ಕ್ರೀಟ್
| Geography | |
|---|---|
| Location | Eastern Mediterranean |
| Coordinates | 35°12.6′N 24°54.6′E / 35.2100°N 24.9100°E |
| ವಿಸ್ತೀರ್ಣ | ೮,೪೫೦ km೨ (೩,೨೬೩ sq mi) |
| Area rank | 88 |
| ಸಮುದ್ರ ಮಟ್ಟದಿಂದ ಎತ್ತರ | ೨,೪೫೬ m (೮,೦೫೮ ft) |
| Country | |
| Demographics | |
| Demonym | Cretan, archaic Cretian |
| Population | 624,408 |
| ಸಾಂದ್ರತೆ | ೭೪.೯ /km೨ (೧೯೪ /sq mi) |

ಕ್ರೀಟ್ ಮೆಡಿಟರೇನಿಯನ್ ಸಮುದ್ರದಲಿರುವ ಐದನೆಯ ಅತ್ಯಂತ ದೊಡ್ಡ ದ್ವೀಪ ; ಗ್ರೀಸಿಗೆ ಸೇರಿದ ದ್ವೀಪಗಳಲ್ಲಿ ಅತ್ಯಂತ ದೊಡ್ಡದು; ಅದರ ಒಂದು ಪ್ರಾಂತ್ಯ. ಉ.ಅ. 34ಲಿ 55'-35ಲಿ 41' ಮತ್ತು ಪೂ.ರೇ. 26ಲಿ 30'-26ಲಿ 20' ನಡುವೆ ಇದೆ. ಇದು ಯುರೋಪ್ ಖಂಡದ ದಕ್ಷಿಣದ ತುದಿ. ಈಜಿಯನ್ ಸಮುದ್ರದ ದಕ್ಷಿಣದಲ್ಲಿದೆ. ಪೂರ್ವಪಶ್ಚಿಮವಾಗಿ ಈ ದ್ವೀಪದ ಉದ್ದ ಸುಮಾರು 152 ಮೈ. ಅಗಲ 7¾ರಿಂದ 35 ಮೈ.ವರೆಗೆ ವ್ಯತ್ಯಾಸವಾಗುತ್ತದೆ. ವಿಸ್ತೀರ್ಣ ೩,೨೬೦ ಚ.ಮೈ. ಜನಸಂಖ್ಯೆ ೬,೨೪,೪೦೮ (೨೦೨೧).[೧]
ಭೌತಲಕ್ಷಣ
[ಬದಲಾಯಿಸಿ]



ವಾಸ್ತವವಾಗಿ ಈ ದ್ವೀಪ ಸಮುದ್ರದಿಂದ ಮೇಲೆದ್ದು ನಿಂತಿರುವ ಪರ್ವತಗಳ ಮಾಲೆ. ಇದು ಗ್ರೀಕ್ ಪ್ರಸ್ಥಭೂಮಿ ಮತ್ತು ಏಷ್ಯ ಮೈನರ್‍ಗಳ ನಡುವೆ ಸಂಪರ್ಕವನ್ನು ಕಲ್ಪಿಸುತ್ತದೆ. ಇದರ ಮೇಲ್ಮೈ ತುಂಬ ಕಡಿದಾಗಿರುವ ಬೆಟ್ಟಗುಡ್ಡಗಳನ್ನೊಳಗೊಂಡಿದ್ದು ಏರಿಳಿತಗಳಿಂದ ಕೂಡಿದೆ. ಈ ದ್ವೀಪದ ಸೇ. 10ರಷ್ಟು ಭಾಗ ಸಮುದ್ರಮಟ್ಟದಿಂದ 3,000'ಗಿಂತ ಕಡಿಮೆ ಎತ್ತರದಲ್ಲೂ ಶೇ. 45ರಷ್ಟು ಭಾಗ 1,300'ಗೂ ಕಡಿಮೆ ಎತ್ತರದಲ್ಲೂ ಇದೆಯಾದರೂ, ಈ ದ್ವೀಪದ ಪಶ್ಚಿಮ ದಿಕ್ಕಿನಲ್ಲಿರುವ ಲೆವ್ಕ ಓರಿ ಅಥವಾ ಬಿಳಿಯ ಪರ್ವತಗಳು ಸಮುದ್ರಮಟ್ಟದಿಂದ ಸುಮಾರು 8,045' ಎತ್ತರವನ್ನು (ಪಾಖ್ನೆಸ್ ಶಿಖರ) ತಲುಪುತ್ತವೆ. ದ್ವೀಪದ ಮಧ್ಯಭಾಗದಲ್ಲಿರುವ ಸಿಲೋರಿತಿಯ ಗರಿಷ್ಠ ಎತ್ತರ 8,058' (ಸ್ಟಾವ್ರೋಸ್ ಶಿಖರ). ಇದು ಇಡೀ ಕ್ರೀಟ್ ದ್ವೀಪದ ಅತ್ಯುನ್ನತ ಸ್ಥಳ. ಪೂರ್ವದ ಕೊನೆಯಲ್ಲಿ ಲ್ಯಾಸಿತಿಯ ಉನ್ನತ ಶಿಖರ ಅಫೆಂಡಿಸ್ ಬ್ರಿಸ್ಟಾಸ್ (7,024'). ಇನ್ನೂ ಪೂರ್ವಕ್ಕಿರುವ ಸಿತಿಯ ಉನ್ನತ ಶಿಖರ ತ್ರಿಫ್ಟಿ ಓರಾಸ್ (4,757'). ಮಧ್ಯದಲ್ಲಿರುವ ಮೆಸಾರ ಮೈದಾನಕ್ಕೂ ದಕ್ಷಿಣ ಕರಾವಳಿಗೂ ನಡುವೆ ಇರುವ ಪರ್ವತ ಅಸ್ಟರೂಷ್ಯ (4,039'). ಈ ಪರ್ವತೀಯ ಪ್ರದೇಶದಲ್ಲಿ ಆಳವಾದ ಮತ್ತು ಕಡಿದಾದ ಕಮರಿಗಳಿವೆ. ಈ ದ್ವೀಪದ ದಕ್ಷಿಣ ಕರಾವಳಿ ತುಂಬ ಕಡಿದಾಗಿರುವುದರಿಂದ ನೈಸರ್ಗಿಕ ಬಂದರುಗಳು ಯಾವುವೂ ಇಲ್ಲ. ಉತ್ತರ ಕರಾವಳಿಯಲ್ಲಿ ಅನೇಕ ಒಳಚಾಚುಗಳಿವೆ. ಒಟ್ಟಿನಲ್ಲಿ ಕರಾವಳಿ ತುಂಬ ಕಡಿದಾಗಿರುವುದರಿಂದ ಬಂದರುಗಳನ್ನು ಅಭಿವೃದ್ಧಿಪಡಿಸುವುದು ಸಾಧ್ಯವಿಲ್ಲ. ಕರಾವಳಿ ಪ್ರದೇಶದಲ್ಲಿಯ ಜನಸಾಂದ್ರತೆ ಹೆಚ್ಚು. ಮೆಸಾರವೂ ವಾಯುವ್ಯ ದಿಕ್ಕಿನಲ್ಲಿರುವ ಕೇನಿಯವೂ ವಿಶಾಲವಾದ ಮೈದಾನಗಳು. ಕೇನಿಯದ ರಾಜಧಾನಿಯ ಪೂರ್ವಕ್ಕೆ ಇರುವ ಸೂಡ ಕೊಲ್ಲಿಯಲ್ಲಿ ಉತ್ತಮವಾದ ನೈಸರ್ಗಿಕ ಬಂದರಿದೆ. ಬ್ರಿಟಿಷ್ ನೌಕಾಪಡೆ ಅನೇಕ ಸಂದರ್ಭಗಳಲ್ಲಿ ಇದನ್ನು ಸೈನಿಕ ಕಾರ್ಯಾಚರಣೆಯ ಠಾಣ್ಯವಾಗಿ ಬಳಸಿಕೊಂಡಿದ್ದುಂಟು. ಆದರೂ ಇದನ್ನು ಅಭಿವೃದ್ಧಿಪಡಿಸಿಲ್ಲ. ಈ ದ್ವೀಪದ ಕರಾವಳಿಗೆ ಸ್ವಲ್ಪ ದೂರದಲ್ಲಿ ಅನೇಕ ಸಣ್ಣಪುಟ್ಟ ದ್ವೀಪಗಳಿವೆ. ಇವುಗಳಲ್ಲಿ ಗವಧೋಸ್ ದ್ವೀಪವೇ ತುಂಬ ದೊಡ್ಡದು. ಇದು ಲಿಥಿಯಾನ್ ಭೂಶಿರದ ನೈಋತ್ಯಕ್ಕೆ ಸುಮಾರು 40 ಮೈ.ಗಳ ದೂರದಲ್ಲಿದೆ.
ಜಲ ಸಂಪನ್ಮೂಲ
[ಬದಲಾಯಿಸಿ]-
Aradaina Gorge
-
Venetian Bridge over Megalopotamos River
ಇಲ್ಲಿ ಅನೇಕ ಪರ್ವತಝರಿಗಳುಂಟು. ಆದರೆ ಬೇಸಗೆಯಲ್ಲಿ ಇವು ಒಣಗಿ ಹೋಗುತ್ತವೆ. ಮೆಸಾರ ಕೊಲ್ಲಿಯ ಪೂರ್ವಕ್ಕಿರುವ ಮೆಸಾರ ಬಯಲು ಪ್ರದೇಶದಲ್ಲಿ ಯೆರೊಪೊಟಾಮೋಸ್ ಮತ್ತು ಅನಪೊಧಾರಿಸ್ ನದಿಗಳು ಹರಿಯುತ್ತವೆ. ಪ್ಲಟನಿಯಾಸ್ ಮತ್ತು ಮಿಲೊಪೊಟಾಮೋಸ್-ಇವು ಉತ್ತರದ ಮುಖ್ಯ ನದಿಗಳು. ಈ ದ್ವೀಪದ ಯಾವ ನದಿಯೂ ಸಂಚಾರಯೋಗ್ಯವಾಗಿಲ್ಲ. 160 ಎಕರೆಯಷ್ಟು ವಿಸ್ತೀರ್ಣವುಳ್ಳ ಕೋರ್‍ನಾಸ್ ಈ ದ್ವೀಪದ ಅತ್ಯಂತ ದೊಡ್ಡ ಸ್ವಚ್ಛ ಜಲ ಸರೋವರ. ಇದು ವಾಯುವ್ಯ ಕರಾವಳಿಯ ಬಳಿ ಇದೆ. ಈ ದ್ವೀಪದಲ್ಲಿ ಅಲ್ಲಲ್ಲಿ ನೀರಿನ ಬುಗ್ಗೆಗಳುಂಟು.
ವಾಯುಗುಣ
[ಬದಲಾಯಿಸಿ]ಸ್ಥಳೀಯ ಭೂಲಕ್ಷಣಗಳಿಗನುಗುಣವಾಗಿ ಇಲ್ಲಿಯ ವಾಯುಗುಣ ವ್ಯತ್ಯಾಸವಾಗುತ್ತದೆ. ಉತ್ತರ ಕರಾವಳಿಯ ಬಯಲುಗಳಲ್ಲಿ ಉಷ್ಣತೆ ಸುಮಾರು 100 ಫ್ಯಾ. ತಲಪುವುದುಂಟು. ಆದರೆ ಕರಾವಳಿ ಪ್ರದೇಶದ ಸರಾಸರಿ ಉಷ್ಣತೆ 65ಲಿ ಫ್ಯಾ. ಒಳನಾಡಿನಲ್ಲಿ ಋತುವಿಗೆ ಅನುಗುಣವಾಗಿ ಉಷ್ಣತೆಯಲ್ಲಿ ಹೆಚ್ಚಿನ ವ್ಯತ್ಯಾಸಗಳಾಗುತ್ತವೆ. ಕರಾವಳಿಯಲ್ಲಿ ಚಳಿಗಾಲದಲ್ಲೂ ಬಹುಮಟ್ಟಿಗೆ ಹಿಮಗಟ್ಟುವುದಿಲ್ಲ. ವೈದೃಶ್ಯವೆಂಬಂತೆ, ಪರ್ವತಶಿಖರಗಳು ವರ್ಷದಲ್ಲಿ ಬಹುಕಾಲ ಹಿಮದ ಕಿರೀಟ ಧರಿಸಿರುತ್ತವೆ. ಮಳೆ ಋತುಬದ್ಧವಾದ್ದು. ಚಳಿಗಾಲದಲ್ಲಿ ಮಳೆ ಹೆಚ್ಚು. ಆಗ ಅಟ್ಲಾಂಟಿಕ್ ಸಾಗರದ ಕಡೆಯಿಂದ ಬೀಸುವ ಚಂಡಮಾರುತಗಳು ಮಳೆಯನ್ನೂ ಹಿಮಪಾತವನ್ನೂ ಉಂಟುಮಾಡುತ್ತವೆ. ಏಪ್ರಿಲ್‍ನಿಂದ ಸೆಪ್ಟೆಂಬರ್‍ವರೆಗಿನ ಅವಧಿಯಲ್ಲಿ ಈ ದ್ವೀಪ ವಾಣಿಜ್ಯ ಮಾರುತಗಳ ವಲಯಕ್ಕೆ ಒಳಪಡುತ್ತದೆ. ವಾರ್ಷಿಕ ಸರಾಸರಿ ಮಳೆ ವಾಯುವ್ಯ ಕರಾವಳಿಯಲಿ 28; ಆಗ್ನೇಯ ಕರಾವಳಿಯಲ್ಲಿ 8"; ಉನ್ನತ ಪ್ರದೇಶಗಳಲ್ಲಿ ಸುಮಾರು 40" ; ಪರ್ವತಗಳ ಇಳಿಜಾರು ಪ್ರದೇಶಗಳಲ್ಲಿ 15"-18".ಚಳಿಗಾಲ ಬೆಚ್ಚಗೂ ಆದ್ರ್ರವಾಗಿಯೂ ಇದ್ದರೆ, ಬೇಸಗೆ ಉಷ್ಣವಾಗಿಯೂ ಶುಷ್ಕವಾಗಿಯೂ ಇರುತ್ತದೆ. ಉಷ್ಣತೆ ಸಾಪೇಕ್ಷವಾಗಿ ಹೆಚ್ಚಾಗಿರುವುದರಿಂದಲೂ ಭೂಮಿ ಸಚ್ಛಿದ್ರವಾಗಿರುವುದರಿಂದಲೂ ಅಗತ್ಯವಾದಷ್ಟು ಮಾತ್ರ ಮಳೆಯಾಗುವುದರಿಂದ ಹಿಡಿದು ವಿರಳವಾಗಿ ಮಾತ್ರ ಮಳೆಯಾಗುವವರೆಗೆ ಒಟ್ಟಿನಲ್ಲಿ ಮಳೆ ಅಪರ್ಯಾಪ್ತವಾಗಿರುವುದರಿಂದಲೂ ಈ ದ್ವೀಪದಲ್ಲಿ ನೀರಿನದೊಂದು ಉಲ್ಬಣ ಸಮಸ್ಯೆಯಾಗಿದೆ. ಬೇಸಗೆಯಲ್ಲಿ ಅನೇಕ ಹಳ್ಳಿಗಳಲ್ಲಿ ಸಾಕಷ್ಟು ಕುಡಿಯುವ ನೀರೂ ದೊರೆಯುವುದಿಲ್ಲ.
| Climate data for Heraklion 1955–2010 (HNMS) | |||||||||||||
|---|---|---|---|---|---|---|---|---|---|---|---|---|---|
| Month | Jan | Feb | Mar | Apr | May | Jun | Jul | Aug | Sep | Oct | Nov | Dec | Year |
| Record high °C (°F) | 29.9 (85.8) |
28.8 (83.8) |
34.0 (93.2) |
37.5 (99.5) |
38.0 (100.4) |
41.3 (106.3) |
43.6 (110.5) |
44.5 (112.1) |
39.5 (103.1) |
37.0 (98.6) |
32.8 (91.0) |
28.5 (83.3) |
44.5 (112.1) |
| Mean daily maximum °C (°F) | 15.3 (59.5) |
15.5 (59.9) |
17.0 (62.6) |
20.1 (68.2) |
23.6 (74.5) |
27.3 (81.1) |
28.9 (84.0) |
28.8 (83.8) |
26.6 (79.9) |
23.6 (74.5) |
20.2 (68.4) |
17.1 (62.8) |
22.0 (71.6) |
| Daily mean °C (°F) | 12.1 (53.8) |
12.2 (54.0) |
13.6 (56.5) |
16.6 (61.9) |
20.4 (68.7) |
24.5 (76.1) |
26.4 (79.5) |
26.3 (79.3) |
23.7 (74.7) |
20.3 (68.5) |
16.8 (62.2) |
13.8 (56.8) |
18.9 (66.0) |
| Mean daily minimum °C (°F) | 9.1 (48.4) |
8.9 (48.0) |
9.8 (49.6) |
12.0 (53.6) |
15.1 (59.2) |
19.2 (66.6) |
21.9 (71.4) |
22.0 (71.6) |
19.5 (67.1) |
16.7 (62.1) |
13.5 (56.3) |
10.9 (51.6) |
14.9 (58.8) |
| Record low °C (°F) | 0.0 (32.0) |
−0.8 (30.6) |
0.3 (32.5) |
4.2 (39.6) |
6.0 (42.8) |
12.2 (54.0) |
14.5 (58.1) |
16.6 (61.9) |
12.0 (53.6) |
8.7 (47.7) |
4.2 (39.6) |
2.4 (36.3) |
−0.8 (30.6) |
| Average rainfall mm (inches) | 91.0 (3.58) |
69.0 (2.72) |
53.4 (2.10) |
28.2 (1.11) |
13.4 (0.53) |
2.9 (0.11) |
0.8 (0.03) |
0.9 (0.04) |
16.7 (0.66) |
59.4 (2.34) |
59.6 (2.35) |
85.6 (3.37) |
480.9 (18.94) |
| Average rainy days | 16.0 | 13.6 | 11.4 | 7.6 | 4.6 | 1.3 | 0.3 | 0.5 | 2.8 | 7.5 | 10.6 | 15.2 | 91.4 |
| Average relative humidity (%) | 68.4 | 66.4 | 65.9 | 62.3 | 61.2 | 57.0 | 57.1 | 59.1 | 61.9 | 65.7 | 67.9 | 68.3 | 63.4 |
| Mean monthly sunshine hours | 119.9 | 132.3 | 181.5 | 234.8 | 298.5 | 356.2 | 368.3 | 343.5 | 275.8 | 206.9 | 145.5 | 115.4 | ೨,೭೭೮.೬ |
| Source 1: HNMS[೨][೩] | |||||||||||||
| Source 2: meteo-climat (extremes)[೪] | |||||||||||||
| Climate data for Tris Ekklisies 15 m a.s.l | |||||||||||||
|---|---|---|---|---|---|---|---|---|---|---|---|---|---|
| Month | Jan | Feb | Mar | Apr | May | Jun | Jul | Aug | Sep | Oct | Nov | Dec | Year |
| Record high °C (°F) | 21.5 (70.7) |
20.9 (69.6) |
25.6 (78.1) |
26.8 (80.2) |
32.3 (90.1) |
41.4 (106.5) |
42.1 (107.8) |
37.3 (99.1) |
36.8 (98.2) |
29.8 (85.6) |
27.8 (82.0) |
22.6 (72.7) |
42.1 (107.8) |
| Mean daily maximum °C (°F) | 18.1 (64.6) |
16.1 (61.0) |
19.4 (66.9) |
21.3 (70.3) |
24.9 (76.8) |
31.0 (87.8) |
34.3 (93.7) |
32.9 (91.2) |
30.3 (86.5) |
26.4 (79.5) |
22.4 (72.3) |
19.5 (67.1) |
24.7 (76.5) |
| Daily mean °C (°F) | 15.9 (60.6) |
13.8 (56.8) |
16.8 (62.2) |
18.6 (65.5) |
22.0 (71.6) |
27.7 (81.9) |
30.8 (87.4) |
29.8 (85.6) |
27.4 (81.3) |
23.8 (74.8) |
20.1 (68.2) |
17.3 (63.1) |
22.0 (71.6) |
| Mean daily minimum °C (°F) | 13.7 (56.7) |
11.4 (52.5) |
14.2 (57.6) |
16.0 (60.8) |
19.0 (66.2) |
24.4 (75.9) |
27.3 (81.1) |
26.7 (80.1) |
24.5 (76.1) |
21.3 (70.3) |
17.7 (63.9) |
15.1 (59.2) |
19.3 (66.7) |
| Record low °C (°F) | 5.6 (42.1) |
4.4 (39.9) |
9.6 (49.3) |
9.5 (49.1) |
14.3 (57.7) |
17.7 (63.9) |
22.9 (73.2) |
23.9 (75.0) |
18.8 (65.8) |
17.8 (64.0) |
11.9 (53.4) |
9.9 (49.8) |
4.4 (39.9) |
| Average rainfall mm (inches) | 64.7 (2.55) |
85.1 (3.35) |
30.6 (1.20) |
20.1 (0.79) |
17.1 (0.67) |
18.7 (0.74) |
1.1 (0.04) |
0.2 (0.01) |
29.7 (1.17) |
0.7 (0.03) |
78.1 (3.07) |
101.9 (4.01) |
448 (17.63) |
| Source: Cultural Association of Tris Ekklisies, CW (Dec 2022-Sep 2025) [೫] | |||||||||||||
ಸಸ್ಯಪ್ರಾಣಿ ಸಂಪತ್ತು
[ಬದಲಾಯಿಸಿ]ಈ ದ್ವೀಪದಲ್ಲಿ ಸುಣ್ಣಕಲ್ಲಿನ ಬಂಡೆಗಳನ್ನೊಳಗೊಂಡಿರುವ ವಿಶಾಲ ಪ್ರದೇಶಗಳುಂಟು. ಈ ಬಂಜರು ಪ್ರದೇಶಗಳಲ್ಲಿ ಹಿಂದೊಮ್ಮೆ ಮರಗಳು ಬೆಳೆದಿದ್ದುವು. ಆದರೆ ಜನರು ದೀರ್ಘಕಾಲದಿಂದ ಇಲ್ಲಿ ವಾಸಿಸುತ್ತಿರುವುದರಿಂದ ನಿಸರ್ಗ ಸಸ್ಯ ಸಂಪತ್ತು ಸಂಪೂರ್ಣವಾಗಿ ನಾಶಗೊಂಡಿದೆ. ವನ್ಯಮೃಗಗಳೂ ತುಂಬ ವಿರಳ. ಹಕ್ಕಿಗಳ ಸಂಖ್ಯೆ ತೀರ ಕಡಿಮೆ. ಇಲ್ಲಿಯ ಸಸ್ಯಗಳು ಏಷ್ಯ ಮೈನರ್ ಮತ್ತು ಗ್ರೀಕ್ ಪ್ರಸ್ಥಭೂಮಿಯಲ್ಲಿರುವ ಸಸ್ಯವರ್ಗಗಳೊಡನೆ ನಿಕಟ ಸಂಬಂಧವನ್ನು ಹೊಂದಿದ್ದರೂ ಇವು ಸಸ್ಯಶಾಸ್ತ್ರಜ್ಞನ ಗಮನ ಸೆಳೆದಿವೆ. ಇಲ್ಲಿ 130 ವಿಶಿಷ್ಟ ಜಾತಿಗಳ ಸಸ್ಯಗಳುಂಟು.
ಆರ್ಥಿಕತೆ
[ಬದಲಾಯಿಸಿ]ಶೇಕಡಾ 30ರಷ್ಟು ಭೂಮಿಯನ್ನು ಬೇಸಾಯಕ್ಕೆ ಒಳಪಡಿಸಲಾಗಿದೆ. ಶೇಕಡಾ 48ರಷ್ಟು ಭೂಮಿ ಕುರಿ ಮತ್ತು ಮೇಕೆಗಳಿಗೆ ಮೇವು ನೆಲವಾಗಿದೆ. ಇದರಲ್ಲಿ ಶೇಕಡಾ 2ರಷ್ಟು ಭೂಮಿಯನ್ನು ಅರಣ್ಯ ಪ್ರದೇಶವೆಂದು ವರ್ಗೀಕರಿಸಲಾಗುತ್ತಿದೆಯಾದರೂ ಇಲ್ಲಿ ಅರಣ್ಯ ನಾಮಾವಶೇಷವಾಗಿದೆ. ಸೈಪ್ರೆಸ್ ಮತ್ತು ಆಲಿವ್ ವೃಕ್ಷಗಳು ಮಾತ್ರ ಸಾಕಷ್ಟು ಸಂಖ್ಯೆಯಲ್ಲಿ ಕಾಣದೊರೆಯುತ್ತವೆ. ಆಲಿವ್, ಜಂಬೀರ ಫಲಗಳು, ಸೇಬು, ದ್ರಾಕ್ಷಿ, ಗೋದಿ, ಬಾರ್ಲಿ ಮತ್ತು ಕೆಲವು ಬಗೆಯ ಕಾಳುಗಳು ಇಲ್ಲಿಯ ಬೆಳೆಗಳು. ಪರ್ವತ ಪ್ರದೇಶಗಳಲ್ಲಿ ಕುರಿಗಳನ್ನೂ ಮೇಕೆಗಳನ್ನೂ ಸಾಕುತ್ತಾರೆ. ಹಿಂದೆ ಇಲ್ಲಿ ಅನೇಕ ಖನಿಜಗಳ ಉತ್ಪಾದನೆಯಾಗುತ್ತಿತ್ತು. ಈಗ ಇವುಗಳ ಪ್ರಾಮುಖ್ಯ ಕಡಿಮೆ. ಕಬ್ಬಿಣ, ಸತು, ಮ್ಯಾಂಗನೀಸ್, ಲಿಗ್ನೈಟ್, ಕ್ರೋಂ, ಗಂಧಕ ಮುಂತಾದ ಖನಿಜ ನಿಕ್ಷೇಪಗಳಿವೆಯಾದರೂ ಗುಣ ಗಾತ್ರಗಳ ದೃಷ್ಟಿಯಿಂದ ಇವು ಮುಖ್ಯವಲ್ಲ. ಕ್ರೀಟ್‍ನ ಕೈಗಾರಿಕೆಗಳು ಸಣ್ಣ ಗಾತ್ರದವು; ಆಹಾರ ಪರಿಷ್ಕರಣಕ್ಕೆ ಸಂಬಂಧಿಸಿದವು. ಸಾಬೂನು, ಚರ್ಮ ಹದಗಾರಿಕೆ, ಜವಳಿ, ಕೃಷಿ ಉಪಕರಣ ಕೈಗಾರಿಕೆಗಳೂ ಇವೆ.
ಜನಜೀವನ
[ಬದಲಾಯಿಸಿ]-
Venetian fortress in Heraklion
-
Chania cathedral
-
Rethymno Fortezza Mosque
-
Kazarma fortress at the top in Sitia
ಕ್ರೀಟ್‍ನಲ್ಲಿ ಅಲ್ಲಲ್ಲಿ ಚದರಿದಂತೆ ಇರುವ ಕೆಲವು ಐರೋಪ್ಯರು, ಯೆಹೂದ್ಯರು ಮತ್ತು ಬೆಂಗಾಜಿ ಅರಬರನ್ನು ಬಿಟ್ಟರೆ ಉಳಿದವರೆಲ್ಲ ಗ್ರೀಕರು. ಸುಮಾರು 1/5 ರಷ್ಟು ಮಂದಿ ಇಸ್ಲಾಂ ಧರ್ಮಾವಲಂಬಿಗಳು. ಅವರು ತಮ್ಮನ್ನು ತುರ್ಕರೆಂದು ಕರೆದುಕೊಳ್ಳುತ್ತಾರೆ.
ನಗರಗಳು
[ಬದಲಾಯಿಸಿ]ಪ್ರಾಚೀನ ಕ್ರೀಟ್‍ನಲ್ಲಿ ನೂರಕ್ಕೂ ಹೆಚ್ಚು ನಗರಗಳಿದ್ದುವೆಂದು ಹೋಮರ್ ತನ್ನ ಕಾವ್ಯದಲ್ಲಿ ಹೇಳಿದ್ದಾನೆ. ಆದರೆ ಇಂದು ಮೂರು ಪಟ್ಟಣಗಳು ಮಾತ್ರ ಇವೆ. ಇವು ಇರುವುದು ಉತ್ತರ ಕರಾವಳಿಯಲ್ಲಿ. ಇವುಗಳ ಪೈಕಿ ಒಂದಾದ ಖಾನಿಯ ಇಲ್ಲಿಯ ರಾಜಧಾನಿ. ಇರಾಕ್ಲಿಯೋನ್ ಮತ್ತು ರೇತಿಮ್ನಾನ್ ಇನ್ನೆರಡು ಪಟ್ಟಣಗಳು. ಇಂದೂ 5/6 ಭಾಗದಷ್ಟು ಜನ ಗ್ರಾಮೀಣ ಹಾಗೂ ಪರ್ವತ ಪ್ರದೇಶಗಳಲ್ಲಿಯೇ ವಾಸ ಮಾಡುತ್ತಿದ್ದಾರೆ. ಕ್ರೀಟನರ ಅನೇಕ ಕ್ರಾಂತಿಗಳ ಉಗಮ ಹಳ್ಳಿಗಳಲ್ಲೇ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Official Website of Gavalochori Village, Crete (in English)
- Crete Locals comprehensive guide of Crete Island (in English)
- Natural History Museum of Crete at the University of Crete.
- Cretaquarium Thalassocosmos in Heraklion.
- Aquaworld Aquarium in Hersonissos.
- Ancient Crete Archived 30 May 2020 ವೇಬ್ಯಾಕ್ ಮೆಷಿನ್ ನಲ್ಲಿ. at Oxford Bibliographies Online: Classics.
- Official Greek National Tourism Organisation website
- Interactive Virtual Tour of Crete
ಉಲ್ಲೇಖಗಳು
[ಬದಲಾಯಿಸಿ]
- ↑ "Population on 1 January by NUTS 2 region". Statistics Eurostat. Archived from the original on 21 January 2021.
- ↑ "Climatic Data for selected stations in Greece: Heraklion (Crete)". Retrieved 17 September 2019.
- ↑ "Climate Atlas of Greece (for sunshine 1977-2002)". HNMS. Retrieved 20 July 2021.
- ↑ "STATION HERAKLION". meteo-climat. Retrieved December 2, 2018.
- ↑ "Cultural Association of Tris Ekklisies, CW". Retrieved 17 October 2025.