ಚಿಪ್ಪುಗಳನ್ನು ತಾಗುತ್ತದೆ. ಗಂಟಲಿನ ಭಾಗದಲ್ಲಿ 1–3 ಸಾಲುಗಳ ಚಿಪ್ಪುಗಳು ಇರುತ್ತವೆ. ಬಾಲದ ಆರಂಭದಲ್ಲಿರುವ ಗುದದ ಚಿಪ್ಪು ಎರಡು ಭಾಗಗಳಾಗಿ ವಿಭಜಿತವಾಗಿರುತ್ತದೆ. ಬಾಲವು ದೇಹದ ಒಟ್ಟು ಉದ್ದದ ಸುಮಾರು 36–37% ಇರುತ್ತದೆ. ಕಣ್ಣಿನ ಹಿಂದಿನಿಂದ ಒಂದು ಕಪ್ಪು ಪಟ್ಟೆ ಇರುತ್ತದೆ. ಅದು ತಲೆಯ ಹಿಂದಿನ ಭಾಗದ ನಾಲ್ಕನೇ ಒಂದು ಭಾಗಕ್ಕಿಂತ ಕಡಿಮೆ ಪ್ರದೇಶವನ್ನು ಆವರಿಸುತ್ತದೆ ಮತ್ತು ಕುತ್ತಿಗೆಯವರೆಗೆ ಬಹಳ ಕಡಿಮೆ ಮಾತ್ರ ಹೋಗುತ್ತದೆ. ದೇಹದ ಕೆಳಭಾಗದ ಬದಿಯಲ್ಲಿ ಕಾಣುವ ತಿಳಿ ಬಣ್ಣದ ಗೆರೆ ಇರುವುದಿಲ್ಲ ಅಥವಾ ಬಹಳ ಮಸುಕಾಗಿರುತ್ತದೆ.

ಪದ ವ್ಯುತ್ಪತ್ತಿ

[ಬದಲಾಯಿಸಿ]

ಈ ಹಾವಿಗೆ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ (BNHS) ಸರೀಸೃಪಗಳ ಸಂಗ್ರಹದ ಸಂರಕ್ಷಕರಾಗಿದ್ದ ವರದ್ ಗಿರಿ ಅವರ ಹೆಸರನ್ನು ಇಡಲಾಗಿದೆ.

ಅವರು ತಮ್ಮ ಸಂಶೋಧನೆಯ ಮೂಲಕ ಭಾರತದ ಸರೀಸೃಪಗಳ ಬಗ್ಗೆ ಹೆಚ್ಚಿನ ಜ್ಞಾನವನ್ನು ನೀಡಿದರು. ಅಲ್ಲದೆ, BNHSನಲ್ಲಿದ್ದ ಸರೀಸೃಪಗಳ ಸಂಗ್ರಹವನ್ನು ವಿವಿಧ ಸಂಶೋಧಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಿದರು.

ಉಲ್ಲೇಖ

[ಬದಲಾಯಿಸಿ]
  1. ↑ Srinivasulu, C.; Srinivasulu, B. (2013). "Dendrelaphis girii". IUCN Red List of Threatened Species. 2013 e.T42492034A42492040. doi:10.2305/IUCN.UK.2013-1.RLTS.T42492034A42492040.en. Retrieved 20 ನವೆಂಬರ್ 2021.