ವಿಷಯಕ್ಕೆ ಹೋಗು

ಕ್ರಿಯೋಸೋಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ರಿಯೋಸೋಟ್ ಟಾರಿನ ಆಸವೀಕರಣದಿಂದ (distillation)ದೊರೆಯುವ ಎರಡು ಉತ್ಪನ್ನಗಳಲ್ಲಿ ಯಾವುದೇ ಒಂದು.

ಲಕ್ಷಣಗಳು

[ಬದಲಾಯಿಸಿ]

ಕ್ರಿಯೋಸೋಟ್ ನಿರ್ವರ್ಣವಾದ ಅಥವಾ ತಿಳಿ ಹಳದಿಯಾದ ತೈಲದಂತಿರುವ ದ್ರವ, ಹೊಗೆಯ ವಾಸನೆಯಿದೆ. ಕ್ಷಾರವಾದ ಮತ್ತು ನಾಲಗೆಯನ್ನು ದಹಿಸುವ ರುಚಿಯುಳ್ಳ ವಸ್ತು. ನೀರಿನೊಂದಿಗೆ ಅಲ್ಪ ಪರಿಮಾಣದಲ್ಲಿ ಬೆರೆಯುತ್ತದೆ. ಆದರೆ ಆಲ್ಕೊಹಾಲ್, ಈಥರ್ ಮತ್ತು ಬಾಷ್ಪಶೀಲ ತೈಲಗಳೊಂದಿಗೆ ಮಿಶ್ರವಾಗುತ್ತದೆ. ಇದರ ಕುದಿಬಿಂದು 203ಲಿ-220ಲಿಸೆಂ.

ಉಪಯೋಗಗಳು

[ಬದಲಾಯಿಸಿ]

ಕಲ್ಲಿದ್ದಲು, ಟಾರಿನಿಂದ ಆಸವೀಕರಿಸಲ್ಪಟ್ಟದ್ದು ವಾಣಿಜ್ಯ ಕ್ರಿಯೋಸೋಟ್. ಇದೊಂದು ವಿಷವಸ್ತು. ಇದನ್ನು ಮರ ಸಂರಕ್ಷಕವಾಗಿ ಉಪಯೋಗಿಸುತ್ತಾರೆ. ಎರಡನೆಯ ಉತ್ಪನ್ನ ಔಷಧೀಯ ಕ್ರಿಯೋಸೋಟ್. ಇದನ್ನು ಇದ್ದಲು ಟಾರಿನಿಂದ ಆಸವೀಕರಿಸಲಾಗುತ್ತದೆ. ಮೊದಲಿಗೆ ಇದನ್ನು ಉಸಿರಾಟದ ವ್ಯಾಧಿಗಳಲ್ಲಿ ಚಿಕಿತ್ಸೆಗಾಗಿ ಬಳಸುತ್ತಿದ್ದರು. ಕಲ್ಲಿದ್ದಲು ಟಾರ್ ಕ್ರಿಯೋಸೋಟ್ 160ಕ್ಕಿಂತಲೂ ಹೆಚ್ಚು ರಾಸಾಯನಿಕ ಸಂಯುಕ್ತಗಳ ಮಿಶ್ರಣ. ಇದನ್ನು 400ಲಿ-450ಲಿ ಸೆಂ. ಉಷ್ಣತೆಯಲ್ಲಿ ಆಸವೀಕರಿಸಿ ಪಡೆಯುತ್ತಾರೆ. ಇದ್ದಲು ಟಾರ್ ಕ್ರಿಯೋಸೋಟನ್ನು ಸಾಮಾನ್ಯವಾಗಿ ಬೀಚ್ ಮರದಿಂದ 200ಲಿ-220ಲಿ ಸೆಂ. ಉಷ್ಣತೆಯಲ್ಲಿ ಆಸವೀಕರಿಸಿ ಪಡೆಯುವರು.

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: