ಕ್ಲಿಯೋಪಾತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕ್ಲಿಯೋಪಾತ್ರ VII Philopator
ಕ್ಲಿಯೋಪಾತ್ರ VII ಎಂದು ನಂಬಲಾಗಿರುವ ಪ್ರತಿಮೆ , ಆಲ್ಟೆಸ್ ಮ್ಯೂಸಿಯಂ, ಬರ್ಲಿನ್
Ptolemaic Queen of Egypt
ಆಳ್ವಿಕೆ 51 – 12 August 30 BC (21 years)
ಪೂರ್ವಾಧಿಕಾರಿ Ptolemy XII Auletes
Co-rulers Ptolemy XII Auletes
Ptolemy XIII Theos Philopator
Ptolemy XIV
Ptolemy XV Caesarion
ಗಂಡ/ಹೆಂಡತಿ Ptolemy XIII Theos Philopator
Ptolemy XIV
Mark Antony
ಸಂತಾನ
Caesarion, Ptolemy XV Philopator Philometor Caesar
Alexander Helios
Cleopatra Selene, Queen of Mauretania
Ptolemy XVI Philadelphus
ಪೂರ್ಣ ಹೆಸರು
ಕ್ಲಿಯೋಪಾತ್ರ VII ಥೀ ಫಿಲೋಪೇಟರ್
ತಂದೆ ಟಾಲೆಮಿ XII ಆಯುಲೆಸ್
ತಾಯಿ Cleopatra V of Egypt (presumably)
ಜನನ 69 BC
ಅಲೆಕ್ಸಾಂಡ್ರಿಯಾ, ಈಜಿಪ್ಟ್
ಮರಣ 12 ಆಗಸ್ಟ್ 30 ಕ್ರಿ.ಪೂ. (ವಯಸ್ಸು 39)
ಅಲೆಕ್ಸಾಂಡ್ರಿಯ, ಈಜಿಪ್ಟ್
Burial Unknown (probably in Egypt)

ಕ್ಲೀಯೊಪಾತ್ರ VII (ಏಳನೆಯ ಕ್ಲಿಯೊಪಾತ್ರ) (ಕ್ರಿ.ಪೂ. 69-30) ಇತಿಹಾಸದಲ್ಲಿ ಕ್ಲೀಯೊಪಾತ್ರ ಹೆಸರಿನ ಅನೇಕರಲ್ಲಿ ಪ್ರಸಿದ್ಧಳಾದವಳು 7ನೆಯ ಕ್ಲೀಯೊಪಾತ್ರ . ಇವಳು 12ನೆಯ ಟಾಲೆಮಿಯ ಮಗಳು. ಕ್ರಿ.ಪೂ. 51ರಲ್ಲಿ ಅವನ ಮರಣಾನಂತರ ಈಜಿಪ್ಟಿನ ರಾಣಿಯಾಗಿ ತನ್ನ ತಮ್ಮಂದಿರಾದ 13ನೆಯ ಮತ್ತು 14ನೆಯ ಟಾಲೆಮಿಯರೊಂದಿಗೂ ತನ್ನ ಮಗ 15ನೆಯ ಟಾಲೆಮಿಯೊಂದಿಗೂ ಆಳಿದಳು. ಆ ಅವಧಿಯಲ್ಲಿ ರೋಂ ಚಕ್ರಾಧಿಪತ್ಯದ ಪ್ರಮುಖ ನಾಯಕರಾದ ಜೂಲಿಯಸ್ ಸೀಸರ್ ಮತ್ತು ಮಾರ್ಕ್ ಆಂಟೊನಿಯರೊಂದಿಗೆ ಈಕೆ ಪಡೆದಿದ್ದ ವೈಯಕ್ತಿಕ ಸಂಬಂಧದಿಂದಾಗಿ ರೋಮಿನ ರಾಜಕಾರಣದಲ್ಲೂ ಇವಳು ಗಮನಾರ್ಹ ಪಾತ್ರ ವಹಿಸಿದ್ದಳು.

ಬದುಕು[ಬದಲಾಯಿಸಿ]

ಕ್ರಿ.ಪೂ 69ರಲ್ಲಿ ಗ್ರೀಕ್ ಮತ್ತು ಮ್ಯಾಸೆಡೋನಿಯನ್ ಸಮಮಿಶ್ರವಂಶವೊಂದರಲ್ಲಿ ಜನಿಸಿದ ಕ್ಲೀಯೊಪಾತ್ರ ಸುಂದರಿಯಲ್ಲದಿದ್ದರೂ ಪುರುಷರನ್ನು ಆಕರ್ಷಿಸುವ ರೂಪ ಪಡೆದಿದ್ದಳು. ವಿದ್ಯಾವಂತಳೂ ಬಹುಭಾಷೆಗಳನ್ನು ಬಲ್ಲವಳೂ ಆಗಿದ್ದಳು. ಈಜಿಪ್ಟಿನ ಜನರ ಬಗ್ಗೆ ಹೆಚ್ಚು ಪ್ರೀತಿವಿಶ್ವಾಸಗಳನ್ನು ತಳೆದಿದ್ದಳು. ಈಜಿಪ್ಟಿನ ರಾಜಕೀಯದಲ್ಲಿ ತನ್ನ ವಂಶದ ಪ್ರಾಮುಖ್ಯವನ್ನುಳಿಸಿಕೊಳ್ಳುವುದು ಮತ್ತು ರೋಮಿನ ರಾಜಕಾರಣದಲ್ಲೂ ಪ್ರಭಾವ ಬೀರುವುದು ಇವಳ ಆಕಾಂಕ್ಷೆಗಳಾಗಿದ್ದುವು.

ಈಜಿಪ್ಟಿನ ರಾಜಮನೆತನದ ಸಂಪ್ರದಾಯದಂತೆ ಕ್ರಿ.ಪೂ 51ರಲ್ಲಿ ತನ್ನ ತಂದೆಯ ಮರಣಾನಂತರ ತನ್ನ ಸೋದರ 13ನೆಯ ಟಾಲೆಮಿಯನ್ನು ವಿವಾಹವಾಗಿ ರಾಣಿಯಾದಳು. ಮೂರು ವರ್ಷಗಳಲ್ಲಿ ಅವನೊಂದಿಗೆ ವೈಮನಸ್ಯವೇರ್ಪಟ್ಟಾಗ ಆ ವೇಳೆಗೆ ದಂಡೆತ್ತಿ ಬಂದ ರೋಮಿನ ನಾಯಕ ಜೂಲಿಯಸ್ ಸೀಸರನೊಂದಿಗೆ ಸೇರಿಕೊಂಡು ಅವನ ಸಹಾಯದಿಂದ ತನ್ನ ಪತಿಯನ್ನೂ ಇತರ ಶತ್ರುಗಳನ್ನೂ ಕೊನೆಗಾಣಿಸಿದಳು. ಕ್ಲೀಯೊಪಾಟ್ರ ಸೀಸರನೊಂದಿಗೆ ರೋಮಿಗೆ ಹೋಗಿ ಅಲ್ಲಿ ತನಗಾಗಿ ನಿರ್ಮಿತವಾದ ಭವನವೊಂದರಲ್ಲಿ ಕ್ರಿ.ಪೂ 46ರಿಂದ ವಾಸಿಸುತ್ತಿದ್ದಳು. ಕ್ರಿ.ಪೂ 47ರಲ್ಲಿ ಅಥವಾ 44ರಲ್ಲಿ ಅವಳಿಗೊಬ್ಬ ಮಗ ಹುಟ್ಟಿದ. ಅವನು ಸೀಸರನಿಗೆ ಹುಟ್ಟಿದವನೆಂದು ಕ್ಲೀಯೊಪಾಟ್ರ ಹೇಳಿಕೊಳ್ಳುತ್ತಿದ್ದಳೆನ್ನಲಾಗಿದೆ. ಆದರೆ ಈ ಬಗ್ಗೆ ಲಭ್ಯವಿರುವಷ್ಟೇ ಪುರಾವೆಯ ಆಧಾರದ ಮೇಲೆ ಇದನ್ನು ದೃಢೀಕರಿಸಲು ಸಾಧ್ಯವಾಗುವುದಿಲ್ಲ. ಆ ಮಗನಿಗೆ ಟಾಲೆಮಿ ಸೀಸರ್ ಎಂದು ಹೆಸರಿಸಲಾಗಿತ್ತು. ಈಜಿಪ್ಟಿನ ದೈವದತ್ತ ಪ್ರಭುವಾಗಲೆಂಬ ಉದ್ದೇಶದಿಂದಲೇ ಸೀಸರ್ ಕ್ಲೀಯೊಪಾಟ್ರಳೊಂದಿಗೆ ವಿವಾಹ ಜೀವನ ನಡೆಸಿದನೆಂಬುದು ಒಂದು ಅಭಿಪ್ರಾಯವಾಗಿದೆ.

ಕ್ರಿ.ಪೂ 44ರಲ್ಲಿ ಸೀಸರನ ಕೊಲೆಯಾದಾಗ ರೋಮಿನಲ್ಲಿ ತನ್ನ ಪ್ರಭಾವ ನಶಿಸಿದುದರಿಂದ ಕ್ಲೀಯೊಪಾತ್ರ ಈಜಿಪ್ಟಿಗೆ ಹಿಂದಿರುಗಿದಳು. ಸೀಸರನ ಪರವಾಗಿ ಕ್ಲೀಯೊಪಾತ್ರ ನಡೆಸಿದ ಕೃತ್ಯಗಳ ವಿಚಾರಣೆಗಾಗಿ ಇವಳನ್ನು ಮಾರ್ಕ್ ಆಂಟೊನಿ ಕ್ರಿ.ಪೂ 41ರಲ್ಲಿ ಸಿಲಿಷಿಯಕ್ಕೆ ಕರೆಸಿದಾಗ ಆಂಟೊನಿಯನ್ನು ತನ್ನ ಬಲೆಯಲ್ಲಿ ಸಿಕ್ಕಿಸಿಕೊಂಡು ಅಲೆಕ್ಸಾಂಡ್ರಿಯದಲ್ಲಿ ಕೆಲಕಾಲ ಅವನೊಡನೆ ಬಾಳುವೆ ನಡೆಸಿದಳು. ಆಂಟೊನಿ ರೋಮಿಗೆ ಹಿಂದಿರುಗಿದಾಗ ಅವಳಿ ಮಕ್ಕಳನ್ನು ಹೆತ್ತು ಅಲೆಕ್ಸಾಂಡರ್ ಹೆಲಿಯೋಸ್ ಮತ್ತು ಕ್ಲೀಯೊಪಾಟ್ರ ಸೆಲಿನೆ ಎಂದು ಅವರಿಗೆ ಹೆಸರಿಟ್ಟಳು. ಪುನಃ ಕ್ರಿ.ಪೂ 37ರಲ್ಲಿ ಆಂಟೊನಿಯೊಂದಿಗೆ ಸೇರಿಕೊಂಡಾಗ ಅವಳಿಗೆ ರೋಮಿನ ರಾಜಕಾರಣದಲ್ಲಿ ಭಾಗವಹಿಸುವ ಅವಕಾಶ ದೊರಕಿತು. ಪರಂಪರಾಗತವಾಗಿ ಈಜಿಪ್ಟಿನ ಬೊಕ್ಕಸದಲ್ಲಿ ಸಂಗ್ರಹವಾಗಿದ್ದ ಅಪಾರಧನವನ್ನು ವ್ಯಯಮಾಡಿ, ಆಂಟೊನಿಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡು, ಅದರಿಂದ ತನ್ನ ರಾಜಕೀಯ ಪ್ರಭಾವವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಿದಳು. ಆಕೆಯನ್ನು ಆಂಟೊನಿ ವಿದ್ಯುಕ್ತವಾಗಿ ವಿವಾಹವಾದ. ಕ್ರಿ.ಪೂ. 40ರಲ್ಲಿ ಅವಳಿಗೆ ಹುಟ್ಟಿದ ಅವಳಿಗಳನ್ನು ತನ್ನ ಮಕ್ಕಳೆಂದು ಆಂಟೊನಿ ಸ್ವೀಕರಿಸಿದ. ರೋಮ್ ಸಾಮ್ರಾಜ್ಯಕ್ಕೆ ಏಷ್ಯದಲ್ಲಿ ಸೇರಿದ ಅನೇಕ ಪ್ರಾಂತ್ಯಗಳನ್ನು ಕ್ಲೀಯೊಪಾಟ್ರಳಿಗೆ ವಹಿಸಿಕೊಟ್ಟ. ಕ್ರಿ.ಪೂ. 34ರಲ್ಲಿ ಆಂಟೊನಿ ಪೂರ್ವ ರೋಮನ್ ಚಕ್ರಾಧಿಪತ್ಯವೊಂದನ್ನು ಸ್ಥಾಪಿಸಿ ಅದರ ವಿವಿಧ ಪ್ರದೇಶಗಳನ್ನು ಕ್ಲೀಯೊಪಾಟ್ರಳ ಮಕ್ಕಳು ಆಳತಕ್ಕದೆಂದೂ ಕ್ಲೀಯೊಪಾಟ್ರ ರಾಜರ ರಾಣಿಯೆನಿಸಿಕೊಂಡು ಅವರಿಗೆ ಮೇಲ್ಪಟ್ಟು ಇರತಕ್ಕದೆಂದೂ ಘೋಷಿಸಿದ.

ಕ್ರಿ.ಪೂ. 33ರಲ್ಲಿ ಕ್ಲೀಯೊಪಾಟ್ರಳ ಪ್ರೇರೇಪಣೆಯಿಂದ ಆಂಟೊನಿ ತನ್ನ ಪ್ರತಿಕಕ್ಷಿ ಆಕ್ಟೇವಿಯನನ ಮೇಲೆ ಯುದ್ಧ ಸಾರಿದ. ಈ ಕದನಗಳಲ್ಲಿ ಕ್ಲೀಯೊಪಾಟ್ರ ಆಂಟೊನಿಯ ಜೊತೆಯಲ್ಲೇ ಇದ್ದು ಪ್ರಧಾನ ಪಾತ್ರ ವಹಿಸಿದಳು. ಆದರೆ ಇದರಿಂದ ಅವಳ ಮತ್ತು ಆಂಟೊನಿಯ ಬಗ್ಗೆ ಶತ್ರುಗಳು ಅಪಪ್ರಚಾರಮಾಡಲು ಅವಕಾಶವಾಯಿತು. ಯುದ್ಧದಲ್ಲಿ ಅವರಿಬ್ಬರೂ ಸೋತು ಓಡಿಹೋಗಿ ಮೊದಲು ಆಂಟೊನಿಯೂ ಕೆಲದಿನಗಳ ಅನಂತರ ಕ್ಲೀಯೊಪಾಟ್ರಳೂ ಆತ್ಮಹತ್ಯ ಮಾಡಿಕೊಂಡರು. ಹಾವು ಆಮನ್-ರಾ ಎಂಬ ಸೂರ್ಯದೇವರ ಮಂತ್ರಿಯೆಂಬ ನಂಬಿಕೆ ಆಗ ಈಜಿಪ್ಟಿನಲ್ಲಿತ್ತು. ಆದ್ದರಿಂದ ತನ್ನ ಪ್ರಜೆಗಳ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಅವಳು ಹಾವಿನಿಂದ ಕಚ್ಚಿಸಿಕೊಂಡು ಸತ್ತಳು. ಸಾಯುವ ಮುನ್ನ ಕ್ಲೀಯೊಪಾಟ್ರ ಅಕ್ಟೇವಿಯನನನ್ನು ಸಂಧಿಸಿ ತನ್ನ ಮಕ್ಕಳ ರಕ್ಷಣೆಗಾಗಿ ಬೇಡಿಕೊಂಡಳೆಂದು ತಿಳಿದುಬರುತ್ತದೆ. ಕ್ಲಿಯೋಪಾತ್ರಳ  ಆತ್ಮಹತ್ಯೆ ಈಜಿಪ್ಟಿನಲ್ಲಿ ಪ್ಟೋಲೆಮಿ ರಾಜವಂಶ ಆಡಳಿತ ಅಂತ್ಯವನ್ನು ಕಂಡಿತು.

Ptolemaic Queen (Cleopatra VII?), 50-30 B.C., 71.12, Brooklyn Museum

ಕ್ಲೀಯೊಪಾಟ್ರ ಹೆಸರಿನ ಇತರರು[ಬದಲಾಯಿಸಿ]

ಮ್ಯಾಸೆಡೋನಿಯದ ಅಲೆಕ್ಸಾಂಡರ್ ಮಹಾಶಯನ ಸೋದರಿ ಒಬ್ಬಳು. ಸೆಲ್ಯೂಸಿಡ್ ದೊರೆ 3ನೆಯ ಆಂಟಿಯೋಕಸನ ಮಗಳು ಇನ್ನೊಬ್ಬಳು. ಈಕೆಯನ್ನು ಈಜಿಪ್ಟಿನ ದೊರೆ 5ನೆಯ ಟಾಲೆಮಿ ಮದುವೆಯಾಗಿದ್ದ (ಕ್ರಿ.ಪೂ. 193). ಅನಂತರ ಟಾಲೆಮಿ ದೊರೆಗಳ ವಂಶದಲ್ಲಿ ಈ ಹೆಸರಿನ ಅನೇಕ ರಾಣಿಯರೂ ರಾಜಕುಮಾರಿಯರೂ ಆಗಿಹೋದರು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  • Vanessa Collingridge (2014). "Cleopatra: A Timewatch Guide". Retrieved 5 July 2016.
  • Cleopatra, a Victorian children's book by Jacob Abbott, 1852, Project Gutenberg edition
  • "Mysterious Death of Cleopatra" Archived 2006-08-11 ವೇಬ್ಯಾಕ್ ಮೆಷಿನ್ ನಲ್ಲಿ. at the Discovery Channel Archived 2019-01-23 ವೇಬ್ಯಾಕ್ ಮೆಷಿನ್ ನಲ್ಲಿ.
  • Cleopatra VII at BBC History
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: