ಕ್ರಿಶ್ಚಿಯಾನೆ, ನುಸ್ಲೀನ್ ವೊಲ್ಹಾರ್ಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕ್ರಿಶ್ಚಿಯಾನೆ ನುಸ್ಲೀನ್ ವೊಲ್ಹಾರ್ಡ್
ಜನನ (1942-10-20) ೨೦ ಅಕ್ಟೋಬರ್ ೧೯೪೨ (ವಯಸ್ಸು ೮೧)
ಮ್ಯಾಗ್ಡೆಬರ್ಗ್, ಜರ್ಮನಿ
ವಾಸಸ್ಥಳಜರ್ಮನಿ
ರಾಷ್ಟ್ರೀಯತೆಜರ್ಮನ್
ಕಾರ್ಯಕ್ಷೇತ್ರ
  • ಜೆನೆಟಿಕ್ಸ್
  • ಭ್ರೂಣಶಾಸ್ತ್ರ
ಸಂಸ್ಥೆಗಳು
ಗಮನಾರ್ಹ ಪ್ರಶಸ್ತಿಗಳು[೩]
ಜಾಲತಾಣ
www.eb.tuebingen.mpg.de/research/emeriti/research-group-colour-pattern-formation.html
ಡ್ರೋಸೋಫಿಲಾ ಭ್ರೂಣದಿಂದ ಹೊರಪೊರೆ ತಯಾರಿಕೆ, ನುಸ್ಲೀನ್ ರವರಿಂದ ಪರೀಕ್ಷಿಸಲ್ಪಟ್ಟಂತೆ ಹೋಲುತ್ತದೆ.[೪]

ಕ್ರಿಶ್ಚಿಯಾನೆ ನುಸ್ಲೀನ್ ವೊಲ್ಹಾರ್ಡ್ ರವರು ಜರ್ಮನಿಯ ಜೀವಶಾಸ್ತ್ರಜ್ಞೆ.(ಜನನ- ೨೦ ಅಕ್ಟೋಬರ್ ೧೯೪೨).[೫] ಇವರು ತುಬಿಂಗನ್ ವಿಶ್ವವಿದ್ಯಾನಿಲಯದಿಂದ ೧೯೪೭ ರಲ್ಲಿ ಪಿ.ಎಚ್.ಡಿ ಪದವಿಯನ್ನು ಪಡೆದರು,ಅಲ್ಲಿ ಅವರು ಪ್ರೋಟೀನ್ - ಡಿಎನ್ಎ ನಲ್ಲಿನ ಪರಸ್ಪರ ಕ್ರಿಯೆಯನ್ನು ಅಧ್ಯಯನ ಮಾಡಿದರು. ಫಿಸಿಯೋಲಜಿ/ಮೆಡಿಸಿನ್ ನಲ್ಲಿ ಭ್ರೂಣದ ಬೆಳವಣಿಗೆಯ ಅನುವಂಶಿಕ ನಿಯಂತ್ರಣದ ಕುರಿತಾದ ಸಂಶೋಧನೆಗಾಗಿ ಅವರು ೧೯೯೫ ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದರು.[೬]

ಆರಂಭಿಕ ಜೀವನ[ಬದಲಾಯಿಸಿ]

ನುಸ್ಲೀನ್ ವೊಲ್ಹಾರ್ಡ್ ರವರು ಮ್ಯಾಗ್ಡೆಬರ್ಗ್ ನಲ್ಲಿ ೨೦ ಅಕ್ಟೋಬರ್ ೧೯೪೨ ರಂದು ಜನಿಸಿದರು. ಅವರ ತಂದೆ ವಾಸ್ತುಶಿಲ್ಪಿಯಾಗಿದ್ದರಿಂದ ಆಕೆ ಕಲಾಕೃತಿಗೆ ಒಡ್ಡಿಕೊಂಡರು, ಹಾಗಾಗಿ ವಿಷಯಗಳನ್ನು ನೋಡುವುದರಲ್ಲಿ ಮತ್ತು ವಿಷಯಗಳನ್ನು ಗುರುತಿಸುವುದರಲ್ಲಿ ತರಬೇತಿ ನೀಡಲಾಯಿತು.[೭]

ಶಿಕ್ಷಣ[ಬದಲಾಯಿಸಿ]

ನುಸ್ಲೀನ್ ವೊಲ್ಹಾರ್ಡ್ ರವರು ತುಬಿಂಗನ್ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಪಡೆದರು. ಅವರು ೧೯೭೪ ನಲ್ಲಿ ಪ್ರೋಟೀನ್ - ಡಿಎನ್ಎ ನಲ್ಲಿನ ಪರಸ್ಪರ ಕ್ರಿಯೆಗಳ ಸಂಶೋಧನಕ್ಕಾಗಿ ಪಿಎಚ್ಡಿ ಮಾಡಿದರು.[೮]

ಪ್ರಶಸ್ತಿಗಳು[ಬದಲಾಯಿಸಿ]

  • ಜರ್ಮನ್ ರಿಸರ್ಚ್ ಫೌಂಡೇಶನ್ ನ ಗಾಟ್ಫ್ರೈಡ್ ವಿಲ್ಹೆಲ್ಮ್ ಲಿಬ್ನೆಜ್ ಪ್ರಶಸ್ತಿ - ೧೯೮೬.
  • ಗೈಸೆನ್ ವಿಶ್ವವಿದ್ಯಾಲಯದ ಫ್ರಾಂಜ್ ವೋಗ್ಟ್ ಪ್ರಶಸ್ತಿ - ೧೯೮೬.
  • ಬೇಸಿಕ್ ಮೆಡಿಕಲ್ ರಿಸರ್ಚ್ ಗಾಗಿ ಆಲ್ಬರ್ಟ್ ಲಸ್ಕರ್ ಪ್ರಶಸ್ತಿ - ೧೯೯೧.
  • ಉಟ್ರೆಕ್ಟ್ ವಿಶ್ವವಿದ್ಯಾನಿಲಯದಿಂದ ಗೌರವಾನ್ವಿತ ಡಾಕ್ಟರೇಟ್ ಪದವಿ - ೧೯೯೧.
  • ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ - ೧೯೯೧.
  • ಆಲ್ಫ್ರೆಡ್ ಪಿ. ಸ್ಲೋನ್ ಜೂನಿಯರ್ ಪ್ರಶಸ್ತಿ - ೧೯೯೨.
  • ಮೆಡಿಸಿನ್ ಗಾಗಿ ಲೂಯಿಸ್ ಜೀನ್ಟೆಟ್ ಪ್ರಶಸ್ತಿ - ೧೯೯೨.
  • ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಲೂಯಿಸಾ ಗ್ರಾಸ್ ಹೊರ್ವಿಟ್ಜ್ ಪ್ರಶಸ್ತಿ - ೧೯೯೨.
  • ಬಯೋಕೆಮಿಸ್ಟ್ರಿ ಮತ್ತು ಮಾಲಿಕ್ಯುಲರ್ ಬಯಾಲಜಿಗಾಗಿ ಜರ್ಮನ್ ಸೊಸೈಟಿಯ ವೊಟ್ಟೊ ವಾರ್ಬರ್ಗ್ ಪದಕ - ೧೯೯೨.
  • ಫ್ರೈಬರ್ಗ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ - ೧೯೯೩.
  • ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ - ೧೯೯೩.
  • ಯುರೋಪಿಯನ್ ಬಯೋಕೆಮಿಕಲ್ ಸೊಸೈಟೀಸ್ ವತಿಯಿಂದ ಸರ್ ಹ್ಯಾನ್ಸ್ ಕ್ರೆಬ್ಸ್ ಮೆಡಲ್ - ೧೯೯೩.
  • ಅರ್ನ್ಸ್ಟ್ ಶೆರಿಂಗ್ ಪ್ರಶಸ್ತಿ - ೧೯೯೩.
  • ಮೆರಿಟ್ ಕ್ರಾಸ್ ಆಫ್ ದಿ ಫೆಡರಲ್ ರಿಪ್ಲಬಿಕ್ ಆಫ್ ಜರ್ಮನಿ - ೧೯೯೪.
  • ಫಿಸಿಯೋಲಜಿಯಲ್ಲಿ ನೊಬೆಲ್ ಪ್ರಶಸ್ತಿ - ೧೯೯೫.[೯]
  • ಪೌರ್ ಲೆ ಮೆರಿಟ್ ಫಾರ್ ಸೈನ್ಸ್ ಅಂಡ್ ಆರ್ಟ್ಸ್ - ೧೯೯೭.
  • ಬಾಡೆನ್-ವುರ್ಟೆಂಬರ್ಗ್ ನ ಆರ್ಡರ್ ಆಫ್ ಮೆರಿಟ್ - ೧೯೯೬.
  • ಗ್ರ್ಯಾಂಡ್ ಮೆರಿಟ್ ಕ್ರಾಸ್ ವಿದ್ ಸ್ಟಾರ್ ಅಂಡ್ ಸ್ಯಾಶ್ ಆಫ್ ದಿ ಫೆಡರಲ್ ರಿಪ್ಲಬಿಕ್ ಆಫ್ ಜರ್ಮನಿ - ೨೦೦೫.
  • ಫೆಡೆರೇಷನ್ ಆಫ್ ಜರ್ಮನ್ ಫೌಂಡೇಷನ್ ನ ಜರ್ಮನ್ ಸಂಸ್ಥಾಪಕ ಪ್ರಶಸ್ತಿ - ೨೦೦೭.
  • ವಿಜ್ಞಾನ ಮತ್ತು ಕಲೆಗಾಗಿ ಆಸ್ಟ್ರಿಯನ್ ಅಲಂಕಾರ - ೨೦೦೯.
  • ಸೇಂಟ್ ಆಂಡ್ರ್ಯೂಸ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ - ೨೦೧೧.
  • ಬಾತ್ ವಿಶ್ವವಿದ್ಯಾಲಯದಿಂದ ಗೌರವಾನ್ವಿತ ಡಾಕ್ಟರೇಟ್ - ೨೦೧೩.
  • ಸೈನ್ಸ್ ಮತ್ತು ಆರ್ಟ್ಸ್ ಗಾಗಿ ಪೋರ್ ಮೆರಿಟ್ ಪ್ರಶಸ್ತಿ - ೨೦೧೩.
  • ಬವೇರಿಯನ್ ಮ್ಯಾಕ್ಸಿಮಿಲಿಯನ್ ಆರ್ಡರ್ ಫಾರ್ ಸೈನ್ಸ್ ಅಂಡ್ ಅರ್ಟ್ - ೨೦೧೪.

ಸದಸ್ಯತ್ವ[ಬದಲಾಯಿಸಿ]

  • ಯುರೋಪಿಯನ್ ಅಕಾಡೆಮಿಯ ಸಂಸ್ಥಾಪಕ ಸದಸ್ಯ - ೧೯೮೯.
  • ಹೈಡೆಲ್ಬರ್ಗ್ ಅಕಾಡೆಮಿ ಆಫ್ ಸೈನ್ಸಸ್ ನ ಸದಸ್ಯ - ೧೯೮೯.
  • ನಾರ್ಥ್ ರೈನ್ ವೆಸ್ಟ್‌ಫಾಲಿಯಾ ಅಕಾಡೆಮಿ ಆಫ್ ಸೈನ್ಸಸ್ ಅಂಡ್ ಆರ್ಟ್ಸ್ ನ ಸದಸ್ಯ - ೧೯೯೦.
  • ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ , ವಾಷಿಂಗ್ಟನ್ ನ ಸದಸ್ಯ - ೧೯೯೦.
  • ಜರ್ಮನ್ ಅಕಾಡೆಮಿ ಆಫ್ ಸೈನ್ಸಸ್ ನ ಸದಸ್ಯ - ೧೯೯೧.
  • ಫೆಡರಲ್ ಗವರ್ನಮೆಂಟ್ ನ ಎಥಿಕ್ಸ್ ಕೌನ್ಸಿಲ್ ಸದಸ್ಯ - ೨೦೦೧-೨೦೦೬.

ಉಲ್ಲೇಖಗಳು[ಬದಲಾಯಿಸಿ]