ಕ್ಷಾವ್‍ಶಾನ್, ಹ್ಯಾಂಗ್‌ಝೌ
ಕ್ಷಾವ್‍ಶಾನ್
萧山区 ಸಿಯಾವ್‍ಶಾನ್ | |
|---|---|
ಜಿಲ್ಲೆ | |
ಜ್ಯಾಂಗ್‍ಶಿಯೂ, ಕ್ಷಾವ್‍ಶಾನ್ | |
ಹ್ಯಾಂಗ್‌ಝೌನಲ್ಲಿ ಕ್ಷಾವ್‍ಶಾನ್ | |
| Country | ಚೀನಾ |
| ಪ್ರಾಂತ್ಯ | ಝೀಜಿಯಾಂಗ್ |
| Sub-provincial city | ಹಂಗ್‍ಝೌ |
| ವಿಸ್ತಾರ | |
| • ಒಟ್ಟು | ೧,೪೧೭.೮೩ km2 (೫೪೭.೪೩ sq mi) |
| ಜನಸಂಖ್ಯೆ (2022) | |
| • ಒಟ್ಟು | ೧೨,೪೦,೧೦೦ |
| • ಸಾಂದ್ರತೆ | ೮೭೦/km2 (೨೩೦೦/sq mi) |
| ಸಮಯದ ವಲಯ | |
| ಸಮಯ ವಲಯ | ಚೈನಾ ಸ್ಟಾಂಡರ್ಡ್ ಟೈಮ್ |
ಕ್ಷಾವ್‍ಶಾನ್ ಚೀನಾದ ಝೆಜಿಯಾಂಗ್‌ನ ಹ್ಯಾಂಗ್‌ಝೌನ ಉಪನಗರ ಜಿಲ್ಲೆಯಾಗಿದೆ . ಇದು ಈ ಹಿಂದೆ ನಗರವಾಗಿದ್ದು, ಕ್ವಿಯಾಂಟಾಂಗ್ ನದಿಯಿಂದ ಹ್ಯಾಂಗ್‌ಝೌನಿಂದ ಬೇರ್ಪಟ್ಟಿತ್ತು, 2001ರಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಹ್ಯಾಂಗ್‌ಝೌ, ಇಲ್ಲಿನ ಪುರಸಭೆಯನ್ನು ಸ್ವಾಧೀನಪಡಿಸಿಕೊಂಡಿತು.
ಕ್ಷಾವ್‍ಶಾನ್ ಸುಮಾರು 1,511,000 ಜನರ ಶಾಶ್ವತ ಜನಸಂಖ್ಯೆಯನ್ನೂ, ಸುಮಾರು 876,500ರಷ್ಟು ತಾತ್ಕಾಲಿಕ ಜನಸಂಖ್ಯೆಯನ್ನೂ ಹೊಂದಿದೆ. ಹೆಚ್ಚಿನ ಸ್ಥಳೀಯ ನಿವಾಸಿಗಳಾದ ಹಾನ್ ಜನರು ಮ್ಯಾಂಡರಿನ್ ಚೈನೀಸ್ ಜೊತೆಗೆ ಸ್ಥಳೀಯ ವಿಧವಾದ ವು ಚೈನೀಸ್ ಅನ್ನು ಮಾತನಾಡುತ್ತಾರೆ. ಕ್ಷಾವ್‍ಶಾನ್‍ನ ಕುವಾಹುಕಿಯಾವೊ ಪುರಾತತ್ತ್ವ ಶಾಸ್ತ್ರದ ಸ್ಥಳದಲ್ಲಿ ಉತ್ಖನನಗಳು ತೋರಿಸಿರುವಂತೆ, ಈ ಪ್ರದೇಶದ ಮಾನವ ವಸಾಹತು 8000 ವರ್ಷಗಳ ಹಿಂದಿನದು. [೧]
ಕ್ಷಾವ್‍ಶಾನ್‍ನ ಉತ್ಪಾದನಾ-ಪ್ರಾಬಲ್ಯದ ಆರ್ಥಿಕತೆಯು, ಇದನ್ನು ಚೀನಾದ ಅತ್ಯಂತ ಶ್ರೀಮಂತ ಜಿಲ್ಲೆಗಳಲ್ಲಿ ಒಂದನ್ನಾಗಿ ಮಾಡಿದೆ. 2012 ರಲ್ಲಿ ಇದು 161.2 ಬಿಲಿಯನ್ CNY ಜಿ.ಡಿ.ಪಿ.ಯನ್ನು ಹೊಂದಿತ್ತು.
ಹ್ಯಾಂಗ್‌ಝೌನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು, ಹ್ಯಾಂಗ್‌ಝೌನ ಕೊಲ್ಲಿಯ ಹತ್ತಿರದಲ್ಲಿರುವ ಪಶ್ಚಿಮ ಕ್ಷಾವ್‍ಶಾನ್‍ನಲ್ಲಿದೆ. ಈ ಜಿಲ್ಲೆಯು ಚೀನಾದ ಸ್ಥಳೀಯ ರಿಯಲ್ ಎಸ್ಟೇಟ್ ಉದ್ಯಮದ ಕೇಂದ್ರಬಿಂದುವಾಗಿದೆ. ಚೀನಾದಲ್ಲಿ ಬೆಳೆಯುತ್ತಿರುವ ಮಧ್ಯಮ ವರ್ಗದವರ ಹೊಸ, ಹೆಚ್ಚು ದುಬಾರಿ ವಸತಿಗಳ ಬೇಡಿಕೆಯು ಇಲ್ಲಿ ಹೊಸಹೊಸ ಕಾಂಡೋಮಿನಿಯಂಗಳ ನಿರ್ಮಾಣಕ್ಕೆ ಕಾರಣವಾಗಿದೆ. ಹ್ಯಾಂಗ್‌ಝೌ ಕ್ಷಾವ್‍ಶಾನ್ ಕ್ರೀಡಾ ಕೇಂದ್ರವನ್ನೂ ಕ್ಷಾವ್‍ಶಾನ್‍ನಲ್ಲಿ ನಿರ್ಮಿಸಲಾಗಿದೆ.

ಸ್ಥಳೀಯ ಸಂಸ್ಕೃತಿಯಲ್ಲಿ, ಸಮತಾವಾದಿ ಪಾತ್ರ ಆಳವಾಗಿ ಬೇರೂರಿದೆ. ಚೀನೀ ಕಮ್ಯುನಿಸ್ಟ್ ಪಕ್ಷವು ತನ್ನ ಬಲವಾದ ಉಪಸ್ಥಿತಿಯನ್ನು ಇಲ್ಲಿ ಹೊಂದಿದೆ. ಈ ಪಕ್ಷ, ಇಲ್ಲಿ ಸುಮಾರು 250,000 ರಷ್ಟು ಸದಸ್ಯತ್ವರನ್ನು ಹೊಂದಿದೆ. [೨]
ಆಡಳಿತ ವಿಭಾಗಗಳು
[ಬದಲಾಯಿಸಿ]ಉಪಜಿಲ್ಲೆಗಳು: [೩]
- ಚೆಂಗ್ಕ್ಸಿಯಾಂಗ್ ಉಪಜಿಲ್ಲೆ (城厢街道), ಬೀಗನ್ ಉಪಜಿಲ್ಲೆ (北干街道), ಶುಶನ್ ಉಪಜಿಲ್ಲೆ (蜀山街道), ಕ್ಸಿಂಟಾಂಗ್ ಉಪಜಿಲ್ಲೆ (新塘街道)
ಪಟ್ಟಣಗಳು:
- ಲೂಟಾ (楼塔镇), ಹೆಶಾಂಗ್ (河上镇), ಡೈಕುನ್ (戴村镇), ಪುಯಾಂಗ್ (浦阳镇), ಜಿನ್ಹುವಾ (进化镇), ಲಿನ್ಪು (临浦镇), ಯಿಕಿಯಾವೋ (临浦镇), ಯಿಕಿಯಾವೋ (乇镇), ಯಾಕಿಯಾನ್ (衙前镇), ವೆನ್ಯಾನ್ (闻堰镇), ನಿಂಗ್ವೀ (宁围镇), ಕ್ಸಿಂಜಿ (新街镇), ಕನ್ಶನ್ (坎山镇), ಗುವಾಲಿ (瓜沥镇), ಡ್ಯಾಂಗ್ಶಾನ್ (党山镇), ಯಿನ್ಜಿಂಗ್ (党山镇) , (靖江镇), ನಾನ್ಯಾಂಗ್ (南阳镇), ಯಿಪೆಂಗ್ (义蓬镇), ಹೆಝುವಾಂಗ್ (河庄镇), ಡಾಂಗ್ವಾನ್ (党湾镇), ಕ್ಸಿನ್ವಾನ್ (新湾镇)
ಹವಾಮಾನ
[ಬದಲಾಯಿಸಿ]1951 ರಿಂದ ದಾಖಲಾದ ಅತ್ಯಂತ ಗರಿಷ್ಠ ತಾಪಮಾನ 42.2 °C (108 °F) (ಜುಲೈ 25, ಆಗಸ್ಟ್ 1, 2003, ಮತ್ತು ಜುಲೈ 30, 2013) ಮತ್ತು ಕನಿಷ್ಟ ತಾಪಮಾನ: −15 °C (5 °F) (ಜನವರಿ 5, 1977). [೪]
| Climate data for ಕ್ಷಾವ್‍ಶಾನ್, ಎತ್ತರ 97 m (318 ft), (1991–2020) | |||||||||||||
|---|---|---|---|---|---|---|---|---|---|---|---|---|---|
| ತಿಂಗಳು | ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಷ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ | ವರ್ಷ |
| Record high °C (°F) | 23.9 (75.0) |
29.0 (84.2) |
34.3 (93.7) |
35.1 (95.2) |
37.2 (99.0) |
38.6 (101.5) |
42.2 (108.0) |
42.2 (108.0) |
39.7 (103.5) |
36.2 (97.2) |
33.0 (91.4) |
24.0 (75.2) |
42.2 (108.0) |
| Mean daily maximum °C (°F) | 8.8 (47.8) |
11.3 (52.3) |
16.1 (61.0) |
22.2 (72.0) |
26.9 (80.4) |
29.2 (84.6) |
34.1 (93.4) |
33.4 (92.1) |
28.7 (83.7) |
23.7 (74.7) |
17.9 (64.2) |
11.6 (52.9) |
22.0 (71.6) |
| Daily mean °C (°F) | 4.9 (40.8) |
7.0 (44.6) |
11.1 (52.0) |
16.9 (62.4) |
21.9 (71.4) |
24.9 (76.8) |
29.3 (84.7) |
28.7 (83.7) |
24.3 (75.7) |
19.1 (66.4) |
13.3 (55.9) |
7.3 (45.1) |
17.4 (63.3) |
| Mean daily minimum °C (°F) | 2.1 (35.8) |
3.8 (38.8) |
7.5 (45.5) |
12.9 (55.2) |
18.0 (64.4) |
21.7 (71.1) |
25.6 (78.1) |
25.3 (77.5) |
21.1 (70.0) |
15.6 (60.1) |
9.8 (49.6) |
4.1 (39.4) |
14.0 (57.1) |
| Record low °C (°F) | −15.0 (5.0) |
−7.5 (18.5) |
−2.4 (27.7) |
0.3 (32.5) |
8.2 (46.8) |
12.7 (54.9) |
17.9 (64.2) |
18.7 (65.7) |
10.7 (51.3) |
2.8 (37.0) |
−3.5 (25.7) |
−13.2 (8.2) |
−15.0 (5.0) |
| Average precipitation mm (inches) | 96.4 (3.80) |
91.9 (3.62) |
136.2 (5.36) |
115.3 (4.54) |
129.7 (5.11) |
255.4 (10.06) |
173.7 (6.84) |
175.7 (6.92) |
119.7 (4.71) |
74.4 (2.93) |
79.6 (3.13) |
67.6 (2.66) |
೧,೫೧೫.೬ (59.68) |
| Average precipitation days (≥ 0.1 mm) | 13.1 | 12.3 | 15.3 | 14.1 | 13.6 | 16.1 | 12.5 | 13.9 | 11.6 | 8.4 | 10.7 | 10.2 | 151.8 |
| Average snowy days | 3.4 | 2.2 | 0.6 | 0 | 0 | 0 | 0 | 0 | 0 | 0 | 0.1 | 1.3 | 7.6 |
| Average relative humidity (%) | 76 | 75 | 74 | 72 | 73 | 80 | 74 | 76 | 79 | 76 | 77 | 74 | 76 |
| Mean monthly sunshine hours | 105.9 | 106.9 | 128.6 | 151.7 | 162.7 | 128.9 | 214.1 | 201.9 | 154.8 | 154.8 | 126.1 | 124.9 | ೧,೭೬೧.೩ |
| Percentage possible sunshine | 33 | 34 | 34 | 39 | 38 | 31 | 50 | 50 | 42 | 44 | 40 | 40 | 40 |
| Source: ಚೀನಾ ಹವಾಮಾನ ಆಡಳಿತ ಮಂಡಳಿ[೫][೬] | |||||||||||||
ಭೌಗೋಳಿಕತೆ
[ಬದಲಾಯಿಸಿ]ಕ್ಷಾವ್‍ಶಾನ್ ಜಿಲ್ಲೆ ಝೆಜಿಯಾಂಗ್ ಪ್ರಾಂತ್ಯದ ಉತ್ತರದಲ್ಲಿ, ಅಕ್ಷಾಂಶ 29°50'48"-30°23'33"N ಮತ್ತು ರೇಖಾಂಶ 120°04'21"-120°43'31"E ನಡುವೆ ಇದೆ. ಈ ಪ್ರದೇಶವು ಪೂರ್ವದಿಂದ ಪಶ್ಚಿಮಕ್ಕೆ ಸುಮಾರು 63.05 ಕಿ.ಮೀ. ಮತ್ತು ಉತ್ತರದಿಂದ ದಕ್ಷಿಣಕ್ಕೆ 60.5 ಕಿ.ಮೀ. ದೂರದಲ್ಲಿದೆ. ಇದು ಪೂರ್ವದಿಂದ ಪಶ್ಚಿಮಕ್ಕೆ ಸುಮಾರು 63.05 ಕಿ.ಮೀ. ಅಗಲ ಮತ್ತು ಉತ್ತರದಿಂದ ದಕ್ಷಿಣಕ್ಕೆ 60.5 ಕಿ.ಮೀ. ಉದ್ದವಿದ್ದು, ಒಟ್ಟು 1,417.834 ಚದರ ಕಿ.ಮೀ. ವಿಸ್ತೀರ್ಣವನ್ನು ಹೊಂದಿದೆ. [೭]
ಭೂರೂಪಶಾಸ್ತ್ರ
[ಬದಲಾಯಿಸಿ]ಕ್ಷಾವ್‍ಶಾನ್ ಜಿಲ್ಲೆ ಪೂರ್ವ ಝೆಜಿಯಾಂಗ್‌ನ ತಗ್ಗು ಬೆಟ್ಟಗಳ ಉತ್ತರ ಭಾಗದಲ್ಲಿ ಮತ್ತು ಉತ್ತರ ಝೆಜಿಯಾಂಗ್‌ನ ಬಯಲು ಪ್ರದೇಶದ ದಕ್ಷಿಣ ಭಾಗದಲ್ಲಿದೆ. ಭೂಪ್ರದೇಶವು ದಕ್ಷಿಣದಲ್ಲಿ ಎತ್ತರವಾಗಿದ್ದು, ಉತ್ತರದಲ್ಲಿ ತಗ್ಗಾಗಿದೆ. ನೈಋತ್ಯದಿಂದ ಈಶಾನ್ಯಕ್ಕೆ ಓರೆಯಾಗಿದೆ. ದಕ್ಷಿಣ ಭಾಗವು ಸಣ್ಣ ನದಿ ಕಣಿವೆ ಬಯಲು ಪ್ರದೇಶಗಳನ್ನು ಹೊಂದಿರುವ ತಗ್ಗು ಪರ್ವತ ಪ್ರದೇಶವಾಗಿದೆ; ಮಧ್ಯ ಮತ್ತು ಉತ್ತರದಲ್ಲಿ ಬಯಲು ಪ್ರದೇಶಗಳಿವೆ. ಇಲ್ಲಿ ಬಯಲು ಪ್ರದೇಶ 66%, ಪರ್ವತ 17% ಮತ್ತು ಜಲ 17%ರಷ್ಟನ್ನು ಆವರಿಸಿದೆ. [೭]
ಹವಾಮಾನ
[ಬದಲಾಯಿಸಿ]ಕ್ಷಾವ್‍ಶಾನ್ ಜಿಲ್ಲೆ ಉತ್ತರ ಉಪೋಷ್ಣವಲಯದ ಮಾನ್ಸೂನ್ ಹವಾಮಾನ ವಲಯದ, ದಕ್ಷಿಣ ತುದಿಯಲ್ಲಿದೆ. ಇಲ್ಲಿನ ಹವಾಮಾನವು ದೀರ್ಘ ಚಳಿಗಾಲ ಮತ್ತು ಬೇಸಿಗೆ, ಅಲ್ಪಾವಧಿಯ ವಸಂತ ಮತ್ತು ಶರತ್ಕಾಲ ಮತ್ತು ನಾಲ್ಕು ವಿಶಿಷ್ಟ ಋತುಗಳಿಂದ ನಿರೂಪಿಸಲ್ಪಟ್ಟಿದೆ: ಸಮೃದ್ಧ ಬೆಳಕು, ಸಮೃದ್ಧ ಮಳೆ, ತೇವಾಂಶ ಮತ್ತು ಶೆಕೆ. [೭]
ಕೈಗಾರಿಕೆ
[ಬದಲಾಯಿಸಿ]ಕ್ಷಾವ್‍ಶಾನ್ ಆರ್ಥಿಕ ಮತ್ತು ತಾಂತ್ರಿಕ ಅಭಿವೃದ್ಧಿ ವಲಯ
[ಬದಲಾಯಿಸಿ]1990ರಲ್ಲಿ ಕ್ಷಾವ್‍ಶಾನ್ ಆರ್ಥಿಕ ಮತ್ತು ತಾಂತ್ರಿಕ ಅಭಿವೃದ್ಧಿ ವಲಯವನ್ನು ಸ್ಥಾಪಿಸಲಾಯಿತು. ಈ ವಲಯವು ಹ್ಯಾಂಗ್‌ಝೌ ಕ್ಸಿಯಾಶನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 10 km (6.2 mi) ದೂರದಲ್ಲಿದೆ. ಶಾಂಘೈ-ನಿಂಗ್ಬೋ ಎಕ್ಸ್‌ಪ್ರೆಸ್‌ವೇ ಮತ್ತು ಹ್ಯಾಂಗ್‌ಝೌ-ಕ್ವಿಜಿಯಾಂಗ್ ಎಕ್ಸ್‌ಪ್ರೆಸ್‌ವೇ ಪಕ್ಕದಲ್ಲಿಯೆ ಇದೆ. ಪ್ರಸ್ತುತ, ಇದು ಎಲೆಕ್ಟ್ರಾನಿಕ್ ಸಂವಹನ, ಆಟೋಮೊಬೈಲ್‌ಗಳು ಮತ್ತು ವಾಹನಗಳ ಭಾಗಗಳು, ಯಂತ್ರೋಪಕರಣಗಳು, ವೈದ್ಯಕೀಯ ಆಹಾರ, ವೈದ್ಯಕೀಯ ಉಡುಪುಗಳು, ಕಟ್ಟಡ ಸಾಮಗ್ರಿಗಳು ಸೇರಿದಂತೆ ಪ್ರಮುಖ ಕೈಗಾರಿಕೆಗಳ ಬೀಡಾಗಿದೆ.
ಆರ್ಥಿಕತೆ
[ಬದಲಾಯಿಸಿ]ಲೂಂಗ್ ಏರ್ಲೈನ್ಸ್ ತನ್ನ ಪ್ರಧಾನ ಕಛೇರಿಯನ್ನು, ಹ್ಯಾಂಗ್‌ಝೌ ಕ್ಷಾವ್‍ಶಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಭಾಗದಲ್ಲಿ ಹೊಂದಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "The discovery of an 8000-year-old dugout canoe at Kuahuqiao in the Lower Yangzi River, China". Retrieved 2023-09-09.
- ↑ 中共杭州市萧山区第十五次代表大会隆重开幕——萧山网——中国县(市、区)第一网. www.xsnet.cn. Archived from the original on 2023-10-16. Retrieved 2017-04-16.
- ↑ "杭州市-行政区划网" (in ಚೈನೀಸ್). XZQH. Retrieved 2012-05-24.
- ↑ 网易 (2018-12-08). "这两天根本不算冷 看看全国各大城市历史极端最低温度是几度?". www.163.com. Retrieved 2024-09-17.
- ↑ 中国气象数据网 – WeatherBk Data (in ಸರಳೀಕೃತ ಚೈನೀಸ್). ಚೀನಾ ಹವಾಮಾನ ಆಡಳಿತ ಮಂಡಳಿ. Retrieved 25 June 2023.
- ↑ "Experience Template" 中国气象数据网 (in ಸರಳೀಕೃತ ಚೈನೀಸ್). ಚೀನಾ ಹವಾಮಾನ ಆಡಳಿತ ಮಂಡಳಿ. Retrieved 25 June 2023.
- 1 2 3 "萧山在全国是怎样的一个存在? - 知乎". www.zhihu.com. Retrieved 2023-10-01. ಉಲ್ಲೇಖ ದೋಷ: Invalid
<ref>tag; name "zhihu.com" defined multiple times with different content
ಬಾಹ್ಯ ಕೊಂಡಿಗಳು
[ಬದಲಾಯಿಸಿ]- (in Chinese) Official website of Xiaoshan government
- Pages with non-numeric formatnum arguments
- Pages using infobox settlement with bad settlement type
- Articles containing Chinese-language text
- Pages using multiple image with auto scaled images
- Pages using infobox settlement with no coordinates
- CS1 uses ಚೈನೀಸ್-language script (zh)
- CS1 ಚೈನೀಸ್-language sources (zh)
- CS1 ಸರಳೀಕೃತ ಚೈನೀಸ್-language sources (zh-hans)
- Articles with Chinese-language sources (zh)
- Pages needing interwikilinks
- Pages with reference errors