ವಿಷಯಕ್ಕೆ ಹೋಗು

ಕ್ಲಾರಿಸ್ಸಾ ಅಲೆನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ಲಾರಿಸ್ಸಾ ಮಿನ್ನಿ ಥಾಂಪ್ಸನ್ ಅಲೆನ್
ಕೊಲಂಬಿಯಾ, ದಕ್ಷಿಣ ಕೆರೊಲಿನಾ, ಯುನೈಟೆಡ್ ಸ್ಟೇಟ್ಸ್
ಶಿಕ್ಷಕಿ ಕ್ಲಾರಿಸ್ಸಾ ಎಂ. ಥಾಂಪ್ಸನ್ ಅವರ ಭಾವಚಿತ್ರ -1872
ಕೊಲಂಬಿಯಾ, ದಕ್ಷಿಣ ಕೆರೊಲಿನಾ, ಯುನೈಟೆಡ್ ಸ್ಟೇಟ್ಸ್ ಶಿಕ್ಷಕಿ ಕ್ಲಾರಿಸ್ಸಾ ಎಂ. ಥಾಂಪ್ಸನ್ ಅವರ ಭಾವಚಿತ್ರ -1872
ಜನನಕ್ಲಾರಿಸ್ಸಾ ಮಿನ್ನಿ ಥಾಂಪ್ಸನ್
ಅಕ್ಟೋಬರ್ 1, 1859[]
ಕೊಲಂಬಿಯಾ, ದಕ್ಷಿಣ ಕೆರೊಲಿನಾ, ಯುನೈಟೆಡ್ ಸ್ಟೇಟ್ಸ್
ನಿಧನNovember 23, 1941(1941-11-23) (aged 82)[]
ಮಿಲಾಮ್, ಟೆಕ್ಸಾಸ್
ಉದ್ಯೋಗಶಿಕ್ಷಕಿ
ಲೇಖಕಿ
ಭಾಷೆಇಂಗ್ಲಿಷ್
ಶಿಕ್ಷಣಹೊವಾರ್ಡ್ ಜೂನಿಯರ್ ಹೈಸ್ಕೂಲ್

ಕ್ಲಾರಿಸ್ಸಾ ಮಿನ್ನಿ ಥಾಂಪ್ಸನ್ ಅಲೆನ್ (ಅಕ್ಟೋಬರ್ 1, 1859 – ನವೆಂಬರ್ 23, 1941) ಅಮೇರಿಕದ ಶಿಕ್ಷಕಿ ಮತ್ತು ಲೇಖಕಿ ಆಗಿದ್ದರು. ಅವರು ಅಮೇರಿಕದ ದಕ್ಷಿಣ ಭಾಗದಲ್ಲಿರುವ ಶ್ರೀಮಂತ ಆಫ್ರಿಕನ್-ಅಮೇರಿಕನ್ ಕುಟುಂಬಗಳ ಬಗ್ಗೆ ಕಲ್ಪಿತ ಕಥೆಗಳನ್ನು ಬರೆದಿದ್ದರು.[]

ವೈಯಕ್ತಿಕ ಜೀವನ

[ಬದಲಾಯಿಸಿ]

ಕ್ಲಾರಿಸ್ಸಾ ಮಿನ್ನಿ ಥಾಂಪ್ಸನ್ ಅವರು ದಕ್ಷಿಣ ಕ್ಯಾರೊಲಿನಾ ರಾಜ್ಯದ ಕೊಲಂಬಿಯಾ ನಗರದಲ್ಲಿ ಜನಿಸಿದರು. ಅವರು ಎಲೈಸಾ ಹೆನ್ರಿಯೆಟ್ಟಾ ಮಾಂಟ್ಗೊಮೆರಿ (ಒಬ್ಬ ಸಮಾಜಸೇವಕಿ) ಮತ್ತು ಸ್ಯಾಮ್ಯುಯೆಲ್ ಬೆಂಜಮಿನ್ ಥಾಂಪ್ಸನ್ (ದಕ್ಷಿಣ ಕ್ಯಾರೊಲಿನಾ ಸಂವಿಧಾನ ಸಭೆಯ ಪ್ರತಿನಿಧಿ) ಇವರ ಒಂಬತ್ತು ಮಕ್ಕಳಲ್ಲಿ ಒಬ್ಬರಾಗಿದ್ದರು.[]

ಅವರು ಹೋವರ್ಡ್ ಜೂನಿಯರ್ ಹೈ ಸ್ಕೂಲ್ ಮತ್ತು ದಕ್ಷಿಣ ಕ್ಯಾರೊಲಿನಾದ ಒಂದು ನಾರ್ಮಲ್ ಶಾಲೆಯಲ್ಲಿ ಶಿಕ್ಷಣ ಪಡೆದರು. ಅವರು ಮೂರು ವಿಭಿನ್ನ ಶಾಲೆಗಳಲ್ಲಿ ಕೆಲಸ ಮಾಡಿದರು, ಅವುಗಳಲ್ಲಿ ಅಲೆನ್ ವಿಶ್ವವಿದ್ಯಾಲಯವೂ ಸೇರಿದ್ದು, ಅಲ್ಲಿ ಅವರು ಅಲ್ಜೀಬ್ರಾ, ಲ್ಯಾಟಿನ್, ಭೌತಿಕ ಭೂವಿಜ್ಞಾನ ಮತ್ತು ಇತಿಹಾಸ ಮೊದಲಾದ ವಿಷಯಗಳನ್ನು ಬೋಧಿಸಿದರು.[]

ಸುಮಾರು 1886ರ ವೇಳೆಗೆ ಅವರು ಟೆಕ್ಸಾಸ್‌ನ ಜೆಫರ್ಸನ್ ನಗರಕ್ಕೆ ಸ್ಥಳಾಂತರಗೊಂಡು, ಅಲ್ಲಿ ಒಂದು ಸರ್ಕಾರಿ ಶಾಲೆಯಲ್ಲಿ ಬೋಧನೆ ಮಾಡಿದರು. ನಂತರ ಅವರು ಟೆಕ್ಸಾಸ್‌ನ ಫೋರ್ಟ್ ವರ್ಥ್ ನಗರದಲ್ಲಿಯೂ ವಾಸವಿದ್ದು, ಅಲ್ಲಿನ ಸರ್ಕಾರಿ ಶಾಲಾ ವ್ಯವಸ್ಥೆಯಲ್ಲಿ ಕೆಲಸ ಮಾಡಿದರು.

ವೃತ್ತಿಜೀವನ

[ಬದಲಾಯಿಸಿ]

ಅಲೆನ್ ಅವರು ಅಮೇರಿಕದ ದಕ್ಷಿಣ ಭಾಗದಲ್ಲಿರುವ ಶ್ರೀಮಂತ ಆಫ್ರಿಕನ್-ಅಮೇರಿಕನ್ ಕುಟುಂಬಗಳ ನೈಜ ಕಥೆಗಳ ಆಧಾರದ ಮೇಲೆ ಕಲ್ಪಿತ ಕಥೆಗಳನ್ನು ಬರೆದಿದ್ದರು. ಅವರ ಅತ್ಯಂತ ಪ್ರಸಿದ್ಧ ಕೃತಿ ಟ್ರೆಡಿಂಗ್ ದ ವೈನ್‌ಪ್ರೆಸ್ (A Mountain of Misfortune ಎಂದೂ ಕರೆಯಲಾಗುತ್ತದೆ). ಈ ಪುಸ್ತಕದಲ್ಲಿ ಎರಡು ಕುಟುಂಬಗಳ ಬಗ್ಗೆ 41 ಕಥೆಗಳು ಸೇರಿದ್ದವು. ಈ ಕಥೆಗಳು “ಕ್ಯಾಪಿಟೋಲಿಯಾ” ಎಂಬ ಸ್ಥಳದಲ್ಲಿ ನಡೆಯುತ್ತವೆ, ಅದು ದಕ್ಷಿಣ ಕ್ಯಾರೊಲಿನಾದ ಕೊಲಂಬಿಯಾ ನಗರವನ್ನು ಆಧರಿಸಿತ್ತು.[]

ಈ ಕೃತಿಯಲ್ಲಿ ಪ್ರೇಮ ತ್ರಿಕೋಣಗಳು ಮತ್ತು ಹತ್ಯೆಗಳ ಜೊತೆಗೆ ಸ್ತ್ರೀತ್ವ, ದಾನಶೀಲತೆ ಮತ್ತು ಮನೋವಿಕಾರಗಳಂತಹ ವಿಷಯಗಳನ್ನೂ ಒಳಗೊಂಡಿವೆ. ಇದು ಸರಣಿಯಾಗಿ ಪ್ರಕಟವಾದ ಕೃತಿ ಆಗಿತ್ತು ಮತ್ತು ದಕ್ಷಿಣ ಕ್ಯಾರೊಲಿನಾದ ಆಫ್ರಿಕನ್-ಅಮೇರಿಕನ್ ಮಹಿಳೆಯಿಂದ ಬರೆಯಲ್ಪಟ್ಟ ಮೊದಲ ಕಾದಂಬರಿಯೆಂದು ನಂಬಲಾಗಿದೆ.

ಅವರು ಟೆಕ್ಸಾಸ್ ಆಧಾರಿತ ಪ್ರಕಟಣೆಗಳಿಗೆ ಚಿಕ್ಕ ಕಾದಂಬರಿಗಳನ್ನೂ (ನವೆಲೆಟ್‌ಗಳು) ಬರೆದಿದ್ದರು. ಅವರ ಕವನಗಳು ಕೂಡ ಆಫ್ರಿಕನ್-ಅಮೇರಿಕನ್ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಕೆಲವು ವಿಮರ್ಶಕರು ಅವರ ಕೃತಿಗಳು ಧರ್ಮ ವಿರೋಧಿಯಾಗಿವೆ ಎಂದು, ವಿಶೇಷವಾಗಿ ಆಫ್ರಿಕನ್ ಮೆಥಡಿಸ್ಟ್ ಎಪಿಸ್ಕೋಪಲ್ ಚರ್ಚ್ ವಿರುದ್ಧವಾಗಿವೆ ಎಂದು ಅಭಿಪ್ರಾಯಪಟ್ಟಿದ್ದರು.

ಉಲ್ಲೇಖಗಳು

[ಬದಲಾಯಿಸಿ]
  1. 1 2 Texas, Death Certificates, 1903–1982
  2. https://en.wikipedia.org/wiki/Clarissa_Allen
  3. https://books.google.co.in/books?id=iTWu0aSofkkC&redir_esc=y
  4. https://en.wikipedia.org/wiki/Special:BookSources/978-0-313-33429-0
  5. https://books.google.co.in/books?id=ZbyBKRvoot8C&pg=PA6&redir_esc=y