ಗಂಟೆ ಹೂ

ವಿಕಿಪೀಡಿಯ ಇಂದ
Jump to navigation Jump to search

ಗುಣ ಲಕ್ಷಣ[ಬದಲಾಯಿಸಿ]

ಕಡು ಹಳದಿ ಬಣ್ಣದಿಂದ ಕಂಗೊಳಿಸುವ ಈ ಗೊಂಚಲು ಹೂಗಳು, “ಗಂಟೆ ಹೂ” ಎಂದೇ ಚಿರಪರಿಚಿತ. ಗಂಟೆಯಂತಹ ವಿಶೇಷ ರಚನೆ ಹೊಂದಿದ ಈ ಸುಂದರ ಹೂ ತನ್ನ ನಾನಾ ರೀತಿಯ ಪ್ರಯೋಜನಗಳಿಂದ ಅನೇಕರ ಮನೆಯಂಗಳದಲ್ಲಿ ಸ್ಥಾನ ಪಡೆದಿದೆ. ಪ್ಲಾಂಟೇ ರಾಜ್ಯದ “ಬೈಗ್ನೋನಿಯೆನ್ಸೀಸ್” ಕುಟುಂಬಕ್ಕೆ ಸೇರಿದ ಈ ಹೂ ‘ಟೆಕೋಮಾ ಸ್ಟಾನ್ಸ್’,’ಯೆಲ್ಲೋ ಟ್ರಂಪೆಡ್‍ಬುಶ್’,ಯೆಲ್ಲೋಬೆಲ್ಸ್’ ಎಂಬಿತ್ಯಾದಿ ಹೆಸರುಗಳಿಂದ ಕರೆಯಲ್ಪಡುತ್ತದೆ.

ಗಂಟೆ ಹೂ

ಎಲೆಗಳು ಚೂಪಾದ ಆಕಾರದಲ್ಲಿದ್ದು ಅಂಚಿನಲ್ಲಿ ಕತ್ತರಿಸಿದ ರೀತಿಯ ರಚನೆಯನ್ನು ಹೊಂದಿವೆ. ಗಂಟೆ ಹೂ 5 ರಿಂದ 7 ಮೀಟರ್ ಎತ್ತರದ ಸಣ್ಣ ಮರದಲ್ಲಿ ಬಿಡುತ್ತದೆ. ಬಿಸಿಲಿನಿಂದ ಕೂಡಿದ ಬೆಚ್ಚನೆಯ ವಾತಾವರಣವು ಈ ಗಿಡದ ಉತ್ತಮ ಬೆಳವಣಿಗೆಗೆ ಸೂಕ್ತವಾಗಿದೆ. ಚಿಟ್ಟೆ, ಜೇನು ಹುಳಗಳನ್ನು ಹಾಗೂ ಬಿಸಿಲಹಕ್ಕಿಗಳನ್ನು ತನ್ನೆಡೆಗೆ ಆಕರ್ಷಿಸುವಲ್ಲಿ ಗಂಟೆ ಹೂ ಪ್ರಮುಖ ಪಾತ್ರ ವಹಿಸುತ್ತದೆ[೧].

ಉಪಯೋಗಗಳು[ಬದಲಾಯಿಸಿ]

  • ಗಂಟೆ ಹೂವಿನ ಎಲೆಗಳಲ್ಲಿ ಕೆಲ ಔಷಧೀಯ ಗುಣಗಳೂ ಇವೆ. ಹೊಟ್ಟೆ ನೋವಿನ ನಿವಾರಣೆಗೆ ಗಂಟೆ ಹೂವಿನ ಎಲೆಗಳನ್ನು ಉಪಯೋಗಿಸುತ್ತಾರೆ.
  • ಮೆಕ್ಸಿಕೋ ಹಗೂ ದಕ್ಷಿಣ ಅಮೇರಿಕಾ ದೇಶಗಳಲ್ಲಿ ಸಕ್ಕರೆಖಾಯಿಲೆಯ ನಿಯಂತ್ರಣಕ್ಕೆ ಈ ಗಂಟೆಹೂವನ್ನು ಉಪಯೋಗಿಸುತ್ತಾರೆ.
  • ೮ಗಂಟೆಹೂ ಮರದ ತೊಗಟೆಯನ್ನು ನಾಯಿಗಳ ಚಲನಾಶಕ್ತಿಯನ್ನು ಹೆಚ್ಚಿಸುವ ಸಲುವಾಗಿ, ಔಷಧಿಯಾಗಿ ಬಳಸುತ್ತಾರೆ.

ಉಲ್ಲೇಖ[ಬದಲಾಯಿಸಿ]

  1. ಸುಧಾ ವಾರಪತ್ರಿಕೆ, ಮಾರ್ಚ್ ೧೭,೨೦೧೬, ಪುಟಸಂಖ್ಯೆ-೮
"https://kn.wikipedia.org/w/index.php?title=ಗಂಟೆ_ಹೂ&oldid=788942" ಇಂದ ಪಡೆಯಲ್ಪಟ್ಟಿದೆ