ಕ್ರೆಸ್ ವಿಲಿಯನ್ ಸಂಸ್ಕೃತಿ
ಗೋಚರ
| ಭೌಗೋಳಿಕ ವ್ಯಾಪ್ತಿ | Great Britain |
|---|---|
| ಕಾಲ | Upper Paleolithic |
| ಅವಧಿಗಳು | between 13,000–11,800 BP[೧] |
| Type site | Creswell Crags |
| Major sites | Gough's Cave, Kents Cavern |
ಕ್ರೆಸ್ ವಿಲಿಯನ್ ಸಂಸ್ಕೃತಿಇಂಗ್ಲೆಂಡಿನ ಡರ್ಬಿಷೈರ್ ಮತ್ತು ನಾಟಿಂಗ್ಹ್ಯಾಮ್‍ಷೈರ್‍ಗಳ ಎಲ್ಲೆಯಲ್ಲಿರುವ ಕ್ರೆಸ್ವಿಲ್ ಕ್ರ್ಯಾಗ್ಸ್ ಎಂಬಲ್ಲಿಯ ಬೆಟ್ಟದ ಗುಹೆಗಳಲ್ಲಿ ದೊರಕಿರುವ ಪೂರ್ವ ಮತ್ತು ಮಧ್ಯಶಿಲಾಯುಗದ ಅವಶೇಷಗಳಿಂದ ವ್ಯಕ್ತವಾಗಿರುವ ಸಂಸ್ಕೃತಿ, ಪೂರ್ವ ಶಿಲಾಯುಗದ ಅಂತ್ಯದಲ್ಲಿದ್ದ ಆರಿಗ್ನೇಷಿಯನ್ ಗ್ರಾವಿಟ್ಟಿಯನ್, ಮ್ಯಾಡಲೀನಿಯನ್ ಮುಂತಾದ ಐರೋಪ್ಯ ಸಮಕಾಲೀನ ಸಂಸ್ಕೃತಿಗಳ ಹಲವಾರು ಲಕ್ಷಣಗಳು ಈ ಸಂಸ್ಕೃತಿಯಲ್ಲಿ ಕಂಡುಬಂದರೂ ಅವುಗಳ ಉನ್ನತ ಮಟ್ಟವನ್ನು ತಲುಪದಿದ್ದ ಮತ್ತು ಬಹುಶ: ಇಂಗ್ಲೆಂಡಿನಲ್ಲೇ ಬೆಳೆದು ತನ್ನದೇ ಆದ ವೈಶಿಷ್ಟ್ಯವನ್ನು ರೂಪಿಸಿಕೊಂಡ ಸಂಸ್ಕೃತಿಗಳಲ್ಲಿ ಇದಕ್ಕೆ ಅಗ್ರಸ್ಥಾನ ಸಲ್ಲುತ್ತದೆ. ಕಲ್ಲುಫಲಕದ ಆಯುಧಗಳನ್ನು ಒಂದು ಪಕ್ಕ ಮೊಂಡು ಮಾಡಿದ ಚಾಕು, ಮೊನೆಗಳು, ಎರಡು ಸಾಲು ಹಲ್ಲುಗಳಿದ್ದ ಜಿಂಕೆ ಕೊಂಬಿನ ಈಟಿಗಾಳ ಮುಂತಾದ ಆಯುಧಗಳನ್ನು, ಬಳಸುತ್ತಿದ್ದ ಈ ಸಂಸ್ಕೃತಿಯಲ್ಲಿ ಕ್ರಮೇಣ ಸೂಕ್ಷ್ಮ ಶಿಲಾಯುಧ ಹಂತದ ಜ್ಯಾಮಿತಿಕ ಆಕಾರಗಳಿದ್ದ ಉಪಕರಣಗಳು ಬಳಕೆಗೆ ಬಂದುವು.
ಉಲ್ಲೇಖಗಳು
[ಬದಲಾಯಿಸಿ]- ↑ Robert Hosfield, Vanessa Straker and Paula Gardiner with contributions from Anthony Brown, Paul Davies, Ralph Fyfe, Julie Jones and Heather Tinsley (2007). "Palaeolithic and Mesolithic". In Webster, C.J. (ed.). The Archaeology of South West England. Somerset County Council. p. 36.
There are numerous radiocarbon determinations on human remains, butchered animal bones and organic artefacts which date the Creswellian to between 13,000-11.800 BP (Jacobi 2004).
{{cite book}}: CS1 maint: multiple names: authors list (link)
