ಗಗನ ಚಂದ್ರ

ವಿಕಿಪೀಡಿಯ ಇಂದ
Jump to navigation Jump to search

ತಾಯಿನಾಡು ದಿನಪತ್ರಿಕೆಯ ೨೨-೦೮-೧೯೫೪ರ ಸಂಚಿಕೆಗೆ ಹಿರಿಯ ಪತ್ರಕರ್ತ ಹೆಚ್.ಆರ್.ನಾಗೇಶರಾವ್ ಅವರು ಪುಸ್ತಕ ಪ್ರಿಯ ಹೆಸರಿನಲ್ಲಿ ನಾಡಿಗೇರ ಕೃಷ್ಣರಾವ್ ಅವರ ಗಗನ ಚಂದ್ರ ಕಾದಂಬರಿಯ ಬಗ್ಗೆ ಬರೆದಿರುವ ವಿಮರ್ಶೆ ಇಲ್ಲಿದೆ. ನಾಡಿಗೇರ ಕೃಷ್ಣರಾವ್ ಕೆಲಕಾಲ ತಾಯಿನಾಡು ಪತ್ರಿಕೆಯಲ್ಲಿ ಹೆಚ್.ಆರ್.ನಾಗೇಶರಾವ್ ಅವರ ಸಹೋದ್ಯೋಗಿಯಾಗಿದ್ದರು. ಕೆಲವೊಂದು ಅಂಕಣಗಳನ್ನು ಪತ್ರಿಕೆಗೆ ಇಬ್ಬರೂ ನಿರ್ವಹಿಸಿದ್ದಾರೆ.

ಗಗನ ಚಂದ್ರ ಕಾದಂಬರಿ. ಪ್ರಕಾಶಕರು: ಸುಲಭ ಸಾಹಿತ್ಯ ಪ್ರಕಾಶನ, ಕುಮಟಾ, ಉ.ಕ., ಬೆಲೆ. ಎಂಟಾಣೆ.

ಕ್ರಾಸ್^ವರ್ಡ್‌, ಜೂಜು, ಮದ್ಯ ಪಾನ, ವೇಶ್ಯಾಲಂಪಟತನಗಳ ಅನರ್ಥಗಳನ್ನೂ ಈ ದುರ್ವ್ಯಾಪಾರಗಳಿಗೆ ಒಳಗಾದವರ ದೌರ್ಬಲ್ಯ-ದುರಂತಗಳನ್ನೂ ವಿವರಿಸುವ ಕಿರು ಕಾದಂಬರಿ ಇದು. ಶ್ರೀ ನಾಡಿಗೇರರು ತಮ್ಮ ಮೊನಚಾದ ಮತ್ತು ನೇರವಾದ ಶೈಲಿಯಲ್ಲಿ, ಎರಡು ಮಧ್ಯಮ ವರ್ಗದ ಕುಟುಂಬಗಳು ಹಾಳಾದ ಕಣ್ಣೀರಿನ ಕತೆಯನ್ನು ಚಿತ್ರಿಸಿದ್ದಾರೆ. ಸುಲಭ ಸಾಹಿತ್ಯ ಪ್ರಕಾಶನದ ಪ್ರಥಮ ಪ್ರಕಟನೆಯಿದು.[೧]

ಉಲ್ಲೇಖಗಳು[ಬದಲಾಯಿಸಿ]