ವಿಷಯಕ್ಕೆ ಹೋಗು

ಕ್ಲೀವ್‍ಲೆಂಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕ್ಲೀವ್‍ಲೆಂಡ್
ಕ್ಲೀವ್‍ಲೆಂಡ್ ನ ಧ್ವಜ
ಕ್ಲೀವ್‍ಲೆಂಡ್ ನ ಅಧಿಕೃತ ಮುದ್ರೆ
ಅಡ್ಡಹೆಸರುಗಳು: 
ಧ್ಯೇಯವಾಕ್ಯ(ಗಳು): 
Map
ಕ್ಲೀವ್‍ಲೆಂಡ್ ನ ಸಂವಾದಾತ್ಮಕ ನಕ್ಷೆ
ಕ್ಲೀವ್‍ಲೆಂಡ್ is located in Ohio
ಕ್ಲೀವ್‍ಲೆಂಡ್
ಕ್ಲೀವ್‍ಲೆಂಡ್
Location within Ohio
ಕ್ಲೀವ್‍ಲೆಂಡ್ is located in the United States
ಕ್ಲೀವ್‍ಲೆಂಡ್
ಕ್ಲೀವ್‍ಲೆಂಡ್
Location within the United States
ನಿರ್ದೇಶಾಂಕಗಳು: 41°29′57″N 81°41′41″W / 41.4992°N 81.6947°W / 41.4992; -81.6947
CountryUnited States
StateOhio
CountyCuyahoga
FoundedJuly 22, 1796 (1796-07-22)
Incorporated (village)December 23, 1814 (1814-12-23)
Incorporated (city)March 5, 1836 (1836-03-05)[೩]
ಹೆಸರಿಡಲಾಗಿದೆMoses Cleaveland
ಸರ್ಕಾರ
 • ಪ್ರಕಾರStrong mayor / Council
 • ಸಂಸ್ಥೆCleveland City Council
 • MayorJustin Bibb (D)
ವಿಸ್ತೀರ್ಣ
 • City
82.48 sq mi (213.62 km2)
 • ಭೂಮಿ77.73 sq mi (201.33 km2)
 • ನೀರು4.75 sq mi (12.29 km2)
ಎತ್ತರ653 ft (199 m)
ಜನಸಂಖ್ಯೆ
 (2020)
 • City
೩,೭೨,೬೨೪
 • ಅಂದಾಜು 
(2025)[೬]
೩,೬೩,೬೦೮ decrease
 • ಶ್ರೇಣಿ53rd in the United States
2nd in Ohio
 • ಸಾಂದ್ರತೆ4,793.5/sq mi (1,850.78/km2)
 • ನಗರ
೧೭,೧೨,೧೭೮ (US: ೩೧st)
 • ನಗರ ಸಾಂದ್ರತೆ2,399/sq mi (926.1/km2)
 • ಮೆಟ್ರೋ೨೧,೭೧,೮೭೭ (US: ೩೪th)
ಡೆಮೊನಿಮ್Clevelander
GDP
 • Metro$139.935 billion (2023)
ಸಮಯ ವಲಯUTC−5 (EST)
 • ಬೇಸಿಗೆ (DST)UTC−4 (EDT)
ZIP Codes
ZIP Codes[೯]
Area code216
ಜಾಲತಾಣclevelandohio.gov

ಕ್ಲೀವ್‍ಲೆಂಡ್ ಅಮೆರಿಕ ಸಂಯುಕ್ತಸಂಸ್ಥಾನದ ಒಹಾಯೊ ರಾಜ್ಯದ ಒಂದು ನಗರ. ಈರಿ ಸರೋವರದ ಒಂದು ರೇವುಪಟ್ಟಣ. ಕೈಹಾಗ ನದಿಯ ಮುಖದ ಮೇಲಿದೆ. ಜನಸಂಖ್ಯೆ ೩,೬೩,೬೦೮(೨೦೨೫). [೬]

Key Tower and the Fountain of Eternal Life by Marshall Fredericks

ಕ್ಲೀವ್‍ಲೆಂಡ್ ನಗರ ಪ್ರದೇಶದಲ್ಲಿ 24 ನಗರಗಳು ಮತ್ತು 53 ಹಳ್ಳಿಗಳುಂಟು. ಅವುಗಳಲ್ಲಿ ಕ್ಲೀವ್‍ಲೆಂಡ್ ಹೈಟ್ಸ್, ಈಸ್ಟ್ ಕ್ಲೀವ್‍ಲೆಂಡ್, ಷೇಕರ್ ಹೈಟ್ಸ್, ಲೇಕ್‍ವುಡ್, ಯೂಕ್ಲಿಡ್, ಬೆಡ್‍ಫೋರ್ಡ್, ಪಾರ್ಮ ಮತ್ತು ಯೂನಿವರ್ಸಿಟಿ ಹೈಟ್ಸ್ ಮುಖ್ಯವಾದುವು. ಪೋಲಿಷ್, ಚೆಕೊಸ್ಲವಾಕ್, ಇಟಾಲಿಯನ್, ಹಂಗರಿಯನ್, ಜರ್ಮನ್, ಯೂಗೊಸ್ಲಾವ್, ರಷ್ಯನ್, ಆಸ್ಟ್ರಿಯನ್ ಮುಂತಾದ ಜನ ಇಲ್ಲಿ ಅಧಿಕ ಸಂಖ್ಯೆಗಳಲ್ಲಿದ್ದಾರಾದರೂ ಅವರ ವೈಶಿಷ್ಟ್ಯಗಳಿಗೆ ಕುಂದುಂಟಾಗುವ ರೀತಿಯಲ್ಲಿ ಐಕ್ಯ ಸಾಧನೆಯಾಗಿದೆ. ಕ್ಲೀವ್‍ಲೆಂಡ್ ಒಂದು ಮುಖ್ಯ ವ್ಯಾವಹಾರಿಕ, ಕೈಗಾರಿಕಾ ಹಾಗೂ ಸಾಂಸ್ಕøತಿಕ ಕೇಂದ್ರ.

ಕೈಗಾರಿಕೆಗಳು

[ಬದಲಾಯಿಸಿ]

ಕ್ಲೀವ್‍ಲೆಂಡಿನಲ್ಲಿ ಅಲ್ಯೂಮಿನಿಯಂ, ವಿದ್ಯುತ್ ಉಪಕರಣ, ಟ್ರಾಕ್ಟರ್, ಬಸ್, ವಿಮಾನಗಳ ಬಿಡಿಭಾಗಗಳು ಮುಂತಾದ ಕೈಗಾರಿಕೆಗಳಿವೆ. ಇದು ಒಹಾಯೊ ರಾಜ್ಯದ ಮುಖ್ಯ ತೈಲಶುದ್ಧೀಕರಣ ಕೇಂದ್ರ. ಮೂಲಭೂತ ರಾಸಾಯನಿಕಗಳು, ಬಣ್ಣಗಳು ಮತ್ತು ಪ್ಲಾಸ್ಟಿಕ್ ವಸ್ತುಗಳ ಕೈಗಾರಿಕೆಗಳಿಗೂ ಈ ನಗರ ಪ್ರಸಿದ್ಧಿ ಪಡೆದಿದೆ. ಕ್ಲೀವ್‍ಲೆಂಡ್ ನಗರಪ್ರದೇಶದಲ್ಲಿ ಒಟ್ಟು 400 ಸಂಶೋಧನಾಲಯಗಳುಂಟು.

ವಿದ್ಯಾಸಂಸ್ಥೆಗಳು

[ಬದಲಾಯಿಸಿ]

ಕ್ಲೀವ್‍ಲೆಂಡಿನ ಪ್ರಮುಖ ವಿದ್ಯಾಸಂಸ್ಥೆಯೆಂದರೆ ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾಲಯ. ಇದು ಸ್ಥಾಪಿತವಾದ್ದು 1826ರಲ್ಲಿ. ಇದರ ಕಕ್ಷೆಯಲ್ಲಿ ಅನೇಕ ಕಾಲೇಜುಗಳು ಸ್ಥಾಪಿತವಾಗಿವೆ.

ಕೇಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (1880), ಜಾನ್ ಕ್ಯಾರಲ್ ವಿಶ್ವವಿದ್ಯಾಲಯ, ಪುರುಷರ ರೋಮನ್ ಕೆಥೊಲಿಕ್ ವಿಶ್ವವಿದ್ಯಾಲಯ (1886), ಬಾಲ್ಡ್‍ವಿನ್ ವಾಲೇಸ್ ಕಾಲೇಜ್(1845), ಕ್ಲೀವ್‍ಲೆಂಡ್ ಕಲಾ ಸಂಸ್ಥೆ (1882), ಕ್ಲೀವ್‍ಲೆಂಡ್ ಸಂಗೀತ ಸಂಖ್ಯೆ (1920), ಕ್ಲೀವ್‍ಲೆಂಡ್-ಮಾರ್ಷಲ್ ನ್ಯಾಯಶಾಸ್ತ್ರ ಶಾಲೆ (1897) ಮುಂತಾದ ಅನೇಕ ಶಿಕ್ಷಣ ಸಂಸ್ಥೆಗಳಿವೆ.

ಪ್ರೆಕ್ಷಣೀಯ ಸ್ಥಳಗಳು

[ಬದಲಾಯಿಸಿ]
Skyline of Cleveland at night in January 2025

ಕ್ಲೀವ್‍ಲೆಂಡಿನಲ್ಲಿ ಕಲಾ ವಸ್ತು ಸಂಗ್ರಹಾಲಯ, ಪ್ರಕೃತಿ ವಿಜ್ಞಾನ ವಸ್ತು ಸಂಗ್ರಹಾಲಯ, ಆರೋಗ್ಯ ವಸ್ತುಸಂಗ್ರಹಾಲಯ, ಅಲೆನ್ ಮೆಮೋರಿಯಲ್ ವೈದ್ಯಕ ಗ್ರಂಥಾಲಯ ಮುಂತಾದ ಅನೇಕ ಸಾರ್ವಜನಿಕ ಸಂಸ್ಥೆಗಳಿವೆ. ಕ್ಲೀವ್‍ಲೆಂಡಿನಲ್ಲಿ ಅನೇಕ ನಾಟ್ಯಶಾಲೆಗಳುಂಟು. ವರ್ಷವಿಡೀ ಅಲ್ಲಿ ವೃತ್ತಿರಂಗಭೂಮಿಯ ನಟರೂ ಕಲಾ ವಿಲಾಸಿಗಳೂ ನಾಟಕ ಪ್ರದರ್ಶಿಸುತ್ತಿರುತ್ತಾರೆ. ಇಲ್ಲಿರುವ ಅನೇಕ ಉದ್ಯಾನಗಳಲ್ಲಿ ಸ್ಥಳೀಯ ನಿಸರ್ಗ ಸೌಂದರ್ಯವನ್ನು ಹಾಗೆಯೇ ರಕ್ಷಿಸಲಾಗಿದೆ. ಬಿಗ್ ಕ್ರೀಕ್‍ನಲ್ಲಿಯ ಪ್ರಾಣಿಸಂಗ್ರಹಾಲಯ ಪ್ರಸಿದ್ಧವಾದ್ದು. ಕ್ಲೀವ್‍ಲೆಂಡ್ ನಗರ ಪ್ರದೇಶದಲ್ಲಿ ಸುಮಾರು 60 ಆಸ್ಪತ್ರೆಗಳುಂಟು. ಸಾಹಸಿ ಉದ್ಯಮಶೀಲರು ಮೊದಲಿಂದಲೂ ಈ ಪ್ರದೇಶವನ್ನು ಸದುಪಯೋಗ ಪಡಿಸಿಕೊಂಡು ಬಂದಿದ್ದಾರೆ. ಈ ಪ್ರದೇಶದ ಮಹತ್ತ್ವವನ್ನು ಮೊದಲಿಗೆ ಕಂಡುಕೊಂಡಿದ್ದವರು ಇಂಡಿಯನರು. ಅವರು ಈಗಿರುವ ನಗರದಲ್ಲಿ ಸಣ್ಣಸಣ್ಣ ದಿಬ್ಬಗಳನ್ನೂ ಕೋಟೆಗಳನ್ನೂ ಕಟ್ಟಿಕೊಂಡಿದ್ದರು. ಇವರೇ ಇಲ್ಲಿಯ ಮೊಟ್ಟಮೊದಲ ನಿವಾಸಿಗಳು. ಅನಂತರ ಕೈಹಾಗದ ತಗ್ಗುಪ್ರದೇಶದಲ್ಲಿ ಇಂಡಿಯನರು ಮತ್ತು ಫ್ರೆಂಚರು ವ್ಯಾಪಾರಕೇಂದ್ರಗಳನ್ನು ಸ್ಥಾಪಿಸಿದರು.

ನಗರದ ಪ್ರಾಮುಖ್ಯತೆ

[ಬದಲಾಯಿಸಿ]

ಅಮೆರಿಕನ್ ಕ್ರಾಂತಿಯ ಅನಂತರ ಒಹಾಯೊ ನಗರ ಸ್ಥಾಪನೆಯಾಗಿ ಅಲ್ಲಿ ಸಂಸಾರಗಳು ನೆಲೆಸಲಾರಂಭಿಸಿರುವುದು. ಕ್ಲೀವ್‍ಲೆಂಡ್ ನಗರದ ನಕ್ಷೆ ತಯಾರಾದ್ದು 1796ರಲ್ಲಿ. 1832ರಲ್ಲಿ ಒಹಾಯೊ ಕಾಲುವೆ ನಿರ್ಮಾಣಕಾಯ ಮುಗಿದ ಮೇಲೆ ಈ ನಗರದ ಪ್ರಾಮುಖ್ಯತೆ ಹೆಚ್ಚಿತು. ಅನಂತರ ರೈಲುಮಾರ್ಗಗಳು ನಿರ್ಮಾಣವಾದುವು. ನಗರ ಶೀಘ್ರವಾಗಿ ಬೆಳೆಯಿತು.

ಕ್ಲೀವ್‍ಲೆಂಡಿನ ನಾಗರಿಕರು ರಾಷ್ಟ್ರೀಯ ಅಂದೋಳನದಲ್ಲಿ ಯಾವಾಗಲೂ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲದೆ ಗುಲಾಮಗಿರಿ ರದ್ದಿಗಾಗಿ ದುಡಿದವರಿವರು. 20ನೆಯ ಶತಮಾನದ ಆರಂಭದಲ್ಲಿ ಸುಧಾರಣೆ ಮತ್ತು ಸಮಾಜ ಕಲ್ಯಾಣಾಭಿವೃದ್ಧಿ ಕಾರ್ಯಗಳು ನಡೆದುವು. ಧರ್ಮಕಾರ್ಯಗಳಿಗಾಗಿ ಸಾಮೂಹಿಕ ಕ್ಷೇಮನಿಧಿಯನ್ನು ಮೊದಲಿಗೆ ಆರಂಭಿಸಿದ್ದು ಈ ನಗರದಲ್ಲಿಯೇ. ಈ ಯೋಜನೆ ಮುಂದೆ ಸಂಯುಕ್ತ ಸಂಸ್ಥಾನದ ಇತರ ರಾಜ್ಯಗಳಿಗೂ ಹರಡಿತು. ಕಾರ್ಮಿಕ ಚಳವಳಿ ಇಲ್ಲಿ ಯಾವಾಗಲೂ ಉಗ್ರವಾಗಿತ್ತು.

ಛಾಯಾಂಕಣ

[ಬದಲಾಯಿಸಿ]

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. ↑ "Forest City". The Encyclopedia of Cleveland History. Case Western Reserve University. June 5, 2020. Retrieved May 19, 2023.
  2. ↑ "Municipal Symbols". The Encyclopedia of Cleveland History. Case Western Reserve University. October 3, 2022. Retrieved May 19, 2023.
  3. ↑ Rose 1990, p. 145.
  4. ↑ "ArcGIS REST Services Directory". United States Census Bureau. Retrieved September 20, 2022.
  5. ↑ "Cleveland". Geographic Names Information System. United States Geological Survey, United States Department of the Interior.
  6. 1 2 "Cleveland city, Ohio". QuickFacts. United States Census Bureau. Retrieved June 22, 2026.
  7. ↑ "2020 Population and Housing State Data". United States Census Bureau. Retrieved December 14, 2021.
  8. ↑ "Total Real Gross Domestic Product for Cleveland-Elyria, OH (MSA)". U.S. Bureau of Economic Analysis (BEA). Retrieved January 5, 2024.
  9. ↑ "ZIP Code Lookup". USPS. Archived from the original on September 3, 2007. Retrieved November 14, 2014.