ಗಾರ್ಗ್ಯ
ಗೋಚರ
ಗಾರ್ಗ್ಯ ಒಬ್ಬ ಋಷಿ. ರಾಮಾಯಣದ ಪ್ರಕಾರ ಅಂಗಿರಸನ ವಂಶದವ. ಈತ ಕೇಕಯ ದೇಶದ ಅಧಿಪತಿಯಾಗಿದ್ದ ಯುಧಾಜಿತನ ಪುರೋಹಿತ. ಗಂಧರ್ವ ದೇಶವನ್ನು ಗೆಲ್ಲುವ ಉದ್ದೇಶದಿಂದ ಯುಧಾಜಿತ ಹತ್ತು ಸಾವಿರ ಕುದುರೆಗಳನ್ನೂ ಅನೇಕ ರತ್ನಾಭರಣಗಳನ್ನೂ ಈತನ ಮೂಲಕ ಶ್ರೀರಾಮನಿಗೆ ಕಾಣಿಕೆಯಾಗಿ ಕೊಟ್ಟಿದ್ದ.[೧]
ಗಾರ್ಗ್ಯನ ಜೀವನದೃಷ್ಟಿಯ ಪ್ರಕಾರ, ಜನರು ಅತಿಥಿಗಳಿಗೆ ವಿನಯಶೀಲರಾಗಿರಬೇಕು, ಸಸ್ಯಾಹಾರಿಗಳಾಗಿರಬೇಕು, ಬ್ರಾಹ್ಮಣರು ಮತ್ತು ಪ್ರಾಣಿಗಳನ್ನು ನೋಯಿಸಬಾರದು, ಮತ್ತು ಯಜ್ಞಗಳನ್ನು ಸ್ವಚ್ಛತೆ ಹಾಗೂ ಭಕ್ತಿಯಿಂದ ಮಾಡಬೇಕು.[೨]
ಹರಿವಂಶದ ಪ್ರಕಾರ ಗಾರ್ಗ್ಯ ವೇಣುಹೋತ್ರನ ಮಗ. ಪಾಂಡವರ ಮೂಲ ಪುರುಷನಾದ ಜನಮೇಜಯರಾಯ ಗಾರ್ಗ್ಯನ ಮಗನನ್ನು ಹಿಂಸೆಮಾಡಿ ಬ್ರಹ್ಮಹತ್ಯೆಗೆ ಗುರಿಯಾಗಿ ಶೌನಕ ಮುನಿಯ ಮೂಲಕ ಯಜ್ಞ ಮಾಡಿಸಿ ಆ ಪಾತಕವನ್ನು ಕಳೆದುಕೊಂಡ.[೩]
ಉಲ್ಲೇಖಗಳು
[ಬದಲಾಯಿಸಿ]ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: