ವಿಷಯಕ್ಕೆ ಹೋಗು

ಖಂಡಿಗೆ ಮೀನು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಖಂಡಿಗೆ ಮೀನು
Temporal range: 33.9–0 Ma ಆರಂಭಿಕ ಆಲಿಗೋಸೀನ್‍ನಿಂದ ಈಗಿನವರೆಗೆ[]
ಸಿಲೇಗೊ ಪಾರ್ವಿಸ್ಕ್ವಾಮಿಸ್
Scientific classification e
ಕ್ಷೇತ್ರ: Eukaryota
ಸಾಮ್ರಾಜ್ಯ: Animalia
ವಿಭಾಗ: ಕಾರ್ಡೇಟಾ
ವರ್ಗ: ಆ್ಯಕ್ಟಿನೋಟೆರಿಜೀ
ಗಣ: ಸ್ಪಾರಿಫ಼ಾರ್ಮೀಸ್
ಕುಟುಂಬ: ಸಿಲೇಗಿನಿಡೀ
ಕುಲ: ಖಂಡಿಗೆ ಮೀನು
G. Cuvier, 1817
Type species
ಸಿಲೇಗೊ ಅಕ್ಯೂಟಾ
Cuvier, 1817

ಖಂಡಿಗೆ ಮೀನು ಆ್ಯಕ್ಟಿನೋಟೆರಿಜಿಯೈ ವರ್ಗದ ಸಿಲ್ಯಾಗಿನಿಡೀ ಕುಟುಂಬಕ್ಕೆ ಸೇರಿದ ಒಂದು ಜಾತಿಯ ಸಮುದ್ರವಾಸಿ ಅಸ್ಥಿಮೀನು. ಕೆಂಪು ಸಮುದ್ರದಿಂದ ಹಿಡಿದು ಹಿಂದೂ ಮಹಾಸಾಗರದ ಮೂಲಕ ಚೀನ ಸಮುದ್ರದವರೆಗೂ ಹಬ್ಬಿರುವ ತೀರ ಪ್ರದೇಶಗಳಲ್ಲಿ ವ್ಯಾಪಿಸಿದೆ. ಕಾಣೆ ಮೀನು ಪರ್ಯಾಯನಾಮ. ವೈಜ್ಞಾನಿಕ ನಾಮ ಸಿಲೇಗೊ. ಇದರಲ್ಲಿ 31 ಪ್ರಭೇದಗಳಿವೆ. ಮುಖ್ಯವಾದವು ಸಿಹಾಮ, ಡಾಮಿನ ಮತ್ತು ಮ್ಯಾಕ್ಯುಲೇಟ ಎಂಬ ಮೂರು ಪ್ರಭೇದಗಳು.

ದೇಹರಚನೆ

[ಬದಲಾಯಿಸಿ]

ಎಲ್ಲ ಪ್ರಭೇದಗಳೂ ಸುಮಾರು 30 ಸೆಂಮೀ. ಉದ್ದಕ್ಕೆ ಬೆಳೆಯುತ್ತವೆ. ದೇಹದ ಬಣ್ಣ ಆಲಿವ್ ಹಸಿರಿನಿಂದ ಬೂದಿಮಿಶ್ರಿತ ಹಳದಿವರೆಗೆ ವ್ಯತ್ಯಾಸವಾಗುತ್ತದೆ. ಶಂಕುವಿನಾಕಾರದ ತಲೆ, ಚೆನ್ನಾಗಿ ರೂಪುಗೊಂಡಿರುವ ಶ್ಲೇಷ್ಮೋತ್ಪಾದಕ ವ್ಯವಸ್ಥೆ, ವೋಮರ್ ಮೂಳೆಯ ಮೇಲೂ ಹಲ್ಲುಗಳಿರುವುದು, ಚಿಕ್ಕ ಬಾಯಿ, ಅಗಲವಾದ ಕಿವಿರು ರಂಧ್ರಗಳು, ಗರಗಸದಂತಿರುವ ಕಿವಿರು ಮುಚ್ಚಳದ ಮುಂದಿನ ಮೂಳೆ (ಪ್ರೀ ಒಪರ್ಕಲ್), ಟೀನಾಯೀಡ್ ಹುರುಪೆಗಳು, ಬೆನ್ನಿನಲ್ಲಿ 2 ಈಜುರೆಕ್ಕೆಗಳು-ಇವು ಖಂಡಿಗೆ ಮೀನಿನ ಕೆಲವು ಮುಖ್ಯ ಲಕ್ಷಣಗಳು. ಎಲ್ಲ ಮೀನುಗಳಲ್ಲಿರುವಂತೆಯೇ ಇದರಲ್ಲೂ ಕಣ್ಣುಗಳು ತಲೆಯ ಇಕ್ಕೆಡೆಗಳಲ್ಲಿರುವುದು ಸಾಮಾನ್ಯವಾದರೂ ಕೆಲವು ಬಗೆಗಳಲ್ಲಿ ತಲೆಯ ಮೇಲ್ಭಾಗಕ್ಕೆ ಸರಿದಿರುವುದುಂಟು.

ಆಹಾರವಾಗಿ

[ಬದಲಾಯಿಸಿ]

ಖಂಡಿಗೆ ಮೀನು ಉತ್ತಮ ಬಗೆಯ ಆಹಾರ ಮೀನೆಂದು ಪ್ರಸಿದ್ಧವಾಗಿದೆ. ಭಾರತ, ಜಪಾನ್ ಮತ್ತು ಟೈವಾನ್‍ಗಳಲ್ಲಿ ಅಳಿವೆ ಜಲಚರ ಸಾಕಣೆಯು ಖಂಡಿಗೆ ಮೀನುಗಳನ್ನು ಮುಖ್ಯ ಪ್ರಭೇದವಾಗಿ ಬಳಸಿಕೊಂಡಿದೆ ಮತ್ತು ಇದಕ್ಕೆ ಹೋಲುವ ಪ್ರಯೋಗಗಳನ್ನು ಆಸ್ಟ್ರೇಲಿಯಾದಲ್ಲೂ ನಡೆಸಲಾಗಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. Sepkoski, J.J.Jr (2002): A Compendium of Fossil Marine Animal Genera. Bulletins of American Paleontology, 363: 1-560.
  2. McKay, R.J. (1992). FAO Species Catalogue: (Vol. 14.) Sillaginid Fishes of The World (PDF). FAO. p. 87. ISBN 92-5-103123-1.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: