ವಿಷಯಕ್ಕೆ ಹೋಗು

ಕ್ಲೇರ್ ವಿಕ್ಟೋರಿಯಾ ಬಾಲ್ಡಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕ್ಲೇರ್ ವಿಕ್ಟೋರಿಯ ಬಾಲ್ಡಿಂಗ್

ಕ್ಲೇರ್ ವಿಕ್ಟೋರಿಯಾ ಬಾಲ್ದಿಂಗ್ ರವರು ೨೯ ಜನವರಿ ೧೯೭೧ರಲ್ಲಿ ಜನಿಸಿದರು. ಇವರು ಪ್ರಶಸ್ತಿ ವಿಜೇತ ಪ್ರಸಾರಕರು, ಪತ್ರಕರ್ತ ಮತ್ತು ಲೇಖಕರು. ಅವರು ಪ್ರಸ್ತುತವಾಗಿ ಬಿಬಿಸಿ ಸ್ಪೋರ್ಟ್, ಚಾನೆಲ್ ೪, ಬಿಟಿ ಸ್ಪೋರ್ಟ್, ಮತ್ತು ಧಾರ್ಮಿಕ / ಆಧ್ಯಾತ್ಮಿಕ ಕಾರ್ಯಕ್ರಮ ಗುಡ್ ಮಾರ್ನಿಂಗ್ ಭಾನುವಾರವನ್ನು ಬಿಬಿಸಿ ರೇಡಿಯೋ ೨ರಲ್ಲಿ ಪ್ರಸ್ತುತ ಪಡೆಸುತ್ತಿದ್ದಾರೆ.[]

ಕ್ಲೇರ್ ಬಾಲ್ಡಿಂಗ್ ಮತ್ತು ಆಲಿಸ್ ಅರ್ನಾಲ್ಡ್

ಬಾಲ್ಡಿಂಗ್ ಬರ್ಕ್ಶೈರ್ನ ಡೌನ್ ಹೌಸ್ನಲ್ಲಿ ಶಿಕ್ಷಣ ಪಡೆದರು. ಆಕೆ ಅಲ್ಲಿ ಹೆಡ್ ಗರ್ಲ್ ಆಗಿದ್ದರು ಮತ್ತು ಹಾಸ್ಯನಟ ಮಿರಾಂಡಾ ಹಾರ್ಟ್ನ ಸಮಕಾಲೀನರಾಗಿದ್ದರು. ಹಾರ್ಟ್ ಮತ್ತು ಬಾಲ್ಡಿಂಗ್ ಸೋದರಸಂಬಂಧಿಗಳಾಗಿದ್ದರು. ಬ್ಯಾಲ್ಡಿಂಗ್ ಕ್ರಿಸ್ಟ್ಸ್ ಕಾಲೇಜ್, ಕೇಂಬ್ರಿಜ್ನಲ್ಲಿ ಕಾನೂನಿನ ಓದಲು ಅರ್ಜಿ ಹಾಕಿದ್ದರು, ಆದರೆ ಆಕೆಯು ಸಂದರ್ಶನದಲ್ಲಿ ವಿಫಲವಾಯಿತು ಮತ್ತು ಕಾನೂನು ಅವರು ಆಕೆಗೆ ಹೆಚ್ಚು ಇಷ್ಟವಿರಲಿಲ್ಲ ಎಂಬುದನ್ನು ಅರಿತುಕೊಂಡರು. ನಂತರ ಅವರು ನ್ಯೂಹ್ಯಾಮ್ ಕಾಲೇಜ್, ಕೇಂಬ್ರಿಜ್ಗೆನಲ್ಲಿ ಅರ್ಜಿ ಸಲ್ಲಿಸಿ, ಇಂಗ್ಲಿಷ್ ಓದಿದರು. ಯೂನಿವರ್ಸಿಟಿಯಲ್ಲಿದ್ದಾಗ ೧೯೯೨ರಲ್ಲಿ ಅವರು ಕೇಂಬ್ರಿಜ್ ಯೂನಿಯನ್ ಸೊಸೈಟಿಯ ಅಧ್ಯಕ್ಷರಾಗಿದ್ದರು. ೧೯೯೩ ರಲ್ಲಿ ಪದವಿದರ ಪಡೆದರು. ೧೯೮೮ ರಿಂದ ೧೯೯೩ ರವರೆಗೆ, ಬಾಲ್ಡಿಂಗ್ ಒಂದು ಅತಿದೊಡ್ಡ ಹವ್ಯಾಸಿ ಫ್ಲಾಟ್ ಜಾಕಿ ಮತ್ತು ೧೯೯೦ರಲ್ಲಿ ಚಾಂಪಿಯನ್ ಲೇಡಿ ರೈಡರ್ ಆಗಿದ್ದರು. ಅವರ "ಮೈ ಅನಿಮಲ್ಸ್ ಅಂಡ್ ಅದರ್ ಫ್ಯಾಮಿಲಿ"- ಈ ಪುಸ್ತಕ ಅವರ ರೇಸಿಂಗ್ ಜೀವನದ ಬಗ್ಗೆ ವಿಶಯ ಕೊಡುತ್ತದೆ. ಇದು ೨೦೧೨ರಲ್ಲಿ ರಾಷ್ಟ್ರೀಯ ಪುಸ್ತಕ ಪ್ರಶಸ್ತಿಗಳು ಗೆದ್ದಿದೆ. []ಬಾಲಿಡಿಂಗ್ ಆಲಿಸ್ ಆರ್ನಾಲ್ಡ್ನೊಂದಿಗಿನ ಪ್ರತಿ ಸಂಬಂಧವನ್ನು ಔಪಚಾರಿಕಗೊಳಿಸಿದಳು ಮತ್ತು ಏಪ್ರಿಲ್ ೨೦೧೫ ರಲ್ಲಿ ಖಾಸಗಿ ಸಮಾರಂಭದಲ್ಲಿ ಮದುವೆಯಯಾದರು.[]


ಬ್ರಾಡ್ಕಾಸ್ಟಿಂಗ್ ವೃತ್ತಿಜೀವನ

[ಬದಲಾಯಿಸಿ]

ಲೇರ್ ೫ ಲೈವ್, ರೇಡಿಯೋ , ರೇಡಿಯೋ ಮತ್ತು ರೇಡಿಯೋ ಗಳಲ್ಲಿ ಕೆಲಸ ಮಾಡುವ ಮೂಲಕ ೧೯೯೪ ರಲ್ಲಿ ಬಿಬಿಸಿ ನ್ಯಾಷನಲ್ ರೇಡಿಯೋದೊಂದಿಗೆ ತರಬೇತಿ ಪಡೆದರು. ೧೯೯೫ರ ಜೂನ್ನಲ್ಲಿ, ರಾಯಲ್ ಆಸ್ಕಾಟ್ನ ಮುಖ್ಯಾಂಶೆಗಳನ್ನು ಪರಿಚಯಿಸುವ ಮೂಲಕ ಟೆಲಿವಿಷನ್ ಪ್ರೆಸೆಂಟರ್ ಆಗಿ ಅವರು ತಮ್ಮ ಚೊಚ್ಚಲ ಪ್ರವೇಶವನ್ನು ಪ್ರಾರಂಬಿಸಿದರು. ನಂತರದ ವರ್ಷ ಅವರು ಲೈವ್ ಪ್ರದರ್ಶನವನ್ನು ಪ್ರಾರಂಭಿಸಿದರು, ಮತ್ತು ಡಿಸೆಂಬರ್ ೧೯೯೭ ರಲ್ಲಿ ಅವರು ಬಿಬಿಸಿಯ ಪ್ರಮುಖ ಕುದುರೆ ರೇಸಿಂಗ್ ಪ್ರೆಸೆಂಟರ್ ಆಗಿದ್ದರು ಮತ್ತು ಗ್ರ್ಯಾಂಡ್ ನ್ಯಾಷನಲ್ ವ್ಯಾಪ್ತಿ ಮುಂದೆ ಬರುವಂತೆ ಮಾಡಿದರು. ೨೦೦೯ರಲ್ಲಿ ಗ್ರ್ಯಾಂಡ್ ನ್ಯಾಶನಲ್ ವಿಜೇತರಾದರು. thumb|ಕ್ಲೇರ್ ಬಾಲ್ಡಿಂಗ್ ರವರ ವೃತ್ತಿ ಬಾಲ್ಡಿಂಗ್ ಆರು ಅಟ್ಲಾಂಟಾದಲ್ಲಿ ಬಿಬಿಸಿ ರೇಡಿಯೊ ಮತ್ತು ಸಿಡ್ನಿ, ಅಥೆನ್ಸ್, ಬೀಜಿಂಗ್, ಲಂಡನ್ ಮತ್ತು ರಿಯೊ ಡಿ ಜನೈರೊದಲ್ಲಿ ಬಿಬಿಸಿ ಟಿವಿಗೆ ಆರು ಒಲಂಪಿಕ್ ಕ್ರೀಡಾಕೂಟಗಳಿಂದ ವರದಿಗೊಳಿಸಿದರು. ಅವರು ನಾಲ್ಕು ಪ್ಯಾರಾಲಿಂಪಿಕ್ ಗೇಮ್ಸ್, ಸಾಲ್ಟ್ ಲೇಕ್ ಸಿಟಿ, ಟುರಿನ್, ವ್ಯಾಂಕೂವರ್ ಮತ್ತು ಸೋಚಿಗಳಲ್ಲಿ ವಿಂಟರ್ ಒಲಿಂಪಿಕ್ಸ್ ಮತ್ತು ಮೆಲ್ಬೋರ್ನ್, ದೆಹಲಿ ಮತ್ತು ಗ್ಲ್ಯಾಸ್ಗೋದಿಂದ ಕಾಮನ್ವೆಲ್ತ್ ಕ್ರೀಡಾಕೂಟಗಳನ್ನು ಪ್ರಸ್ತುತಪಡಿಸಿದ್ದಾರೆ. ಇವರು ಬಿಬಿಸಿರಗ್ಬಿ ಲೀಗ್ ಕವರೇಜ್ಗೆ ಮುಖವಾಗಿದ್ದರು ಮತ್ತು ರಗ್ಬಿ ಲೀಗ್ ಚಾಲೆಂಜ್ ಕಪ್ ಸೆಮಿ-ಫೈನಲ್ನಿಂದ ಗ್ರ್ಯಾಂಡ್ಸ್ಟಾಂಡ್ ಅನ್ನು ಪ್ರಸ್ತುತಪಡಿಸಿದರು ಮತ್ತು ಭಾನುವಾರ ಗ್ರ್ಯಾಂಡ್ಸ್ಟ್ಯಾಂಡ್ ಪ್ರಸ್ತುತಪಡಿಸಲು ಕೊನೆಯ ವ್ಯಕ್ತಿಯಗ್ಗಿದ್ದರು. ಅವರು ಲಾರ್ಡ್ ಮೇಯರ್'ಸ್ ಶೋ ಮತ್ತು ಬಿಬಿಸಿಗಾಗಿ -ಟ್ರೂಪಿಂಗ್ ದಿ ಕಲರ್ ಮತ್ತು ನ್ಯೂ ಇಯರ್ಸ್ ಈವ್ನಂತಹ ಇತರ ನೇರ ಪ್ರದರ್ಶನಗಳನ್ನು ಕೂಡಾ ಪ್ರಸ್ತುತಪಡಿಸುತ್ತಿದ್ದರು. ಕ್ಲೇರ್ ೨೦೦೪ ರಿಂದ ೨೦೦೯ ರವರೆಗೆ ಬಿಬಿಸಿಗಾಗಿ ಕ್ರೂಫ್ಗಳನ್ನು ಮತ್ತು ೨೦೧೩ ರಿಂದ ಚಾನೆಲ್ ೪ ಗಾಗಿ ಪ್ರಸ್ತುತಪಡಿಸಿದ್ದಾರೆ. []


ಬರವಣಿಗೆ

[ಬದಲಾಯಿಸಿ]

ಕ್ಲಾರ್ ಅವರು ದಿ ಸ್ಪೋರ್ಟಿಂಗ್ ಲೈಫ್, ರೇಸಿಂಗ್ ಪೋಸ್ಟ್, ಸಂಡೇ ಟೆಲಿಗ್ರಾಫ್, ದಿ ಇವನಿಂಗ್ ಸ್ಟ್ಯಾಂಡರ್ಡ್ ಮತ್ತು ಸ್ಟೈಲಿಸ್ಟ್ಗಾಗಿ ಕಾಲಮ್ಗಳನ್ನು ಬರೆದಿದ್ದಾರೆ. ಮತ್ತು ವೇಟ್ ರೋಸ್ ವೀಕೆಂಡ್ಗಾಗಿ ನಿಯಮಿತ ಸಾಪ್ತಾಹಿಕ ಕ್ರೀಡಾ ಅಂಕಣವನ್ನು ಪ್ರಸ್ತುತ ಬರೆಯುತ್ತಾರೆ. ಸೆಪ್ಟೆಂಬರ್ ೨೦೧೨ ರಂದು ಪ್ರಕಟವಾದ ಮೈ ಆನಿಮಲ್ಸ್ ಅಂಡ್ ಅದರ್ ಫ್ಯಾಮಿಲಿ ಎಂಬ ಆತ್ಮಚರಿತ್ರೆಯನ್ನು ಬರೆಯಲು ಅವಳು ವೈಕಿಂಗ್ ಪ್ರೆಸ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು. "ಮೈ ಅನಿಮಲ್ಸ್ ಮತ್ತು ಇತರೆ ಕುಟುಂಬವು" ದಿ ಸಂಡೇ ಟೈಮ್ಸ್ನ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ನಂಬರ್ ಒನ್ ಅನ್ನು ತಲುಪಿದೆ ಮತ್ತು ಇಟಾಲಿಯನ್, ಮ್ಯಾಂಡರಿನ್ ಮತ್ತು ಹಂಗೇರಿಯನ್ ಭಾಷೆಗೆ ಅನುವಾದಿಸಲಾಗಿದೆ. ಅವರ ಎರಡನೆಯ ಪುಸ್ತಕ, ವಾಕಿಂಗ್ ಹೋಮ್: ಮೈ ಫ್ಯಾಮಿಲಿ ಅಂಡ್ ಅದರ್ ರಂಬ್ಲಿಂಗ್ಸ್, ಅನ್ನು ಸೆಪ್ಟೆಂಬರ್ ೨೦೧೪ ರಲ್ಲಿ ಪ್ರಕಟಿಸಲಾಯಿತು.[]


ಪ್ರಶಸ್ತಿಗಳು ಮತ್ತು ಮೌಲ್ಯಮಾಪನ

[ಬದಲಾಯಿಸಿ]
ಬಾಲ್ಡಿಂಗ್ ರವರ ಪ್ರಶಸ್ತಿ

ಪ್ರಸರಣ ಮತ್ತು ಪತ್ರಿಕೋದ್ಯಮದ ಸೇವೆಗಾಗಿ ೨೦೧೩ ರಲ್ಲಿ ಬಾಲ್ಡಿಂಗ್ ಅನ್ನು ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (ಒಬಿಇ) ನ ಅಧಿಕಾರಿಯಾಗಿ ನೇಮಿಸಲಾಯಿತು. ಅದೇ ವರ್ಷದಲ್ಲಿ, ೨೦೧೨ ರ ಒಲಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ನಲ್ಲಿ ತನ್ನ ಕೆಲಸಕ್ಕಾಗಿ ಬಾಲ್ಡಿಂಗ್ಗೆ ವಿಶೇಷ ಬಿಏಎಫ್ಟಿಏ ನೀಡಲಾಯಿತು. ಬಾಲ್ಡಿಂಗ್ ೨೦೦೩ ರಲ್ಲಿ ರಾಯಲ್ ಟೆಲಿವಿಷನ್ ಸೊಸೈಟಿಯ "ವರ್ಷದ ಕ್ರೀಡಾ ಪ್ರೆಸೆಂಟರ್" ಪ್ರಶಸ್ತಿ ಮತ್ತು ೨೦೧೨ ರಲ್ಲಿ "ಪ್ರೆಸೆಂಟರ್" ಪ್ರಶಸ್ತಿ ಅನ್ನು ಗೆದ್ದುಕೊಂಡರು. ೨೦೦೩ ರಲ್ಲಿ ಅವರು "ರೇಸಿಂಗ್ ಜರ್ನಲಿಸ್ಟ್ ಆಫ್ ದಿ ಇಯರ್" ಪ್ರಶಸ್ತಿಯನ್ನು ಗೆದ್ದುಕೊಂಡರು ಮತ್ತು "ರೇಸಿಂಗ್ ಬ್ರಾಡ್ಕಾಸ್ಟರ್ ಆಫ್ ದಿ ಇಯರ್" ಪ್ರಶಸ್ತಿಯನ್ನು ಪಡೆದರು. ಡಿಸೆಂಬರ್ ೨೦೧೨ ರಲ್ಲಿ, ಅವರಿಗೆ "ನನ್ನ ಪ್ರಾಣಿಗಳು ಮತ್ತು ಇತರ ಕುಟುಂಬಕ್ಕಾಗಿ" ರಾಷ್ಟ್ರೀಯ ಪುಸ್ತಕ ಪ್ರಶಸ್ತಿಗಳ "ವರ್ಷದ ಬಯೋಗ್ರಫಿ / ಆತ್ಮಚರಿತ್ರೆ" ಪ್ರಶಸ್ತಿಯನ್ನು ನೀಡಲಾಯಿತು. ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ಗಳ ವ್ಯಾಪ್ತಿಗಾಗಿ ಅವರು ೨೦೧೨ ರಲ್ಲಿ ಮಹಿಳಾ ಚಲನಚಿತ್ರ ಮತ್ತು ದೂರದರ್ಶನ ವಿಭಾಗದ ಯುಕೆ ಅಧ್ಯಾಯದಿಂದ ಸಾಧನೆ ಪ್ರಶಸ್ತಿಯನ್ನು ಗೆದ್ದರು. ಹಾಗು ಇನ್ನು ಮೂಂತಾದ ಪ್ರಶಸ್ತಿಗಳನ್ನು ಪಡೆದುಕೊಂಡ್ಡಿದಾರೆ.[]

ಉಲ್ಲೇಖಗಳು

[ಬದಲಾಯಿಸಿ]
  1. http://www.bbc.co.uk/programmes/b03jyf6p
  2. https://www.thegenealogist.co.uk/featuredarticles/2017/who-do-you-think-you-are/clare-balding-556/
  3. http://www.hellomagazine.com/brides/2015040424429/clare-balding-marries-alice-arnold/
  4. http://www.bbc.com/news/entertainment-arts-19256968
  5. "ಆರ್ಕೈವ್ ನಕಲು". Archived from the original on 2013-02-14. Retrieved 2017-10-20.
  6. http://www.bafta.org/television/awards/clare-balding-special-award-recipient-in-2013