ವಿಷಯಕ್ಕೆ ಹೋಗು

ಖನಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಖನಕನು ವಿದುರನ ಆಪ್ತಮಿತ್ರ. ದುರ್ಯೋಧನ ವಾರಣಾವತದಲ್ಲಿ ಪಾಂಡವರಿಗಾಗಿ ಅರಗಿನ ಮನೆಯನ್ನು ಕಟ್ಟಿಸುವಾಗ ಅದರ ಮೇಲ್ವಿಚಾರಣೆಯನ್ನು ಈತನಿಗೆ ಒಪ್ಪಿಸಿದ್ದ. ಖನಕ ವಿದುರನ ಸೂಚನೆಯ ಮೇರೆಗೆ ಅಲ್ಲಿ ಒಂದು ಸುರಂಗ ಮಾರ್ಗವನ್ನು ಏರ್ಪಡಿಸಿದ. ಪಾಂಡವರು ಹಸ್ತಿನಾವತಿಯಿಂದ ವಾರಣಾವತಕ್ಕೆ ಬಂದಾಗ ಈ ವಿಚಾರವನ್ನು ವಿದುರ ಭೀಮನಿಗೆ ರಹಸ್ಯವಾಗಿ ತಿಳಿಸಿದ. ವಿದುರನು ಧರ್ಮರಾಜನಿಗೆ ಸೂಚ್ಯವಾಗಿ ಈ ವಿಷಯ ಹೇಳಿದ. ಖನಕನು ಪಾಂಡವರನ್ನು ಲಾಕ್ಷಾಗೃಹದಲ್ಲಿ ಭೇಟಿಮಾಡಿ, ದುರ್ಯೋಧನನ ಆದೇಶದಂತೆ ಪುರೋಚನನು ಕೃಷ್ಣಪಕ್ಷದ ಹದಿನಾಲ್ಕನೇ ದಿನ ಅವರ ಅರಮನೆಯ ಬಾಗಿಲಿಗೆ ಬೆಂಕಿ ಹಚ್ಚುವನು ಎಂದು ಹೇಳಿದನು.[] ಮುಂದೆ ಅರಮನೆಗೆ ಬೆಂಕಿಬಿದ್ದಾಗ ಭೀಮಾದಿಗಳು ಗುಪ್ತಮಾರ್ಗದಿಂದ ಪಾರಾಗಲು ಇದರಿಂದ ಅನುಕೂಲವಾಯಿತು.

ಉಲ್ಲೇಖಗಳು

[ಬದಲಾಯಿಸಿ]
  1. Motilal Banarsidas. Puranic Encyclopedia By Vettam Mani Motilal Banarsidas. p. 46.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಖನಕ&oldid=1240644" ಇಂದ ಪಡೆಯಲ್ಪಟ್ಟಿದೆ