ಗಾಳಿಬೋರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಬೆಂಗಳೂರಿನಿಂದ 110 ಕಿಮೀ ಹಾಗೂ ಸಂಗಮದಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿರುವ ಗಾಳಿಬೋರ್, ತನ್ನ ಚಿತ್ರಸದೃಶ ದೃಷ್ಯಗಳಿಂದ ಕರ್ನಾಟಕದಲ್ಲಿರುವ ಜನಪ್ರಿಯ ರಮಣೀಯ ತಾಣಗಳಲ್ಲಿ ಒಂದಾಗಿದೆ. ಇದು ಅರ್ಕಾವತಿ ಮತ್ತು ಕಾವೇರಿ ನದಿಗಳ ಸಂಗಮ ಸ್ಥಳವಾಗಿದ್ದು, ಕಾವೇರಿ ವನ್ಯಮೃಗ ಅಭಯಾರಣ್ಯದ ಎಲೆಯುದುರುವ ಕಾಡುಗಳ ಮಧ್ಯೆ ನೆಲೆಸಿರುವ, ಒಂದು ನಿರ್ಜನ ಪ್ರದೇಶವಾಗಿದೆ.

ಕಾವೇರಿ ನದಿಯ ತಟದಲ್ಲಿರುವ ಗಾಳಿಬೋರ್ ಒಂದು ಪ್ರಸಿದ್ಧ ಮೀನುಗಾರಿಕಾ ಮತ್ತು ಪ್ರಾಕೃತಿಕ ಶಿಬಿರವಾಗಿದ್ದು, ಸಮೃದ್ಧವಾಗಿ ಮರಗಳಿಂದ ಸುತ್ತುವರೆಯಲ್ಪಟ್ಟಿದೆ. ಈ ಶಿಬಿರದ ಹಿಂದಿರುವ ಗಾಳಿಬೋರ್ ಎಂಬ ಬೆಟ್ಟದ ಹೆಸರನ್ನೇ ಇಲ್ಲಿರುವ ಪ್ರದೇಶಕ್ಕೆ ಇಡಲಾಗಿದೆ. ಬೆಟ್ಟಗಳಿಂದ ಸುತ್ತುವರೆಯಲ್ಪಟ್ಟ ಗಾಳಿಬೋರ್ ಶಿಬಿರವು ಸಸ್ಯರಾಶಿಯಿಂದಲೂ ಕಾವೇರಿಯ ಪ್ರಶಾಂತ ನೋಟದಿಂದಲೂ ಕೂಡಿದೆ.


ಪ್ರವಾಸಿಗರು ಆಗಿಂದಾಗ್ಗೆ ಗಾಳಿಬೋರ್ ಗೆ ಭೇಟಿ ನೀಡುವದೇಕೆ?[ಬದಲಾಯಿಸಿ]

ಇದು ಪ್ರಾಕೃತಿಕ ಚೈತನ್ಯದಿಂದ ಕೂಡಿದ ಚಿತ್ರಸದೃಶ ರಜಾ ತಾಣವಾಗಿದ್ದು ಇದು ಗಾಳ ಹಾಕಿ ಮೀನು ಹಿಡಿಯಲು ಪ್ರಸಿದ್ದವಾದ ತಾಣವಾಗಿದೆ. ಆದರೆ ಸಾಮಾನ್ಯವಾಗಿ ಇಲ್ಲಿಗೆ ವೃತ್ತಿಪರ ಮೀನುಗಾರರು ಹೆಚ್ಚಾಗಿ ಭೇಟಿ ನೀಡುವರು. ಗಾಳಿಬೋರ್ ನಲ್ಲಿ ಮೀನುಹಿಡಿಯುವ ಪ್ರವಾಸಿಗರು ಮೀನನ್ನು ಹಿಡಿದು ಮತ್ತೆ ಬಿಡುವ ಫಿಶಿಂಗ್ ನೀತಿಯನ್ನು ಅನುಸರಿಸುತ್ತಿದ್ದು, ಈ ವೇಳೆ ಕ್ಯಾಮರಾ ಚಿತ್ರೀಕ್ರಣವನ್ನೂ ಮಾಡಿಕೊಳ್ಳಬಹುದು.

ಗಾಳಹಾಕಿ ಮೀನು ಹಿಡಿಯುವವರು ಕಾವೇರಿ ನದಿಯಲ್ಲಿ ಪ್ರಮುಖವಾಗಿ ಕಾಣಸಿಗುವ ಹಾಗೂ ಅಳಿವಿನಂಚಿನಲ್ಲಿರುವ ಮಶೇರ್ ಜಾತಿಯ ಮೀನನ್ನು ಹಿಡಿಯಲು ಬಯಸುತ್ತಾರೆ. ಮಶೇರ್ ಗಳಲ್ಲದೇ ಕಾರ್ಪ್, ಮಾರ್ಜಾಲಮೀನು ಮತ್ತು ಅನೇಕ ಸಣ್ಣಪುಟ್ಟ ಮೀನುಗಳನ್ನೂ ಹಿಡಿಯಲಾಗುತ್ತದೆ. ಮೀನುಗಾರಿಕೆಯಷ್ಟೇ ಅಲ್ಲದೇ ಗಾಳಿಬೋರ್ ನಲ್ಲಿ ವನ್ಯಜೀವಿ ವೀಕ್ಷಣೆ ಹಾಗೂ ಪಕ್ಷಿ ವೀಕ್ಷಣೆಗೂ ಅವಕಾಶವಿದೆ. ಇಲ್ಲಿ ನೀರು ಕಾಗೆ, ಸ್ಪಾಟ್ ಕೊಕ್ಕಿನ ಬಾತುಕೋಳಿಗಳು, ಚಿಕ್ಕ ಪೈಡ್ ಮಿಂಚುಳ್ಳಿಗಳು, ಕಂದು ಹಳದಿಯ ಹದ್ದುಗಳು, ಪೈಡ್ ಜುಟ್ಟುಳ್ಳ ಕೋಗಿಲೆಗಳು, ಕಪ್ಪು ಉದರದ ನದಿ ಟೆರ್ನ್, ಆಸ್ಪ್ರೇಸ್, ಬೂದು ತಲೆಯ ಮೀನುಹಿಡಿಯುವ ಹದ್ದುಗಳು ಮತ್ತು ಜೇನು ಬುಝರ್ಡ್ಗಳನ್ನೊಳಗೊಂಡಂತೆ ಸುಮಾರು 220 ಪಕ್ಷಿ ಜಾತಿಗಳು ವಾಸವಾಗಿರುವವು ಎಂದು ಅಂದಾಜಿಸಲಾಗಿದೆ.

ಈ ಪ್ರದೇಶದಲ್ಲಿ ಕಾಣಸಿಗುವ ಸಸ್ತನಿಗಳೆಂದರೆ, ಚುಕ್ಕೆ ಜಿಂಕೆ, ಆನೆ, ಚಿರತೆಗಳು, ಕಾಡು ಗಂಡು, ನರೆಗೂದಲಿನ ದೈತ್ಯ ಅಳಿಲುಗಳು, ಮಲಬಾರ್ ದೈತ್ಯ ಅಳಿಲುಗಳು, ನರಿಗಳು ಮತ್ತು ಸಾಂಬಾರ್ ಗಳು. ಇವೇ ಅಲ್ಲದೇ ಹಾವುಗಳಾದ ಹೆಬ್ಬಾವು, ಕೋಬ್ರಾಸ್, ರಸೆಲ್ ವೈಪರ್ ಮತ್ತು ಬ್ಯಾಂಡೆಡ್ ಕ್ರೈಟ್ಗಳು ಹಾಗೂ ಜವುಗು ಮೊಸಳೆಗಳು, ಆಮೆಗಳು, ಗೋಸುಂಬೆಗಳನ್ನು, ಮತ್ತು ಲೇಯ್ತ್ ನ ಮೃದು ಚಿಪ್ಪಿನ ಆಮೆಗಳು ಗಾಳಿಬೋರ್ ನಲ್ಲಿ ಕಂಡುಬರುತ್ತವೆ.

ನೀವು ಯಾವಾಗ ಗಾಳಿಬೋರ್ ಗೆ ಭೇಟಿ ನೀಡಬೇಕು[ಬದಲಾಯಿಸಿ]

ಗಾಳಿಬೋರ್ ನಲ್ಲಿ ಜಲ ಕ್ರೀಡೆಗಳನ್ನು ಪ್ರಚೋದಿಸುವ ದೃಷ್ಟಿಯಿಂದ ಕಾವೇರಿ ನದಿಯಲ್ಲಿ ದೋಣಿ ಸವಾರಿಯನ್ನು ಆಯೋಜಿಸಲಾಗಿದೆ. ಅಲ್ಲದೇ ಪ್ರಯಾಣಿಕರಿಗೆ ಚಾರಣ ಅಯ್ಕೆಯೂ ಇದ್ದು ಕಾಡುಗಳ ಒಳಗೆ ಹೋದಂತೆಲ್ಲ ನೈಸರ್ಗಿಕ ಕಾಲ್ದಾರಿಗಳು ಚಾರಣಿಗರಿಗೆ ಮಾರ್ಗ ದರ್ಶನ ನೀಡುತ್ತವೆ.

ಪಕ್ಷಿ ವೀಕ್ಷಕರು ಜೂನ್ ಹಾಗೂ ಆಗಸ್ಟ ತಿಂಗಳ ನಡುವಿನ ಕಾಲದಲ್ಲಿ ಗಾಳಿಬೋರ್ ಗೆ ಭೇಟಿ ನೀಡಬೇಕು. ಆ ಕಾಲದಲ್ಲಿ ವಿವಿಧ ಜಾತಿಯ ಭೂ ಹಾಗೂ ಜಲ ಆಧಾರಿತ ಪಕ್ಷಿಗಳು ಈ ಪ್ರದೇಶದಲ್ಲಿ ಕಿಕ್ಕಿರಿದು ತುಂಬಿರುತ್ತವೆ. ಫೆಬ್ರವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳ ಮಧ್ಯದ ವರೆಗೆ ಗಾಳದ ಮೀನುಗಾರಿಕೆಗೆ ಸೂಕ್ತವೆಂದು ಪರಿಗಣಿಸಲಾಗುತ್ತದೆ.

ದಕ್ಷಿಣದ ವಿವಿಧ ಕಾರ್ಪೊರೇಟ್ ಮನೆಗಳು ಗಾಳಿಬೋರ್ ಗೆ ಆದ್ಯತೆ ನೀಡುತ್ತವೆ ಮತ್ತು ಅವರು ಇಲ್ಲಿ ತಮ್ಮ ಬಯಲು ಪ್ರದೇಶದ ಮತ್ತು ಹೊರಾಂಗಣ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಈ ಸ್ಥಳಕ್ಕೆ ಒಳ್ಳೆಯ ರಸ್ತೆ ವ್ಯವಸ್ಥೆ ಇದ್ದು ಬೆಂಗಳೂರಿನಿಂದ ಕನಕಪುರ-ಸಂಗಮ ರಸ್ತೆ ಮೂಲಕ ಕೇವಲ ಎರಡು ಗಂಟೆಗಳ ಪ್ರಯಾಣದಲ್ಲಿ ಸುಲಭವಾಗಿ ತಲುಪಬಹುದು.