ಗಿರಿರಾಜ ಕೋಳಿ
| Country of origin | India |
|---|---|
| Use | Dual: eggs & meat |
| Traits | |
| Weight |
|
| Classification | |
ಗಿರಿರಾಜ ಕೋಳಿಯು ಭಾರತದ ಬೆಂಗಳೂರಿನಲ್ಲಿರುವ ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿದ ಕೋಳಿಯ ತಳಿಯಾಗಿದೆ. ಇದನ್ನು ನಾಟಿ(ದೇಶಿ) ಪಕ್ಷಿಗಳನ್ನು ಹೋಲುವ ಅಪೇಕ್ಷಿತ ಗುಣಲಕ್ಷಣಗಳನ್ನು ಹೊಂದುವಂತೆ ವಿದೇಶಿ ತಳಿಯ ಸಂಕರದ ಮೂಲಕ ಅಭಿವೃದ್ಧಿಪಡಿಸಲಾಗಿದೆ. [೧]
ಗುಣಲಕ್ಷಣಗಳು
[ಬದಲಾಯಿಸಿ]ಗಿರಿರಾಜ ಕೋಳಿ ತಳಿಯು ಎರಡು(ಮೊಟ್ಟೆ ಹಾಗೂ ಮಾಂಸ) ಉದ್ದೇಶದ ಕೋಳಿಯಾಗಿದೆ. ೬ ತಿಂಗಳ ವಯಸ್ಸಿನ ಕೋಳಿಗಳು ಸರಾಸರಿ ೩ ಕೆಜಿ ಮತ್ತು ಹುಂಜಗಳು ೪ ಕೆಜಿ ತೂಕವಿರುತ್ತವೆ ಮತ್ತು ಮೊಟ್ಟೆ ಉತ್ಪಾದನೆಯು ವರ್ಷಕ್ಕೆ ೧೮೦-೧೯೦ ಆಗಿದ್ದು, ಮೊಟ್ಟೆಯ ಸರಾಸರಿ ತೂಕ ೫೨-೫೫ ಗ್ರಾಂ.[ಸಾಕ್ಷ್ಯಾಧಾರ ಬೇಕಾಗಿದೆ][ ಉಲ್ಲೇಖದ ಅಗತ್ಯವಿದೆ ] ಮೊಟ್ಟೆಗಳು ಉತ್ತಮ ಮೊಟ್ಟೆಯೊಡೆಯುವ ಸಾಮರ್ಥ್ಯವನ್ನು ಹೊಂದಿವೆ (ಶೇಕಡಾ ೮೦–೮೫), ಮತ್ತು ರೈತರು ತಮ್ಮದೇ ಕೋಳಿಗಳನ್ನು ಬೆಳೆಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಮೊಟ್ಟೆಯ ಚಿಪ್ಪು ಕಂದು ಬಣ್ಣದಲ್ಲಿರುತ್ತದೆ ಮತ್ತು ಇತರ ವಾಣಿಜ್ಯ ಮೊಟ್ಟೆಗಳಿಗಿಂತ ದಪ್ಪವಾಗಿರುತ್ತದೆ, ಹಾಗಾಗಿ ಒಡೆಯುವುದನ್ನು ತಡೆಯುತ್ತದೆ. ಒಂದು ದಿನ ವಯಸ್ಸಿನ ಮರಿ ೪೨–೪೫ ಗ್ರಾಂ ತೂಗುತ್ತದೆ. ಸ್ಥಳೀಯ ಪ್ರಭೇದಗಳಿಗೆ ಹೋಲಿಸಿದರೆ ಈ ಪಕ್ಷಿಗಳು ಉತ್ತಮ ಬೆಳವಣಿಗೆಯನ್ನು ಹೊಂದುತ್ತವೆ. ಇವು ಫಾರಂ ಮತ್ತು ಮನೆ ಹಿತ್ತಲಿನಲ್ಲೇ ಬೆಳೆಸಲೂ ಸೂಕ್ತವಾಗಿವೆ.[ಸಾಕ್ಷ್ಯಾಧಾರ ಬೇಕಾಗಿದೆ]
ಮನೆಯಲ್ಲಿ ಸಾಕುವಾಗ ಸಾಮಾನ್ಯವಾಗಿ ಐದು ಕೋಳಿಗಳು ಮತ್ತು ಒಂದು ಹುಂಜದ ಹಿಂಡನ್ನು ಬೆಳೆಸುತ್ತಾರೆ. ಅವುಗಳನ್ನು ಬೆಳೆಸಲು ಯಾವುದೇ ವಿಶೇಷ ಕಾಳಜಿ ಅಗತ್ಯವಿರುವುದಿಲ್ಲ. ಅವುಗಳನ್ನು ಸ್ವತಂತ್ರವಾಗಿ ಓಡಾಡಲು ಬಿಟ್ಟು ಸಾಕಬಹುದು ಮತ್ತು ಸ್ಥಳೀಯವಾಗಿ ಲಭ್ಯವಿರುವ ಆಹಾರವನ್ನು ನೀಡಬಹುದು. ಮಣ್ಣನ್ನು ಕೆದರಿ ಮತ್ತು ಹುಡುಕಿ ತಿನ್ನುವುದರಿಂದ ಅವು ವಿವಿಧ ಕೀಟಗಳು ಮತ್ತು ಹಸಿರು ಎಲೆಗಳನ್ನು ತಿನ್ನುತ್ತವೆ. ಅವುಗಳಿಗೆ ಕೃಷಿ ಮತ್ತು ಅಡುಗೆ ತ್ಯಾಜ್ಯವನ್ನೂ ತಿನ್ನಿಸಬಹುದು. ಈ ಪಕ್ಷಿಗಳು ಅನೇಕ ರೋಗಗಳಿಗೆ ನಿರೋಧಕವಾಗಿರುತ್ತವೆ, ಇದಕ್ಕೆ ಅಪವಾದವೆಂದರೆ ರಾನಿಖೇತ್ ಕಾಯಿಲೆ (ಇದನ್ನು ನ್ಯೂಕ್ಯಾಸಲ್ ಕಾಯಿಲೆ ಎಂದೂ ಕರೆಯುತ್ತಾರೆ). [೨]
ಉಲ್ಲೇಖಗಳು
[ಬದಲಾಯಿಸಿ]- ↑ "Growing demand for Giriraja chicken breed". The Hindu (in Indian English). 2014-12-06. ISSN 0971-751X. Retrieved 2025-04-28.
- ↑ Chitra (2021). "Socio-Economic Upliftment of Rural Women through Backyard Poultry Rearing by using Giriraja Birds" (PDF). Biotica Research Today. 3 (7): 563–565.