ಗಂಧಮಾದನ
ಗೋಚರ
ಗಂಧಮಾದನ ಎನ್ನುವುದು ಬದರಿಕಾಶ್ರಮದ ಹತ್ತಿರವಿರುವ ಒಂದು ಬೆಟ್ಟ. ರಾಜಸೂಯ ಯಾಗದ ಸಂದರ್ಭದಲ್ಲಿ ಅರ್ಜುನ ಇದರ ಸುತ್ತಮುತ್ತಣ ಅರಸರನ್ನು ಗೆದ್ದು ಬಂದನೆಂದೂ, ಪಾಂಡವರು ತೀರ್ಥಯಾತ್ರೆಯ ಸಂದರ್ಭದಲ್ಲಿ ಇಲ್ಲಿಗೆ ಹೊಗಿದ್ದರೆಂದೂ, ಸೌಗಂಧಿಕ ಪುಷ್ಪವನ್ನು ತರಲು ಕುಬೇರನ ಉದ್ಯಾನಕ್ಕೆ ಹೋಗುವ ಮಾರ್ಗದಲ್ಲಿ ಭೀಮಸೇನ ಇದನ್ನು ಸಂದರ್ಶಿಸಿದ್ದನೆಂದೂ ಮಹಾಭಾರತದಲ್ಲಿ ಉಲ್ಲೇಖಿಸಿದೆ.
ಹಿಮಾಲಯ ಪರ್ವತಶ್ರೇಣಿಯ ಒಂದು ಶಿಖರಕ್ಕೂ ಈ ಹೆಸರಿದೆ. ಪಾಂಡವರು ವನವಾಸ ಸಮಯದಲ್ಲಿ ಇಲ್ಲಿ ವಾಸಿಸುತ್ತಿದ್ದರೆಂದೂ, ಇಂದ್ರಕೀಲ ಪರ್ವತದಿಂದ ದೇವಲೋಕಕ್ಕೆ ಹೋಗಿದ್ದ ಅರ್ಜುನ ಇಲ್ಲಿಗೆ ಬಂದು ತನ್ನ ಸಹೋದರರನ್ನು ಸಂಧಿಸಿದನೆಂದೂ ಭಾರತದ ವನಪರ್ವದಿಂದ ತಿಳಿದು ಬರುತ್ತದೆ.[೧]
ರಾಮಾಯಣದ ಪ್ರಕಾರ ಗಂಧಮಾದನ ಸುಗ್ರೀವನ ಕಪಿಸೇನಾ ನಾಯಕರಲ್ಲಿ ಒಬ್ಬ; ಕುಂಭಕರ್ಣನನ್ನು ಯುದ್ಧದಲ್ಲಿ ಎದುರಿಸಿದ ವೀರ.
ಉಲ್ಲೇಖಗಳು
[ಬದಲಾಯಿಸಿ]- ↑ Arany Parva Mahabharat, Translated by Kisari Mohan Ganguli, Published by P.C. Roy (1884)
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: